ಡೇಟಿಂಗ್.. ಒಂದೇ ತಿಂಗಳಲ್ಲಿ ಬ್ರೇಕ್ಅಪ್.. ಸಾರಾಗೆ ಕೈಕೊಟ್ಟ ಬಾಲಿವುಡ್ ನಟ – ಫ್ಯಾಮಿಲಿ ಮೀಟ್ ಬಳಿಕ ಆಗಿದ್ದೇನು?

ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್.. ಸದ್ಯ ಈಕೆ ಕೂತ್ರೂ ನಿಂತ್ರೂ ಸುದ್ದಿಯಲ್ಲಿದ್ದಾರೆ.. ಶುಭಮನ್ ಗಿಲ್ ಹಾಗೇ ಸಾರಾ ತೆಂಡೂಲ್ಕರ್ ಜೊತೆ ಸಮ್ಥಿಂಗ್ ಸಮ್ಂಥಿಗ್ ನಡಿತಾ ಇದೆ. ಕೆಲ ವರ್ಷದಿಂದ ಡೇಟಿಂಗ್ ನಡೆಸ್ತಾ ಇದ್ದಾರೆ ಅಂತಾ ಹೇಳಲಾಗಿತ್ತು. ಅದಾದ್ಮೇಲೆ ಗಿಲ್ ನಾನು ಸಿಂಗಲ್ ಅನ್ನೋದ್ರ ಮೂಲಕ ಹರಿದಾಡ್ತಿರೋ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ರು. ಬಳಿಕ ಬಾಲಿವುಡ್ ನಟನ ಜೊತೆ ಸಾರಾ ಹೆಸ್ರು ತಳುಕು ಹಾಕಿಕೊಂಡಿತ್ತು. ಬಾಲಿವುಡ್ ನಟ ಸಿದ್ಧಾಂತ್ ಚತುರ್ವೇದಿ ಜೊತೆ ಸಾರಾ ಮದುವೆ ಅಂತಾ ಹೇಳಲಾಗಿತ್ತು.. ಆದ್ರೀಗ ಸಿದ್ಧಾಂತ್ ಚತುರ್ವೇದಿ ಸಾರಾ ಜೊತೆ ಬ್ರೇಕ್ಅಪ್ ಮಾಡ್ಕೊಂಡಿದ್ದಾರಂತೆ.. ಅದೂ ಕೂಡ ಎರಡು ಫ್ಯಾಮಿಲಿ ಮೀಟ್ ಆದ್ಮೇಲೆ..
ಇದನ್ನೂ ಓದಿ: ಆರ್ ಸಿಬಿ ಪ್ಲೇಆಫ್ ಜರ್ನಿ ಹಿಂದೆ 3 ಮಾಸ್ಟರ್ ಸ್ಟ್ರೋಕ್ಸ್ – ಫ್ರಾಂಚೈಸಿಗೆ ಏನೆಲ್ಲಾ ಪ್ಲಸ್ ಆಯ್ತು?
ಸಾರಾ ತೆಂಡೂಲ್ಕರ್ ನಟಿಯಾಗದಿದ್ರೂ, ಯಾವ ಸಿನಿಮಾ ಹಿರೋಯಿನ್ಗೂ ಕಡಿಮೆಯಿಲ್ಲ.. ಆಕೆಯ ಅಂದಕ್ಕೆ ಅದೆಷ್ಟೋ ಯುವಕರು ಮನಸೋತಿದ್ದಾರೆ. ಆದ್ರೆ ಸಾರಾ ಜೊತೆ ಒಂದಲ್ಲ ಒಂದು ಹೆಸ್ರು ತಳುಕು ಹಾಕಿಕೊಳ್ಳೊದು ಇತ್ತೀಚೆಗೆ ಕಾಮನ್ ಆಗಿದೆ. ಆರಂಭದಲ್ಲಿ ಶುಭ್ಮನ್ ಗಿಲ್ ಮತ್ತು ಸಾರಾ ಜೋಡಿ ಹಕ್ಕಿಗಳು ಎನ್ನುವ ಮಾತು ಕೇಳಿಬಂದಿತ್ತು. ಬಳಿಕ ಗಿಲ್ ಈ ಬಗ್ಗೆ ಸ್ಪಷ್ಟನೆ ನೀಡಿದ್ರು.. ನಾನು ಕಳೆದ ಮೂರು ವರ್ಷಗಳಿಂದ ಯಾರ ಜೊತೆಯೂ ಕಮಿಟ್ ಆಗಿಲ್ಲ ಅಂತಾ ಹೇಳಿ ಎಲ್ಲಾ ವದಂತಿಗಳಿಗೂ ಬ್ರೇಕ್ ಹಾಕಿದ್ರು.. ಅದಾದ್ಮೇಲೆ ಸಾರಾ, ಬಾಲಿವುಡ್ ನಟ ಸಿದ್ಧಾಂತ್ ಚತುರ್ವೇದಿ ಜೊತೆ ಡೇಟಿಂಗ್ ನಡೆಸ್ತಿದ್ದಾರೆ. ಕುಟುಂಬದ ಒಪ್ಪಿಗೆ ಪಡೆದು ಮದ್ವೆ ಆಗ್ತಾರೆ ಎಂದು ಹೇಳಲಾಗಿತ್ತು.. ಆದ್ರೀಗ ಈ ಮದುವೆ ಮಾತುಕತೆ ಮುರಿದು ಬಿದ್ದಿದೆ ಎಂದು ವರದಿಯಾಗಿದೆ.
ಸಾರಾ ತೆಂಡೂಲ್ಕರ್ ಹಾಗೂ ಸಿದ್ಧಾಂತ್ ಪ್ರೀತಿಯಲ್ಲಿ ಬಿದ್ದಿದ್ದಾರೆ. ಒಂದು ತಿಂಗಳಿನಿಂದ ಡೇಟಿಂಗ್ ನಡೆಸ್ತಿದ್ದಾರೆ.. ಮದುವೆನೂ ಆಗ್ತಾರೆ ಎಂಬ ಸುದ್ದಿ ಜೋರಾಗಿ ಸದ್ದು ಮಾಡಿತ್ತು. ಆದ್ರೆ ಈ ಜೋಡಿ ತಮ್ಮ ಸಂಬಂಧದ ಬಗ್ಗೆ ಎಲ್ಲೂ ಗುಟ್ಟು ಬಿಟ್ಟುಕೊಟ್ಟಿರ್ಲಿಲ್ಲ.. ಆದ್ರೀಗ ಈ ಜೋಡಿ ಬ್ರೇಕ್ಅಪ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಅದೂ ಕೂಡ ಫ್ಯಾಮಿಲಿ ಜೊತೆ ಮಾತುಕತೆ ನಡೆಸಿದ ಬಳಿಕ ಎಂದು ಹೇಳಲಾಗ್ತಿದೆ. ಹೌದು, ಸಾರಾ ತೆಂಡೂಲ್ಕರ್ ಹಾಗೂ ಸಿದ್ಧಾಂತ್ ಕುಟುಂಬದವರು ಕಳೆದ ವಾರ ಮೀಟ್ ಆಗಿದ್ರು. ಅದಾದ ಬಳಿಕ ಸಿದ್ಧಾಂತ್ ಸಾರಾ ಜೊತೆ ಬ್ರೇಕ್ಅಪ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಆದ್ರೆ ಬ್ರೇಕ್ ಅಪ್ ಮಾಡಿಕೊಳ್ಳಲು ಕಾರಣವೇನು? ಸಿದ್ಧಾಂತ್ ಮನೆಯವರು ಈ ಸಂಬಂಧ ಬೇಡ ಅಂದ್ರಾ ಅಥವಾ ನಟನೇ ಬ್ರೇಕ್ಅಪ್ ಮಾಡಿಕೊಂಡ್ರಾ ಅನ್ನೋದು ಗೊತ್ತಾಗಿಲ್ಲ.. ಈ ಬಗ್ಗೆ ನಟ ಆಗ್ಲೀ.. ತೆಂಡೂಲ್ಕರ್ ಫ್ಯಾಮಿಲಿ ಆಗ್ಲೀ ಯಾವುದೇ ಮಾಹಿತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ಸಿಗುತ್ತಾ ಅಂತಾ ಕಾದುನೋಡ್ಬೇಕು.
ಅಂದ್ಹಾಗೆ ಸಿದ್ದಾಂತ್ 2019ರ ‘ಗಲ್ಲಿ ಬಾಯ್’ ಚಿತ್ರದ ಮೂಲಕ ಜನಪ್ರಿಯತೆ ಪಡೆದರು. ಅದಕ್ಕೂ ಮೊದಲು ‘ಇನ್ಸೈಡ್ ಎಡ್ಜ್’ ಹೆಸರಿನ ವೆಬ್ ಸೀರಿಸ್ನಲ್ಲಿ ಅವರು ನಟಿಸಿದ್ದರು. 2022ರಲ್ಲಿ ಅವರು ನಟಿಸಿದ ಗೆಹರಾಯಿಯಾ ಸಿನಿಮಾ ರಿಲೀಸ್ ಆಗಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಈಗ ‘ಧಡಕ್ 2’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಸಿದ್ಧಾಂತ್ ಹೆಸರು ಕೂಡ ಚರ್ಚೆಯಲ್ಲಿ ಇತ್ತು. ಅಮಿತಾಭ್ ಬಚ್ಚನ್ ಮೊಮ್ಮಗಳು ನಂದಾ ನವೇಲಿ ಜೊತೆ ಅವರು ಸುತ್ತಾಟ ನಡೆಸುತ್ತಿದ್ದರು ಎನ್ನುವ ಗಾಸಿಪ್ ಬಾಲಿವುಡ್ ಅಂಗಳದಲ್ಲಿ ಇತ್ತು. ಇದೀಗ ಸಾರಾ ಹೆಸರು ಸಿದ್ಧಾಂತ್ ಜೊತೆ ತಳುಕು ಹಾಕಿಕೊಂಡಿದೆ.