CSK ಅದೃಷ್ಟ ಬದಲಿಸ್ತಾರಾ ಸಂಜು – ಧೋನಿ ಕೀಪಿಂಗ್ ಈ ವರ್ಷ ಅಂತ್ಯ?
ತಲಾ ಫ್ಯೂಚರ್ ಪ್ಲ್ಯಾನ್ ಹೇಗಿದೆ?

CSK ಅದೃಷ್ಟ ಬದಲಿಸ್ತಾರಾ ಸಂಜು – ಧೋನಿ ಕೀಪಿಂಗ್ ಈ ವರ್ಷ ಅಂತ್ಯ?ತಲಾ ಫ್ಯೂಚರ್ ಪ್ಲ್ಯಾನ್ ಹೇಗಿದೆ?

ಚೆನ್ನೈ ಸೂಪರ್ ಕಿಂಗ್ಸ್​ನಲ್ಲೀಗ ಯಂಗ್​ಸ್ಟರ್​ಗಳದ್ದೇ ಹವಾ. ಲಾಸ್ಟ್ ಸೀಸನ್​ ಡಲ್ ಆದ್ರೂ ಈ ಸೀಸನ್ ಧೂಳೆಬ್ಬಿಸ್ತೀವಿ ಅಂತಾ ಗ್ರ್ಯಾಂಡ್ ಆಗೇ ರೆಡಿಯಾಗ್ತಿದ್ದಾರೆ. ಯುವಪಡೆಗೆ ಎನ್ಕರೇಜ್​ ಮಾಡೋಕೆ ಮಾಜಿ ದಿಗ್ಗಜರೆಲ್ಲಾ ಒಗ್ಗೂಡಿ ಗೆಲುವಿನ ಪಾಠ ಹೇಳಿಕೊಟ್ಟಿದ್ದಾರೆ. ಌಂಡ್ ಸಿಎಸ್​ಕೆಯಲ್ಲಿ ಈ ಸಲ ಅತಿದೊಡ್ಡ ಬದಲಾವಣೆ ಅಂದ್ರೆ ಸಂಜು ಸ್ಯಾಮ್ಸನ್ ಎಂಟ್ರಿ ಕೊಟ್ಟಿರೋದು.

ಇದನ್ನೂ ಓದಿ : 15 ನಿಮಿಷದಲ್ಲೇ ಆರ್‌ಸಿಬಿ ಪಂದ್ಯದ ಟಿಕೆಟ್ ಸೋಲ್ಡ್ ಔಟ್ – ವರ್ಷದಿಂದ ಕಾಯುತ್ತಿದ್ದ ಬೆಂಗಳೂರಿನ ಫ್ಯಾನ್ಸ್ ಆಕ್ರೋಶ

ಐಪಿಎಲ್ ಇತಿಹಾಸದಲ್ಲಿ ಐದು ಸಲ ಟ್ರೋಫಿ ಗೆದ್ದಿರೋ ಒನ್ ಆಫ್ ದಿ ಮೋಸ್ಟ್ ಸಕ್ಸಸ್​ಫುಲ್ ಟೀಂ ಸಿಎಸ್​ಕೆ. ಬಟ್ ಲಾಸ್ಟ್ ಸೀಸನ್​ ಅಂದುಕೊಂಡಂತೆ ಆಗಿರಲಿಲ್ಲ. ಕೇವಲ ನಾಲ್ಕು ಪಂದ್ಯಗಳನ್ನಷ್ಟೇ ಗೆದ್ದು ಬಾಟಮ್ ಆಫ್ ದಿ ಟೇಬಲ್​ನಲ್ಲಿ ಟೂರ್ನಿ ಮುಗಿಸಿದ್ರು. ಬಟ್ ಈ ಸಲ ಹೊಸಬರ ಪಡೆಯನ್ನೇ ಕಟ್ಟಿಕೊಂಡು ಅಖಾಡಕ್ಕೆ ಇಳೀತಿದ್ದಾರೆ. ಐಕಾನಿಕ್ ಪ್ಲೇಯರ್ ಮಹೇಂದ್ರ ಸಿಂಗ್ ಧೋನಿಯೇ ಸಿಎಸ್​ಕೆಯ ಅತಿದೊಡ್ಡ ಶಕ್ತಿ. 19ನೇ ಸೀಸನ್​ನಲ್ಲಿ ಸೂಪರ್ ಸ್ಟ್ರಾಂಗ್ ಆಗಿ ಕಂ ಬ್ಯಾಕ್ ಮಾಡೋಕೆ ವೇದಿಕೆ ಸಿದ್ಧ ಮಾಡ್ತಿದ್ದಾರೆ. ಸಂಜು ಬಂದಿರೋದು ಸಿಎಸ್​ಕೆಯ ನಸೀಬು ಬದಲಿಸುತ್ತಾ ಅನ್ನೋ ಚರ್ಚೆಯೂ ಶುರುವಾಗಿದೆ.

ಚೆಪಾಕ್ ನಲ್ಲಿ ಒಗ್ಗೂಡಿದ ದಿಗ್ಗಜರು.. ಹೊಸಬರಿಗೆ ಪಾಠ!

ಐಪಿಎಲ್ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ ಅಭಿಮಾನಿಗಳಿಗಾಗಿ ಎಂ.ಎ. ಚಿದಂಬರಂ ಮೈದಾನದಲ್ಲಿ ಸ್ಪೆಷಲ್ ಈವೆಂಟ್ ಅರೇಂಜ್ ಮಾಡಿತ್ತು. ಈ ವೇಳೆ ಐದು ಟ್ರೋಫಿಗಳನ್ನ ಮೈದಾನದಲ್ಲಿರಿಸಿ ಫ್ಯಾನ್ಸ್​ ಕಿಕ್ ಏರಿಸಿದ್ರು. ಌಂಡ್ ಟ್ರೋಫಿಗಳನ್ನ ಹೊತ್ತು ತಂದಿದ್ದು ಸಿಎಸ್​ಕೆ ತಂಡದ ಮಾಜಿ ದಿಗ್ಗಜರು. 2010, 2011, 2018 ಮತ್ತು 2021 ಹಾಗೇ 2023ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಚೆನ್ನೈ ತಂಡವನ್ನು ಪ್ರತಿನಿಧಿಸಿದ್ದ ಮಾಜಿ ಆಟಗಾರರು ಟ್ರೋಫಿಗಳನ್ನ ಹೊತ್ತು ತಂದಿದ್ದು ವಿಶೇಷವಾಗಿತ್ತು. ‘ರೋರ್ ‘26’ ಹೆಸರಲ್ಲಿ ನಡೆದ ಸಮಾರಂಭದಲ್ಲಿ  ಮುತ್ತಯ್ಯ ಮುರಳೀಧರನ್, ಅಂಬಾಟಿ ರಾಯುಡು, ಶದಾಬ್ ಜಕಾತಿ, ಡ್ವೇನ್ ಬ್ರಾವೋ, ಹರ್ಭಜನ್ ಸಿಂಗ್ ಮತ್ತು ಎಸ್‌ ಬದ್ರಿನಾಥ್ ಸೇರಿದಂತೆ ಹಲವು ಮಾಜಿ ಆಟಗಾರರು ಸಾಥ್ ನೀಡಿದ್ರು. ಇದೇ ವೇಳೆ ತನ್ನ ಮೊದಲ ದಿಗ್ಗಜ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಮ್ಯಾಥ್ಯೂ ಹೇಡನ್​ಗೆ ಹಾಲ್ ಆಫ್ ಫೇಮ್‌ ಗೌರವ ನೀಡಿ ಸನ್ಮಾನಿಸಲಾಯ್ತು. ಮಾಹಿ ಅಂತೂ ಇವೆಂಟ್ ಉದ್ದಕ್ಕೂ ಫುಲ್ ಹ್ಯಾಪಿ ಮೂಡ್​ನಲ್ಲೇ ಇದ್ರು.

ಸಿಎಸ್ ಕೆ ಪಾಲಿಗೆ ಅದೃಷ್ಟ ತರುತ್ತಾರಾ ಸಂಜು ಸ್ಯಾಮ್ಸನ್?

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸೆಂಟ್ರ್ ಆಫ್ ಅಟ್ರಾಕ್ಷನ್ ಅಂದ್ರೆ ಈ ಸಂಜು ಸ್ಯಾಮ್ಸನ್. ಯಾಕಂದ್ರೆ 2026ರ ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಸಂಜು ಈಗ ಸಿಎಸ್​ಕೆ ಕ್ಯಾಂಪ್ ಸೇರಿದ್ದಾರೆ. ಭಾರತ ಕಪ್ ಗೆದ್ದ ಆ ಟೂರ್ನಿಯಲ್ಲಿ ಸಂಜು ‘ಸರಣಿ ಶ್ರೇಷ್ಠ’ ಪ್ರಶಸ್ತಿ ಪಡೆದಿದ್ದರು. ಕೊನೆಯ ಮೂರು ಪ್ರಮುಖ ಪಂದ್ಯಗಳಲ್ಲಿ ಸತತವಾಗಿ ಅರ್ಧಶತಕ ಬಾರಿಸಿ ಸಂಜು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಹೀಗಾಗಿ ಭಾರತ ಅಷ್ಟೇ ಅಲ್ಲದೆ ಇಡೀ ಜಗತ್ತೇ ಈಗ ಸಂಜು ಪರ್ಫಾಮೆನ್ಸ್ ಮೇಲೆ ಕಣ್ಣಿಟ್ಟಿದೆ. 11 ವರ್ಷಗಳ ಕಾಲ ರಾಜಸ್ಥಾನ ರಾಯಲ್ಸ್ ಜೊತೆಗಿನ ಸಂಬಂಧವನ್ನು ಮುಗಿಸಿಕೊಂಡು ಸಂಜು ಚೆನ್ನೈಗೆ ಬಂದಿದ್ದಾರೆ. ಮಾರ್ಚ್ 30ರಂದು ಗುವಾಹಟಿಯಲ್ಲಿ ಸಂಜು ತಮ್ಮ ಹಳೆಯ ತಂಡವಾದ ರಾಜಸ್ಥಾನ ರಾಯಲ್ಸ್ ವಿರುದ್ಧವೇ ಚೆನ್ನೈ ಜೆರ್ಸಿಯಲ್ಲಿ ಮೊದಲ ಪಂದ್ಯ ಆಡಲಿದ್ದಾರೆ. ಹೀಗಾಗಿ ಈ ಮ್ಯಾಚ್ ಕೂಡ ಹೈವೋಲ್ಟೇಜ್ ಪಂದ್ಯ ಆಗಲಿದೆ.

ಚೆನ್ನೈ ಪರ ವಿಕೆಟ್ ಕೀಪಿಂಗ್ ಮಾಡಲ್ವಾ ಚೇಟಾ?

ಇನ್ನು ಇದೆಲ್ಲದ್ರ ನಡುವೆ ಸಂಜು ಸ್ಯಾಮ್ಸನ್ ಸಿಎಸ್​ಕೆ ಪರ ವಿಕೆಟ್ ಕೀಪಿಂಗ್ ಮಾಡಲ್ವಾ ಅನ್ನೋ ಚರ್ಚೆ ಶುರುವಾಗಿದೆ. ಯಾಕಂದ್ರೆ ಯೆಲ್ಲೋ ಜೆರ್ಸಿಯಲ್ಲಿ ವಿಕೆಟ್ ಕೀಪಿಂಗ್ ಬದಲು ಔಟ್‌ಫೀಲ್ಡರ್ ಆಗಿ ಅಭ್ಯಾಸ ನಡೆಸುತ್ತಿದ್ದಾರೆ. 44 ವರ್ಷದ ಎಂ.ಎಸ್. ಧೋನಿಯೇ ಈ ಸಲವೂ ವಿಕೆಟ್ ಕೀಪಿಂಗ್ ಮುಂದುವರಿಸುವ ಸಾಧ್ಯತೆಗಳಿದ್ದು, ಸಂಜು ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಬಟ್ ಇಂದಲ್ಲ ನಾಳೆ ಧೋನಿ ಟೂರ್ನಿಗೆ ನಿವೃತ್ತಿ ಘೋಷಣೆ ಮಾಡಲೇಬೇಕು. ಹೀಗಾಗಿ ಸಂಜುರನ್ನ ತಂಡಕ್ಕೆ ಕರೆತಂದು ತಮ್ಮದೇ ಪರ್ಫಾಮೆನ್ಸ್ ನ ಟಚ್ ಕೊಟ್ಟು ಆ ನಂತ್ರ ಪವರ್ ಹಸ್ತಾಂತರ ಮಾಡೋ ಸಾಧ್ಯತೆಗಳಿವೆ. ಇದಕ್ಕಾಗಿಯೇ ಭವಿಷ್ಯದ ದೃಷ್ಟಿಯಿಂದ ಟೀಂ ಕಟ್ಟಿದ್ದಾರೆ.  ಸೀನಿಯರ್ಸ್ ಎಕ್ಸ್​ಪೀರಿಯನ್ಸ್ ಜೂನಿಯರ್ಸ್ ಪವರ್ ಸೇರಿ ಈ ಸಲ ಸಿಎಸ್​ಕೆ ಹಿಂದೆಂದಿಗಿಂತಲೂ ಡಿಫ್ರೆಂಟ್ ಆಗಿ ಕಾಣ್ತಿದೆ.

ಸಿಎಸ್‌ಕೆ ತಂಡ, 2026ರ ಐಪಿಎಲ್ ಅಭಿಯಾನವನ್ನು ಮಾರ್ಚ್ 30ರಂದು ಗುವಾಹಟಿಯ ಎಸಿಎ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರಂಭಿಸಲಿದೆ. ನಂತರ ಏಪ್ರಿಲ್ 3ರಂದು ಚೆಪಾಕ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ತವರು ಪಂದ್ಯವನ್ನು ಆಡಲಿದೆ. ತಂಡದಲ್ಲಿ ತುಂಬಾನೇ ಚೇಂಜಸ್ ಆಗಿರೋದ್ರಿಂದ ಹೊಸ ಸಿಎಸ್​ಕೆ ಟೀಂ ಹೇಗೆ ಪರ್ಫಾಮ್ ಮಾಡುತ್ತೆ ಅನ್ನೋ ಕುತೂಹಲವೂ ಇದೆ.

Shantha Kumari