ಸದ್ದಿಲ್ಲದೇ ಟಾಲಿವುಡ್‌ಗೆ ಕಾಲಿಟ್ಟ ಕಿಚ್ಚನ ಪುತ್ರಿ! – ಮುಂದಿನ ವಾರವೇ ಸಿನಿಮಾ ರಿಲೀಸ್

ಸ್ಯಾಂಡಲ್‌ವುಡ್ ಬಾದ್ ಷಾ ಕಿಚ್ಚ ಸುದೀಪ್ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಮ್ಯಾಕ್ಸ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆದಿತ್ತು. ಇದೀಗ ಸುದೀಪ್ ಮಗಳು ಕೂಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಬಾದ್‌ಷಾ ಮಗಳಿಗೆ ಹಾಡೋದು ಎಂದರೆ ಎಲ್ಲಿಲ್ಲದ ಪ್ರೀತಿ. ಭವಿಷ್ಯದಲ್ಲಿ ಅವರು ಗಾಯಕಿ ಆದರೂ ಅಚ್ಚರಿ ಏನಿಲ್ಲ. ಈಗ ಅವರು ತೆಲುಗು ಸಿನಿಮಾಗೆ ಧ್ವನಿ ಆಗಿದ್ದಾರೆ. ಯಾವುದು ಆ ಸಿನಿಮಾ? ನಾನಿ ನಟನೆಯ ‘ಹಿಟ್ 3’. ಈ ವಿಚಾರವನ್ನು ಸ್ವತಃ ನಾನಿ ಅವರೇ ರಿವೀಲ್ ಮಾಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.
ಇದನ್ನೂ ಓದಿ:ಒಂದೇ ಉಸಿರಲ್ಲಿ ಹಾಡಿದ ಎಕ್ಸ್ ಪ್ರೆಷನ್ ಕಿಂಗ್ ಅಮೋಘವರ್ಷ – ಸರಿಗಮಪ ವಿನ್ನರ್ ಇವನೇನಾ?
ಸಾನ್ವಿ ಅವರ ಧ್ವನಿ ಬೇರೆಯದೇ ರೀತಿ ಇದೆ. ಪಾಪ್ ಇಂಗ್ಲಿಷ್ ಹಾಡುಗಳನ್ನು ಅವರು ಅದ್ಭುತವಾಗಿ ಹಾಡುತ್ತಾರೆ. ಜೀ ಕನ್ನಡದ ‘ಸರಿಗಮಪ’ ವೇದಿಕೆ ಮೇಲೆ ‘ಅಪ್ಪಾ ಐ ಲವ್ ಯೂ ಪಾ..’ ಎಂದು ಹಾಡಿ ಎಲ್ಲರನ್ನೂ ಗಮನ ಸೆಳೆದಿದ್ದರು. ಈಗ ಅವರಿಗೆ ತೆಲುಗು ಸಿನಿಮಾಗೆ ಧ್ವನಿ ಆಗಿದ್ದಾರೆ ಅನ್ನೋದು ವಿಶೇಷ. ‘ಹಿಟ್ 3’ ಟ್ರೇಲರ್ನಲ್ಲಿ ಬರೋ ಒಂದು ಆಲಾಪದಲ್ಲಿ ಸಾನ್ವಿ ಧ್ವನಿ ಇದೆ.
‘ಹಿಟ್ 3’ ಸಿನಿಮಾದ ಟ್ರೇಲರ್ ಕೆಲ ದಿನಗಳ ಹಿಂದೆ ರಿಲೀಸ್ ಆಗಿ ಗಮನ ಸೆಳೆದಿದೆ. ಈ ಟ್ರೇಲರ್ ಕೊನೆ ಆಗೋ ಸಂದರ್ಭದಲ್ಲಿ ಹಿನ್ನೆಲೆ ಸಂಗೀತದ ಜೊತೆ ಒಂದು ಧ್ವನಿಯ ಆಲಾಪ ಬರುತ್ತದೆ. ಇದು ಯಾರದ್ದು ಎಂಬ ವಿಚಾರ ಅನೇಕರಿಗೆ ಗೊತ್ತಿರಲಿಲ್ಲ. ಅದು ಸಾನ್ವಿ ಅವರದ್ದು ಎಂದಿರೋ ನಾನಿ ಅವರು, ಅವರನ್ನು ಬಾಯ್ತುಂಬ ಹೊಗಳಿದ್ದಾರೆ.
ನಾನಿ ಹಾಗೂ ಸಾನ್ವಿ ಮಧ್ಯೆ ಪರಿಚಯ ಬೆಳೆಯೋಕೆ ಕಾರಣ ಆಗಿದ್ದು, ‘ಈಗ’ ಸಿನಿಮಾ. ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ನಾನಿ ಹೀರೋ ಆಗಿ ಕಾಣಿಸಿಕೊಂಡರೆ, ಸುದೀಪ್ ವಿಲನ್ ಪಾತ್ರ ಮಾಡಿದ್ದರು. ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ನಾನಿ ಪರಿಚಯ ಸಾನ್ವಿಗೆ ಆಗಿತ್ತು. ಆ ಬಾಂಡಿಂಗ್ ಈಗಲೂ ಮುಂದುವರಿದಿದೆ. ಭವಿಷ್ಯದಲ್ಲಿ ಸಂಗೀತ ಲೋಕವನ್ನು ಸಾನ್ವಿ ಆಯ್ಕೆ ಮಾಡಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
‘ಹಿಟ್ 3’ ಸಿನಿಮಾ ವಿಚಾರಕ್ಕೆ ಬರೋದಾದರೆ, ನಾನಿ ಹಾಗೂ ಶ್ರೀನಿಧಿ ಶೆಟ್ಟಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮೇ 1ರಂದು ಸಿನಿಮಾ ರಿಲೀಸ್ ಆಗಲಿದೆ.