ಸೀರೆ ಕದ್ದಳೆಂದು ಕಾಲಲ್ಲಿ ಎದೆಗೆ ಒದ್ದ ಮಾಲೀಕ – ನಡುರಸ್ತೆಯಲ್ಲಿ ಕ್ರೂರವಾಗಿ ನಡೆದುಕೊಂಡವನ ಅರೆಸ್ಟ್ ಮಾಡಿದ ಪೊಲೀಸ್

ಸೀರೆ ಕದ್ದಳೆಂದು ಕಾಲಲ್ಲಿ ಎದೆಗೆ ಒದ್ದ ಮಾಲೀಕ – ನಡುರಸ್ತೆಯಲ್ಲಿ ಕ್ರೂರವಾಗಿ ನಡೆದುಕೊಂಡವನ ಅರೆಸ್ಟ್ ಮಾಡಿದ ಪೊಲೀಸ್

ತಪ್ಪು ಮಾಡಿದ ಮೇಲೆ ಪೊಲೀಸರಿದ್ದಾರೆ, ಕಾನೂನಿದೆ. ತಪ್ಪು ಮಾಡಿದ್ರಿ ಅಂತಾ ಕಾನೂನನ್ನೇ ಕೈಗೆ ತೆಗೆದುಕೊಂಡರೆ?, ಬೆಂಗಳೂರಲ್ಲಿ ಇಂಥಾದ್ದೊಂದು ಅಮಾನುಷ ಘಟನೆ ನಡೆದಿದೆ. ಮಹಿಳೆ ಸೀರೆ ಕದ್ದಳು ಅಂತಾ ಸೀರೆ ಅಂಗಡಿ ಮಾಲೀಕ ರಸ್ತೆಯಲ್ಲಿ ನಡೆದುಕೊಂಡ ರೀತಿ ಮನುಕುಲವೇ ತಲೆತಗ್ಗಿಸುವ ಹಾಗಿತ್ತು. ಮಹಿಳೆ ಸೀರೆ ಕದ್ದಿದ್ದು ತಪ್ಪೇ.. ಹಾಗಂತಾ ಅಷ್ಟು ಕ್ರೂರವಾಗಿ ನಡೆದುಕೊಳ್ಳಬೇಕಾಗಿತ್ತಾ?. ಕೊನೆಗೂ ಮಾಲೀಕನ ದರ್ಪಕ್ಕೆ ತಕ್ಕ ಶಾಸ್ತಿಯಾಗಿದೆ.

ಇದನ್ನೂ ಓದಿ:ಮಂಚದ ಒಳಗೆ ಪ್ರಿಯಕರ.. ಕೋಣೆಯೊಳಗೆ ಯುವತಿ! – ಹೆಂಡತಿ ಗುಟ್ಟು ಗಿಫ್ಟ್‌ ಸಿಕ್ಕ ಮಂಚದಲ್ಲಿ ರಟ್ಟು!  

ಬೆಂಗಳೂರಲ್ಲಿ ಮಹಿಳೆಯೊಬ್ಬರನ್ನು ನಡು ರಸ್ತೆಯಲ್ಲಿ ಬೂಟ್ ಕಾಲಿನಲ್ಲಿ ಒದ್ದು ವಿಕೃತಿ ಮೆರೆದ ಬಟ್ಟೆ ಅಂಗಡಿ ಮಾಲೀಕನಿಗೆ ತಕ್ಕ ಶಾಸ್ತಿಯಾಗಿದೆ. ನಗರದ ಅವೆನ್ಯೂ ರಸ್ತೆಯ ಬಟ್ಟೆ ಅಂಗಡಿಯೊಂದರಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಅಮಾನುಷ ಹಲ್ಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗಡಿಯ ಮಾಲೀಕನ ಮೇಲೆ ಕೇಸ್​ ದಾಖಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಕೇಸ್​ ದಾಖಲು ಮಾಡಲು ಸೂಚನೆ ನೀಡಿದ್ದು, ಇದೀಗ ಮಾಲೀಕ ಸೇರಿ ಮತ್ತೊಬ್ಬನನ್ನು ಬಂಧಿಸಲಾಗಿದೆ.

ಬಟ್ಟೆ ಅಂಗಡಿ ಮಾಲೀಕ ಉಮೇದ್ ರಾಮ್ ಮತ್ತು ಮತ್ತೊಬ್ಬನಾದ ಮಹೇಂದ್ರ ಶರ್ಮಾರನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ, ಜನರ ಆಕ್ರೋಶ ಹೆಚ್ಚಾಗಿದ್ದು, ಪೊಲೀಸರು ತಕ್ಷಣ ಕ್ರಮಕೈಗೊಂಡಿದ್ದಾರೆ. ಅವೆನ್ಯೂ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯೊಂದಕ್ಕೆ ಖರೀದಿಗೆ ತೆರಳಿದ್ದ ಮಹಿಳೆಯೊಬ್ಬರ ಮೇಲೆ ಉಮೇದ್ ರಾಮ್ ಮತ್ತು ಮಹೇಂದ್ರ ಶರ್ಮಾ ಬೂಟ್‌ನಿಂದ ಒದ್ದು ವಿಕೃತವಾಗಿ ನಡೆದುಕೊಂಡಿದ್ದರು. ಈ ಘಟನೆಯನ್ನು ಯಾರೋ ಚಿತ್ರೀಕರಿಸಿ, ಅವೆನ್ಯೂ ರಸ್ತೆಯ ವ್ಯಾಪಾರಿಗಳ ಗ್ರೂಪ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರಿಂದ ತೀವ್ರ ಖಂಡನೆ ವ್ಯಕ್ತವಾಯಿತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದರು. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿಗಳು ಆರಂಭದಲ್ಲಿ ಮಹಿಳೆಯ ವಿರುದ್ಧ ದೂರು ನೀಡಿದ್ದರು. ಆದರೆ, ವಿಡಿಯೋ ವೈರಲ್ ಆದ ನಂತರ ಸತ್ಯ ಬಯಲಿಗೆ ಬಂದಿತು. ಈ ಘಟನೆಯಿಂದಾಗಿ ಆರೋಪಿಗಳ ವಿರುದ್ಧವೇ ಕೇಸ್ ದಾಖಲಾಯಿತು. ವಿಡಿಯೋದಿಂದಾಗಿ ಈ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಚರ್ಚೆಯನ್ನುಂಟುಮಾಡಿದೆ.

Sulekha