ಪುನೀತ್ ಕೆರೆಹಳ್ಳಿಗೆ ಸನ್ಮಾನ ಮಾಡಿದ್ದಕ್ಕೆ ಆಕ್ರೋಶ – ನನ್ನಿಂದ ತಪ್ಪಾಗಿದೆ, ಇನ್ನೂ ಪ್ರಶಸ್ತಿ ಕೊಡಲ್ಲವೆಂದ ಮಾಜಿ ನ್ಯಾ. ಸಂತೋಷ್ ಹೆಗ್ಡೆ

ಪುನೀತ್ ಕೆರೆಹಳ್ಳಿಗೆ ಸನ್ಮಾನ ಮಾಡಿದ್ದಕ್ಕೆ ಆಕ್ರೋಶ – ನನ್ನಿಂದ ತಪ್ಪಾಗಿದೆ, ಇನ್ನೂ ಪ್ರಶಸ್ತಿ ಕೊಡಲ್ಲವೆಂದ  ಮಾಜಿ ನ್ಯಾ. ಸಂತೋಷ್ ಹೆಗ್ಡೆ

ಕೊಲೆ ಆರೋಪಿ ಗೋರಕ್ಷಕ ಪುನೀತ್ ಕೆರೆಹಳ್ಳಿಗೆ ಖಾಸಗಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಸನ್ಮಾನಿಸಿದ್ದಕ್ಕೆ ನ್ಯಾ.ಸಂತೋಷ ಹೆಗ್ಡೆ ಕ್ಷಮೆ ಕೇಳಿದ್ದಾರೆ. ಖಾಸಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ಪುನೀತ್​ ಕೆರೆಹಳ್ಳಿಗೆ ನ್ಯಾ. ಸಂತೋಷ್​ ಹೆಗ್ಡೆ ಅವರು ಸನ್ಮಾನ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಶಾಲು ಪೇಟ ಹೊದಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಈ ಬಗ್ಗೆ ಪುನೀತ್​​ ಕೆರೆಹಳ್ಳಿ ತಮ್ಮ  ಸೋಶಿಯಲ್​ ಮೀಡಿಯಾ ಅಕೌಂಟ್​ನಲ್ಲಿ ಫೋಟೋ ಮತ್ತು ವಿಡಿಯೋಗಳನ್ನ ಹಂಚಿಕೊಂಡಿದ್ರು. ಇದ್ದನ್ನ ನೋಡಿ  ನೆಟ್ಟಿಗರು ಕೆರಳಿ ಕೆಂಡವಾಗಿದ್ದಾರೆ. ಪುನೀತ್ ಕೆರೆಹಳ್ಳಿಗೆ ಸನ್ಮಾನ ಮಾಡಿದ್ದಕ್ಕೆ  ಸಂತೋಷ್​ ಹೆಗ್ಡೆ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಆತ ಕೊಲೆ ಆರೋಪಿ ಆದ್ರೂ ಹೇಗೆ ಸನ್ಮಾನ ಮಾಡಿದ್ರಿ ಅಂತ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ದರ್ಶನ್‌ಗೆ ಜೈಲು ಶಿಕ್ಷೆ ಮತ್ತಷ್ಟು ಕಠಿಣ – ಇನ್ಮುಂದೆ ದಾಸ ಊಟಕ್ಕೂ ಸರತಿ ಸಾಲಿನಲ್ಲಿ ನಿಲ್ಲಬೇಕು!

ಅಪರಾಧಿಕ ಹಿನ್ನೆಲೆ ವ್ಯಕ್ತಿಗೆ ಸನ್ಮಾನ ಮಾಡಿದ್ದಾರೆ. ನ್ಯಾ. ಸಂತೋಷ್​ ಹೆಗ್ಡೆ ಅವರಿಗೆ ಪುನೀತ್​​ ಕೆರೆಹಳ್ಳಿಯ ಹಿನ್ನೆಲೆ ಏನು ಅಂತಾ ಗೊತ್ತಿರಲಿಲ್ವಾ ಎಂದು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಂತೋಷ್​ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದಾರೆ. ಯಾರಿಗೆ ಪ್ರಶಸ್ತಿ ಎಂದು ತಿಳಿಸಿರಲಿಲ್ಲ, ಅರ್ಥಪೂರ್ಣ ಕಾರ್ಯಕ್ರಮ ಎಂದು ತಿಳಿದು ನಾನು ಹೋಗಿದ್ದೆ, ನಾನೊಬ್ಬನೇ ಪ್ರಶಸ್ತಿಯನ್ನ ಕೊಟ್ಟಿಲ್ಲ, ಕಾರ್ಯಕ್ರಮದಲ್ಲಿ ಇನ್ನೊಬ್ಬರು ಮುಖ್ಯ ನ್ಯಾಯಾಮೂರ್ತಿಗಳಿದ್ದರು. ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದು ತಪ್ಪು, ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಮುಂದೆ ಯಾವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಿಗೂ ನಾನು ಹೋಗುವುದಿಲ್ಲ ಎಂದು ತಿಳಿಸಿದರು.ಇಂದೂ ಕೂಡ ಅದೇ ಸಂಸ್ಥೆಯವರ ಕಾರ್ಯಕ್ರಮ ಇದೆ. ನನಗೆ ಗೌರವಿಸುವ ಕಾರ್ಯಕ್ರಮ ಇದೆ, ಆದ್ರೆ ಆ ಕಾರ್ಯಕ್ರಮಕ್ಕೆ ನಾನು ಹೋಗುವುದಿಲ್ಲ, ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದು ತಪ್ಪು ಅಂತಾ ತಿಳಿದುಕೊಂಡು ವಿಷಾಧ ವ್ಯಕ್ತಪಡಿಸುತ್ತೇನೆ ಎಂದು ನ್ಯಾ. ಸಂತೋಷ್​ ಹೆಗ್ಡೆ ಹೇಳಿದ್ದಾರೆ.

Kishor KV