ಟಾಲಿವುಡ್‌ಗೆ ಹಾರಿದ ಕಾಂತಾರ ಬೆಡಗಿ – ತೆಲುಗು ಸ್ಟಾರ್ ನಿತಿನ್ ಸಿನಿಮಾಗೆ ಸಪ್ತಮಿ ಗೌಡ ನಾಯಕಿ

ಟಾಲಿವುಡ್‌ಗೆ ಹಾರಿದ ಕಾಂತಾರ ಬೆಡಗಿ – ತೆಲುಗು ಸ್ಟಾರ್ ನಿತಿನ್ ಸಿನಿಮಾಗೆ ಸಪ್ತಮಿ ಗೌಡ ನಾಯಕಿ

ಕಾಂತಾರ ಬೆಡಗಿ ಸಪ್ತಮಿಗೌಡ ಅವರಿಗೆ ಸಿನಿಮಾ ಆಫರ್‌ಗಳು ಮೇಲಿಂದ ಮೇಲೆ ಬರ್ತಾನೆ ಇವೆ. ಈಗಾಗಲೇ ಕಾಂತಾರ ಬೆಡಗಿ ಬಾಲಿವುಡ್‌ನಲ್ಲಿ ನಟಿಸಿ ಅಲ್ಲೂ ಸೈ ಅನ್ನಿಸಿಕೊಂಡಿದ್ದರು. ಇದೀಗ ಕನ್ನಡದ ಬೆಡಗಿ ಸಪ್ತಮಿಗೆ ಟಾಲಿವುಡ್‌ನಲ್ಲೂ ಮೆಗಾ ಆಫರ್ ಬಂದಿದೆ.

ಇದನ್ನೂ ಓದಿ: ಈ ಸಿದ್ದೇಗೌಡ ಯಾರು ಗೊತ್ತಾ? – ಹೆಣ್ಮಕ್ಕಳ ಹೃದಯ ಕದ್ದವನ‌ ರಿಯಲ್‌ ಸ್ಟೋರಿ  

‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯಗೊಂಡಿದ್ದ ಸಪ್ತಮಿ ಗೌಡ ಈಗ ತೆಲುಗಿನಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಕಾಂತಾರ ಸಿನಿಮಾ ಸಕ್ಸಸ್‌ನಿಂದ ಬೇಡಿಕೆ ಹೆಚ್ಚು ಮಾಡಿಕೊಂಡಿರುವ ಸಪ್ತಮಿ ಗೌಡ, ಈಗ ತೆಲುಗಿನ ಸಿನಿಮಾದಲ್ಲಿ ಸಪ್ತಮಿ ಗೌಡ ಅವರು ನಟಿಸುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ರಿವೀಲ್ ಮಾಡಿದ್ದಾರೆ. ‘ನಿತಿನ್ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ. ಸಿನಿಮಾ ಶೂಟಿಂಗ್ ಕೂಡ ಶುರುವಾಗಿದೆ. ನಾನು ಹೋಗಿ ಸೆಟ್​ ಸೇರಿಕೊಳ್ಳಬೇಕಿದೆ’ ಎಂದಿದ್ದಾರೆ ಸಪ್ತಮಿ ಗೌಡ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ವಿಶೇಷ ಎಂದರೆ ಸಪ್ತಮಿ ಗೌಡ ಅವರು ಈ ಸಿನಿಮಾಗಾಗಿ ಕುದುರೆ ಸವಾರಿ ಕಲಿಯುತಿದ್ದಾರೆ. ಈ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ. ‘ನಾನು ಕುದುರೆ ಸವಾರಿ ಕಲಿಯುತ್ತಿದ್ದೇನೆ. ಸಂಪೂರ್ಣವಾಗಿ ಕಲಿತಿಲ್ಲ. ಇನ್ನೂ ಕಲಿಯುತ್ತಿದ್ದೇನೆ’ ಎಂದಿದ್ದಾರೆ ಅವರು. ಸದ್ಯ ಪಾತ್ರದ ಬಗ್ಗೆ ಅವರು ಹೆಚ್ಚು ಮಾಹಿತಿ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ ಅವರು. ಸಪ್ತಮಿ ಗೌಡ ಅವರು ಮೊದಲು ‘ಪಾಪ್​ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರದಲ್ಲಿ ರಗಡ್ ಅವತಾರ ತಾಳಿದ್ದರು. ಆ ಬಳಿಕ ‘ಕಾಂತಾರ’ಸಿನಿಮಾದಲ್ಲಿ ಲೀಲಾ ಹೆಸರಿನ ಪಾತ್ರ ಮಾಡಿದರು. ಈ ಪಾತ್ರವೂ ಗಮನ ಸೆಳೆಯಿತು. ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿ ಅವರು ವಿಜ್ಞಾನಿಯ ಪಾತ್ರ ಮಾಡಿದರು. ‘ಯುವ’ ಸಿನಿಮಾದಲ್ಲಿ ಕಾಲೇಜು ಹುಡುಗಿಯಾಗಿ ನಟಿಸಿದ್ದರು.

Sulekha