IND Vs OMA ಪಂದ್ಯಕ್ಕಿಲ್ಲ ಬುಮ್ರಾ? – ಪ್ಲೇಯಿಂಗ್ 11 ದಿಢೀರ್ ಟ್ವಿಸ್ಟ್ ಏಕೆ?
ಸೂಪರ್-4 ಫೈಟ್ ಸ್ಟ್ರಾಟರ್ಜಿ ಹೇಗಿದೆ?

IND Vs OMA ಪಂದ್ಯಕ್ಕಿಲ್ಲ ಬುಮ್ರಾ? – ಪ್ಲೇಯಿಂಗ್ 11 ದಿಢೀರ್ ಟ್ವಿಸ್ಟ್ ಏಕೆ?ಸೂಪರ್-4 ಫೈಟ್ ಸ್ಟ್ರಾಟರ್ಜಿ ಹೇಗಿದೆ?

ಭಾರತ ಮತ್ತು ಒಮನ್ ತಂಡಗಳ ನಡುವಿನ ಲೀಗ್ ಹಂತದ ಕೊನೇ ಪಂದ್ಯ ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಗ್ರೂಪ್ ಎನಲ್ಲಿ ಯುಎಇ ಮತ್ತು ಪಾಕಿಸ್ತಾನವನ್ನ ಸೋಲಿಸಿ ಭಾರತ ನಂಬರ್ 1 ಪ್ಲೇಸ್​ನಲ್ಲಿದೆ. ಇನ್ನು ಒಮನ್ ತಂಡ ಆಡಿರುವಂತ ಎರಡಕ್ಕೆ ಎರಡೂ ಪಂದ್ಯಗಳನ್ನ ಸೋತು ಕೊನೇ ಸ್ಥಾನದಲ್ಲಿದೆ.  ಈ ಪಂದ್ಯ ಭಾರತದ ಪಾಲಿಗೆ ಜಸ್ಟ್ ಫಾರ್ಮಲಿಟೀಸ್​ಗೋಸ್ಕರ ಆಡೋದ್ರಿಂದ ಪ್ಲೇಯಿಂಗ್ 11ನಲ್ಲಿ ಕೆಲ ಬದಲಾವಣೆ ಮಾಡೋ ಸಾಧ್ಯತೆಗಳಿವೆ.

ಇದನ್ನೂ ಓದಿ : 3000 ವರ್ಷ ಹಳೆಯ ಚಿನ್ನದ ಬಳೆ ನಾಪತ್ತೆ! – ಬೆಲೆ ಕಟ್ಟಲಾಗದ ಈ ಬಳೆಯನ್ನು ಕದ್ದವರು ಯಾರು?

ಬುಮ್ರಾ, ಪಾಂಡ್ಯ ಮತ್ತು ಸಂಜುಗೆ ರೆಸ್ಟ್!?

ಇನ್ನು ಏಷ್ಯಾಕಪ್​ನಲ್ಲಿ ಎರಡು ಪಂದ್ಯಗಳಲ್ಲಿ ಭಾರತ ಪ್ಲೇಯಿಂಗ್ 11ನಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಆದ್ರೆ ಓಮನ್‌ ವಿರುದ್ಧದ ಪಂದ್ಯದಲ್ಲಿ ಭಾರತವು ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಈ ಮೂಲಕ ಸೂಪರ್‌ 4 ಪಂದ್ಯಗಳಿಗೂ ಮುನ್ನ ರೆಸ್ಟ್ ನೀಡಬಹುದು. ಬುಮ್ರಾ ಬದಲಿಗೆ ಅರ್ಶ್ದೀಪ್ ಸಿಂಗ್ ಪ್ಲೇಯಿಂಗ್‌ 11ಗೆ ಆಯ್ಕೆ ಆಗುವ ಸಾಧ್ಯತೆ ಇದೆ. ಹಾಗೇ  ಹಾರ್ದಿಕ್ ಪಾಂಡ್ಯ ಅವರಿಗೂ ಸಹ ವಿಶ್ರಾಂತಿ ನೀಡಬಹುದು. ಪಾಂಡ್ಯೆಗ ಇಲ್ಲಿಯವರೆಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿಲ್ಲ ಮತ್ತು ಎರಡೂ ಪಂದ್ಯಗಳನ್ನು ಎರಡನೇ ವೇಗಿಯಾಗಿ ಆಡಿದ್ದಾರೆ. ಭಾರತವು ಅವರಿಗೆ ವಿಶ್ರಾಂತಿ ನೀಡಿ ಹರ್ಷಿತ್ ರಾಣಾ ಅವರಿಗೆ ಟೂರ್ನಿಯ ಮೊದಲ ಪಂದ್ಯವನ್ನು ಆಡಲು ಅವಕಾಶ ನೀಡಬಹುದು. ಮತ್ತೊಂದೆಡೆ ಸಂಜು ಸ್ಯಾಮ್ಸನ್‌ಗೆ ಇಲ್ಲಿಯವರೆಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿಲ್ಲ. ಆದರೆ ಅವರು ಎರಡೂ ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಮಾಡಿದ್ದಾರೆ. ಅಲ್ಲದೇ ಆರಂಭಿಕರಾಗಿ ಆಡದ ಕಾರಣ ಸ್ಯಾಮ್ಸನ್ ಬ್ಯಾಟಿಂಗ್ ಮಾಡದ ಕಾರಣ ವಿಶ್ರಾಂತಿ ನೀಡಿ ಜಿತೇಶ್ ಶರ್ಮಾಗೆ ಅವಕಾಶ ನೀಡಬಹುದು.  ಹೀಗೆ ಮೂರು ಬದಲಾವಣೆಗಳನ್ನ ಬಿಟ್ರೆ ಉಳಿದವರೇ ಓಮನ್ ವಿರುದ್ಧ ಕಣಕ್ಕಿಳಿಯಬಹುದು. ಉಳಿಂದತೆ ಅಭಿಷೇಕ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಇನ್ನಿಂಗ್ಸ್ ಆರಂಭ ಮಾಡ್ತಾರೆ.

ಟಾಸ್ ಗೆದ್ರೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತಾ ಭಾರತ?

ಇನ್ನು ಒಮನ್ ವಿರುದ್ಧದ ಪಂದ್ಯದಲ್ಲಿ ಭಾರತ ಟಾಸ್ ಗೆದ್ದರೆ ಬಹುಶಃ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಬೋದು. ಯಾಕಂದ್ರೆ ಕಳೆದ ಎರಡೂ ಪಂದ್ಯಗಳಲ್ಲೂ ಚೇಸಿಂಗ್ ಮಾಡಿದ್ರಿಂದ ಎಲ್ಲಾ ಬ್ಯಾಟರ್​ಗಳಿಗೂ ಬ್ಯಾಟ್ ಬೀಸೋಕೆ ಅವಕಾಶ ಸಿಕ್ಕಿರಲಿಲ್ಲ. ಯುಎಇ ವಿರುದ್ಧದ ಮ್ಯಾಚಲ್ಲಿ 58 ರನ್​ಗಳ ಟಾರ್ಗೆಟ್​ನ ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್ ಮತ್ತು ಸೂರ್ಯನೇ ಮುಗಿಸಿದ್ರು. ಹಾಗೇ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕ್ ನೀಡಿದ್ದ  128 ರನ್​ಗಳ ಟಾರ್ಗೆಟ್​ನ ಟಾಪ್ 5 ಬ್ಯಾಟರ್​ಗಳು ಕಂಪ್ಲೀಟ್ ಮಾಡಿದ್ರು. ಹೀಗಾಗಿ ಮಿಡಲ್ ಆರ್ಡರ್ ಬ್ಯಾಟರ್​ಗಳಿಗೆ ಅವಕಾಶ ಸಿಕ್ಕಿಲ್ಲ. ಹಾಗೇನಾದ್ರೂ ಈ ಪಂದ್ಯದಲ್ಲೂ ಒಮನ್ ತಂಡ ಫಸ್ಟ್ ಬ್ಯಾಟಿಂಗ್ ಮಾಡಿದ್ರೆ ಪಂದ್ಯ ಬೇಗನೇ ಮುಗಿಯಲಿದೆ.

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವೀಕ್ ಓಮನ್!

ಇನ್ನು ಜತೀಂದರ್‌ ಸಿಂಗ್ ನಾಯಕತ್ವದ ಒಮನ್ ತಂಡ ಟೂರ್ನಿಯಲ್ಲಿ ಫ್ಲ್ಯಾಪ್ ಟೀಂ ಆಗಿದೆ. ಒಮನ್ ತಂಡವು ಆಡಿರುವ ಕಳೆದ ಎರಡೂ ಪಂದ್ಯಗಳಲ್ಲಿ ಒಂದ್ರಲ್ಲಿ 67 ಹಾಗೂ 130 ರನ್ ಗಳಿಸಿತ್ತು. ಅಲ್ದೇ ಒಮನ್ ತಂಡದ ಯಾವ ಬ್ಯಾಟರ್ ಕೂಡ ಟೂರ್ನಿಯಲ್ಲಿ 30 ರನ್‌ಗಿಂತ ಹೆಚ್ಚಿನ ವೈಯಕ್ತಿಕ ಸ್ಕೋರ್ ದಾಖಲಿಸಿಲ್ಲ. ಪಾಕ್ ವಿರುದ್ಧದ ಪಂದ್ಯದಲ್ಲಿ ಹಮ್ಮದ್ ಮಿರ್ಜಾ 27 ರನ್ ಮತ್ತು ಆರ್ಯನ್ ಬಿಷ್ ಅವರು ಯುಎಇ ವಿರುದ್ಧ 24 ರನ್ ಗಳಿಸಿದ್ದೇ ಹೈಯೆಸ್ಟ್ ಸ್ಕೋರ್. ಹೀಗಿರುವಾಗ ಭಾರತದ ಬೌಲರ್​ಗಳ ಮುಂದೆ ಪೆವಿಲಿಯನ್ ಪರೇಡ್ ನಡೆಸೋದು ಗ್ಯಾರಂಟಿ.

ಇನ್ನು ಪಂದ್ಯ ನಡೆಯಲಿರುವ ಶೇಖ್ ಜಾಯೆದ್ ಕ್ರೀಡಾಂಗಣದ ಬಗ್ಗೆ ನೋಡೋದಾದ್ರೆ ಈವರೆಗೆ ಈ ಮೈದಾನದಲ್ಲಿ 74 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲಾಗಿದೆ. ಈ ಪೈಕಿ ಮೊದಲು ಬ್ಯಾಟ್ ಮಾಡಿದ ತಂಡ 32 ಬಾರಿ ಗೆದ್ರೆ ಚೇಸ್ ಮಾಡಿದ ತಂಡವು 42 ಸಲ ವಿನ್ ಆಗಿದೆ. ಇನ್ನು ಭಾರತ ತಂಡ ಈ ಮೈದಾನದಲ್ಲಿ ಕೇವಲ ಒಂದು ಟಿ20ಐ ಪಂದ್ಯವನ್ನು ಆಡಿದೆ ಮತ್ತು ಅದರಲ್ಲಿ ಅವರು ಗೆದ್ದಿದ್ದಾರೆ. ಇವತ್ತಿನ ಪಂದ್ಯದಲ್ಲೂ ಗೆಲುವು ಸಾಧಿಸೋದು ಪಕ್ಕಾ.

Shantha Kumari