ಸಂಜು ಸಾಕಾ.. ಸೂರ್ಯವಂಶಿ ಬೇಕಾ – ವರುಣ್ ಇಂಜುರಿ ಭಾರತಕ್ಕೆ ಹೊಡೆತ
2ನೇ ಪಂದ್ಯಕ್ಕೆ ಪ್ಲೇಯಿಂಗ್ 11 ಟ್ವಿಸ್ಟ್

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಟಿ-20ಐ ಮ್ಯಾಚಲ್ಲಿ ಭರ್ಜರಿಯಾಗಿ ಗೆದ್ದಿರೋ ಭಾರತ ಇವತ್ತು ಎರಡನೇ ಪಂದ್ಯವನ್ನೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳೋ ಟಾರ್ಗೆಟ್ನಲ್ಲಿದೆ. ಆದ್ರೆ ಈಗ ಇರುವಂಥ ಪ್ರಶ್ನೆ ಅಂದ್ರೆ ಓಪನಿಂಗ್ ಪೇರ್ ಹೇಗಿರುತ್ತೆ? ಆಲ್ರೌಂಡರ್ಸ್ ಬದಲಾವಣೆ ಮಾಡ್ತಾರಾ ಅನ್ನೋದ್ರ ಬಗ್ಗೆ.
ಇದನ್ನೂ ಓದಿ : RCB ಬ್ಯಾಟಿಂಗ್ ಬೆಸ್ಟ್.. ಬೌಲಿಂಗ್ – ಜಿತೇಶ್ ಗೆ ಬ್ಯಾಕಪ್ ಕೀಪರ್ ಯಾರು?
ಅಭಿಷೇಕ್ ಶರ್ಮಾ ಅವ್ರ ಆರ್ಭಟದಿಂದಾಗಿ ಮೊದಲ ಪಂದ್ಯವನ್ನ ಈಸಿಯಾಗಿ ಗೆದ್ದಿದ್ದ ಭಾರತ ಈಗಾಗ್ಲೇ ಸರಣಿಯಲ್ಲಿ 1-0 ಅಂತರಲ್ಲಿ ಲೀಡ್ ಸಾಧಿಸಿದೆ. ಇವತ್ತಿನ ಮ್ಯಾಚ್ನೂ ಗೆದ್ರೆ ಇನ್ನೂ ಒಂದು ಪಂದ್ಯ ಬಾಕಿ ಇದ್ದಂತೆಯೇ ಸರಣಿಯನ್ನ ಗೆಲ್ತಾರೆ. ಆದ್ರೆ ಸರಣಿಗೂ ಮುನ್ನ ಅಭಿಷೇಕ್ ಶರ್ಮಾ ಜೊತೆ ಯಾರು ಇನ್ನಿಂಗ್ಸ್ ಓಪನ್ ಮಾಡ್ಬೇಕು ಅನ್ನೋ ಪ್ರಶ್ನೆ ಮೂಡಿದೆ.
ಸಿಡಿಯದ ಸಂಜು.. ಸೂರ್ಯವಂಶಿಗೆ ಸಿಗುತ್ತಾ ಚಾನ್ಸ್?
15ನೇ ವಯಸ್ಸಿನಲ್ಲೇ ಕ್ರಿಕೆಟ್ ಲೋಕದಲ್ಲಿ ಧೂಳೆಬ್ಬಿಸ್ತಿರೋ ವೈಭವ್ ಸೂರ್ಯವಂಶಿ ತನ್ನಲ್ಲಿ ಅದೆಂಥಾ ಪವರ್ ಇದೆ ಅನ್ನೋದನ್ನ ಪ್ರೂವ್ ಮಾಡ್ತಾನೇ ಬರ್ತಿದ್ದಾರೆ. ಮತ್ತೊಂದೆಡೆ ತಮ್ಮ ಸ್ಥಾನ ತೂಗುಯ್ಯಾಲೆಯಲ್ಲಿ ಇದೆ ಅಂತಾ ಗೊತ್ತಿದ್ರೂ ಸಂಜು ಸ್ಯಾಮ್ಸನ್ ಮಾತ್ರ ಯಾಕೋ ಕಂ ಬ್ಯಾಕ್ ಮಾಡ್ತಿಲ್ಲ. ಮೊದಲನೇ ಪಂದ್ಯದಲ್ಲಿ ಸೂರ್ಯವಂಶಿಯನ್ನು ಬೆಂಚ್ನಲ್ಲಿ ಕೂರಿಸಿ ಸಂಜು ಸ್ಯಾಮ್ಸನ್ಗೆ ತಂಡದ ಮ್ಯಾನೇಜ್ಮೆಮಟ್ ಅವಕಾಶ ನೀಡಿತ್ತು. ಆದರೆ ಸಂಜು ಸ್ಯಾಮ್ಸನ್ ಸಿಕ್ಕ ಅವಕಾಶವನ್ನ ಬಳಸಿಕೊಳ್ತಿಲ್ಲ. 8 ಬಾಲ್ ಎದುರಿಸಿದ ಸಂಜು 2 ಬೌಂಡರಿ ಸಹಿತ 10 ರನ್ಗಳಿಸಿ ತಮ್ಮ ಇನ್ನಿಂಗ್ಸ್ ಮುಗಿಸಿದ್ರು. ಸಂಜು ಅವ್ರ ಇದೇ ಕಳಪೆ ಪ್ರದರ್ಶನ ಅಭಿಮಾನಿಗಳ ಸಿಟ್ಟಿಗೆ ಕಾರಣ ಆಗಿದೆ. ಚಾನ್ಸ್ ಸಿಕ್ಕಾಗ್ಲೇಲ್ಲಾ ಹೀಗೆ ಔಟ್ ಆಗ್ತಿದ್ರೆ ಯಾಕೆ ಅವಕಾಶ ಕೊಡ್ಬೇಕು ಅಂತಾ ಪ್ರಶ್ನೆ ಮಾಡ್ತಿದ್ದಾರೆ. ಮೊದಲ ಪಂದ್ಯದಲ್ಲಿ ಫೇಲ್ ಆಗಿರೋ ಸಂಜು ಸ್ಯಾಮ್ಸನ್ಗೆ ಇನ್ನುಳಿದ ಎರಡು ಪಂದ್ಯಗಳಲ್ಲಿ ಬೆಂಚ್ ಕಾಯಿಸಿ ಸೂರ್ಯವಂಶಿಗೆ ಚಾನ್ಸ್ ನೀಡಿ ಎಂಬ ಪ್ರೆಶರ್ ಜಾಸ್ತಿಯಾಗ್ತಿದೆ. ಒಂದ್ಕಡೆ ಅಭಿಷೇಕ್ ಶರ್ಮಾ ಓಪನಿಂಗ್ ಸ್ಲಾಟ್ನಲ್ಲಿ ಸೇಫ್ ಆಗಿದ್ದಾರೆ. ಬಟ್ ಅವ್ರ ಜೊತೆ ಮತ್ತೊಬ್ರು ಯಾರು ಅನ್ನೋದಕ್ಕೆ ಮಾತ್ರ ಭಾರತ ಇಲ್ಲಿ ಟ್ರಯಲ್ ನೋಡ್ತಾ ಇರುವಂಥದ್ದು. ಮತ್ತೊಂದೆಡೆ ಮೊದಲ ಪಂದ್ಯದ ವೇಳೆ ಸ್ಪಿನ್ನರ್ ವರುಣ್ ಚಕ್ರವರ್ತಿ ಗಾಯಗೊಂಡಿದ್ದು 2ನೇ ಪಂದ್ಯದಿಂದ ಹೊರಬಿದ್ದಿದ್ದಾರೆ.
2ನೇ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ
ಸಂಜು ಸ್ಯಾಮ್ಸನ್
ಇಶಾನ್ ಕಿಶನ್
ಶ್ರೇಯಸ್ ಅಯ್ಯರ್
ತಿಲಕ್ ವರ್ಮಾ
ಶಿವಂ ದುಬೆ
ನಿತೀಶ್ ಕುಮಾರ್ ರೆಡ್ಡಿ
ಅಕ್ಷರ್ ಪಟೇಲ್
ಅರ್ಷದೀಪ್ ಸಿಂಗ್
ಜಸ್ಪ್ರೀತ್ ಬುಮ್ರಾ
ರವಿ ಬಿಷ್ಣೋಯ್

ನೋಡಿರಿ

