ಕೊನೆಗೂ ಗುಜರಾತ್ ನಲ್ಲಿ ಸ್ಯಾಂಟ್ರೋ ರವಿ ಅರೆಸ್ಟ್ 

ಕೊನೆಗೂ ಗುಜರಾತ್ ನಲ್ಲಿ ಸ್ಯಾಂಟ್ರೋ ರವಿ ಅರೆಸ್ಟ್ 

ಕಳೆದ 11 ದಿನಗಳಿಂದ ತಲೆಮರೆಸಿಕೊಂಡಿದ್ದ ವಂಚಕ ಸ್ಯಾಂಟ್ರೋ ರವಿ ಕಡೆಗೂಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.. ಕರ್ನಾಟಕದ ಪೊಲೀಸರು ಗುಜರಾತ್ ನಲ್ಲಿ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿಯನ್ನು ಹಿಡಿದಿದ್ದಾರೆ. ಗುಜರಾತ್‌ನ ಅಹಮಾದಾಬಾದ್‌ನಿಂದ ವಡೋದರಕ್ಕೆ ತೆರಳುತ್ತಿದ್ದಾಗ ಸ್ಯಾಂಟ್ರೋ ರವಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಂದಹಾಗೆ ಸ್ಯಾಂಟ್ರೋ ರವಿ ಈ ಹಿಂದೆ ಕಾಣಿಸಿಕೊಳ್ಳುತ್ತಿದ್ದ ರೀತಿಗೂ ಗುಜರಾತ್‌ನಲ್ಲಿ ಸಿಕ್ಕಿಬಿದ್ದಾಗ ಕಂಡ ರೀತಿಗೂ ಬಹಳಶಷ್ಟು ವ್ಯತ್ಯಾಸವಿದೆ. ತನ್ನ ತಲೆಮೇಲಿದ್ದ ವಿಗ್‌ ತೆಗೆದು ತೀರಾ ವಯಸ್ಸಾದವನಂತೆ ಸ್ಯಾಂಟ್ರೋರವಿ ಕಾಣುತ್ತಿದ್ದಾನೆ.

ಇದನ್ನೂ ಓದಿ: ವಿಧಾನಸೌಧದ ಮುಂಭಾಗದಲ್ಲಿ ಬಸವಣ್ಣ, ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣದ  ಆರೋಪಿಯಾಗಿರುವ ಸ್ಯಾಂಟ್ರೋ  ರವಿ ದೇಶದಿಂದ ಪರಾರಿಯಾಗುವುದನ್ನು ತಡೆಯಲು ಆತನ ವಿರುದ್ದ ಲುಕ್ ಔಟ್  ನೋಟಿಸ್‌ ಹೊರಡಿಸಲಾಗಿತ್ತು. ಅಲ್ಲದೇ ಆತನ ಬಂಧನಕ್ಕಾಗಿ  ನಾಲ್ವರು SPಗಳ ವಿಶೇಷ ತಂಡ ರಾಮನಗರ, ಮಂಡ್ಯ, ಮೈಸೂರು, ಕೇರಳದಲ್ಲಿ ಕಾರ್ಯಚರಣೆ ಮಾಡಿತ್ತು. ಅಂತಿಮವಾಗಿ ಗುಜರಾತ್‌ನಲ್ಲಿ ಸ್ಯಾಂಟ್ರೋ ರವಿ ಇರುವ ಬಗ್ಗೆ ಸಿಕ್ಕ ಖಚಿತ ಸುಳಿವಿನ ಮೇರೆಗೆ ರಾಜ್ಯ ಪೊಲೀಸರ ವಿಶೇಷ ತಂಡ ಕಾರ್ಯಚರಣೆ ನಡೆಸಿ ಸ್ಯಾಂಟ್ರೋ ರವಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುಜರಾತ್‌ನಿಂದ ಸ್ಯಾಂಟ್ರೋ ರವಿಯನ್ನು ಬೆಂಗಳೂರಿಗೆ ಕರೆತರಲಾಗುತ್ತಿದ್ದು ಮೈಸೂರಿನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಜನವರಿ 2ರಂದು ಸ್ಯಾಂಟ್ರೋ ರವಿಯ ಪತ್ನಿ ಮೈಸೂರಿನಲ್ಲಿ ಅತ್ಯಾಚಾರ ಮತ್ತು ದೌರ್ಜನ್ಯ ಮತ್ತು ಜಾತಿ ನಿಂದನೆಯ ಕೇಸ್‌ ದಾಖಲಿಸಿದ್ದರು. ಅಲ್ಲದೆ ಹಣ ವರ್ಗಾವಣೆ ವಂಚನೆ ಆರೋಪದಡಿ ಸ್ಯಾಂಟ್ರೋ ರವಿ ವಿರುದ್ಧ ಜಗದೀಶ್ ಎಂಬುವರು ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹಲವು ವರ್ಷಗಳಿಂದ ರವಿಯು ಹನಿ ಟ್ರ್ಯಾಪಿಂಗ್ ಅಥವಾ ಬ್ಲ್ಯಾಕ್‌ಮೇಲ್ ಅಲ್ಲದೆ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಹಲವು ದಂಧೆಗಳನ್ನು ನಡೆಸುತ್ತಿರುವ ಆರೋಪ ಎದುರಿಸುತ್ತಿದ್ದಾನೆ. ಸ್ಯಾಂಟ್ರೋ ರವಿ ಸರ್ಕಾರದ ಸಚಿವರ ಜೊತೆಗೆ ಫೋಟೋ ತೆಗೆಸಿಕೊಂಡಿರುವ ಕಾರಣದಿಂದ, ಆತನನ್ನು ಸರ್ಕಾರವೇ ರಕ್ಷಣೆ ಮಾಡುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು.

suddiyaana