ಸಾರಾ ಮೇಲೆ ಗಿಲ್‌ಗೆ ಲವ್ ಇಲ್ವಾ? – ಶುಬ್ಮನ್ ಪ್ರೇಮ್ ಕಹಾನಿಗೆ ಟ್ವಿಸ್ಟ್!

ಸಾರಾ ಮೇಲೆ ಗಿಲ್‌ಗೆ ಲವ್ ಇಲ್ವಾ? – ಶುಬ್ಮನ್ ಪ್ರೇಮ್ ಕಹಾನಿಗೆ ಟ್ವಿಸ್ಟ್!

ಸಚಿನ್ ತೆಂಡೂಲ್ಕರ್ ಮಗಳು ಸಾರಾ ಹಾಗೂ ಟೀಂ ಇಂಡಿಯಾ ಆಟಗಾರ ಶುಭ್ ಮನ್ ಗಿಲ್ ನಡುವೆ ಕುಚ್‌ ಕುಚ್‌  ಹೇ ಅಂತ ಆಗಾಗ್ಗೆ ಸುದ್ದಿ ಆಗ್ತಾನೇ ಇರ್ತಾರೆ.. ಇವರಿಬ್ರು ಗೌಪ್ಯವಾಗಿ ಡೇಟಿಂಗ್ ನಡೆಸುತ್ತಿದ್ದಾರೆ ಅಂತಾ ಆಗಾಗ್ಗೆ ಕ್ರಿಕೆಟ್ ಪ್ರಿಯರು ನಂಬೋ ರೀತಿಯ ಸುದ್ದಿ ಹರಿದಾಡುತ್ತಾ ಇರುತ್ತದೆ. ಆದರೆ, ಅಧಿಕೃತವಾಗಿ ಇಬ್ಬರು ಸಹ ಎಲ್ಲಿಯೂ ಲವ್ ಬಗ್ಗೆ ತುಟಿ ಬಿಚ್ಚಿರ್ಲಿಲ್ಲ.. ಇದೀಗ ತಮ್ಮ ಲವ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ ಶುಬ್ಮನ್ ಗಿಲ್.. ಗಿಲ್ ಮಾತು ಕೇಳಿ ಫ್ಯಾನ್ಸ್ ಸಿಕ್ಕಾಪಟ್ಟೆ ಬೇಜಾರ್ ಮಾಡ್ಕೊಂಡಿದ್ದಾರೆ..

ಇದನ್ನೂ ಓದಿ: ಆರ್‌ಸಿಬಿ & ಪಂಜಾಬ್ ಟೀಮ್ ಪಾಲಿಗೆ ಕ್ಯಾಪ್ಟನ್ ಗಳೇ ದುಷ್ಮನ್ ಗಳಾದ್ರಾ?

ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಪ್ರೀತಿಯಲ್ಲಿದ್ದಾರೆ ಎನ್ನುವ ಗುಸು ಗುಸು ಕ್ರಿಕೆಟ್ ಲೋಕದಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ಕೂಡ ಚಾಲ್ತಿಯಲ್ಲಿದೆ. ಗಿಲ್ ಟೀಂ ಇಂಡಿಯಾದಲ್ಲಿ ಮಿಂಚೋಕೆ ಶುರು ಮಾಡಿದ್ಮೇಲಂತೂ ಇವರೇ ತೆಂಡುಲ್ಕರ್ ಅಳಿಯ ಅಂತ ಕ್ರಿಕೆಟ್ ಪ್ರಿಯರೇ ಫಿಕ್ಸ್ ಮಾಡಿಬಿಟ್ಟಿದ್ದರು.. ಇದರ ನಡುವೆ  ಇವರಿಬ್ಬರ ನಡುವೆ ಮನಸ್ತಾಪ ಬಂದು ದೂರವಾಗಿದ್ದಾರೆ ಅಂತ ಒಂದಷ್ಟು ದಿನ.., ನಂತರ ಇಬ್ಬರೂ ಮುನಿಸು ಮರೆತು ಒಂದಾಗಿದ್ದಾರೆ ಅಂತ ಮತ್ತೊಂದಷ್ಟು ದಿನ ಸುದ್ದಿ  ಆಗ್ತಿತ್ತು.. ಬಳಿಕ ಗಿಲ್ ಆಟ ನೋಡಲು ಸಾರಾ ಬಂದ್ರು.. ಇವರಿಬ್ರೂ ಹೊರಗೆ ಸುತ್ತಾಡ್ತಿದ್ದಾರೆ.. ಹೀಗೆ ಗಾಸಿಪ್ ಗಳಿಗೇನು ಕಡ್ಮೆ ಇಲ್ಲ.. ಸೋಶಿಯಲ್ ಮೀಡಿಯಾದಲ್ಲೂ ಇವರಿಬ್ರ  ಫೋಟೋಗಳು ಹರಿದಾಡ್ತಾನೆ ಇರ್ತವೆ..  ಆದ್ರೆ ಇದೀಗ ತಮ್ಮ ಗರ್ಲ್ ಫ್ರೆಂಡ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ ಗಿಲ್..

ಐಪಿಎಲ್ನಲ್ಲಿ ಬ್ಯುಸಿ ಆಗಿರುವ ಶುಭ್ ಮನ್ ಗಿಲ್ ಇತ್ತೀಚೆಗೆ ಪ್ರಸಿದ್ಧ ಸಿಂಗರ್ ಎಡ್ ಶೀರಾನ್ ಅವರನ್ನು ಭೇಟಿಯಾಗಿದ್ರು. ಚರ್ಚೆ ವೇಳೆ ಗಾಯಕ, ಶುಭ್ ಮನ್ಗೆ ಕೆಲ ಪ್ರಶ್ನೆಗಳು ಕೇಳಿದ್ದಾರೆ. ನಿಮಗೆ ಗರ್ಲ್ ಫ್ರೆಂಡ್ ಇದ್ದಾರಾ ಎಂಬ ಶೀರಾನ್ ಕೇಳಿದ್ದಾರೆ.. ಈ  ಪ್ರಶ್ನೆಗೆ ಉತ್ತರಿಸಿದ ಗಿಲ್, ಇಲ್ಲ..  ನಾನು ಸಿಂಗಲ್ ಅಂತಾ ಹೇಳಿದ್ದಾರೆ. ಶುಭ್ ಮನ್ ಮಾತು ಕೇಳಿ ಫ್ಯಾನ್ಸ್ ಹಾರ್ಟ್ ಬ್ರೇಕ್ ಆಗಿದೆ. ಗಿಲ್ ಮಾತು ಕೇಳಿ ಸುಮ್ಮನಾಗದ ಶೀರನ್ ನಂತರ ಕ್ಯಾಮೆರಾವನ್ನು ನೋಡುತ್ತಾ ಹೇಳಿದ್ರು, “ಮಾರ್ಕೆಟ್” ನಲ್ಲಿ ಎಂದು… ಹೊರಗಿನ ಗಾಸಿಪ್ ಬಗ್ಗೆ ಪ್ರಶ್ನೆ ಮಾಡಿದ್ರು. ಈ ವೇಳೆ ಶುಭ ಮನ್ ಗಿಲ್ ಜೋರಾಗಿ ನಗಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶುಭ್ಮನ್ ಗಿಲ್ ಮಾತು ಕೇಳಿದ ಫ್ಯಾನ್ಸ್ ಸಾರಾ ಜೊತೆ ಬ್ರೇಕಪ್ ಮಾಡಿಕೊಂಡಿರಬೇಕು ಎನ್ನುತ್ತಿದ್ದಾರೆ. ಇಬ್ಬರ ಬ್ರೇಕಪ್ ಸುದ್ದಿ ಕೂಡ ಕೆಲ ದಿನಗಳಿಂದ ಹರಿದಾಡ್ತಿದೆ. ಲವ್, ಬ್ರೇಕಪ್ ಬಗ್ಗೆ ಇಬ್ಬರೂ ಮಾತಾಡೋದಿಲ್ಲ. ಇಷ್ಟಕ್ಕೂ ಇವರಿಬ್ಬರ ನಡುವೆ ಲವ್ ಇದ್ಯಾ ಅನ್ನೋದೂ ಖಾತ್ರಿಯಿಲ್ಲ.. ಆದ್ರೆ ಇವರು ಜೋಡಿಯಾದರೆ ಚೆನ್ನಾಗಿರುತ್ತೆ ಅನ್ನೋದು ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳ ಆಶಯ ಅನ್ನೋದ್ರಲ್ಲಿ ಅನುಮಾನವೇ ಇಲ್ಲ..

Shwetha M