ಸೈಡ್‌ಲೈನ್ ಆದ್ರಾ ಸಂಜು ಸ್ಯಾಮ್ಸನ್, ಯುಜುವೇಂದ್ರ ಚಹಾಲ್ – ಇಂಡಿಯನ್ ಕ್ರಿಕೆಟ್‌ನ ನತದೃಷ್ಟ ಪ್ಲೇಯರ್ಸ್

ಸೈಡ್‌ಲೈನ್ ಆದ್ರಾ ಸಂಜು ಸ್ಯಾಮ್ಸನ್, ಯುಜುವೇಂದ್ರ ಚಹಾಲ್ – ಇಂಡಿಯನ್ ಕ್ರಿಕೆಟ್‌ನ ನತದೃಷ್ಟ ಪ್ಲೇಯರ್ಸ್

ಇಂಡಿಯನ್​ ಕ್ರಿಕೆಟ್​​ನ ಅತ್ಯಂತ ಅನ್​ಲಕ್ಕಿ ಪ್ಲೇಯರ್ಸ್ ಅಂದ್ರೆ ಅದು ಸಂಜು ಸ್ಯಾಮ್ಸನ್ ಮತ್ತು ಯುಜುವೇಂದ್ರ ಚಹಾಲ್. ಇಬ್ಬರೂ ಹೈಲಿ ಟ್ಯಾಲೆಂಟೆಡ್ ಕ್ರಿಕೆಟರ್ಸ್. ಅದೇ ರೀತಿ ನತದೃಷ್ಟ ಪ್ಲೇಯರ್ಸ್. ಯಾಕಂದ್ರೆ, ಇಬ್ಬರಿಗೂ ಟೀಂ ಇಂಡಿಯಾದಲ್ಲಿ ಪರ್ಮನೆಂಟ್ ಪ್ಲೇಸ್​​ಮೆಂಟ್ ಅಂತೂ ಸೀಗ್ತಿಲ್ಲ. ಒಂದು ಸೀರಿಸ್​​ನಲ್ಲಿ ಆಡಿದ್ರೆ, ಮತ್ತೊಂದು ಸೀರಿಸ್​ನಲ್ಲಿ ಸ್ಕ್ವಾಡ್​​ನಲ್ಲೇ ಇರೋದಿಲ್ಲ. ಒಂದು ವೇಳೆ ಸ್ಕ್ವಾಡ್​​ನಲ್ಲಿ ಇದ್ರೂ ಪ್ಲೇಯಿಂಗ್-11 ಚಾನ್ಸ್ ಸಿಗುತ್ತೆ ಅನ್ನೋ ಗ್ಯಾರಂಟಿ ಇಲ್ಲ. ಈ ಮ್ಯಾಚ್ ಆಡಿದ್ರೆ, ನೆಕ್ಸ್ಟ್ ಮ್ಯಾಚ್​​ನಲ್ಲಿ ಮತ್ತೆ ಡ್ರಾಪ್. ಸಂಜು ಸ್ಯಾಮ್ಸನ್ ಮತ್ತು ಚಹಾಲ್ ಇಬ್ಬರ ವಿಚಾರದಲ್ಲೂ ಇದು ನಡೀತಾನೆ ಇದೆ. ಇದ್ರ ಜೊತೆಗೆ ಇಲ್ಲಿ ಇನ್ನೊಂದು ಗೇಮ್ ಕೂಡ ಇದೆ. ಸಂಜು ಸ್ಯಾಮ್ಸನ್ ಮತ್ತು ಯುಜುವೇಂದ್ರ ಚಹಾಲ್ ಇಬ್ಬರೂ ಕೂಡ ಟಿ-20 ಫಾರ್ಮೆಟ್​ನಲ್ಲಿ ಎಕ್ಸ್​ಪರ್ಟ್​​ಗಳು. ವಂಡೇಗಿಂತ ಟಿ-20ಯಲ್ಲೇ ಹೈಲೈಟ್ ಆದವರು. ಆದ್ರೆ ಇಬ್ಬರೂ ಕೂಡ ಮುಂದಿನ ಟಿ-20 ವರ್ಲ್ಡ್​​ಕಪ್​ ರೇಸ್​​ನಿಂದ ಔಟಾಗಿರೋದು ಆಲ್​ಮೋಸ್ಟ್ ಗ್ಯಾರಂಟಿಯಾಗಿದೆ.

ಇದನ್ನೂ ಓದಿ: ಗಂಭೀರ್ ವಿರುದ್ಧ ಶ್ರೀಶಾಂತ್ ರೊಚ್ಚಿಗೆದ್ದಿದ್ದು ಯಾಕೆ ? – ಗಂಭೀರ್ ಮತ್ತು ಶ್ರೀಶಾಂತ್ ಮಧ್ಯೆ ಹೈಡ್ರಾಮಾದ ಫುಲ್ ಡಿಟೇಲ್ಸ್..!

ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸೀರಿಸ್​ಗೆ ಸಂಜು ಸ್ಯಾಮ್ಸನ್​​ ಆಯ್ಕೆಯಾಗಿಲ್ಲ. ಟಿ-20 ಸೀರಿಸ್​​ನ ಸ್ಕ್ವಾಡ್​ನಲ್ಲಿ ಸಂಜು ಹೆಸರಿಲ್ಲ. ಆದ್ರೆ, ವಂಡೇ ಟೀಂಗೆ ಸಂಜು ಸ್ಯಾಮ್ಸನ್​ರನ್ನ ಸೆಲೆಕ್ಟ್ ಮಾಡಲಾಗಿದೆ. ಆದ್ರೆ ಈಗ ವಂಡೇ ಮ್ಯಾಚ್​​ನಲ್ಲಿ ಸಂಜು ಸ್ಯಾಮ್ಸನ್​ರನ್ನ ಆಡಿಸೋಕೆ ನಿರ್ಧರಿಸಿರೋ ಟೀಂ ಇಂಡಿಯಾದ ಇದೇ ಸೆಲೆಕ್ಷನ್ ಕಮಿಟಿ ವರ್ಲ್ಡ್​​ಕಪ್​ಗೂ ಮುನ್ನ ನಡೆದ ಏಷ್ಯಾಕಪ್​ ಟೂರ್ನಿಯಲ್ಲಿ ಸ್ಯಾಮ್ಸ್​​ರನ್ನ ರಿಸರ್ವ್ ಪ್ಲೇಯರ್​ ಆಗಿ ಇರಿಸಿತ್ತು. ಬಳಿಕ ವರ್ಲ್ಡ್​​ಕಪ್ ಸ್ಕ್ವಾಡ್​​ಗೆ ಅಂತೂ ಸೆಲೆಕ್ಟ್ ಮಾಡಿಯೇ ಇರಲಿಲ್ಲ. ಆದ್ರೆ, 2024ರಲ್ಲಿ ನಡೆಯುವ ಟಿ-20 ವರ್ಲ್ಡ್​ಕಪ್​ಗಾದ್ರೂ ಸಂಜು ಸೆಲೆಕ್ಟ್ ಆಗಬಹುದು ಅನ್ನೋ ಹೋಪ್ ಇತ್ತು. ಯಾಕಂದ್ರೆ ಸಂಜು ಟಿ-20 ಟ್ರ್ಯಾಕ್​ ರೆಕಾರ್ಡ್ ಚೆನ್ನಾಗಿದೆ. ಎಸ್ಪೆಷಲಿ ಐಪಿಎಲ್​​ನಲ್ಲಂತೂ ಬೆಸ್ಟ್ ಪರ್ಫಾಮೆನ್ಸ್​ ನೀಡಿದ್ದಾರೆ. ರಾಜಸ್ಥಾನ ರಾಯಲ್ಸ್​ನ ಕ್ಯಾಪ್ಟನ್ ಬೇರೆ. ಹೀಗಾಗಿ ನೆಕ್ಸ್ಟ್ ಟಿ-20 ವರ್ಲ್ಡ್​​ಕಪ್​​ ಟೀಂ ಇಂಡಿಯಾದ ಸ್ಕ್ವಾಡ್​​ನಲ್ಲಿ ಸ್ಥಾನ ಪಡೆಯುವಲ್ಲಿ ಸಂಜು ಸ್ಯಾಮ್ಸನ್​​ ಕೂಡ ರೇಸ್​​ನಲ್ಲಿರಬಹುದು. ಹಾಗಾಗಿ ಸೌತ್ ಆಫ್ರಿಕಾ ವಿರುದ್ಧದ ಟಿ-20 ಸೀರಿಸ್​ಗೆ ಸಂಜುರನ್ನ ಕೂಡ ಸೆಲೆಕ್ಟ್ ಮಾಡಿ ಪರೀಕ್ಷೆಗೊಳಪಡಿಸಬಹುದು ಅಂತಾನೆ ಅಂದುಕೊಂಡಲಾಗಿತ್ತು. ಆದ್ರೆ ನಾವೆಲ್ಲಾ ಅಂದುಕೊಂಡಿರೋದು ಬಂತಷ್ಟೇ. ರಿಯಾಲಿಟಿ ನೋಡಿದ್ರೆ ಎಲ್ಲವೂ ಉಲ್ಟಾ ಆಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸ್ಕ್ವಾಡ್​​ನಲ್ಲಿ ಸಂಜುಗೆ ಅವಕಾಶ ಸಿಕ್ಕಿಲ್ಲ. ಬದಲಾಗಿ ವಂಡೇ ಟೀಮ್​ಗೆ ಪಿಕ್ ಮಾಡಲಾಗಿದೆ. ಆ್ಯಕ್ಚುವಲಿ ನೆಕ್ಸ್ಟ್ ಟಿ-20 ವರ್ಲ್ಡ್​​ಕಪ್ ಟೀಂ ಸೆಲೆಕ್ಷನ್ ದೃಷ್ಟಿಯಿಂದ ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸೀರಿಸ್ ಪ್ಲೇಯರ್ಸ್​ಗಳಿಗೆ ತುಂಬಾನೆ ಇಂಪಾರ್ಟೆಂಟ್. ಆದ್ರೆ, ಟಿ-20ಯಲ್ಲಿ ಪರ್ಫಾಮ್ ಮಾಡಿ ಅಟ್​​ಲೀಸ್ಟ್ ಟಿ-20 ವಿಶ್ವಕಪ್​​​ನಲ್ಲಿ ಆಡೋಕೆ ಚಾನ್ಸ್ ಪಡೆದುಕೊಳ್ಳೋಣ ಅಂದ್ರೆ ಸಂಜು ಸ್ಯಾಮ್ಸನ್ ಸ್ಕ್ವಾಡ್​​ಗೆ ಸೆಲೆಕ್ಟ್ ಆಗಿಲ್ಲ. ಹೀಗಾಗಿ ಮುಂದಿನ ಟ-20 ವರ್ಲ್ಡ್​​ಕಪ್​​ ರೇಸ್​ನಿಂದ ಸಂಜು ಆಲ್​ಮೋಸ್ಟ್ ಹೊರಬಿದ್ದಂತೆಯೇ. ಸಂಜುರನ್ನ ನಿಜವಾಗಿಯೂ ವರ್ಲ್ಡ್​​ಕಪ್​​ನಲ್ಲಿ ಆಡಿಸೋ ಬಗ್ಗೆ ಸೆಲಕ್ಷನ್ ಕಮಿಟಿಗೆ ಯೋಚನೆ ಇರ್ತಿದ್ರೆ ಈ ಬಾರಿ ಗ್ಯಾರಂಟಿ ಸೌತ್​ ಆಫ್ರಿಕಾ ವಿರುದ್ಧ ಟಿ-20 ಸೀರಿಸ್​ಗೆ ಟೀಮ್​ನಲ್ಲಿ ಸೆಲೆಕ್ಟ್ ಆಗಿದ್ರು. ಈಗ ಸಂಜುಗೆ ಇರೋದು ಒಂದೇ ಆಪ್ಷನ್. ದ್ಯಾಟ್ ಈಸ್ ಐಪಿಎಲ್​.. ಟಿ-20 ವರ್ಲ್ಡ್​ಕಪ್​ಗೂ ಮುನ್ನ ನಡೆಯೋ ಐಪಿಎಲ್​ನಲ್ಲಿ ನಿರೀಕ್ಷೆಗೂ ಮೀರಿ ಪರ್ಫಾಮ್ ಮಾಡಿದ್ರೆ ಆಗ ಟಿ-20 ವರ್ಲ್ಡ್​​ಕಪ್ ಸ್ಕ್ವಾಡ್​​ಗೆ ಸಂಜು ಸ್ಯಾಮ್ಸನ್​ರನ್ನ ಸೆಲೆಕ್ಟ್ ಮಾಡಲೇಬೇಕು ಅನ್ನೋ ಪ್ರೆಷರ್​ ಕೂಡ ಕ್ರಿಯೇಟ್ ಆಗಬಹುದು.

ಸಂಜು ಸ್ಯಾಮ್ಸನ್​ ನಿಜಕ್ಕೂ ಮೋಸ್ಟ್ ಅನ್​ಲಕ್ಕೀ ಪ್ಲೇಯರ್. ಯಾಕಂದ್ರೆ ಟಿ-20 ಸೀರಿಸ್​ಗೆ ಸೆಲೆಕ್ಟ್ ಆಗೋ ನಿರೀಕ್ಷೆಯಲ್ಲಿದ್ರೆ, ಆಗ ಟೀಮ್​ನಲ್ಲಿ ಅವರಿಗೆ ಚಾನ್ಸ್ ಸಿಕ್ಕಿರೋದಿಲ್ಲ. ವಂಡೇ ಟೀಮ್​ಗೆ ಸೆಲೆಕ್ಟ್ ಆಗಬಹುದು ಅಂದುಕೊಂಡ್ರೆ ಅಲ್ಲೂ ಸಿಕ್ಕಿರಲಿಲ್ಲ. ಒಂದು ವೇಳೆ ಟಿ-20ಗೆ ಸೆಲೆಕ್ಟ್ ಆದ್ರೆ ವಂಡೇ ಟೀಮ್​ನಲ್ಲಿ ಜಾಗ ಸಿಗೋದಿಲ್ಲ. ವಂಡೇ ಸ್ಕ್ವಾಡ್​​ನಲ್ಲಿ ಚಾನ್ಸ್​ ಸಿಕ್ರೆ, ಟಿ-20ಯಲ್ಲಿ ಅವಕಾಶ ಸಿಗೋದಿಲ್ಲ. ಒಂದು ವೇಳೆ ಟೀಮ್​ನಲ್ಲಿ ಸೆಲೆಕ್ಟ್ ಆದ್ರೂ ಕೂಡ ಎಲ್ಲಾ ಮ್ಯಾಚ್​​ಗಳಲ್ಲೂ ಆಡೋಕೆ ಚಾನ್ಸ್ ಸಿಗೋದಿಲ್ಲ. ಟೀಂ ಇಂಡಿಯಾ ಪರ ಸಂಜು ಸ್ಯಾಮ್ಸನ್​ಗೆ ಕನ್ಸಿಸ್ಟೆಂಟ್ ಆಗಿ ಆಡೋಕೆ ಆಗೋದಿಲ್ಲ. ಒಂದು ಸೀರಿಸ್​ನಲ್ಲಿ ಟೀಂನಲ್ಲಿರ್ತಾರೆ.. ನೆಕ್ಸ್ಟ್ ಸೀರಿಸ್​​ ವೇಳೆಗೆ ಟೀಮ್​ನಿಂದ ಔಟಾಗಿರ್ತಾರೆ. ಅಂತೂ,  ಸಂಜು ಸ್ಯಾಮ್ಸನ್ ವಿಚಾರದಲ್ಲಿ ಸೆಲೆಕ್ಷನ್ ಕಮಿಟಿ ಅಂದರ್ ಬಾಹರ್​ ಗೇಮ್ ಆಡ್ತಾ ಇದೆ. 2015ರಲ್ಲಿ ಟೀಂ ಇಂಡಿಯಾ ಪರ ಸಂಜು ಟಿ-20ಯಲ್ಲಿ ಡೆಬ್ಯೂ ಮಾಡಿದ್ರು. ಆದ್ರೆ ಇದುವರೆಗೂ ಯಾವುದೇ ಟಿ-20 ವಿಶ್ವಕಪ್​ ಮ್ಯಾಚ್​ನ್ನ ಆಡಿಲ್ಲ. ವಂಡೇ ವರ್ಲ್ಡ್​​ಕಪ್​​ನಲ್ಲೂ ಆಡಿಲ್ಲ.

2015ರಲ್ಲಿ ಸಂಜುಗೆ ಒಂದು ಮ್ಯಾಚ್​ ಆಡೋಕಷ್ಟೇ ಚಾನ್ಸ್ ಸಿಗ್ತು. 2016, 2017, 2018 ಮತ್ತು 2019ರಲ್ಲೂ ಸಂಜು ಸ್ಯಾಮ್ಸನ್​​ಗೆ ಒಂದೇ ಒಂದು ಮ್ಯಾಚ್ ಆಡೋಕೆ ಅವಕಾಶ ಸಿಕ್ಕಿಲ್ಲ. ನಂತರ 2020ರಲ್ಲಿ ಸಂಜು ಟೀಂ ಇಂಡಿಯಾ ಪರ 6 ಮ್ಯಾಚ್​ಗಳನ್ನ ಆಡ್ತಾರೆ. 2022ರ ಟಿ-20 ವರ್ಲ್ಡ್​​ಕಪ್​​ನಲ್ಲಿ ಚಾನ್ಸ್ ಸಿಗಬಹುದು ಅಂತಾ ಸಂಜು ಅಂದುಕೊಂಡಿದ್ರೆ.. ಬಟ್ ನೋ ಚಾನ್ಸ್..ಟೀಮ್​ನಿಂದ ಡ್ರಾಪ್.. ಸರಿ 2023ರ ವಂಡೇ ವರ್ಲ್ಡ್​​ಕಪ್​ಗಾದ್ರೂ ಸೆಲೆಕ್ಟ್ ಆಗಬಹುದು. ಟ್ರ್ಐ ಮಾಡೋಣ ಅಂದುಕೊಂಡ್ರು. ಮತ್ತೊಮ್ಮೆ ಡ್ರಾಪ್.. ನಂತರ ಏಷ್ಯನ್​​ ಗೇಮ್ಸ್​​ನಲ್ಲಾದ್ರೂ ಆಡೋಣ ಅಂದ್ರೆ ಅಲ್ಲೂ ಸಂಜು ಸಾಮ್ಸನ್​ರನ್ನ ಪಿಕ್ ಮಾಡಿಲ್ಲ. ಇಂಟರ್​​ನ್ಯಾಷನಲ್​​ ಕ್ರಿಕೆಟ್​ಗೆ ಸಂಜು ಸ್ಯಾಮ್ಸನ್ ಡೆಬ್ಯೂ ಮಾಡಿ ಸುಮಾರು 8 ವರ್ಷಗಳಾಗಿವೆ. ಇದುವರೆಗೆ ಸಂಜು ಟೀಂ ಇಂಡಿಯಾ ಪರ ಕೇವಲ 13 ವಂಡೇ ಮ್ಯಾಚ್​ಗಳನ್ನ ಆಡಿದ್ದಾರಷ್ಟೇ. ಬರೀ 24 ಟಿ-20 ಮ್ಯಾಚ್​ಗಳನ್ನ ಆಡಿದ್ದಾರೆ. ಇಷ್ಟರಲ್ಲೇ ಸಂಜು ಸ್ಯಾಮ್ಸನ್ ಈಗ ಸೀನಿಯರ್ ಕ್ರಿಕೆಟರ್ ಎನ್ನಿಸಿಕೊಂಡಿದ್ದಾರೆ. ಕೆರಿಯರ್​ವೈಸ್ ನೋಡಿದ್ರೆ ಮಾತ್ರ ಸೀನಿಯರ್. ಆದ್ರೆ ಆಡಿರೋ ಮ್ಯಾಚ್​ಗಳನ್ನ ಲೆಕ್ಕ ಹಾಕಿದ್ರೆ ಸಂಜು ಸ್ಯಾಮ್ಸನ್ ಇನ್ನೂ ಜ್ಯೂನಿಯರೇ. ಸಂಜು ಬಳಿಕ ಡೆಬ್ಯೂ ಮಾಡಿದ ಯಂಗ್​ಸ್ಟರ್ಸ್​​ಗಳು ಕೂಡ ಸಂಜು ಸ್ಯಾಮ್ಸನ್​ಗಿಂತ ಹೆಚ್ಚು ಮ್ಯಾಚ್​ಗಳನ್ನ ಆಡಿದ್ದಾರೆ. ಉದಾಹರಣೆಗೆ ಇಶಾನ್​ ಕಿಶನ್​ರನ್ನೇ ತೆಗೆದುಕೊಳ್ಳಿ. 2021ರಲ್ಲಿ ಡೆಬ್ಯೂ ಮಾಡಿರೋದು. 32 ಟಿ-20 ಮ್ಯಾಚ್​​ಗಳನ್ನ ಆಡಿದ್ದಾರೆ. ಅಂದ್ರೆ ಸಂಜುಗಿಂತಲೂ 8 ಮ್ಯಾಚ್​ ಹೆಚ್ಚು. 27 ವಂಡೇ ಮ್ಯಾಚ್ ಆಡಿದ್ದಾರೆ. ಸಂಜು ಆಡಿರೋದು ಕೇವಲ 13 ವಂಡೇ ಮ್ಯಾಚ್​. ಆ್ಯಕ್ಚುವಲಿ ಇಷ್ಟೊತ್ತಿಗಾಗಲೇ ಸಂಜು ಟೀಂ ಇಂಡಿಯಾದಲ್ಲಿ ಪರ್ಮನೆಂಟ್ ಪ್ಲೇಯರ್ ಆಗಿರಬೇಕಿತ್ತು. ರೋಹಿತ್​ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್​ ರಾಹುಲ್ ಬಳಿಕ ಸಂಜು ಸ್ಯಾಮ್ಸನ್​​ ಮೇನ್ ಪ್ಲೇಯರ್​ ಆಗಿ ತಂಡದಲ್ಲಿ ಇರಬೇಕಿತ್ತು. ರೋಹಿತ್ ಶರ್ಮಾ ಬಳಿಕ ಕ್ಯಾಪ್ಟನ್ ಯಾರು ಅನ್ನೋ ಪ್ರಶ್ನೆ ಬಂದಾಗ ಸಂಜು ಸ್ಯಾಮ್ಸನ್ ರೇಸ್​​ನಲ್ಲಿರಬೇಕಿತ್ತು. ಆದ್ರೆ, ತಮ್ಮ ಟ್ಯಾಲೆಂಟ್ ಪ್ರೂವ್ ಮಾಡೋಕೆ ಸಂಜು ಸ್ಯಾಮ್ಸನ್​ಗೆ ಸರಿಯಾಗಿ ಚಾನ್ಸೇ ಸಿಗ್ತಿಲ್ಲ. ಆಡೋಕೆ ಸಿಕ್ಕಿದ್ರೆ ತಾನೆ ಪರ್ಫಾಮ್ ಮಾಡೋದು.  ಹೀಗಾಗಿಯೇ ಸಂಜು ಸ್ಯಾಮ್ಸನ್ ಅನ್​ಲಕ್ಕಿ ಕ್ರಿಕೆಟರ್ ಎನ್ನಿಸಿಕೊಂಡಿರೋದು.

ಇನ್ನು ಸೌತ್​ ಆಫ್ರಿಕಾ ಟಿ-20 ಸೀರಿಸ್​ಗೆ ಟೀಂನಿಂದ ಡ್ರಾಪ್ ಆದ ಬಳಿಕ ಸಂಜು ಸ್ಯಾಮ್ಸನ್ ಒಂದು ಮಾರ್ಮಿಕ ಸ್ಟೇಟ್​ಮೆಂಟ್ ಕೂಡ ಕೊಟ್ಟಿದ್ದಾರೆ. ಯಾರಿಗೂ ಇನ್ನೇನನ್ನೂ ಪ್ರೂವ್ ಮಾಡಬೇಕಾದ ಅವಶ್ಯಕತೆ ಇಲ್ಲ ಅಂತಾ ಅನ್ನಿಸಿದೆ. ನಾನು ನನಗೋಸ್ಕರ ಅಷ್ಟೇ ಆಡ್ತಾ ಇದ್ದೇನೆ ಅನ್ನೋ ಮಾತನ್ನ ಸಂಜು ಸ್ಯಾಮ್ಸನ್ ಹೇಳಿದ್ದಾರೆ. ಇದ್ರ ಬೆನ್ನಲ್ಲೇ, ವಿಜಯ್ ಹಜಾರೆ ಟ್ರೋಫಿಯಲ್ಲಿ ಸಂಜು ಸೆಂಚೂರಿ ಕೂಡ ಹೊಡೆದಿದ್ದಾರೆ.

ಇವಿಷ್ಟು ಸಂಜು ಸ್ಯಾಮ್ಸನ್ ವಿಚಾರ ಆಯ್ತು.. ಮತ್ತೊಬ್ಬ ಅನ್​ಲಕ್ಕಿ ಪ್ಲೇಯರ್ ಅಂದ್ರೆ ಯುಜುವೇಂದ್ರ ಚಹಾಲ್.. ಟೀಂ ಇಂಡಿಯಾದ ಈ ಸ್ಪಿನ್ನರ್ ಟಿ-20​ ಎಕ್ಸ್​​ಪರ್ಟ್ ಅಂತಾನೆ ಗುರುತಿಸಿಕೊಂಡಿದ್ದಾರೆ. ಐಪಿಎಲ್​​ನಲ್ಲಿ ಆರ್​ಸಿಬಿ ಪರ ಆಡೋವಾಗಲೇ ಇರಲಿ, ರಾಜಸ್ಥಾನ ಟೀಮ್​​ನಲ್ಲೇ ಇರಲಿ ಹೈಯೆಸ್ಟ್ ವಿಕೆಟ್ ಟೇಕರ್ ಬೌಲರ್. ಟೀಂ ಇಂಡಿಯಾದಲ್ಲಿ ಆಡೋವಾಗಲೂ ಹಲವು ಮ್ಯಾಚ್​ಗಳನ್ನ ಟರ್ನ್ ಮಾಡಿದ್ದಾರೆ. ಆದ್ರೀಗ ಚಹಾಲ್​ ಕೂಡ ಸೈಡ್​ಲೈನ್ ಆಗ್ತಿದ್ದಾರೆ. ವಂಡೇ ವರ್ಲ್ಡ್​​ಕಪ್​ಗೆ ಸೆಲೆಕ್ಟ್ ಆಗಿಲ್ಲ. ಬಿಡಿ..ಅಲ್ಲಿ ಕುಲ್​ದೀಪ್ ಯಾದವ್​ ಲೀಡ್ ಸ್ಪಿನ್ನರ್ ಆಗಿದ್ರು. ಇನ್ನು ಸೌತ್​ ಆಫ್ರಿಕಾ ಸೀರಿಸ್​​ನಲ್ಲಿ ಟಿ-20 ಸ್ಕ್ವಾಡ್​ಗೆ ಚಹಾಲ್ ಸೆಲೆಕ್ಟ್ ಆಗಿಲ್ಲ. ವಂಡೇ ಟೀಂನಲ್ಲಿ ಚಹಾಲ್ ಹೆಸರಿದೆ. ಹೀಗಾಗಿ ಮುಂದಿನ ಟಿ-20 ವರ್ಲ್ಡ್​​ಕಪ್​ಗೆ ಯುಜುವೇಂದ್ರ ಚಹಾಲ್​ಗೂ ಸ್ಕ್ವಾಡ್​​ನಲ್ಲಿ ಚಾನ್ಸ್ ಸಿಗೋದು ಡೌಟ್. ಅಂತೂ ಸಂಜು ಸ್ಯಾಮ್ಸನ್ ಮತ್ತು ಯುಜುವೇಂದ್ರ ಚಹಾಲ್ ಇಬ್ಬರೂ ಈಗ ಒಂದೇ ಪೇಜ್​ನಲ್ಲಿದ್ದಾರೆ. ಇವರ ಕಿಸ್​​ಮತ್ ಅದ್ಯಾವಾಗ ಬದಲಾಗುತ್ತೋ ಗೊತ್ತಿಲ್ಲ.

Sulekha