ಏಷ್ಯನ್ ಗೇಮ್ಸ್ ನಲ್ಲೂ ಆಡಲ್ಲ ವೈಭವ್? – ಅಭಿಷೇಕ್ & ಸಂಜುನೇ ಓಪನರ್ಸ್
ಜಪಾನ್ ನಲ್ಲಿ ಬ್ಯಾಟಿಂಗ್ ಕಷ್ಟವಾಗುತ್ತಾ?

ಏಷ್ಯನ್ ಗೇಮ್ಸ್ ನಲ್ಲೂ ಆಡಲ್ಲ ವೈಭವ್? – ಅಭಿಷೇಕ್ & ಸಂಜುನೇ ಓಪನರ್ಸ್ಜಪಾನ್ ನಲ್ಲಿ ಬ್ಯಾಟಿಂಗ್ ಕಷ್ಟವಾಗುತ್ತಾ?

2026ರ ಏಷ್ಯನ್ ಗೇಮ್ಸ್​ನಲ್ಲಿ ಮೆನ್ಸ್ ಕ್ರಿಕೆಟ್ ಪಂದ್ಯಗಳು ಇಂದಿನಿಂದ ಶುರು ಆಗ್ತಿವೆ. ಬಟ್ ಟೀಂ ಇಂಡಿಯಾ ಮ್ಯಾಚಸ್ ಸೆಪ್ಟೆಂಬರ್ 28ರಿಂದ ನಡೆಯಲಿವೆ. ಯಾಕಂದ್ರೆ ಐಸಿಸಿ ರ್ಯಾಂಕಿಂಗ್ ಆಧಾರದ ಮೇಲೆ ಭಾರತ ಸೇರಿದಂತೆ ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆದಿವೆ. ಆದ್ರೆ ಇಲ್ಲಿ ಇರುವಂಥ ಪ್ರಶ್ನೆ ಅಂದ್ರೆ ಭಾರತದ ಪರ ಓಪನರ್ಸ್ ಯಾರು ಅನ್ನೋದು.

ಇದನ್ನೂ ಓದಿ : CSKಗೆ ಹೊಸ ಕೋಚ್‌ ಆಯ್ಕೆ ! – ಸ್ಟೀಫನ್ ಫ್ಲೆಮಿಂಗ್ ಜಾಗಕ್ಕೆ ಜಹೀರ್ ಖಾನ್‌

2026ರ ಏಷ್ಯನ್ ಗೇಮ್ಸ್‌ನ ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿವೆ. ಇವುಗಳಲ್ಲಿ ಐಸಿಸಿ ಶ್ರೇಯಾಂಕದ ಆಧಾರದ ಮೇಲೆ 4 ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆದಿದ್ದರೆ, ಉಳಿದ 6 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಗ್ರೂಪ್ ಎನಲ್ಲಿ ಅಫ್ಘಾನಿಸ್ತಾನ, ನೇಪಾಳ, ಜಪಾನ್ ತಂಡಗಳಿದ್ರೆ ಬಿ ಗ್ರೂಪ್​ನಲ್ಲಿ ಹಾಂಗ್ ಕಾಂಗ್ ಚೀನಾ, ಮಲೇಷಿಯಾ, ಒಮನ್ ತಂಡಗಳಿವೆ. ಪ್ರತಿ ಗುಂಪಿನಿಂದ ಎರಡು ಟಾಪ್ ತಂಡಗಳು ಈಗಾಗ್ಲೇ ಕ್ವಾರ್ಟರ್ ಫೈನಲ್ ಹಂತ ತಲುಪಿರೋ ನಾಲ್ಕು ತಂಡಗಳ ವಿರುದ್ಧ ಕಣಕ್ಕಿಳಿಯಲಿವೆ. ಗ್ರೂಪ್ ‘ಎ’ ನಲ್ಲಿ 2ನೇ ಸ್ಥಾನ ಪಡೆಯುವ ತಂಡದ ವಿರುದ್ಧ ಭಾರತ ಸೋಮವಾರ ತನ್ನ ಕ್ವಾರ್ಟರ್ ಫೈನಲ್ ಪಂದ್ಯ ಆಡಲಿದೆ. ಈಗಾಗ್ಲೇ ಜಪಾನ್ ವಿರುದ್ಧದ ಏಕೈಕ ಪಂದ್ಯದಲ್ಲಿ 5 ಓವರ್​ಗಳ ಪಂದ್ಯದಲ್ಲೇ ತಡಕಾಡಿರೋ ಭಾರತ ಏಷ್ಯನ್ ಗೇಮ್ಸ್​ನಲ್ಲಿ ಹೇಗೆ ಪರ್ಫಾಮ್ ಮಾಡುತ್ತೆ ಅನ್ನೋ ಪ್ರಶ್ನೆಗಳೂ ಇವೆ. ಌಂಡ್ ಓಪನರ್ಸ್ ವಿಚಾರದಲ್ಲಿ ಮತ್ತೆ ಚರ್ಚೆಯಾಗ್ತಿದೆ.

ಏಷ್ಯನ್ ಗೇಮ್ಸ್ ನಲ್ಲೂ ಬೆಂಚ್ ಕಾಯಬೇಕು ಸೂರ್ಯವಂಶಿ!

ಭಾರತದ ಪರ ಏಷ್ಯನ್ ಗೇಮ್ಸ್​ನಲ್ಲೂ ವಂಡರ್ ಬಾಯ್ ವೈಭವ್ ಸೂರ್ಯವಂಶಿ ಬೆಂಚ್ ಕಾಯೋದು ಪಕ್ಕಾ. ಯಾಕಂದ್ರೆ ಭಾರತದ ಪರ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಓಪನಿಂಗ್ ಪೇರ್ ಆಗಿ ಕಣಕ್ಕಿಳಿಯಲಿದ್ದಾರೆ. ಮ್ಯಾನೇಜ್ ಮೆಂಟ್ ಕೂಡ ಹಲವು ವಿಚಾರಗಳನ್ನ ಮುಂದಿಟ್ಟುಕೊಂಡು ಇಂಥಾ ನಿರ್ಧಾರಕ್ಕೆ ಮುಂದಾಗಿದೆ.

ಸಂಜು-ಅಭಿಯೇ ಓಪನರ್ಸ್!

ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಸಂಜು-ಅಭಿ ಜೊತೆಯಾಟ ಆರಂಭ

ಟಿ-20ಐ ಮಾದರಿಯಲ್ಲಿ ಸಾಕಷ್ಟು ಪಂದ್ಯಗಳಲ್ಲಿ ಓಪನರ್ಸ್ ಅನುಭವ

ಲೆಫ್ಟ್-ರೈಟ್ ಹ್ಯಾಂಡ್ ಕಾಂಬಿನೇಷನ್ ಇರುವ ಆಟಗಾರರು

ಅಭಿಷೇಕ್ ಅಗ್ರೆಶನ್ ಇದ್ರೆ ಸಂಜು ಆಂಕರ್ ರೋಲ್ ಮಾಡಬಹುದು

ವೈಭವ್ ಗೆ ಬೆಂಚ್ ಕಾಯಿಸಿ ಮತ್ತೆ ಸಂಜು-ಅಭಿಗೆ ಓಪನರ್ಸ್ ಚಾನ್ಸ್

ಇನ್ನು ಅಭಿಷೇಕ್ ಶರ್ಮಾ ಜೊತೆಗಿನ ಓಪನಿಂಗ್​ ಅನ್ನು ಸಂಜು ಸ್ಯಾಮ್ಸನ್ ಕೂಡ ಖದರ್ ಆಗಿ ಹೇಳಿದ್ರು. ಸಂಜು ಸ್ಯಾಮ್ಸನ್ ಅವರೇ ಸ್ವತಃ “ಐಸ್ ಆಂಡ್ ಫೈರ್ ಅಲ್ಲ, ಇದು ಫೈರ್ ಆಂಡ್ ಫೈರ್ (ಬೆಂಕಿ ಮತ್ತು ಬೆಂಕಿ) ಜೋಡಿ ಎಂದಿದ್ರು. ಸೋ ಇಲ್ಲಿ ಮ್ಯಾನೇಜ್​ಮೆಂಟ್ ಅಂತೂ ಕ್ಲಿಯರ್ ಇದೆ. ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಇಬ್ಬರನ್ನೇ ಇಲ್ಲೂ ಕೂಡ ಪ್ರಮೋಟ್ ಮಾಡ್ತಾರೆ. ಹಾಗಂತ ವೈಭವ್ ಚೆನ್ನಾಗಿ ಆಡಲ್ಲ ಅಂತಲ್ಲ. ವೈಭವ್ ಕೂಡ ಪವರ್ ಹಿಟ್ಟರ್. ಆದ್ರೆ 15 ವರ್ಷದ ಆಟಗಾರನಿಗೆ ಮುಂದಿನ ದಿನಗಳಲ್ಲಿ ಅವಕಾಶ ಕೊಡ್ಬೋದು. ಹಾಗೇ ಅಭಿ ಮತ್ತು ಸಂಜು ಚೆನ್ನಾಗಿ ಆಡುವಾಗ ಪಾರ್ಟ್ನರ್​ಶಿಪ್ ಬ್ರೇಕ್ ಮಾಡಿದ್ರೆ ಬ್ಯಾಡ್ ಮೆಸೇಜ್ ಹೋಗುತ್ತೆ. ಹೀಗಾಗಿ ಮ್ಯಾನೇಜ್​ಮೆಂಟ್ ಕೂಡ ಸಾಕಷ್ಟು ಚರ್ಚೆ ಮಾಡಿಯೇ ಇಂಥಾ ನಿರ್ಧಾರಕ್ಕೆ ಮುಂದಾಗಿದೆ. ಌಂಡ್ ಇದೆಲ್ಲಕ್ಕಿಂತ ಮುಖ್ಯವಾಗಿ ಗೌತಮ್ ಗಂಭೀರ್ ಕೂಡ ಚೇಟಾ ಬೆನ್ನಿಗೆ ನಿಂತಿದ್ದಾರೆ.

ಸಂಜು ಹೊರಗಿಟ್ಟಿದ್ದಕ್ಕೆ ನಿದ್ದೆಯನ್ನೇ ಬಿಟ್ಟಿದ್ದೆ ಎಂದ ಗಂಭೀರ್!

2026ರ ಟಿ-20 ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್ ವಿಚಾರವಾಗಿ ತಂದ ಹೆಡ್ ಕೋಚ್ ಗೌತಮ್ ಗಂಭೀರ್ ಅಚ್ಚರಿಯ ವಿಚಾರಗಳನ್ನ ರಿವೀಲ್ ಮಾಡಿದ್ದಾರೆ. ಇತ್ತೀಚೆಗೆ ಗೌತಮ್ ಗಂಭೀರ್ ಸಂದರ್ಶನವೊಂದರಲ್ಲಿ ಮಾತ್ನಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್​ರನ್ನ ತಂಡದಿಂದ ಹೊರಗಿಟ್ಟು ವೈಭವ್ ಸೂರ್ಯವಂಶಿಗೆ ಚಾಣ್ಸ್ ನೀಡಿದ ನಿರ್ಧಾರವೇ ತನ್ನ ಜೀವನದ ಅತಿದೊಡ್ಡ ಕಠಿಣ ನಿರ್ಧಾರ ಎಂದಿದ್ದಾರೆ. ಹಾಗೇ ನನ್ನ ಕೋಚಿಂಗ್ ಕೆರಿಯರ್​ನ ಕಳೆದ ಎರಡು ವರ್ಷಗಳ ಪ್ರಯಾಣದಲ್ಲಿ ನಾನು ನಿದ್ದೆಯಿಲ್ಲದೆ ಕಳೆದ ಏಕೈಕ ರಾತ್ರಿ ಅದು. ನಾನು ಈ ವಿಷಯವನ್ನು ಸಂಜು ಜೊತೆಗೂ ನೇರವಾಗಿ ಹಂಚಿಕೊಂಡಿದ್ದೆ. ಟಿ20 ಮಾದರಿಯಲ್ಲಿ ನನ್ನ ತರಬೇತುದಾರನ ಅವಧಿಯಲ್ಲಿ ತೆಗೆದುಕೊಂಡ ಅತ್ಯಂತ ಕಠಿಣ ನಿರ್ಧಾರ ಇದಾಗಿತ್ತು ಎಂದಿದ್ದಾರೆ. ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಹಿರಿಯ ಆಟಗಾರನನ್ನು ಕೇವಲ ಮೂರು ನಾಲ್ಕು ಪಂದ್ಯಗಳ ಬಳಿಕ ಹೊರಗಿಡುವುದು ಸುಲಭವಾಗಿರಲಿಲ್ಲ. ಆದರೆ ತಂಡದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಆದ್ರೆ ಇದಕ್ಕಿಂತ ದೊಡ್ಡ ವಿಚಾರ ಅಂದ್ರೆ ತಂಡ ಗೆಲ್ಲಬೇಕು ಅಂತಾ ಸಂಜು ಪಾಸಿಟಿವ್ ಆಗಿ ತಗೊಂಡಿದ್ದು ಖುಷಿಯ ವಿಚಾರ ಎಂದಿದ್ದಾರೆ. ಹೀಗಾಗಿ ಏಷ್ಯನ್ ಗೇಮ್ಸ್​ನಲ್ಲಿ ಅಭಿಷೇಕ್ ಮತ್ತು ಸಂಜುನೇ ಓಪನಿಂಗ್ ಮಾಡ್ತಾರೆ. ಆದ್ರೆ ಜಪಾನ್​ನಲ್ಲಿ ಭಾರತ ತಂಡ ಹೇಗೆ ಪರ್ಫಾಮ್ ಮಾಡುತ್ತೆ ಅನ್ನೋ ಪ್ರಶ್ನೆಗಳೂ ಇವೆ. ಈಗಾಗ್ಲೇ ಜಪಾನ್ ವಿರುದ್ಧದ ಏಕೈಕ ಪಂದ್ಯದಲ್ಲಿ ಕೇವಲ 2 ರನ್​ಗಳಿಂದ ಗೆದ್ದಿದ್ರು. ಸೋ ಮುಂದಿನ ಪಂದ್ಯಗಳ ಪರ್ಫಾಮೆನ್ಸ್ ಮೇಲೆ ಎಲ್ಲರ ಕಣ್ಣಿದೆ.

Shantha Kumari

Leave a Reply

Your email address will not be published. Required fields are marked *