ಸಾರಾ ಅಣ್ಣಯ್ಯ ‘ನಮ್ಮ ಲಚ್ಚಿ’ಗೆ ಗುಡ್‌ ಬೈ ಹೇಳಿದ ಕಾರಣ ಕೊನೆಗೂ ಗೊತ್ತಾಯ್ತು..!

ಸಾರಾ ಅಣ್ಣಯ್ಯ ‘ನಮ್ಮ ಲಚ್ಚಿ’ಗೆ ಗುಡ್‌ ಬೈ ಹೇಳಿದ ಕಾರಣ ಕೊನೆಗೂ ಗೊತ್ತಾಯ್ತು..!

‘ಕನ್ನಡತಿ’ ಸೀರಿಯಲ್‌ನಲ್ಲಿ ವರೂದಿನಿಯಾಗಿ ಕಾಣಿಸಿಕೊಂಡಿದ್ದ ಸಾರಾ ಅಣ್ಣಯ್ಯ ಸಾಕಷ್ಟು ಫೇಮಸ್ ಆಗಿದ್ದರು. ನಂತರ  ‘ನಮ್ಮ ಲಚ್ಚಿ’ ಸೀರಿಯಲ್ ಮೂಲಕ ದೀಪಿಕಾ ಪಾತ್ರದ ಮೂಲಕವೂ ಎಲ್ಲರಿಗೂ ಇಷ್ಟವಾಗಿದ್ದರು ಸಾರಾ ಅಣ್ಣಯ್ಯ. ದೀಪಿಕಾ ಪಾತ್ರದಲ್ಲಿ ಸಾರಾ ಅಣ್ಣಯ್ಯ ನಟನೆ, ಜೊತೆಗೆ ಧಿಮಾಕು ಕೂಡಾ ಪ್ರೇಕ್ಷಕರಿಗೆ ಇಷ್ಟವಾಗುತ್ತಿತ್ತು. ದೀಪಿಕಾ ಪಾತ್ರ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಂತೆ ಸಾರಾ ಅಣ್ಣಯ್ಯ ದಿಢೀರ್ ಧಾರಾವಾಹಿಯಿಂದ ಹೊರ ನಡೆದಿದ್ದರು. ವಿಭಿನ್ನ ಕಥಾಹಂದರದ ಜೊತೆಗೆ ಪಾತ್ರವರ್ಗದ ಮೂಲಕ ಕಿರುತೆರೆ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದ  ‘ನಮ್ಮ ಲಚ್ಚಿ’ ಸೀರಿಯಲ್‌ನಿಂದ ಸಾರಾ ಅಣ್ಣಯ್ಯ ಹೊರಬಂದಾಗ ಹೆಚ್ಚಿನ ವೀಕ್ಷಕರಿಗೆ ಬೇಸರ ತಂದಿತ್ತು. ಆದರೆ, ‘ನಮ್ಮ ಲಚ್ಚಿ’ ಧಾರಾವಾಹಿಗೆ ಗುಡ್‌ಬೈ ಹೇಳಿದ ಸಾರಾ ಅಣ್ಣಯ್ಯ ಈಗ ಝೀ ಕನ್ನಡದ ಹೊಸ ಧಾರಾವಾಹಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ.

ಇದನ್ನೂ ಓದಿ: ಅತ್ತೆ ಸೊಸೆ ಇದ್ದರೆ ಹೀಗೇ ಇರಬೇಕು – ಭಾಗ್ಯಾಳನ್ನು ಓದಿಸುವುದಾಗಿ ಮಗನಿಗೆ ಕುಸುಮಾ ಸವಾಲ್

ಝೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ‘ಅಮೃತಧಾರೆ’ ಆರಂಭವಾಗಿದೆ. ಈ ಧಾರಾವಾಹಿಯ್ಲಲಿ ಮಹಿಮಾ ಪಾತ್ರದಲ್ಲಿ ಸಾರಾ ಅಣ್ಣಯ್ಯ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲೂ ಕೂಡಾ ಹಠಮಾರಿ ಹೆಣ್ಣಿನ ಪಾತ್ರದಲ್ಲಿ ಸಾರಾ ಅಣ್ಣಯ್ಯ ನಟಿಸಿದ್ದಾರೆ. ಧಿಮಾಕು, ಹಠ, ಅಹಂಕಾರಿ ಹೆಣ್ಣಿನ ಪಾತ್ರ ಸಾರಾ ಅಣ್ಣಯ್ಯಗೆ ಹೇಳಿ ಮಾಡಿಸಿದಂತಿರುತ್ತದೆ. ಸಾರಾ ಲುಕ್‌ ಕೂಡಾ ಇಂಥಾ ಪಾತ್ರಗಳಿಗೂ ಸರಿಯಾಗಿಯೇ ಇದೆ. ಅಮೃತಧಾರೆ ಧಾರಾವಾಹಿಯ ಹೀರೋ ಗೌತಮ್ ದಿವಾನ್ ಅವರ ಮುದ್ದಿನ ತಂಗಿಯಾಗಿ ಸಾರಾ ಮಿಂಚುತ್ತಿದ್ದಾರೆ. ಫ್ಯಾಷನ್ ಡಿಸೈನರ್ ಆಗಿರುವ ಮಹಿಮಾಗೆ ತಾನು ಬಯಸಿದ್ದೆಲ್ಲಾ ಸಿಗಬೇಕೆಂಬ ಹಠ. ಜೊತೆಗೆ ತಾನು ಹೇಳಿದಂತೆಯೇ ಎಲ್ಲವೂ ನಡೀಬೇಕು ಅನ್ನೋ ಸ್ವಾರ್ಥ. ಹೀಗಿರುವಾಗಲೇ ಮಹಿಮಾಗೆ ಪ್ರೀತಿ ಉಂಟಾಗುತ್ತದೆ. ಮಹಿಮಾ ಹಠಮಾರಿತನದಿಂದ ಪ್ರೀತಿ ಗೆಲ್ತಾಳಾ ಅನ್ನೋದು ಸಧ್ಯದ ಕುತೂಹಲ.

ಅಮೃತಧಾರೆ ಧಾರಾವಾಹಿಯಲ್ಲಿ ಛಾಯಾ ಸಿಂಗ್ ಮತ್ತು ರಾಜೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಮೃತಧಾರೆ ಧಾರಾವಾಹಿ ‘ಬಢೇ ಅಚ್ಚೇ ಲಗತೇ ಹೈ’ ಹಿಂದಿ ಧಾರಾವಾಹಿಯ ರಿಮೇಕ್ ಆಗಿದೆ.

suddiyaana