ಸ್ಟಾರ್ ಕ್ರಿಕೆಟರ್ ಶುಭ್‌ಮನ್ ಗಿಲ್ ದಿಲ್ ಗೆದ್ದಿದ್ದು ಸಾರಾ ತೆಂಡೂಲ್ಕರ್..! – ಸಾರಾ ಅಲಿ ಖಾನ್ ಮಾತು ಕೇಳಿ ಫ್ಯಾನ್ಸ್ ಖುಷ್

ಸ್ಟಾರ್ ಕ್ರಿಕೆಟರ್ ಶುಭ್‌ಮನ್ ಗಿಲ್ ದಿಲ್ ಗೆದ್ದಿದ್ದು ಸಾರಾ ತೆಂಡೂಲ್ಕರ್..! – ಸಾರಾ ಅಲಿ ಖಾನ್ ಮಾತು ಕೇಳಿ ಫ್ಯಾನ್ಸ್ ಖುಷ್

ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟರ್ ಶುಭ್‌ಮನ್ ಗಿಲ್ ಯಾರ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬುದೇ ಅಭಿಮಾನಿಗಳಿಗೆ ಕುತೂಹಲ. ಆದರೆ, ಗಿಲ್ ತನ್ನ ದಿಲ್ ಕೊಟ್ಟಿದ್ದು ಯಾರು ಎಂಬುದು ಕೊನೆಗೂ ರಿವೀಲ್ ಆಗಿದೆ. ಸಾರಾ ಅಲಿ ಖಾನ್, ಸಾರಾ ತೆಂಡೂಲ್ಕರ್ ನಡುವೆ ಯಾರು ಗಿಲ್ ಹುಡುಗಿ ಎಂಬುದು ಈಗ ಅಭಿಮಾನಿಗಳಿಗೆ ಕನ್‌ಫರ್ಮ್ ಆಗಿದೆ.

ಇದನ್ನೂ ಓದಿ: ವಾಂಖೆಡೆ ಸ್ಟೇಡಿಯಂನಲ್ಲಿ ಗಿಲ್ – ಕೊಹ್ಲಿ ಜೊತೆಯಾಟ ಕಣ್ತುಂಬಿಕೊಂಡ ಫ್ಯಾನ್ಸ್ – ಲಂಕಾ ವಿರುದ್ಧ ಅಬ್ಬರಿಸಿದ ಸ್ಟಾರ್ ಆಟಗಾರರು

ಸಾರಾ ಅಲಿ ಖಾನ್ ಅವರು ಶುಭ್ಮನ್ ಗಿಲ್ ಜೊತೆ ಕಾಣಿಸಿಕೊಂಡಿದ್ದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಸಾರಾ ತೆಂಡೂಲ್ಕರ್‌ನ ಬಿಟ್ಟು ಸಾರಾ ಅಲಿ ಖಾನ್ ಜೊತೆ ಶುಭ್ಮನ್ ಡೇಟಿಂಗ್ ಶುರು ಮಾಡಿಕೊಂಡಿದ್ದಾರೆ ಎಂಬುದು ಸಹಜವಾಗಿಯೇ ಕ್ರಿಕೆಟ್ ಅಭಿಮಾನಿಗಳಿಗೆ ಬೇಜಾರು ಆಗಿತ್ತು. ಗಿಲ್ ಹೋದಲ್ಲಿ ಬಂದಲ್ಲಿ, ಮೈದಾನದಲ್ಲಿ ನಿಂತಲ್ಲಿ, ಬ್ಯಾಟ್ ಬೀಸುವಲ್ಲಿ ಸಾರಾ ಸಾರಾ ಎಂದೇ ಅಭಿಮಾನಿಗಳು ಕೂಗುತ್ತಿದ್ದರು. ಆದರೆ, ಯಾವ ಸಾರಾ ಎಂದು ಎಲ್ಲರಿಗೂ ಡೌಟ್ ಇತ್ತು. ಈ ಬಗ್ಗೆ ಸಾರಾ ಅಲಿ ಖಾನ್ ಸ್ವಲ್ಪ ಮಟ್ಟಿಗೆ ಕ್ಲ್ಯಾರಿಟಿ ಕೊಟ್ಟಿದ್ದಾರೆ.

ಈ ಎಲ್ಲಾ ವಿಚಾರಗಳ ಬಗ್ಗೆ ಸಾರಾ ಅಲಿ ಖಾನ್ ಅವರು ‘ಕಾಫಿ ವಿತ್ ಕರಣ ಸೀಸನ್ 8’ರ ಎಪಿಸೋಡ್‌ನಲ್ಲಿ ಮಾತನಾಡಿದ್ದಾರೆ. ಇದರ ಪ್ರೋಮೋ ಗಮನ ಸೆಳೆಯುತ್ತಿದೆ. ಸಾರಾ ಅಲಿ ಖಾನ್ ಜೊತೆ ಕರಣ್ ಕೆಲವೊಂದು ಪ್ರಶ್ನೆ ಕೇಳಿದ್ದಾರೆ. ‘ನೀವು ಶುಭ್ಮನ್ ಜೊತೆ ಡೇಟಿಂಗ್ ಮಾಡುತ್ತಿದ್ದೀರಿ ಎನ್ನುವ ಮಾತಿದೆ’ ಎಂದು ಸಾರಾ ಅಲಿ ಖಾನ್‌ಗೆ ಕೇಳಲಾಯಿತು. ‘ನೀವು ತಪ್ಪಾದ ಸಾರಾಗೆ ಈ ಪ್ರಶ್ನೆ ಕೇಳುತ್ತಿದ್ದೀರಿ’ ಎಂದಿದ್ದಾರೆ ಅವರು. ಈ ಮೂಲಕ ಸಾರಾ ತೆಂಡೂಲ್ಕರ್‌ಗೆ ಈ ಬಗ್ಗೆ ಕೇಳಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಶುಭ್ಮನ್ ಗಿಲ್ ಹಾಗೂ ಸಾರಾ ತೆಂಡೂಲ್ಕರ್ ಒಂದೇ ಕಡೆಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಕ್ಕೆ ಸುದ್ದಿ ಆಗಿದ್ದರು. ಇತ್ತೀಚೆಗೆ ಇಬ್ಬರೂ ಒಂದೇ ಪಾರ್ಟಿಗೆ ತೆರಳಿದ್ದರು. ಪಾರ್ಟಿಗೆ ಹೋಗುವಾಗ ಇಬ್ಬರೂ ಬೇರೆ ಬೇರೆಯಾಗಿಯೇ ಹೋಗಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಅದೇನೇ ಆಗಲಿ, ಸಚಿನ್ ತೆಂಡೂಲ್ಕರ್ ರೀತಿ ಗಿಲ್ ಕೂಡಾ ಕ್ರಿಕೆಟ್ ಜಗತ್ತಿನಲ್ಲಿ ಬೆಳೆಯಬೇಕು. ಡೇಟಿಂಗ್ ಮಾಡಿದರೆ ಸಾರಾ ತೆಂಡೂಲ್ಕರ್ ಜೊತೆ ಮಾಡಬೇಕು ಅಂತಿದ್ದಾರೆ ಫ್ಯಾನ್ಸ್.

Sulekha