‘ನಿನ್ನ ಶ್ರಮಕ್ಕೆ ತಕ್ಕ ಪ್ರತಿಫಲ…. ‘- ಮರಿ ತೆಂಡೂಲ್ಕರ್‌ಗೆ ಭಾವನಾತ್ಮಕ ಪತ್ರ ಬರೆದ ಅಕ್ಕ ಸಾರಾ

‘ನಿನ್ನ ಶ್ರಮಕ್ಕೆ ತಕ್ಕ ಪ್ರತಿಫಲ…. ‘- ಮರಿ ತೆಂಡೂಲ್ಕರ್‌ಗೆ ಭಾವನಾತ್ಮಕ ಪತ್ರ ಬರೆದ ಅಕ್ಕ ಸಾರಾ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ತನ್ನ ಆಟದ ಮೂಲಕವೇ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ. ಇಷ್ಟು ದಿನ ಸಚಿನ್‌ ತೆಂಡೂಲ್ಕರ್‌ ಮಗ ಅರ್ಜುನ್‌ ಕ್ರಿಕೆಟ್‌ ಆಡೋದೆಲ್ಲಾ ಅಪ್ಪನ ಇನ್‌ಫ್ಲೂಯೆನ್ಸ್ ಮೇಲೆ ಅಂತೆಲ್ಲಾ ಟೀಕೆಗಳು ಕೇಳಿ ಬರುತ್ತಿತ್ತು. ಇದೀಗ ಅರ್ಜುನ್ ತೆಂಡುಲ್ಕರ್, ರಣಜಿಯ ಪಾದಾರ್ಪಣೆ ಪಂದ್ಯದಲ್ಲೇ ರಾಜಸ್ಥಾನದ ವಿರುದ್ಧ 120 ರನ್‌ ಬಾರಿಸುವ ಮೂಲಕ ಚೊಚ್ಚಲ ಶತಕ ದಾಖಲಿಸಿದ್ದಾರೆ.  ತಮ್ಮ ಅರ್ಜುನ್ ತೆಂಡುಲ್ಕರ್ ಬಾರಿಸಿದ ಸೆಂಚುರಿಗೆ ಅಕ್ಕ ಸಾರಾ ಭಾವನಾತ್ಮಕವಾಗಿ ಪತ್ರ ಬರೆದು ಶುಭಕೋರಿದ್ದಾರೆ.

ಇದನ್ನೂ ಓದಿ :  ಕಿರಿಕ್ ಮಾಡಿ ಸನ್ನೆ ಮಾಡಿದ ಲಿಟ್ಟನ್ – ಪ್ರತಿಸನ್ನೆಯಲ್ಲಿ ಉತ್ತರಿಸಿದ ವಿರಾಟ್ ಮತ್ತು ಸಿರಾಜ್

ತಮ್ಮ ಅರ್ಜುನ್‌ಗೆ ಭಾವನಾತ್ಮಕವಾಗಿ ಪತ್ರ ಬರೆದಿರುವ ಸಾರಾ, ‘ನಿನ್ನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆ. ತಾಳ್ಮೆ ನಿಧಾನವಾಗಿ ಫಲ ಕೊಡುತ್ತದೆ. ಇದು ಆರಂಭ ಮಾತ್ರ. ನಾನು ನಿನ್ನ ಅಕ್ಕನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ‘ ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.  ಈಗಾಗಲೇ ಲೆಜೆಂಡರಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಮಗನಿಗೆ ಶುಭಾಷಯಗಳ ಸುರಿಮಳೆಯೇ ಹರಿದುಬರುತ್ತಿದೆ. ಮರಿ ತೆಂಡೂಲ್ಕರ್‌ಗೆ ಈಗ ಅಕ್ಕ ಸಾರಾ ಕೂಡಾ ವಿಶೇಷವಾಗಿ ಶುಭಹಾರೈಸಿದ್ದು ವಿಶೇಷವಾಗಿದೆ.

ಮುಂಬೈ ತಂಡದಲ್ಲಿ ಆಡುವ 11ರ ಸಾಲಿನಲ್ಲಿ ಅವಕಾಶ ಸಿಗದ ಅರ್ಜುನ್‌ ಈ ಬಾರಿ ಗೋವಾಗೆ ಶಿಫ್ಟ್‌ ಆಗಿದ್ರು. ಗೋವಾ ಪರ ರಣಜಿಗೆ ಪಾದಾರ್ಪಣೆ ಮಾಡಿರುವ ಅರ್ಜುನ್‌ 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ್ರೂ ಕೂಡಾ ರಾಜಸ್ಥಾನದ ವಿರುದ್ಧ 120 ರನ್‌ ಬಾರಿಸಿ ಚೊಚ್ಚಲ ಶತಕ ದಾಖಲಿಸಿದ್ದಾರೆ. 1988ರಲ್ಲಿ 15 ವರ್ಷದವರಾಗಿದ್ದಾಗ ಸಚಿನ್ ತೆಂಡೂಲ್ಕರ್ ಕೂಡ ರಣಜಿ ಪಾದಾರ್ಪಣೆ ಪಂದ್ಯದಲ್ಲೇ ಸೆಂಚುರಿ ಹೊಡೆದಿದ್ರು. 34 ವರ್ಷಗಳ ಬಳಿಕ ಇದೀಗ 23 ವರ್ಷದ ಅರ್ಜುನ್ ತೆಂಡೂಲ್ಕರ್ ಸೆಂಚುರಿ ಬಾರಿಸಿ ಅಪ್ಪನಿಗೆ ತಕ್ಕ ಮಗ ಎನ್ನಿಸಿಕೊಂಡಿದ್ದಾರೆ.

suddiyaana