ಯುವ ಸಪ್ತಮಿಗೌಡ ಲವ್ ಸ್ಟೋರಿ – ನಟಿ, ಅನೈತಿಕ ಸಂಬಂಧ, ಪ್ರೀತಿಗೆ ಮೋಸ
ದೊಡ್ಮನೆ ಸೊಸೆಯಿಂದಲೂ ದ್ರೋಹ?

ಯುವ ಸಪ್ತಮಿಗೌಡ ಲವ್ ಸ್ಟೋರಿ – ನಟಿ, ಅನೈತಿಕ ಸಂಬಂಧ, ಪ್ರೀತಿಗೆ ಮೋಸದೊಡ್ಮನೆ ಸೊಸೆಯಿಂದಲೂ ದ್ರೋಹ?

ದೊಡ್ಮನೆ ಅಂದ್ರೆ ಬರೀ ಸ್ಯಾಂಡಲ್‌ವುಡ್‌ಗೆ ಮಾತ್ರವಲ್ಲ, ಅಭಿಮಾನಿಗಳಿಗೂ ಗೌರವ. ದೊಡ್ಮನೆ ಮಾತು ಅಂದ್ರೆ ಅದು ತೂಕದಲ್ಲಿರುತ್ತದೆ. ದೊಡ್ಮನೆ ಅಂದ್ರೆ ನಿಜಕ್ಕೂ ದೊಡ್ಡಸ್ತಿಕೆ ಇರುವ ಕುಟುಂಬ. ಇದೀಗ ದೊಡ್ಮನೆ ಕುಟುಂಬ ಕುಡಿಯೇ ತನ್ನ ಸಂಸಾರದ ಜಗಳವನ್ನು ಲೋಕಕ್ಕೆ ಹರಿಬಿಟ್ಟಿದ್ದಾರೆ. ಜೊತೆಗೆ ಪತ್ನಿ ಮೇಲೆ ಆರೋಪಗಳ ಸುರಿಮಳೆಗೈದು ಮನೆ ಜಗಳ ಬೀದಿಗೆ ಬಂದಿದ್ದಾರೆ. ದೊಡ್ಮನೆ ಕುಟುಂಬದ ಸೊಸೆ ಕೂಡಾ ಗಂಡನ ಜೊತೆ ನಟಿ ಸಂಬಂಧವನ್ನು ರಿವೀಲ್ ಮಾಡಿದ್ದಾರೆ. ಯುವರಾಜ್ ಕುಮಾರ್ ಮತ್ತು ಶ್ರೀದೇವಿ ದಂಪತಿ ಸಂಬಂಧಕ್ಕೆ ಎಳ್ಳುನೀರು ಬಿಟ್ಟಿದ್ದೇ ನಟಿ ಸಪ್ತಮಿಗೌಡ ಎಂಬುದು ಜಗಜ್ಜಾಹೀರಾಗಿದೆ. ಇದೀಗ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಮಧ್ಯೆ ಆರೋಪ ಪ್ರತ್ಯಾರೋಪಗಳ ಪಟ್ಟಿ ದೊಡ್ಡದಾಗಿ ಬೆಳೆಯುತ್ತಿದೆ.

ಇದನ್ನೂ ಓದಿ: ಸ್ವಾಮಿಯನ್ನ ಒದ್ದು ಕೊಂದಿದ್ದೇ ದರ್ಶನ್ – ಪತ್ನಿ ಗರ್ಭಿಣಿ ಅಂದ್ರೂ ಬಿಡ್ಲಿಲ್ವಾ ನಟ?

ಯುವ ಸಿನಿಮಾ ಮೂಲಕ ದೊಡ್ಮನೆ ಕುಡಿ ಯುವರಾಜ್ ಕುಮಾರ್ ಗ್ರ್ಯಾಂಡ್ ಆಗಿಯೇ ಸಿನಿಮಾ ಲೋಕಕ್ಕೆ ಎಂಟ್ರಿಕೊಟ್ರು. ಕನ್ನಡದ ಕಣ್ಮಣಿ ಅಪ್ಪುವನ್ನು ಮಿಸ್ ಮಾಡಿಕೊಳ್ತಿದ್ದ ಜನ ಯುವ ರಾಜ್ ಕುಮಾರ್ ಮೂಲಕ ಪುನೀತ್ ರಾಜ್‌ಕುಮಾರ್ ಅವರನ್ನು ನೋಡಿಕೊಳ್ಳಬಹುದು ಅಂತಾನೇ ಹೇಳಲಾಗ್ತಿತ್ತು. ಆದ್ರೆ, ಬಂದಿರೋ ಒಂದೇ ಒಂದು ಸಿನಿಮಾ ದೊಡ್ಮನೆ ಕುಟುಂಬದಲ್ಲಿ ಈ ರೀತಿ ಬಿರುಗಾಳಿ ಎಬ್ಬಿಸುತ್ತೆ ಅಂದ್ರೆ ನಿಜಕ್ಕೂ ಶಾಕಿಂಗ್ ವಿಚಾರವೇ. ಅತ್ತ ಯುವ ಸಿನಿಮಾದಲ್ಲಿ ಮಾತ್ರ ಹೀರೋ, ಸಪ್ತಮಿಗೌಡ ಸಿನಿಮಾದಲ್ಲಿ ಮಾತ್ರ ಹೀರೋಯಿನ್ ಆಗಿ ಇರಲಿಲ್ವಂತೆ. ರಿಯಲ್ ಲೈಫ್‌ನಲ್ಲೂ ಇಬ್ಬರೂ ಒಬ್ಬರನೊಬ್ಬರು ಅಂಟಿಕೊಂಡೇ ಇದ್ರಂತೆ. ಮನೆಯಲ್ಲಿ ಪತ್ನಿಯಿದ್ದರೂ ಸಪ್ತಮಿಗೌಡ ಯುವನ ಜೊತೆ ಅಫೇರ್ ಇಟ್ಟುಕೊಂಡಿದ್ರಂತೆ. ಅಷ್ಟೇ ಯಾಕೆ, ಇಬ್ಬರೂ ಯುವ ಪತ್ನಿ ಶ್ರೀದೇವಿ ಕೈಲಿ ರೆಡ್‌ಹ್ಯಾಂಡ್ ಆಗಿ ಹೋಟೇಲ್‌ನಲ್ಲೇ ಸಿಕ್ಕಿಬಿದ್ದಿದ್ರಂತೆ. ಈ ಸುದ್ದಿಯೀಗ ಸ್ಯಾಂಡಲ್‌ವುಡ್‌ನಲ್ಲಿ ತಲ್ಲಣ ಸೃಷ್ಟಿಸಿದೆ.

ಯುವ ರಾಜ್‌ಕುಮಾರ್ ಮತ್ತು ಸಪ್ತಮಿಗೌಡ ಸಂಬಂಧವೇ ಶ್ರೀದೇವಿ ಜೊತೆಗಿನ ವಿಚ್ಛೇದನಕ್ಕೆ ಕಾರಣ ಎನ್ನಲಾಗ್ತಿದೆ. ಸಪ್ತಮಿಗಾಗಿ ಪ್ರೀತಿಸಿ ಮದುವೆಯಾಗಿದ್ದ ಶ್ರೀದೇವಿ ಬಗ್ಗೆ ಇಲ್ಲಸಲ್ಲದ ಆರೋಪ ಹೊರಿಸಲಾಗ್ತಿದೆ ಎಂಬ ಮಾತು ಕೇಳಿಬರ್ತಿದೆ. ಇದನ್ನೇ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿಯೇ ನೇರ ಆರೋಪ ಮಾಡಿದ್ದಾರೆ.

ಅಷ್ಟೇ ಅಲ್ಲ, ‘ಶ್ರೀದೇವಿ ಅವರು ಯುವಗೆೆ ಟಾರ್ಚರ್ ಮಾಡಿದ್ದಾರೆ. ರಾಜ್​ಕುಮಾರ್ ಅಕಾಡೆಮಿಯಿಂದ ಪರ್ಸನಲ್ ಅಕೌಂಟ್​ಗೆ 3 ಕೋಟಿ ರೂಪಾಯಿ ಟ್ರಾನ್ಸಫರ್ ಮಾಡಿಕೊಂಡಿದ್ದಾರೆ ಎಂದು ಯುವ ಪರ ವಕೀಲರು ಆರೋಪ ಮಾಡಿದ್ದರು. ನಿನ್ನನ್ನು ಬೀದಿಗೆ ತರುತ್ತೇನೆ ಎಂದು ಪತಿಗೆ ಬೆದರಿಸಿದ್ದಾರೆ. ಯುವನ ಬಳಿಕ ಅಮೆರಿಕಕ್ಕೆ ಬರುವಂತೆ ಒತ್ತಾಯ ಮಾಡಿದ್ದರು. ಬಾಯ್​ಫ್ರೆಂಡ್ ಮೂಲಕ ಮಗು ಪಡೆಯೋ ಆಲೋಚನೆಯಲ್ಲಿ ಅವರಿದ್ದರು. ರಾಧಯ್ಯ ಅನ್ನೋದು ಶ್ರೀದೇವಿ ಬಾಯ್​ಫ್ರೆಂಡ್ ಹೆಸರು’ ಎಂದು ಯುವ ಪರ ವಕೀಲರು ಆರೋಪಿಸಿದ್ದರು. ಇದಕ್ಕೆ ಶ್ರೀದೇವಿ ಉತ್ತರಿಸಿದ್ದಾರೆ. ‘ವೃತ್ತಿಪರ ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕಾದ ವ್ಯಕ್ತಿಯೇ ಸಾರ್ವಜನಿಕವಾಗಿ ಒಂದು ಹೆಣ್ಣಿನ ಚಾರಿತ್ಯದ ಬಗ್ಗೆ ಕೀಳು ಮಟ್ಟದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಹಾಗೂ ಬಹಳ ನೋವುಂಟು ಮಾಡಿದೆ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

‘ಕಳೆದ ಕೆಲವು ತಿಂಗಳಿಂದ ಆದ ಅನೇಕ ನೋವುಗಳ ಹೊರತಾಗಿಯೂ ನಾನು ಕುಟುಂಬದ ಗೌರವ ಕಾಪಾಡಿಕೊಳ್ಳಲು ಮೌನವಾಗಿದ್ದೆ. ಆದರೆ, ನನ್ನ ಸಭ್ಯತೆ ಹಾಗೂ ಮಾನವೀಯತೆಗಳನ್ನು ಗೌರವಿಸದೆ ಕೀಳು ಮಟ್ಟದ ಆರೋಪಗಳನ್ನು ಮಾಡುತ್ತಿರುವುದು ದುರದೃಷ್ಟಕರ. ಸತ್ಯ ಮತ್ತು ನ್ಯಾಯವು ಖಂಡಿತ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬಿದ್ದೇನೆ’ ಎಂದಿದ್ದಾರೆ ಶ್ರೀದೇವಿ. ಇನ್ನು ಯುವ ರಾಜ್‌ಕುಮಾರ್ ಆರೋಪಗಳಿಗೆ ಶ್ರೀದೇವಿ ತಂದೆ ಭೈರಪ್ಪ ಕೂಡಾ ಖಡಕ್ ಉತ್ತರ ನೀಡಿದ್ದಾರೆ. ‘ಅವರು ದೊಡ್ಮನೆ ಅಂತ ಹೇಳಿಕೊಳ್ಳಬಾರದು. ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಅವರ ಟಾರ್ಚರ್​ಗೆ ಹೆದರಿಕೊಂಡು ನನ್ನ ಮಗಳು ಆಸ್ಪತ್ರೆಗೆ ದಾಖಲಾಗಿದ್ದಳು. ಈಗಲೂ ಅವಳು ಅಲ್ಲಿ ಇರುವುದು ನನಗೆ ಇಷ್ಟ ಇಲ್ಲ’ ಎಂದು ಶ್ರೀದೇವಿ ತಂದೆ ಭೈರಪ್ಪ ಹೇಳಿದ್ದಾರೆ. ಮೊದಲು ಲವ್​ ಮಾಡಿದ್ದರು. ಆಮೇಲೆ ಅರೇಂಜ್​ ಮ್ಯಾರೇಜ್​ ಆಯಿತು. ಅವರು ಪದೇ ಪದೇ ಬಂದು ಮದುವೆ ಮಾಡಿಕೊಡಿ ಅಂತ ಹಿಂಸೆ ಮಾಡಿದ್ದರು. ತುಂಬ ಒತ್ತಾಯ ಮಾಡಿದರು. ಆಮೇಲೆ ನಾವು ಒಪ್ಪಿಕೊಂಡು ನಿಶ್ಚಿತಾರ್ಥ ಮಾಡಿದೆವು. ಆ ನಂತರವೂ ಬೇಡ ಅನಿಸುತ್ತದೆ ಅಂತ ನಾನು ನನ್ನ ಮಗಳಿಗೆ ಹೇಳಿದ್ದೆ. ದೊಡ್ಮನೆ ಅಂತ ನಾನು ಒಪ್ಪಿಕೊಂಡಿದ್ದಲ್ಲ.

ನನ್ನ ಮಗಳು ವಿದ್ಯಾವಂತೆ. ದುಡಿದು ತಿನ್ನುವಂತಹ ಶಕ್ತಿ ಇರುವಂತವಳು. ಆ ಹುಡುಗ ಎಸ್​ಎಸ್​ಎಲ್​ಸಿ. ಆದ್ರೂ ನಾವು ಮದುವೆ ಮಾಡಿದ್ದೇವೆ’ ಎಂದಿದ್ದಾರೆ ಭೈರಪ್ಪ. ಅಷ್ಟೇ ಅಲ್ಲ ದುಡ್ಡಿನ ವಿಚಾರವನ್ನು ಕೂಡಾ ಭೈರಪ್ಪ ಪ್ರಸ್ತಾಪಿಸಿದ್ದಾರೆ. ನನಗೆ ತಿಳಿದ ಮಟ್ಟಿಗೆ ಮನೆಯವರದ್ದೇ ಸಮಸ್ಯೆ. ಮನೆಯವರೇ ಯುವರಾಜ್​ಗೆ ಕೇಳಿಕೊಟ್ಟು ಈ ಥರ ಟಾರ್ಚರ್ ಮಾಡಿಸುತ್ತಾ ಇದ್ದಾರೆ. ಹಣ, ಆಸ್ತಿ ವಿಚಾರಕ್ಕೆ ಮನಸ್ತಾಪ ಆಗಿಲ್ಲ. ಅವರಿಗಿಂತ ಜಾಸ್ತಿ ನಮ್ಮ ಬಳಿಯೇ ಇದೆ. ನಾವು ತೋರಿಸಿಕೊಳ್ಳಲ್ಲ. ಸಿಂಪಲ್​ ಆಗಿ ಇರುವ ಜನ. ಕೃಷಿ ಕುಟುಂಬದಿಂದ ಬಂದವವರು. ಹೇಗೆ ಇರಬೇಕೋ ಹಾಗೆಯೇ ಇದ್ದೇವೆ. ನಮ್ಮ ತಂದೆಯ ಕಾಲದಿಂದಲೂ ನಾವು ಕೋಟ್ಯಾಧಿಪತಿಗಳು’ ಎಂದಿದ್ದಾರೆ ಭೈರಪ್ಪ.

ಅತ್ತ ಯುವರಾಜ್ ಕುಮಾರ್ ಪತ್ನಿ ಮೇಲೆ ಹಣ ದುರ್ಬಳಕೆ, ಟಾರ್ಚರ್, ಅನೈತಿಕ ಸಂಬಂಧದ ಬಗ್ಗೆ ಆರೋಪ ಮಾಡ್ತಿದ್ದಾರೆ. ಇತ್ತ ಪತ್ನಿ ಶ್ರೀದೇವಿ ಕೂಡಾ ಗಂಡ ಸಹ ನಟಿ ಸಪ್ತಮಿಗೌಡ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದನ್ನು ಕಣ್ಣಾರೆ ಕಂಡಿದ್ದಾಗಿ ಆರೋಪ ಮಾಡ್ತಿದ್ದಾರೆ. ದಂಪತಿ ಮಧ್ಯೆ ಸಾವಿರ ಮನಸ್ತಾಪ ಬಂದಿರಬಹುದು. ಆದ್ರೆ, ದೊಡ್ಮನೆ ಕುಟುಂಬದ ಮೇಲೆ ಯಾರು ಕೂಡಾ ಬೆರಳು ತೋರಿಸಿ ಮಾತಾಡಿದವರಲ್ಲ. ಅದು ದೊಡ್ಮನೆ ಕುಟುಂಬ ಇಷ್ಟು ವರ್ಷಗಳ ಕಾಲ ಕಾಪಾಡಿಕೊಂಡು ಬಂದಿರೋ ಮರ್ಯಾದೆ ಮತ್ತು ಘನತೆಯ ವಿಚಾರ. ಇದೀಗ ದೊಡ್ಮನೆ ಕುಡಿಯೇ ಕುಟುಂಬದ ಜಗಳವನ್ನು ಜನರ ಮಧ್ಯೆ ತಂದಿರುವುದು ನಿಜಕ್ಕೂ ವಿಪರ್ಯಾಸ.

Shwetha M

Leave a Reply

Your email address will not be published. Required fields are marked *