ಅಭಿಷೇಕ್ & ಸೂರ್ಯವಂಶಿ ಓಪನರ್ಸ್ – ಟಾಪ್ 3ನಲ್ಲಿ ಯಾರಿಗೆ ಗೇಟ್ ಪಾಸ್?
ಐರ್ಲೆಂಡ್ ವಿರುದ್ಧ ಹೀಗಿದೆ ಪ್ಲೇಯಿಂಗ್ 11

ವೈಟ್ ಬಾಲ್ ಫಾರ್ಮೆಟ್ನಲ್ಲಿ ಕಂಪ್ಲೀಟ್ ಡಾಮಿನೇಷನ್ ಮಾಡ್ತಿರೋ ಭಾರತ ಈಗ ಐರ್ಲೆಂಡ್ ವಿರುದ್ಧದ ಟಿ-20ಐ ಸರಣಿಗೆ ಸಜ್ಜಾಗಿದೆ. ಜೂನ್ 26 ಅಂದ್ರೆ ಇದೇ ಶುಕ್ರವಾರದಿಂದ ಸರಣಿ ಸ್ಟಾರ್ಟ್ ಆಗಲಿದೆ. ಹೊಸ ಕ್ಯಾಪ್ಟನ್, ಯಂಗ್ ಪ್ಲೇಯರ್ಸ್ ಕಾಂಬಿನೇಷನ್ನಲ್ಲಿ ನ್ಯೂ ಜರ್ನಿ ಶುರುವಾಗಲಿದೆ. ಹಾಗೇ ಪ್ಲೇಯಿಂಗ್ 11 ಅಂತೂ ಸಿಕ್ಕಾಪಟ್ಟೆ ಕ್ಯೂರಿಯಸ್ ಆಗಿದೆ. ಓಪನಿಂಗ್ ಜೋಡಿಯೇ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಲಿದೆ. ಯಂಗ್ ಡೈನಮೇಟ್ ಸೂರ್ಯವಂಶಿ ಡೆಬ್ಯೂ ಮಾಡೋದು ಪಕ್ಕಾ ಆಗಿದೆ.
ಇದನ್ನೂ ಓದಿ : ವರ್ಷದಲ್ಲಿ 1 ತಿಂಗಳು ಕ್ರಿಕೆಟ್ ಬಂದ್ – ಆಟಗಾರರಿಗೆ ರೆಸ್ಟ್ ಕೊಡುತ್ತಾ BCCI?
ಭಾರತ ಮತ್ತು ಐರ್ಲೆಂಡ್ ಸಿರೀಸ್ ಅಂದಾಗ ಭಾರತವೇ ಬಲಿಷ್ಠ ತಂಡ ಅನ್ನೋದು ಎಲ್ರಿಗೂ ಗೊತ್ತಿರೋದೇ. ಸೋ ಎರಡಕ್ಕೆ ಎರಡೂ ಪಂದ್ಯಗಳಲ್ಲೂ ಭಾರತವೇ ಅಬ್ಬರಿಸೋದು ಪಕ್ಕಾ. ವಿಷ್ಯ ಅಂದ್ರೆ ಈ ಸರಣಿಯನ್ನ ನೋಡೋಕೆ ಸಾಕಷ್ಟು ಕಾರಣಗಳಿವೆ. ಕಳೆದ 2 ವರ್ಷಗಳಲ್ಲೇ ವಿಶ್ವಕ್ರಿಕೆಟ್ನಲ್ಲಿ ಹಲ್ಚಲ್ ಎಬ್ಬಿಸಿರೋ 15 ವರ್ಷದ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಪರ ಸೀನಿಯರ್ಸ್ ಟೀಮ್ಗೆ ಡೆಬ್ಯೂ ಮಾಡೋ ಟೈಂ ಬಂದಿದೆ. ಐರ್ಲೆಂಡ್ ಸರಣಿ ಮೂಲಕವೇ ಹೊಸ ಯುಗಾರಂಭಕ್ಕೆ ಮುನ್ನುಡಿ ಬರೆಯಲಿದ್ದಾರೆ.
ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಪವರ್ ಪ್ಲೇ ಫೈಯರ್!
ಭಾರತದ ಪರ ಟಿ-20ಐನಲ್ಲಿ ಆಲ್ರೆಡಿ ಅಭಿಷೇಕ್ ಶರ್ಮಾ ಟ್ರೆಂಡ್ ಸೆಟ್ ಮಾಡಿದ್ದಾರೆ. ಅವ್ರ ಸ್ಫೋಟಕ ಇನ್ನಿಂಗ್ಸ್ ಬಗ್ಗೆ ಇಡೀ ಜಗತ್ತೇ ಮಾತಾಡ್ತಿದೆ. ಅವ್ರ ವಿಕೆಟ್ ತೆಗೆಯೋಕೆ ಎದುರಾಳಿ ಪಡೆ ಗ್ರೌಂಡ್ ವರ್ಕ್ ಮಾಡಿ ಅಖಾಡಕ್ಕಿಳೀತಿದೆ. ವಿಷ್ಯ ಅಂದ್ರೆ ಅಭಿಷೇಕ್ಗೂ ಒಂದು ಕೈ ಮೇಲೆ ಎನ್ನುವಂತೆ ನಿರೀಕ್ಷೆ ಮೂಡಿಸಿರೋ ಫೈಯರ್ ಬ್ರ್ಯಾಂಡ್ ವೈಭವ್ ಸೂರ್ಯವಂಶಿ ಸೀನಿಯರ್ಸ್ ಜೊತೆ ತೊಡೆತಟ್ಟೋಕೆ ರೆಡಿಯಾಗಿದ್ದಾರೆ. ಲೆಫ್ಟ್ ಹ್ಯಾಂಡ್ ಬ್ಯಾಟರ್ಗಳ ಬಿರುಗಾಳಿ ಬ್ಯಾಟಿಂಗ್ ಜೊತೆಯಾಟ ನೋಡೋಕೆ ಇಡೀ ಜಗತ್ತೇ ಕಾಯ್ತಾ ಇದೆ. ಅಂಡರ್ 19, ಐಪಿಎಲ್, ಭಾರತ ಎ ಟೀಮ್ ಪರ ಕಿಚ್ಚು ಹಚ್ಚಿರೋ ವೈಭವ್ ಸೂರ್ಯವಂಶಿ ಐರ್ಲೆಂಡ್ ವಿರುದ್ಧ ಡೆಬ್ಯೂ ಮಾಡೋದು ಪಕ್ಕಾ ಆಗಿದೆ.
ಐರ್ಲೆಂಡ್ ಬೇಟೆಗೆ ಭಾರತ ರೆಡಿ!
ವೈಭವ್ ಸೂರ್ಯವಂಶಿ
ಅಭಿಷೇಕ್ ಶರ್ಮಾ
ಸಂಜು ಸ್ಯಾಮ್ಸನ್
ಶ್ರೇಯಸ್ ಅಯ್ಯರ್
ತಿಲಕ್ ವರ್ಮಾ
ಶಿವಂ ದುಬೆ
ಸೂರ್ಯಾಂನ್ಶ್ ಶೆಡ್ಗೆ
ಅಕ್ಷರ್ ಪಟೇಲ್
ಅರ್ಶದೀಪ್ ಸೀಂಗ್
ಹರ್ಷಿತ್ ರಾಣಾ
ರವಿ ಬಿಷ್ಣೋಯ್
ಇದು ಹೊಸ ಟಿ-20ಐ ಟೀಂ. ಯಂಗ್ ಸ್ಟರ್ಸ್ ಟೀಂನಲ್ಲಿ ಮತ್ತಷ್ಟು ಅಗ್ರೆಸ್ಸಿವ್ ಆಗಿ ಪರ್ಫಾಮ್ ಮಾಡೋಕೆ ರೆಡಿಯಾಗಿದ್ದಾರೆ. ಇನ್ನು ಭಾರತ ಮತ್ತು ಐರ್ಲೆಂಡ್ ತಂಡಗಳು ಟಿ20ಐಗಳಲ್ಲಿ ಎಂಟು ಬಾರಿ ಮುಖಾಮುಖಿಯಾಗಿವೆ. ಕೊನೆಯ ಬಾರಿಗೆ 2024 ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಟಿ20 ವಿಶ್ವಕಪ್ ಟೈಮಲ್ಲಿ ಫೈಟ್ ಮಾಡಿದ್ರು. ಈ ಮ್ಯಾಚಲ್ಲಿ ಭಾರತ ಎಂಟು ವಿಕೆಟ್‌ಗಳ ಜಯ ಸಾಧಿಸಿತು. ಇಂಟ್ರೆಸ್ಟಿಂಗ್ ಒಮ್ಮೆಯೂ ಐರ್ಲೆಂಡ್ ಭಾರತದ ವಿರುದ್ಧ ಟಿ-20ಐನಲ್ಲಿ ಗೆದ್ದೇ ಇಲ್ಲ. ಹೀಗಾಗಿ ಅಟ್ಲೀಸ್ಟ್ ಈ ಸಲನಾದ್ರೂ ಗೆಲುವಿನ ಖಾತೆ ತೆರೆಯೋಣ ಅಂತಾ ಐರ್ಲೆಂಡ್ ಕೂಡ ಪ್ಲ್ಯಾನ್ನಲ್ಲಿದೆ. ಐರ್ಲೆಂಡ್ ತನ್ನ ಹೊಸ ಟಿ20ಐ ನಾಯಕನಾಗಿ ವಿಕೆಟ್ ಕೀಪರ್-ಬ್ಯಾಟರ್ ಲೋರ್ಕನ್ ಟಕರ್ ಅವರನ್ನು ನೇಮಿಸಿದೆ, 2026 ರ ಪುರುಷರ ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿದ ನಂತರ ಪಾಲ್ ಸ್ಟಿರ್ಲಿಂಗ್ ರಾಜೀನಾಮೆ ನೀಡಿದ್ದರು. ಹೀಗಾಗಿ ಎರಡೂ ತಂಡಗಳು ಹೊಸ ಕ್ಯಾಪ್ಟನ್ನೊಂದಿಗೆ ಗೆಲುವಿಗಾಗಿ ಕಾಯ್ತಾ ಇರ್ತಾರೆ.

ನೋಡಿರಿ

