ಟಿ20 ವಿಶ್ವಕಪ್ ತಂಡ ಪ್ರಕಟ – ಟೀಂ ಇಂಡಿಯಾದ ಯಾವೆಲ್ಲಾ ಆಟಗಾರರಿಗೆ ಸಿಕ್ಕಿದೆ ಚಾನ್ಸ್ ?

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ ಆಟಗಾರರನ್ನು ಒಳಗೊಂಡ ಶ್ರೇಷ್ಠ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದೆ. ಈ ಟಿ20 ವಿಶ್ವಕಪ್ ತಂಡದಲ್ಲಿ ಸಂಜು ಸ್ಯಾಮ್ಸನ್ ಒಳಗೊಂಡಂತೆ ನಾಲ್ವರು ಭಾರತೀಯ ಆಟಗಾರರಿಗೆ ಅವಕಾಶವನ್ನು ನೀಡಲಾಗಿದೆ. ಆದರೆ, ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಕೈ ಬಿಡಲಾಗಿದೆ. ದಕ್ಷಿಣ ಆಫ್ರಿಕಾ ತಂಡದ ಏಡೆನ್ ಮಾರ್ಕ್ರಮ್ ಅವರನ್ನು ಈ ತಂಡದ ನಾಯಕನ್ನಾಗಿ ನೇಮಕ ಮಾಡಲಾಗಿದೆ. ಸಂಜು ಸ್ಯಾಮ್ಸನ್ಗೆ ವಿಕೆಟ್ ಕೀಪರ್ ಸ್ಥಾನ ಹಾಗೂ ಆರಂಭಿಕ ಸ್ಥಾನವನ್ನು ನೀಡಲಾಗಿದೆ.
ಈ ತಂಡವನ್ನು ಪ್ರಸಿದ್ಧ ಕಾಮೆಂಟೇಟರ್ಗಳಾದ ಇಯಾನ್ ಬಿಷಪ್, ನ್ಯಾಟಲಿ ಜರ್ಮಾನೋಸ್, ಐಯಾನ್ ಮಾರ್ಗನ್ ಹಾಗೂ ಐಸಿಸಿ ಪ್ರತಿನಿಧಿ ಗೌರವ್ ಸಕ್ಸೇನಾ ಮತ್ತು ಕ್ರೀಡಾ ಪತ್ರಕರ್ತ ರೆಕ್ಸ್ ಕ್ಲೆಮೆಂಟೈನ್ ಒಳಗೊಂಡ ಸಮಿತಿಯು ಈ ಟಿ20 ವಿಶ್ವಕಪ್ ತಂಡವನ್ನು ಆಯ್ಕೆ ಮಾಡಿದೆ.
ಇದನ್ನೂ ಓದಿ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ಬಣ್ಣದ ಚಪ್ಪಲಿ ಧರಿಸಿದ್ರೆ ಒಳ್ಳೆಯದು ಗೊತ್ತಾ?
ಭಾರತ ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಉತ್ತಮ ನಾಯಕತ್ವ ಪ್ರದರ್ಶಿಸಿದರು. ಬ್ಯಾಟಿಂಗ್ ಕ್ರಮದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಒತ್ತಡದ ಸಂದರ್ಭಗಳಲ್ಲಿ ಬೌಲರ್ಗಳನ್ನು ಸೂಕ್ತವಾಗಿ ಬಳಸುವುದು ಅವರ ನಾಯಕತ್ವದ ಪ್ರಮುಖ ಅಂಶಗಳಾಗಿದ್ದವು. ಆದರೆ ಬ್ಯಾಟಿಂಗ್ನಲ್ಲಿ ಭಾರತದ ಆರಂಭಿಕ ಪಂದ್ಯದಲ್ಲಿ ಅದ್ಭುತ ಇನಿಂಗ್ಸ್ ಆಡಿದ ನಂತರ ಅವರು ಅದೇ ರೀತಿಯ ಪ್ರದರ್ಶನವನ್ನು ಮುಂದಿನ ಪಂದ್ಯಗಳಲ್ಲಿ ನೀಡಲು ಸಾಧ್ಯವಾಗಲಿಲ್ಲ. ಅಮೆರಿಕ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ ಕುಸಿತದ ಅಂಚಿನಲ್ಲಿ ಇದ್ದಾಗ ಸೂರ್ಯಕುಮಾರ್ ಯಾದವ್ ಅಜೇಯ 84 ರನ್ ಗಳಿಸಿ ತಂಡವನ್ನು ಸಂಕಷ್ಟದಿಂದ ಹೊರತಂದಿದ್ದರು. ಆದರೆ ನಂತರದ ಪಂದ್ಯಗಳಲ್ಲಿ ಅವರು ಅದೇ ಮಟ್ಟದ ಆಟವನ್ನು ತೋರಿಸಲು ವಿಫಲರಾದರು. ಈ ಟೂರ್ನಿಯಲ್ಲಿ ಕ್ರಮವಾಗಿ 84, 12, 32, 34, 18, 33, 18, 11 ಮತ್ತು 0 ರನ್ಗಳನ್ನು ಗಳಿಸಿದ್ದಾರೆ.
ಟಿ20 ವಿಶ್ವಕಪ್ಯ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದ ಸಂಜು ಸ್ಯಾಮ್ಸನ್, ಫೈನಲ್, ಸೆಮಿಫೈನಲ್ ಹಾಗೂ ಸೂಪರ್-8ರ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ನೀಡಿದ ಅದ್ಭುತ ಇನಿಂಗ್ಸ್ಗಳ ಮೂಲಕ ಟಿ20 ವಿಶ್ವಕಪ್ ತಂಡದಲ್ಲಿಉ ಓಪನರ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಟೂರ್ನಿಯ ಆರಂಭದಲ್ಲಿ ಭಾರತದ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯದಿದ್ದರೂ, ತಂಡಕ್ಕೆ ಅಗತ್ಯವಾದ ಸಮಯದಲ್ಲಿ ಸ್ಯಾಮ್ಸನ್ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿದರು. ಇವರ ಜೊತೆ ಸಹ ಆಟಗಾರರಾದ ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಕೂಡ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.

ನೋಡಿರಿ

