ಸಂತು-ಪಂತು ಜೋಡಿಯೇ ಬಿಗ್‌ಬಾಸ್ – ಸ್ಪರ್ಧಿಗಳನ್ನು ಚೆನ್ನಾಗಿಯೇ ಆಡಿಸುತ್ತಿದ್ದಾರೆ ಕಿಲಾಡಿ ಸ್ನೇಹಿತರು

ಸಂತು-ಪಂತು ಜೋಡಿಯೇ ಬಿಗ್‌ಬಾಸ್ – ಸ್ಪರ್ಧಿಗಳನ್ನು ಚೆನ್ನಾಗಿಯೇ ಆಡಿಸುತ್ತಿದ್ದಾರೆ ಕಿಲಾಡಿ ಸ್ನೇಹಿತರು

ಟಾಸ್ಕ್ ಬರಲಿ, ನಾಮಿನೇಷನ್ ಇರಲಿ, ಸೋಲಿರಲಿ, ಗೆಲುವಿರಲಿ, ಇಬ್ಬರದೂ ಬದಲಾಗದ ವ್ಯಕ್ತಿತ್ವ. ಮತ್ತಷ್ಟೂ ಗಟ್ಟಿಯಾಗುತ್ತಿರುವ ಸ್ನೇಹ. ಒಬ್ಬರಿಗಾಗಿ ಇನ್ನೊಬ್ಬರು ತ್ಯಾಗ ಮಾಡುವಷ್ಟು ಉದಾರ ಗೆಳೆತನ. ಇದೀಗ ಸಂತು ಪಂತು ಜೋಡಿ ತಾವೇ ಬಿಗ್‌ಬಾಸ್ ಆಗಿದ್ದಾರೆ. ಸ್ಪರ್ಧಿಗಳು ಆಡುತ್ತಿದ್ದಾರೆ. ಆದರೆ, ಸಂತು ಪಂತುವೇ ಅವರನ್ನು ಆಡಿಸುತ್ತಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಮನೆಯಿಂದ ಬೆಂಕಿ ತನಿಷಾ ಔಟ್ – ಅಭಿಮಾನಿಗಳಿಗೆ ಬಿಗ್ ಶಾಕ್

ಬಿಗ್‌ಬಾಸ್ ಕನ್ನಡ ಸೀಸನ್ 10ರ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ. ಎಲ್ಲರೂ ಸಹ ಫಿನಾಲೆ ವಾರ ತಲುಪಲು ನಾನಾ ಪ್ರಯತ್ನಗಳ್ನು ಮಾಡುತ್ತಿದ್ದಾರೆ. ಆದರೆ ಯಾರು ಟಾಸ್ಕ್ ಅನ್ನು ಆಡಬೇಕು ಎಂಬ ಗೊಂದಲ ಮನೆಯಲ್ಲಿ ಪ್ರತಿಬಾರಿ ಸೃಷ್ಟಿಯಾಗುತ್ತಿದೆ. ಆದರೆ ಟಾಸ್ಕ್ ಅನ್ನು ಯಾರು ಆಡಬೇಕು ಎಂಬುದನ್ನು ನಿರ್ಧರಿಸುತ್ತಿದ್ದಾರೆ ಸಂತು-ಪಂತು ಜೋಡಿ. ಪ್ರತಿಯೊಬ್ಬರೂ ಸಹ ಟಾಸ್ಕ್ ಅನ್ನು ನಾನು ಆಡಬೇಕು ನಾನು ಆಡಬೇಕು ಎಂದು ಅವಕಾಶಕ್ಕಾಗಿ ಕ್ಯಾಪ್ಟನ್ ಸಂಗೀತಾ ಬಳಿ ಬೇಡಿಕೆ ಇಡುತ್ತಿದ್ದಾರೆ. ಇದರಿಂದಾಗಿ ಇಷ್ಟವಿಲ್ಲದಿದ್ದರೂ ವೋಟಿಂಗ್‌ಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆದರೆ ಮನೆಯ ಇತರೆ ಸದಸ್ಯರ ಮತಗಳು ಮೊದಲೇ ಇಂಥಹವರಿಗೆಂದು ನಿರ್ಧಾರಿತವಾಗಿರುವ ಕಾರಣ ಎಲ್ಲರಿಗೂ ಒಂದೊಂದು ಮತಗಳು ಮಾತ್ರವೇ ಸಿಗುತ್ತಿದೆ. ಕೊನೆಗೆ ಸಂತು-ಪಂತು ಯಾರಿಗೆ ಮತ ಹಾಕುತ್ತಾರೊ ಅವರು ಆಡುವಂತಾಗುತ್ತಿದೆ. ಇದನ್ನು ಅರಿತುಕೊಂಡಿರುವ ಸಂತು-ಪಂತು ತಮ್ಮ ಒಗ್ಗಟ್ಟಿನ ಪವರ್ ಅನ್ನೇ ಇಟ್ಟುಕೊಂಡು ಮುಂದಿನ ಟಾಸ್ಕ್‌ನಲ್ಲಿ ಯಾರಿಗೆ ಅವಕಾಶ ಕೊಡಬೇಕು ಯಾರಿಗೆ ಕೊಡಬಾರದು ಎಂದು ನಿರ್ಣಯಿಸಲು ಆರಂಭಿಸಿದ್ದಾರೆ.

ಇದೇ ತಂತ್ರ ಉಪಯೋಗಿಸಿ ಕಾರ್ತಿಕ್‌ಗೆ ಆಡಲು ಅವಕಾಶ ಮಾಡಿಕೊಟ್ಟರು. ಅಂತೆಯೇ ಟಾಸ್ಕ್ ಆಗಿ ಕಾರ್ತಿಕ್ ಗೆದ್ದರು ಸಹ. ಆ ಟಾಸ್ಕ್ ಆಡಿದ ಬಳಿಕ ಕಾರ್ತಿಕ್ಗೆ ಮುಂದೆಯೂ ನಿನ್ನನ್ನು ಆಡಿಸುತ್ತೀವಿ, ಯೋಚನೆ ಮಾಡಬೇಡ ಎಂದು ಅಭಯವನ್ನು ಸಹ ಸಂತು-ಪಂತು ನೀಡಿದರು. ಇವರ ಈ ತಂತ್ರಗಾರಿಕೆ ಅರಿತ ವಿನಯ್, ತುಕಾಲಿ ಬಳಿ ಕಿರಿಕ್ ತೆಗೆದ್ರು. ಆದರೆ, ಈ ಜೋಡಿ ಜೊತೆ ಮಾತಲ್ಲಿ ಗೆಲ್ಲಲು ಸಾಧ್ಯವೇ. ಇರಲಿ ಆಡಿ ನಿಮಗೆ ಇಷ್ಟ ಬಂದಂತೆ ಆಡಿ, ಇನ್ನೂ ಹತ್ತು ದಿನ ಇದೆಯಲ್ಲ, ಸರಿಯಾಗಿ ಮಾಡುತ್ತೇನೆ ಎಂದು ವಿನಯ್ ತನ್ನ ಪಾಳಿ ಬರುವುದನ್ನೇ ಕಾಯುತ್ತಿದ್ದಾರೆ. ಯಾರು ಏನೇ ಮಾಡಲಿ, ಸಂತು ಪಂತು ನೀಡುತ್ತಿರುವ ಮನರಂಜನೆಯನ್ನು ವೀಕ್ಷಕಂತೂ ಎಂಜಾಯ್ ಮಾಡುತ್ತಿದ್ದಾರೆ.

Sulekha