KL 1.. ಸಂಜು 22 ರನ್ಸ್ – ಗ್ರೀನ್ ಗೆ ₹25 ಕೋಟಿ ಕೊಟ್ಟು ಕೆಟ್ಟ KKR
IPL ಆರಂಭದಲ್ಲೇ ಮುಗ್ಗರಿಸಿದ ಸ್ಟಾರ್ಸ್!

ಐಪಿಎಲ್ನಲ್ಲಿ ಆಲ್ರೆಡಿ ಒಂದಷ್ಟು ಪ್ಲೇಯರ್ಸ್ ಎದುರಾಳಿ ತಂಡಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಡಾಮಿನೇಟಿಂಗ್ ಪರ್ಫಾಮೆನ್ಸ್ ಮೂಲಕ ಸಿಂಗಲ್ಲಾಗಿ ಅಬ್ಬರಿಸಿ ಮ್ಯಾಚ್ ವಿನ್ನರ್ಸ್ ಆಗ್ತಿದ್ದಾರೆ. ಆದರೆ ತುಂಬಾನೇ ಹೈಪ್ ಕ್ರಿಯೇಟ್ ಮಾಡಿದ್ದ ಕೆಲ ಕಾಸ್ಟ್ಲಿ ಪ್ಲೇಯರ್ಗಳು ಸದ್ದೇ ಮಾಡ್ತಿಲ್ಲ. ಆರಂಭದಲ್ಲೇ ಬ್ಯಾಕ್ ಟು ಬ್ಯಾಕ್ ಫೇಲ್ಯೂರ್.
ಇದನ್ನೂ ಓದಿ : ಮುಂಬೈ ವಿರುದ್ದ RRಗೆ ಭರ್ಜರಿ ಜಯ – ಜಸ್‌ಪ್ರೀತ್ ಬುಮ್ರಾಗೆ ಶಾಕ್ ಕೊಟ್ಟ ವೈಭವ್
ಐಪಿಎಲ್ ಅನ್ನೋದೇ ಹಾಗೇ. ಡೆಬ್ಯೂ ಸೀಸನ್ನಲ್ಲೇ ಡೇಂಜರಸ್ ಆಗುವವರೂ ಇದ್ದಾರೆ. ಸಾಕಷ್ಟು ಎಕ್ಸ್ಪೀರಿಯನ್ಸ್ ಇದ್ರೂ ಸದ್ದೇ ಮಾಡದ ಸೂಪರ್ ಸ್ಟಾರ್ಟ್ ಕೂಡ ಇರ್ತಾರೆ. ಈ ಸೀಸನ್ನಲ್ಲಿ ಕೆಲವ್ರು ತಮ್ಮ ಆಟದ ಮೂಲಕವೇ ಕ್ರಿಕೆಟ್ ಜಗತ್ತಿನಲ್ಲಿ ಸದ್ದು ಮಾಡ್ತಿದ್ರೆ ಇನ್ನೂ ಕೆಲವ್ರು ಬ್ಯಾಚ್ ಬೀಸೋಕೇ ಶುರು ಮಾಡಿಲ್ಲ. ಆರಂಭದ ಪಂದ್ಯಗಳಲ್ಲೇ ಒದ್ದಾಡ್ತಿದ್ದಾರೆ. ಅವ್ರು ತಗೊಳ್ಳೋ ಸಂಭಾವನೆಗೂ, ಎಕ್ಸ್ಪೀರಿಯನ್ಸ್ಗೂ, ಪರ್ಫಾಮೆನ್ಸ್ಗೂ ಸಿಂಕೇ ಆಗ್ತಿಲ್ಲ.
ದುಬಾರಿ ವೀರರ ಫ್ಲ್ಯಾಪ್ ಶೋ!
ತಂಡ ಆಟಗಾರ ರನ್ಸ್/ವಿಕೆಟ್ ಸಂಭಾವನೆ
ಚೆನ್ನೈ ಸಂಜು ಸ್ಯಾಮ್ಸನ್ 22 ರನ್ಸ್ ₹18 ಕೋಟಿ
ಚೆನ್ನೈ ಪ್ರಶಾಂತ್ ವೀರ್ 49 ರನ್ಸ್ ₹14.2 ಕೋಟಿ
ಚೆನ್ನೈ ಕಾರ್ತಿಕ್ ಶರ್ಮಾ 25 ರನ್ಸ್ ₹14.2 ಕೋಟಿ
ಕೊಲ್ಕತ್ತಾ ಕ್ಯಾಮರೂನ್ ಗ್ರೀನ್ 24 ರನ್ಸ್ ₹25.2 ಕೋಟಿ
ಕೊಲ್ಕತ್ತಾ ವರುಣ್ ಚಕ್ರವರ್ತಿ 0 ವಿಕೆಟ್ ₹12 ಕೋಟಿ
ಪಂಜಾಬ್ ಅರ್ಶದೀಪ್ ಸಿಂಗ್ 0 ವಿಕೆಟ್ ₹18 ಕೋಟಿ
ಡೆಲ್ಲಿ ಕೆಎಲ್ ರಾಹುಲ್ 1 ರನ್ ₹14 ಕೋಟಿ

ನೋಡಿರಿ

