ಅವಕಾಶಕ್ಕಾಗಿ ದ್ರಾವಿಡ್‌ಗೆ ಸುಳ್ಳು! – ಸಂಜು ಸ್ಯಾಮ್ಸನ್ ಮಾಡಿದ್ದೇನು? – 6 ಸಿಕ್ಸ್ ಹೊಡೆದಿದ್ರಾ?
ಐಪಿಎಲ್‌ನಲ್ಲಿ ಎಲ್ಲರಿಗಿಂತ ಮೊದಲು ಪ್ಲೇಆಫ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ರಾಜಸ್ಥಾನ ರಾಯಲ್ಸ್ ಅದ್ಯಾಕೋ ಮತ್ತೆ ಮಂಕಾಗಿದೆ.. ತಂಡದ ಕ್ಯಾಫ್ಟನ್ ಸಂಜು ಸ್ಯಾಮ್ಸನ್ ಮಿಂಚುತ್ತಿದ್ದರೂ ತಂಡಕ್ಕೆ ನಿರ್ಣಾಯಕ ಹಂತದಲ್ಲಿ ಗೆಲುವಿನ ಟ್ರ್ಯಾಕ್‌ನಲ್ಲೇ ಉಳಿಯಲು ಸಾಧ್ಯವಾಗಿಲ್ಲ.. ಅದರಲ್ಲೂ ಕಡೆಯ ಹಂತದಲ್ಲಿ ಎದುರಾಳಿಗಳ ಅಬ್ಬರ ಜಾಸ್ತಿಯಾಗುತ್ತಿದ್ದಂತೆ ರಾಜಸ್ಥಾನ ರಾಯಲ್ಸ್ ಮಂಕಾಗತೊಡಗಿದೆ.. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲದರಲ್ಲೂ ಉತ್ಸಾಹಿ ತಂಡವೆಂದರೆ ಅದು ರಾಜಸ್ಥಾನ ರಾಯಲ್ಸ್.. ಜೊತೆಗೆ ಕೂಲ್ ಕ್ಯಾಫ್ಟನ್ ಸಂಜು ಸ್ಯಾಮ್ಸನ್ ಕೂಡ ಯಾವುದೇ ಸಂದರ್ಭದಲ್ಲೂ ಧೃತಿಗೆಡದೆ ತಂಡವನ್ನು ಮುನ್ನಡೆಸುತ್ತಿದ್ದಾರೆ.. ವರ್ಲ್ಡ್‌ಕಪ್‌ಗೆ ಹೊಸ ಉತ್ಸಾಹದಿಂದಲೇ ತಯಾರಿ ನಡೆಸಿರುವ ಸಂಜು ಸ್ಯಾಮ್ಸನ್, ಪ್ಲೇಯಿಂಗ್ ಲೆವೆನ್‌ನಲ್ಲೂ ಸ್ಥಾನ ಗಿಟ್ಟಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.. ರಿಷಬ್ ಪಂತ್ ಅಥವಾ ಸಂಜು ಸ್ಯಾಮ್ಸನ್ ನಡುವಿನ ಆಯ್ಕೆಯ ವಿಚಾರ ಬಂದಾಗ ತಂಡದ ಮ್ಯಾನೇಜ್‌ಮೆಂಟ್ ಹೇಗೆ ಯೋಚನೆ ಮಾಡಬೇಕು ಎನ್ನುವುದೇ ಈಗ ಸವಾಲಾಗಿದೆ.. ಆದ್ರೆ ಇದೇ ಸಂಜು ಸ್ಯಾಮ್ಸನ್ ಐಪಿಎಲ್‌ಗೆ ಎಂಟ್ರಿ ಪಡೆದಿರುವ ರೀತಿಯೇ ಅಚ್ಚರಿಗೆ ಕಾರಣವಾಗಿದೆ.. ಒಂದು ಸುಳ್ಳಿನ ಮೂಲಕ ಆರ್‌ಆರ್ ತಂಡದಲ್ಲಿ ಎಂಟ್ರಿ ಕೊಟ್ಟ ಸಂಜು ಈಗ ಅದರ ಕ್ಯಾಫ್ಟನ್ ಆಗಿ, ತಂಡವನ್ನು ಟೈಟಲ್ ಗೆಲ್ಲುವ ಹಂತಕ್ಕೆ ಕೊಂಡೊಯ್ಯುತ್ತಿದ್ದಾರೆ.. ಯಾವ ರೀತಿಯ ಸುಳ್ಳನ್ನು ಹೇಳಲಾಗಿತ್ತು ಮತ್ತು ಅದ್ರಿಂದಾಗಿ ದ್ರಾವಿಡ್ ಮಾಡಿದ್ದೇನು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಆರ್‌ಸಿಬಿ ಪ್ಲೇ ಆಫ್‌ಗೆ ಲಗ್ಗೆ ಹಾಕಲು ಗೆಲುವಿನ ಅಂತರ ಎಷ್ಟಿರಬೇಕು..? – ಯಾವ ತಂಡಗಳು ಸೋಲಬೇಕು?
ಐಪಿಎಲ್‌ನಲ್ಲಿ ಬುಧವಾರ ಆರ್‌ಆರ್ ತಂಡ ಪಂಜಾಬ್ ವಿರುದ್ಧ ಆಡಲಿದೆ.. ಇದು ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಲು ರಾಜಸ್ಥಾನ ಟೀಂಗೆ ನಿರ್ಣಾಯಕ ಪಂದ್ಯ.. ಅಲ್ಲದೆ ಆಲ್‌ರೆಡಿ ಟೇಬಲ್ ಟಾಪರ್ ಆಗಿರುವ ಕೆಕೆಆರ್ ಜೊತೆಗೆ ಪ್ಲೇಆಫ್‌ನಲ್ಲಿ ಆಡಬೇಕು ಅಂದ್ರೆ ಆರ್‌ಆರ್ ಈ ಮ್ಯಾಚ್ ಗೆಲ್ಲಲೇಬೇಕು.. ಇಲ್ಲದೇ ಹೋದ್ರೆ ಎಸ್‌ಆರ್‌ಹೆಚ್, ಆರ್‌ಆರ್‌ಅನ್ನು ಹಿಂದಿಕ್ಕುವ ಸಾಧ್ಯತೆಯಿದೆ..
2024ರ ಐಪಿಎಲ್ ಸೀಸನ್‌ನಲ್ಲಿ ಟೈಟಲ್ ಗೆಲ್ಲುವ ಹಾಟ್ ಫೇವರೀಟ್ ತಂಡಗಳಲ್ಲಿ ಆರ್‌ಆರ್ ಕೂಡ ಒಂದು.. ಎಲ್ಲಾ ತಂಡಗಳಿಗಿಂತ ಮುಂಚಿತವಾಗಿಯೇ ಪ್ಲೇಆಫ್ ಗೆ ಎಂಟ್ರಿ ಕೊಟ್ಟಿರುವ ಆರ್‌ಆರ್, ಆ ಮೂಲಕ ದೊಡ್ಡ ಸ್ಟಾರ್‌ಗಳಿಗಿಂತ ತಂಡ ಹೆಚ್ಚು ಬ್ಯಾಲೆನ್ಸ್ ಆಗಿರುವುದೇ ಮುಖ್ಯ ಎಂದು ತೋರಿಸಿಕೊಟ್ಟಿದೆ.. ಯಾಕಂದ್ರೆ ಆರ್‌ಆರ್‌ನಲ್ಲಿ ಮುಂಬೈ, ಆರ್‌ಸಿಬಿ, ಚೆನ್ನೈ ತಂಡಗಳಲ್ಲಿ ಇರುವಂತಹ ಸ್ಟಾರ್‌ಗಳಿಲ್ಲ.. ಕ್ರಿಕೆಟ್‌ನ ದಿಗ್ಗಜರಿಲ್ಲ.. ಆದರೆ ಅವೆಲ್ಲವೂ ಇರುವ ತಂಡಗಳು ಎಲ್ಲಿವೆ.. ಯಾವುದೇ ಸೂಪರ್ ಸ್ಟಾರ್‌ಗಳಿಲ್ಲದ, ಆದರೆ ಮ್ಯಾಚ್ ಗೆಲ್ಲಿಸಬಲ್ಲ ತಾಕತ್ತಿರುವ ಆಟಗಾರರನ್ನು ಒಳಗೊಂಡಿರುವ ಆರ್‌ಆರ್ ಎಲ್ಲಿಗೆ ಬಂದು ನಿಂತಿದೆ ಎನ್ನುವುದರಲ್ಲೇ ಐಪಿಎಲ್‌ನ ಲಾಜಿಕ್ ಅಡಗಿದೆ..
ಇದು ಐಕಾನ್ ಪ್ಲೇಯರ್‌ಗಳ ಮೇಲೆ ಡಿಪೆಂಡ್ ಆಗಿರುವ ಟೂರ್ನಿಯಲ್ಲ.. ಈ ಬಾರಿಯ ಐಪಿಎಲ್‌ನಲ್ಲಿ ಎಲ್ಲರಿಗಿಂತ ಮುಂಚಿತವಾಗಿ ಪ್ಲೇಆಫ್‌ಗೆ ಎಂಟ್ರಿ ಕೊಟ್ಟು ಟೇಬಲ್ ಟಾಪರ್ ಆಗಿದ್ದ ಆರ್‌ಆರ್ ನಂತರ ಸತತ ಮೂರು ಸೋಲು ಕಂಡಿದೆ.. ಓಪನಿಂಗ್, ಮಿಡ್ಲ್ ಆರ್ಡರ್‌ನಲ್ಲಿ ಒಳ್ಳೆಯ ಬ್ಯಾಟ್ಸ್‌ಮನ್‌ಗಳು ಹೊಂದಿರುವ ಆರ್‌ಆರ್ ಅಷ್ಟೇ ಉತ್ತಮ ಬೌಲರ್‌ಗಳನ್ನೂ ಹೊಂದಿರುವ ತಂಡ.. ಅದರಲ್ಲೂ ಮೇಲಿನ ಕ್ರಮಾಂಕದಲ್ಲಿ ತಂಡದ ಬ್ಯಾಟಿಂಗ್ ಶಕ್ತಿ ಹೆಚ್ಚಿಸಲು ಸಂಜು ನಿರ್ಣಾಯಕ.. ಟೀಂ ಇಂಡಿಯಾದ ಗುರು ದ್ರಾವಿಡ್, ಈ ಸಂಜು ಸ್ಯಾಮ್ಸನ್ ಅವರನ್ನು ಐಪಿಎಲ್‌ನಲ್ಲಿ ಗುರುತಿಸಿದ ದಿನದಿಂದಲೂ ಸಂಜು ಮಿಂಚುತ್ತಲೇ ಸಾಗಿದ್ದಾರೆ.. ಇಷ್ಟಕ್ಕೂ ದ್ರಾವಿಡ್‌ಗೆ ಒಂದು ಭರ್ಜರಿ ಸುಳ್ಳು ಹೇಳಿ ಸಂಜು ಐಪಿಎಲ್‌ನಲ್ಲಿ ಅವಕಾಶ ಪಡೆದುಕೊಂಡಿದ್ದರು.. ಆ ಸುಳ್ಳಿನ ಅಸಲಿಯತ್ತನ್ನು ಖುದ್ದು ಸಂಜು ಸ್ಯಾಮ್ಸನ್ ಬಿಚ್ಚಿಟ್ಟಿದ್ದಾರೆ..
2009ರಲ್ಲಿ ಸಂಜು ಸ್ಯಾಮ್ಸನ್ ಕೆಕೆಆರ್ ಟೀಂಗೆ ಆಯ್ಕೆಯಾಗಿದ್ದರು. ಆಗಿನ್ನೂ ಈ ಯುವ ಆಟಗಾರರನಿಗೆ ಪ್ಲೇಯಿಂಗ್ ಲೆವೆನ್‌ನಲ್ಲಿ ಅವಕಾಶ ಸಿಕ್ಕಿರಲಿಲ್ಲ.. ಘಟಾನುಘಟಿ ಆಟಗಾರರ ನಡುವೆ ಸಂಜುಗೆ ಬೆಂಚ್ ಕಾಯಿಸೋದು ಬಿಟ್ರೆ ಬೇರೆ ಉದ್ಯೋಗ ಇರಲಿಲ್ಲ.. ಅಂತಾದ್ರಲ್ಲಿ 2012ರ ಐಪಿಎಲ್ ಸೀಸನ್ ವೇಳೆ ಅದೊಂದು ದಿನ ಹೊಟೇಲ್‌ನಲ್ಲಿ ಸಂಜುವನ್ನು ದ್ರಾವಿಡ್‌ಗೆ ಬೌಲರ್ ಶ್ರೀಶಾಂತ್ ಪರಿಚಯ ಮಾಡಿಸಿದ್ರಂತೆ.. ಕೇರಳದ ಈ ಹುಡುಗ ಲೋಕಲ್ ಮ್ಯಾಚ್ ಒಂದರಲ್ಲಿ ಆರು ಬಾಲ್‌ಗೆ ಆರು ಸಿಕ್ಸರ್ ಬಾರಿಸಿದ್ದಾನೆ.. ನಮ್ಮಲ್ಲೂ ಬೇಕಿದ್ದರೆ ಒಂದ್ಸಲ ಟ್ರಯಲ್ ನೋಡಬಹುದು ಎಂದು ಶ್ರೀಶಾಂತ್ ವರ್ಣಿಸಿದ್ದರಂತೆ.. ಶ್ರೀಶಾಂತ್ ಮಾತು ಕೇಳಿದ ಆಗಿನ ರಾಜಸ್ಥಾನ ರಾಯಲ್ಸ್‌ನ ಕ್ಯಾಫ್ಟನ್ ದ್ರಾವಿಡ್, ಸಂಜುಗೆ ಪ್ರಾಕ್ಟೀಸ್ ಸೆಷನ್‌ನಲ್ಲಿ ಭಾಗಿಯಾಗಲು ಅವಕಾಶ ಕೊಟ್ಟಿದ್ದರು.. ಪ್ರಾಕ್ಟೀಸ್‌ನಲ್ಲಿ ಅಷ್ಟೇನೂ ಚೆನ್ನಾಗಿ ಬ್ಯಾಟ್ ಬೀಸದಿದ್ದರೂ ಸಂಜು ಆಟದ ಶೈಲಿ ದ್ರಾವಿಡ್‌ಗೆ ಇಷ್ಟವಾಗಿತ್ತು.. ಈ ಹುಡುಗನಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡುವ ಪ್ರತಿಭೆಯಿದೆ ಎಂದು ಗುರುತಿಸಿದ ದ್ರಾವಿಡ್, ಮುಂದಿನ ಐಪಿಎಲ್ ಸೀಸನ್‌ನಲ್ಲಿ ಆರ್ ಆರ್ ತಂಡಕ್ಕೆ ಸೆಲೆಕ್ಟ್ ಮಾಡಿಕೊಂಡಿದ್ದರು.. ಹಾಗೆ 2013ರಲ್ಲಿ ಆರ್‌ಆರ್ ಸೇರಿದ ನಂತರ ಸಂಜು ಸ್ಯಾಮ್ಸನ್ ಆಟದ ಶೈಲಿಯೇ ಬದಲಾಗಿತ್ತು..
ಒಂದೆರಡು ಪಂದ್ಯಗಳಲ್ಲಿ ವಿಫಲರಾದ್ರೂ ಮೊದಲ ಸೀಸನ್‌ನಲ್ಲಿಯೇ ಭರವಸೆಯ ಆಟಗಾರ ಪ್ರಶಸ್ತಿ ಪಡೆಯುವಷ್ಟು ಚೆನ್ನಾಗಿ ಆಡಿದ್ದರು.. ಆದ್ರೆ ಇಲ್ಲೊಂದು ಮಜಾ ಏನ್ ಗೊತ್ತಾ.. ಸಂಜು ಸ್ಯಾಮ್ಸನ್, ಯಾವತ್ತೂ ಕೇರಳದ ಲೋಕಲ್ ಮ್ಯಾಚ್‌ನಲ್ಲಿ ಆರು ಎಸೆತಕ್ಕೆ ಆರು ಸಿಕ್ಸ್ ಹೊಡೆದೇ ಇರಲಿಲ್ಲವಂತೆ.. ಆರು ಸಿಕ್ಸ್ ಹೋಗ್ಲಿ ಒಂದು ಸಿಕ್ಸ್ ಕೂಡ ಹೊಡೆದಿರಲಿಲ್ಲ ಎಂದು ಸ್ವತಃ ಸಂಜು ಸ್ಯಾಮ್ಸನ್ ಅಂದು ಶ್ರೀಶಾಂತ್ ಹೇಳಿದ್ದ ಸುಳ್ಳನ್ನು ಬಿಚ್ಚಿಟ್ಟಿದ್ದಾರೆ.. ಆದ್ರೆ ಸಂಜುಗೆ ಅವಕಾಶ ಕೊಡಿಸಲು ಶ್ರೀಶಾಂತ್ ಸುಳ್ಳು ಹೇಳಿದರೂ, ಅದರಿಂದ ಲಾಭವಾಗಿದ್ದು ಮಾತ್ರ ಕ್ರಿಕೆಟ್‌ಗೆ.. ಒಬ್ಬ ಒಳ್ಳೆಯ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಈಗ ಭಾರತ ತಂಡಕ್ಕೂ ಸಿಕ್ಕಿದ್ದಾನೆ.. ಅಲ್ಲದೆ ರಾಹುಲ್ ದ್ರಾವಿಡ್ ಈಗ ಟೀಂ ಇಂಡಿಯಾದ ಕೋಚ್ ಆಗಿರುವುದರಿಂದ ಸಂಜು ಪ್ಲಸ್ ಮೈನಸ್‌ಗಳನ್ನು ಚೆನ್ನಾಗಿ ಅರಿತಿರುವ ದ್ರಾವಿಡ್, ವರ್ಲ್ಡ್ ಕಪ್‌ನಲ್ಲೂ ಸೂಕ್ತ ಅವಕಾಶ ನೀಡುವುದು ನಿಶ್ಚಿತ.. ಇದುವರೆಗೆ ಟೀಂ ಇಂಡಿಯಾದಲ್ಲಿ ಸಿಕ್ಕಿದ್ದ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿರುವ ಸಂಜು ಸ್ಯಾಮ್ಸನ್ ಈ ಬಾರಿಯಾದರೂ ಮಿಂಚಸಲೇಬೇಕಿದೆ.. ಹಾಗಿದ್ದರೆ ಮಾತ್ರ ತಂಡದಲ್ಲಿ ಖಾಯಂ ಸ್ಥಾನ ಪಡೆಯಬಹುದು..