ಅಭಿ Vs ವೈಭವ್ Vs ಸಂಜು – AFG ಸರಣಿ ಓಪನರ್ಸ್ ಯಾರು?
ಕಾಂಬಿನೇಷನ್ ಲೆಕ್ಕಾಚಾರ ಹೇಗಿದೆ?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ-20ಐ ಸರಣಿಯಲ್ಲಿ ಭಾರತವೇ ಗೆಲ್ಲುವಂಥ ಫೇವರೆಟ್ ಟೀಂ. ಹೀಗಿದ್ರೂ ಬಿಸಿಸಿಐಗೆ ಮಾತ್ರ ತಲೆಬಿಸಿ ತಪ್ಪಿಲ್ಲ. ಯಾಕಂದ್ರೆ ಭಾರತದ ಪರ ಓಪನರ್ಗಳಾಗಿ ಯಾರನ್ನ ಕಣಕ್ಕಿಳಿಸೋದು ಅನ್ನೋದೇ ಅತಿದೊಡ್ಡ ಪ್ರಶ್ನೆ. ಮ್ಯಾನೇಜ್ಮೆಂಟ್ ಮುಂದೆ ಮೂರು ಆಯ್ಕೆಗಳಿವೆ. ಆದ್ರೆ ಅಂತಿಮವಾಗಿ ಯಾರನ್ನ ಫೈನಲ್ ಮಾಡ್ತಾರೆ ಅನ್ನೋ ಕನ್ಫ್ಯೂಷನ್ ಇದೆ.
ಇದನ್ನೂ ಓದಿ : ಸೋತ್ರೂ PAK ನಾಯಕಿ ದೌಲತ್ತು – ಸೆಂಡ್ ಆಫ್ ಫಾತಿಮಾ ಟ್ರೋಲ್
ಸೆಪ್ಟೆಂಬರ್ 13ರಿಂದ ಭಾರತ ಹಾಗೂ ಆಫ್ಘನ್ ನಡುವೆ ಮೂರು ಪಂದ್ಯಗಳ ಟಿ-20ಐ ಸರಣಿ ಶುರುವಾಗುತ್ತೆ. ಏಷ್ಯನ್ ಗೇಮ್ಸ್ಗೂ ಮುನ್ನ ನಡೆಯತ್ತಿರೋ ಈ ಸಿರೀಸ್ ಭಾರತಕ್ಕೆ ಎಲ್ಲಾ ರೀತಿಯಲ್ಲೂ ತುಂಬಾನೇ ಮುಖ್ಯವಾಗುತ್ತೆ. ಟೀಂ ಕಾಂಬಿನೇಷನ್, ಪ್ಲಸ್ ಌಂಡ್ ಮೈನಸ್, ಪ್ಲೇಯಿಂಗ್ 11 ಹೀಗೆ ಎಲ್ಲದಕ್ಕೂ ಉತ್ತರ ಸಿಗುತ್ತೆ. ಮೋಸ್ಟ್ ಇಂಪಾರ್ಟೆಂಟ್ ಓಪನಿಂಗ್ ಪೇರ್ ಯಾರು ಅನ್ನೋ ಪ್ರಶ್ನೆಗೆ ಉತ್ತರ ಹುಡುಕ್ಬೇಕಿದೆ.
ಅಭಿಷೇಕ್-ಸೂರ್ಯವಂಶಿ-ಸಂಜು.. ಯಾರಾಗ್ತಾರೆ ಓಪನರ್ಸ್?
2024ರ ಟಿ-20 ವಿಶ್ವಕಪ್ ಬಳಿಕ ಭಾರತದ ಪರ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಟಿ-20ಐನಲ್ಲಿ ಸಾಕಷ್ಟು ಸಲ ಇನ್ನಿಂಗ್ಸ್ ಓಪನ್ ಮಾಡ್ತಿದ್ದಾರೆ. ಅಭಿಷೇಕ್ ಪರ್ಮನೆಂಟ್ ಆಗಿ ಒನ್ ಸೈಡ್ ಇದ್ರೆ ಸಂಜುಗೆ ಕಂಟಿನ್ಯುಯಸ್ ಚಾನ್ಸ್ ಸಿಕ್ಕಿಲ್ಲ. ಶುಭ್ಮನ್ ಗಿಲ್ ತಂಡಕ್ಕೆ ಕಂ ಬ್ಯಾಕ್ ಮಾಡ್ದಾಗ ಓಪನರ್ ಆಗಿದ್ರು. ಆ ನಂತ್ರದಲ್ಲಿ ಮತ್ತೆ ಸಂಜುಗೆ ಚಾನ್ಸ್ ಕೊಟ್ಟಾಗ ಇಶಾನ್ ಕಿಶನ್ ಬಂದ್ರು ಅಂತಾ ಮತ್ತೆ ಸಂಜು ಮಿಡಲ್ ಆರ್ಡರ್ಗೆ ಹೋದ್ರು. ಆ ನಂತ್ರ ಕಿಶನ್ ಒನ್ ಡೌನ್ ಆಗಿ ಮತ್ತೆ ಸಂಜು ಓಪನರ್ ಆಗಿದ್ರು. ಈಗ ವೈಭವ್ ಸೂರ್ಯವಂಶಿ ಟೀಂ ಇಂಡಿಯಾಗೆ ಕಾಲಿಟ್ಟ ಮೇಲೆ ಮತ್ತೆ ಗೊಂದಲಗಳು ಸೃಷ್ಟಿಸಿಯಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸೂರ್ಯವಂಶಿ ಭಾರತದ ಪರ ಡೆಬ್ಯೂ ಮಾಡಿದ್ರು. ಈ ವೇಳೆ ಸಂಜುಗೆ ಬೆಂಚ್ ಕಾಯಿಸಿ ಅಭಿಷೇಕ್ ಶರ್ಮಾ ಜೊತೆ ಓಪನರ್ ಆಗಿ ಅವಕಾಶ ನೀಡಲಾಗಿತ್ತು. ಅದೇ ಸರಣಿಯ ಕೊನೇ ಮ್ಯಾಚಲ್ಲಿ ಮತ್ತೆ ಸೂರ್ಯವಂಶಿ ಕೂರಿಸಿ ಸಂಜುಗೆ ಸ್ಲಾಟ್ ಕೊಟ್ಟಿದ್ರು. ಅದಾದ ಬಳಿಕ ಜಿಂಬಾಬ್ವೆ ವಿರುದ್ಧದ ಸರಣಿಗೆ ಸಂಜುರನ್ನ ತಂಡಕ್ಕೆ ಸೆಲೆಕ್ಟ್ ಮಾಡೇ ಇರ್ಲಿಲ್ಲ. ಸೋ ಅಭಿ & ವೈಭವ್ ಮೂರೂ ಪಂದ್ಯಗಳಲ್ಲೂ ಇನ್ನಿಂಗ್ಸ್ ಶುರು ಮಾಡಿದ್ರು. ಈಗ ಆಫ್ಘನ್ ಸರಣಿಗೆ ಮೂವರೂ ಆಯ್ಕೆಯಾಗಿದ್ದು ಯಾರನ್ನ ಆರಂಭಿಕ ಜೋಡಿಯಾಗಿ ಕಣಕ್ಕಿಳಿಸ್ತಾರೆ ಅನ್ನೋ ಗೊಂದಲ ಸ್ಟಾರ್ಟ್ ಆಗಿದೆ.
ನಂಬರ್ 1 – ಅಭಿಷೇಕ್ & ಸಂಜು!
2024ರ ಟಿ-20 ವಿಶ್ವಕಪ್ ಬಳಿಕ ಇಬ್ಬರೂ ಕೂಡ ಓಪನಿಂಗ್ ಜೊತೆಯಾಟ
ಲೆಫ್ಟ್-ರೈಟ್ ಹ್ಯಾಂಡ್ ಕಾಂಬಿನೇಷನ್.. ಸಾಕಷ್ಟು ಅನುಭವ ಇರುವ ಪ್ಲೇಯರ್ಸ್
ಏಷ್ಯಾಕಪ್, ಐಸಿಸಿ ಟಿ-20 ವಿಶ್ವಕಪ್, ವಿದೇಶಗಳಲ್ಲಿ ಆಡಿದ ಅನುಭವ
2026ರ ವಿಶ್ವಕಪ್ ಫೈನಲ್ ನಲ್ಲಿ 98 ರನ್ಸ್ ಜೊತೆಯಾಟದ ಹೈಯೆಸ್ಟ್ ರನ್ಸ್
ಟೋಟಲ್ 12 ಇನ್ನಿಂಗ್ಸ್, 22.25 ಆವರೇಜ್, 267 ರನ್ಸ್ ಜೊತೆಯಾಟ
ನಂಬರ್ 2 – ಅಭಿಷೇಕ್ & ವೈಭವ್ ಸೂರ್ಯವಂಶಿ!
ಅಭಿಷೇಕ್ ಮತ್ತು ವೈಭವ್ ಇಬ್ಬರೂ ಕೂಡ ಟಿ-20ಐ ಸ್ಫೋಟಕ ಹಿಟ್ಟರ್ಸ್
ಇಬ್ಬರೂ ಲೆಫ್ಟ್ ಹ್ಯಾಂಡ್ ಬ್ಯಾಟರ್ಸ್.. ಫಸ್ಟ್ ಬಾಲ್ ನಿಂದಲೇ ಚಾರ್ಜ್
ಪವರ್ ಪ್ಲೇನಲ್ಲೇ ಇಬ್ಬರಿಗೂ ಇಡೀ ಪಂದ್ಯದ ದಿಕ್ಕನ್ನೇ ಬದಲಿಸೋ ಸ್ಟ್ರೆಂಥ್
6 ಪಂದ್ಯಗಳಲ್ಲಿ ಇನ್ನಿಂಗ್ಸ್ ಓಪನ್, ಒಟ್ಟಾರೆ 193 ರನ್ಸ್.. 81 ರನ್ಸ್ ಹೈಯೆಸ್ಟ್
ಸೂರ್ಯವಂಶಿ ಜೊತೆ ಇನ್ನಿಂಗ್ಸ್ ಆರಂಭದ ವೇಳೆ ಅಭಿಷೇಕ್ ಶರ್ಮಾ ಡಲ್
6 ಇನ್ನಿಂಗ್ಸ್ ನಲ್ಲಿ 73 ರನ್ಸ್ ಅಷ್ಟೇ.. ಜಿಂಬಾಬ್ವೆ ವಿರುದ್ಧ ಸಿಂಗಲ್ ಡಿಜಿಟ್ ಔಟ್
ಇಬ್ಬರೂ ಬೇಗನೇ ಔಟ್ ಆದ್ರೆ ಭಾರತದ ಟಾಪ್ ಆರ್ಡರ್ ನಲ್ಲಿ ಸ್ವಲ್ಪ ಪ್ರೆಶರ್
ಹೀಗೆ ಭಾರತದ ಪರ ಅಭಿಷೇಕ್ ಮತ್ತು ವೈಭವ್ ಇನ್ನಿಂಗ್ಸ್ ಆರಂಭ ಮಾಡೋದ್ರಿಂದ ಸ್ಫೋಟಕ ಆರಂಭ ಸಿಗುತ್ತೆ. ಅಟ್ ದಿ ಸೇಮ್ ಟೈಂ ಬೇಗನೇ ವಿಕೆಟ್ ಒಪ್ಪಿಸಿದ್ರೆ ಒತ್ತಡಕ್ಕೂ ಸಿಲುಕಬಹುದು. ಹೀಗಾಗಿ ಈ ಆಪ್ಶನ್ಗೂ ಬಿಟ್ಟು ಮೂರನೇ ಆಯ್ಕೆ ಕಡೆಯೂ ಚಿಂತನೆ ಮಾಡ್ಬೋದು.
ನಂಬರ್ 3 – ಸಂಜು & ವೈಭವ್ ಸೂರ್ಯವಂಶಿ!
ಭಾರತದ ಪರ ಇದುವರೆಗೆ ಸಂಜು-ಸೂರ್ಯವಂಶಿ ಆರಂಭಿಕ ಜೊತೆಯಾಟವಿಲ್ಲ
ಆಫ್ಘನ್ ವಿರುದ್ಧ ಹೊಸ ಪ್ರಯೋಗ ಮಾಡಿದ್ರೆ ಲೆಫ್ಟ್-ರೈಟ್ ಕಾಂಬಿನೇಷನ್
ಸಂಜುಗೆ ಸಾಕಷ್ಟು ಅನುಭವ ಇದ್ದು ಮತ್ತೊಂದೆಡೆ ವೈಭವ್ ಅಗ್ರೆಸ್ಸಿವ್ ಬ್ಯಾಟಿಂಗ್
ಸಂಜು-ವೈಭವ್ ಆರಂಭಕ್ಕೆ ಮಾಜಿ ವಿಕೆಟ್ ಕೀಪರ್ ದೀಪ್ ದಾಸ್ ಗುಪ್ತಾ ಸಲಹೆ

ನೋಡಿರಿ

