ಬಿಯರ್ ಬಾಟಲ್ ಹಿಡಿದು ಬೀದಿಯಲ್ಲಿ ಸುತ್ತಾಡಿದ ಸಚಿನ್ ತೆಂಡೂಲ್ಕರ್ ಪುತ್ರಿ!

ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಸದಾ ಸುದ್ದಿಯಲ್ಲಿರುವ ಬೆಡಗಿ. ಒಂದಲ್ಲ ಒಂದು ವಿಚಾರವಾಗಿ ಈಕೆ ಸದ್ದು ಮಾಡ್ತಿರುತ್ತಾರೆ. ಸಾರಾ ಹೆಸರು ಖ್ಯಾತ ನಟ, ಕ್ರಿಕೆಟ್ ಪ್ಲೇಯರ್ಸ್ ಜೊತೆ ತಳುಕು ಹಾಕಿಕೊಳ್ಳುತ್ತಲೇ ಇದೆ. ಇದೀಗ ಸಾರಾ ಬೇರೆ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಕೈಯಲ್ಲಿ ಬಿಯರ್ ಬಾಟಲ್ ಹಿಡಿದು ರಸ್ತೆಯಲ್ಲಿ ಓಡಾಡಿದ್ದಾರೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಟ್ರಿಗರ್ ಮಾಡಿದ್ರೆ ಉಗುರಲ್ಲೇ ಹೊಡೆದು ಸಾಯಿಸ್ತೀನಿ! – ತನ್ನ ತಂಟೆಗೆ ಬಂದ ಧ್ರುವಂತ್ಗೆ ಗಿಲ್ಲಿ ವಾರ್ನ್!
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಬಿಯರ್ ಬಾಟಲ್ ಅನ್ನು ಕೈಯಲ್ಲಿ ಹಿಡಿದುಕೊಂಡು ಗೋವಾದಲ್ಲಿ ಸುತ್ತಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸಾರ್ವಜನಿಕ ಸ್ಥಳದಲ್ಲಿ ಬಿಯರ್ ಬಾಟಲ್ ಹಿಡಿದುಕೊಂಡು ರಸ್ತೆಯ ಪಕ್ಕದಲ್ಲಿ ಓಡಾಡಿದ್ದಾರೆ. ಸಾರಾ ಬಾಟಲ್ ಹಿಡಿದು ಓಡಾಡುತ್ತಿರುವುದನ್ನ ವ್ಯಕ್ತಿಯೊಬ್ಬರು ಮೊಬೈಲ್ ಮೊಬೈಲ್ನಲ್ಲಿ ಬಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ತೆಂಡೂಲ್ಕರ್ ಪುತ್ರಿ ನಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಸಾರಾ ಈ ರೀತಿ ಓಡಾಡಿರುವುದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೆ ಸಾರಾ ತೆಂಡೂಲ್ಕರ್ ಇತ್ತೀಚೆಗಷ್ಟೇ ತಮ್ಮ ಸ್ನೇಹಿತೆಯರ ಜೊತೆಗೆ ಗೋವಾಕ್ಕೆ ಪ್ರವಾಸಕ್ಕೆ ತೆರಳಿದ್ದಾರೆ. ಗೋವಾ ದಾರಿಯಲ್ಲಿ ಬಿಯರ್ ಬಾಟಲ್ ಹಿಡಿದುಕೊಂಡು ತಮ್ಮ ಸ್ನೇಹಿತೆಯರ ಜೊತೆ ಸಾರಾ ನಡೆದುಕೊಂಡು ಹೋಗಿದ್ದಾರೆ. ಈ ವೇಳೆ ಬೈಕ್ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಇದರಲ್ಲಿ ವೆಸ್ಟರ್ನ್ ಔಟ್ ಫಿಟ್ ನಲ್ಲಿ ಸಾರಾ ಗ್ಲಾಮರಸ್ ಆಗಿ ಕಂಡಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ಸಾರಾ ಕೆಂಪು ಬಣ್ಣದ ಫ್ಲೋರಲ್ ವಿನ್ಯಾಸದ ಉಡುಪನ್ನು ಧರಿಸಿದ್ದನ್ನು ಕಾಣಬಹುದು. ಮೂವರು ಸ್ನೇಹಿತರೊಂದಿಗೆ ಗೋವಾದ ಬೀದಿಗಳಲ್ಲಿ ಅಡ್ಡಾಡುತ್ತಿರುವ ದೃಶ್ಯಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ.
ಸೋಶಿಯಲ್ ಮಿಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿರುವ ಸಾರಾ ಅವರು ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಅನ್ನು ಕೂಡ ಹೊಂದಿದ್ದಾರೆ. ಇವರ ಸರಳ ಜೀವನಶೈಲಿಯು ಆಗಾಗ ಇಂಟರ್ ನೆಟ್ ನಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರಿಂದ ಪ್ರಶಂಸೆ ಪಡೆಯುತ್ತಿತ್ತು. ಆದರೆ ಈ ಬಾರಿ ಅವರ ವಿಡಿಯೋ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. ಕ್ರಿಕೆಟಿಗ ಸಚಿನ್ ಪುತ್ರಿಯಾಗಿ ಸಾರಾ ಈ ರೀತಿ ಬಿಯರ್ ಬಾಟಲ್ ಹಿಡಿದುಕೊಂಡು ಊರುರು ಸುತ್ತುವುದು ಅವರ ತಂದೆಯ ಗೌರವಕ್ಕೆ ಧಕ್ಕೆ ತರಲಿದೆ. ಪಾರ್ಟಿ ಮಸ್ತಿ ಏನೆ ಇದ್ದರೂ ಅದಕ್ಕೊಂದು ಚೌಕಟ್ಟು ಅಗತ್ಯ. ಎಲ್ಲರಿಗೂ ಮಾದರಿಯಾಗಿ ಇರಬೇಕಾದವರು ಈ ರೀತಿಯ ವರ್ತನೆ ತೋರುವುದು ಸರಿಯಲ್ಲ ಎಂಬ ಮಾತು ಕೇಳಿಬಂದಿದೆ.

ನೋಡಿರಿ

