2 ವರ್ಷಗಳ ಬಳಿಕ ಸರ್ಫರಾಜ್‌ ಖಾನ್‌ಗೆ ಒಲಿದ ಅದೃಷ್ಟ – CSK ತಂಡ ಸೇರಿದ ಭಾರತದ ಯಂಗ್‌ಸ್ಟರ್

2 ವರ್ಷಗಳ ಬಳಿಕ ಸರ್ಫರಾಜ್‌ ಖಾನ್‌ಗೆ ಒಲಿದ ಅದೃಷ್ಟ – CSK ತಂಡ ಸೇರಿದ ಭಾರತದ ಯಂಗ್‌ಸ್ಟರ್

ಅದೃಷ್ಟ ಪದೇ ಪದೇ ಕೈ ಕೊಡುತ್ತಿದ್ದರೂ ನಂಬಿದ ಕ್ರಿಕೆಟ್ ಯಾವತ್ತೂ ಕೈ ಬಿಟ್ಟಿರಲಿಲ್ಲ. ದೇಶಿ ಟೂರ್ನಿಗಳಲ್ಲಿ ಒಂದರ ಮೇಲೊಂದು ಸಾಧನೆ ಮಾಡುತ್ತಲೇ ಬಂದವರು ಸರ್ಫರಾಜ್ ಖಾನ್. ಇದೀಗ ಭಾರತದ ಯಂಗ್‌ಸ್ಟರ್ ಚೆನ್ನೈ ತಂಡ ಸೇರಿಕೊಂಡಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಸರ್ಫರಾಜ್ ಖಾನ್ ಗೆ ಚೆನ್ನೈ ಟೀಮ್ ಗುಡ್‌ ನ್ಯೂಸ್ ಕೊಟ್ಟಿದೆ.

ಇದನ್ನೂ ಓದಿ: RCBಗೆ ಎಂಟ್ರಿ ಕೊಟ್ಟ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ – 4 ತಂಡಗಳ ಪೈಪೋಟಿಯಲ್ಲಿ ಗೆದ್ದ ಬೆಂಗಳೂರು

ಐಪಿಎಲ್ ಎಂಬ ಶ್ರೀಮಂತ ಕ್ರಿಕೆಟ್ ಟೂರ್ನಿಯಲ್ಲಿ ಪದೇ ಪದೇ ಅನ್‌ಸೋಲ್ಡ್ ಪಟ್ಟಿಯಲ್ಲಿ ಹೆಸರು ದಾಖಲಿಸಿದ ಆಟಗಾರ ಸರ್ಫರಾಜ್‌ ಖಾನ್. ಸಹೋದರನಿಗೆ ಐಪಿಎಲ್ ಟೂರ್ನಿಯಲ್ಲಿ ಚಾನ್ಸ್ ಸಿಕ್ಕಿದ್ರೂ ಕೂಡಾ ಇವರಿಗೆ ಸಿಗಲಿಲ್ಲ. ಎರಡು ವರ್ಷಗಳಿಂದ ಸ್ಥಾನಕ್ಕಾಗಿ ಕಾಯುತ್ತಿದ್ದ ಸರ್ಫರಾಜ್ ಖಾನ್‌ಗೆ ಕೊನೆಗೂ ಅದೃಷ್ಟ ಒಲಿದಿದೆ. ಎರಡು ವರ್ಷಗಳ ನಂತರ ಸ್ಪೋಟಕ ಬ್ಯಾಟರ್ ಸರ್ಫರಾಜ್ ಖಾನ್ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಮರಳಿದ್ದಾರೆ.

ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಸರ್ಫರಾಜ್ ಖಾನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳು ಒಲವು ತೋರಿಸಿರಲಿಲ್ಲ. ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಸರ್ಫರಾಜ್ ಖಾನ್ ನಿರಂತರವಾಗಿ ಅದ್ಭುತ ಪ್ರದರ್ಶನ ನೀಡಿದರು. ಈಗ ಐಪಿಎಲ್ 2026 ರ ಮಿನಿ ಹರಾಜಿನಲ್ಲಿ ಸರ್ಫರಾಜ್ ಖಾನ್ ಅವರನ್ನು ಚೆನ್ನೈ ಪ್ರಾಂಚೈಸಿ ಖರೀದಿಸಿದೆ. ಈ ಮಿನಿ ಹರಾಜಿಗೂ ಮುನ್ನ ಅಂದರೆ, ಮಂಗಳವಾರ ಬೆಳಗ್ಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಸರ್ಫರಾಜ್ ಖಾನ್ ಅಬ್ಬರಿಸಿದ್ದರು. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಸರ್ಫರಾಜ್ ಖಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಕೇವಲ 22 ಎಸೆತಗಳಲ್ಲಿ 6 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಿಂದ 73 ರನ್​ ಕಲೆ ಹಾಕಿದರು. ಸರ್ಫರಾಜ್ ಖಾನ್ ಅವರ ಈ ಸ್ಪೋಟಕ ಇನ್ನಿಂಗ್ಸ್ ಫ್ರಾಂಚೈಸಿಗಳ ಗಮನ ಸೆಳೆದಿತ್ತು. ಇದಾದ ನಂತರ ನಡೆದ ಐಪಿಎಲ್ 2026 ರ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸರ್ಫರಾಜ್ ಖಾನ್ ಮೇಲೆ ಒಲವು ತೋರಿಸಿದೆ. ಸಿಎಸ್​​ಕೆ ಮಿನಿ ಹರಾಜಿನಲ್ಲಿ ಸರ್ಫರಾಜ್ ಅವರನ್ನು ಮೂಲ ಬೆಲೆ 75 ಲಕ್ಷ ರೂ.ಗಳಿಗೆ ಖರೀದಿಸಿದೆ.

ಸರ್ಫರಾಜ್ ಖಾನ್ 2023 ರಲ್ಲಿ ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು ಆಡಿದ್ದರು. ಸರ್ಫರಾಜ್ ಖಾನ್ ಡೆಲ್ಲಿ ಕ್ಯಾಪಿಟಲ್ಸ್ ಪರ ಎರಡು ಪಂದ್ಯಗಳನ್ನು ಆಡಿದರು. ಆದಾಗ್ಯೂ, ಅವರು ಎರಡೂ ಪಂದ್ಯಗಳಲ್ಲಿ ಒಂದೇ ಒಂದು ರನ್ ಗಳಿಸಲು ಸಾಧ್ಯವಾಗಿರಲಿಲ್ಲ. ಅವರು ಒಟ್ಟು ನಾಲ್ಕು ಎಸೆತಗಳನ್ನು ಮಾತ್ರ ಎದುರಿಸಿದ್ದರು. ಸರ್ಫರಾಜ್ ಖಾನ್ ಅವರ ಅತ್ಯುತ್ತಮ ಐಪಿಎಲ್ ಪ್ರದರ್ಶನವು 2019 ರಲ್ಲಿತ್ತು. ಅವರು ಎಂಟು ಪಂದ್ಯಗಳಲ್ಲಿ 45.00 ಸರಾಸರಿ ಮತ್ತು 125.87 ಸ್ಟ್ರೈಕ್ ರೇಟ್‌ನಲ್ಲಿ 180 ರನ್ ಗಳಿಸಿದರು. ಆರ್​​ಸಿಬಿ ಪರ ಸರ್ಫರಾಜ್ ತಮ್ಮ ಚೊಚ್ಚಲ ಐಪಿಎಲ್‌ ಆವೃತ್ತಿಯನ್ನು 2015 ರಲ್ಲಿ ಆಡಿದರು. ಈ ಆವೃತ್ತಿಯಲ್ಲಿ ಅವರು 13 ಪಂದ್ಯಗಳಲ್ಲಿ 27.75 ಸರಾಸರಿ ಮತ್ತು 156.33 ಸ್ಟ್ರೈಕ್ ರೇಟ್‌ನಲ್ಲಿ 111 ರನ್ ಗಳಿಸಿದ್ದರು. ಅವರ ಅತ್ಯಧಿಕ ಸ್ಕೋರ್ 45 ನಾಟ್ ಔಟ್ ಆಗಿತ್ತು.

Sulekha