ಸರ್ಸೆ ಸೆರಗ ಸರ್ಸೆ ಸಾಂಗ್ ವಿವಾದ! – ಕ್ಷಮೆ ಕೇಳಿ 50 ಬಾಲಕಿಯರ ಶಿಕ್ಷಣಕ್ಕೆ ನೆರವು ಘೋಷಿಸಿದ ಸಂಜಯ್ ದತ್

ಸರ್ಸೆ ಸೆರಗ ಸರ್ಸೆ ಸಾಂಗ್ ವಿವಾದ! – ಕ್ಷಮೆ ಕೇಳಿ 50 ಬಾಲಕಿಯರ ಶಿಕ್ಷಣಕ್ಕೆ ನೆರವು ಘೋಷಿಸಿದ ಸಂಜಯ್ ದತ್

ಕೆಡಿ ಸಿನಿಮಾದ ಸರ್ಸೆ ಸೆರಗ ಸರ್ಸೆ ಹಾಡು ಭಾರಿ ವಿವಾದಕ್ಕೆ ಕಾರಣವಾಗಿದೆ. ಈಗಾಗಲೇ ಸಿನಿಮಾ ತಂಡದ ವಿರುದ್ದ ದೂರು ದಾಖಲಾಗಿದೆ. ಇದೀಗ ಈ ವಿವಾದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ  ಮುಂದೆ ನಟ ಸಂಜಯ್ ದತ್ ವಿಚಾರಣೆಗೆ ಹಾಜರಾಗಿದ್ದು, ಕ್ಷಮೆಯಾಚಿಸಿದ್ದಾರೆ. ಅಷ್ಟೇ ಅಲ್ಲ ಬುಡಕಟ್ಟು ಸಮುದಾಯದ 50 ಹುಡುಗಿಯರ ಶಿಕ್ಷಣಕ್ಕೆ ಧನ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಭೀಕರ ಅಗ್ನಿ ಅವಘಡ! – ಮೊದಲ ಮಹಡಿಯಿಂದ ಹಾರಿ ಜೀವ ಉಳಿಸಿಕೊಂಡ ಪಿಜಿ ಯುವತಿಯರು!

ಪ್ರೇಮ್ ನಿರ್ದೇಶನದ ಮತ್ತು ಧ್ರುವ ಸರ್ಜಾ ನಟಿಸಿರುವ ಕೆಡಿ: ದಿ ಡೆವಿಲ್ ಸಿನಿಮಾ ಏ.30ರಂದು ಬಿಡುಗಡೆಯಾಗಲಿದೆ. ಆದ್ರೆ ಈ ಸಿನಿಮಾ ರಿಲೀಸ್‌ ಆಗೋದಿಕ್ಕೂ ಮುನ್ನವೇ ಸರ್ಸೆ ಸೆರಗ ಸರ್ಸೆ ಹಾಡು ಇತ್ತೀಚೆಗೆ ಅದರ ಅಶ್ಲೀಲ ಸಾಹಿತ್ಯ ಮತ್ತು ನೃತ್ಯ ಸಂಯೋಜನೆಯಿಂದಾಗಿ ವಿವಾದಕ್ಕೆ ಗುರಿಯಾಗಿತ್ತು. ಈ ಬೆನ್ನಲ್ಲೇ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಹಾಡನ್ನು ನಿಷೇಧಿಸಿತ್ತು. ಬಳಿಕ ನಿರ್ಮಾಪಕರು ಯೂಟ್ಯೂಬ್‌ನಿಂದ ಹಾಡನ್ನು ತೆಗೆದುಹಾಕಿದ್ದರು. ಅಷ್ಟೇ ಅಲ್ಲ ಸಿನಿಮಾ ತಂಡಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಸಮನ್ಸ್ ಜಾರಿ ಮಾಡಿತ್ತು. ಇಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್‌ ದತ್‌ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಆಯೋಗದ ಮುಂದೆ ಕ್ಷಮೆಯಾಚಿಸಿ, ಬುಡಕಟ್ಟು ಸಮುದಾಯದ 50 ಹುಡುಗಿಯರ ಶಿಕ್ಷಣಕ್ಕೆ ಧನ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಮುಂಬರುವ ಶೈಕ್ಷಣಿಕ ವರ್ಷಕ್ಕೆ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಬುಡಕಟ್ಟು ಸಮುದಾಯಗಳ 50 ಹುಡುಗಿಯರ ಶಿಕ್ಷಣಕ್ಕೆ ಧನ ಸಹಾಯ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ನಟನೆಯ ಸಮಯದಲ್ಲಿ ಮಹಿಳೆಯರು, ಮಕ್ಕಳು ಅಥವಾ ಯಾವುದೇ ವ್ಯಕ್ತಿಯನ್ನು ಅಗೌರವಗೊಳಿಸದಂತೆ ನೋಡಿಕೊಳ್ಳುತ್ತೇನೆ ಎಂದಿದ್ದಾರೆ. ಇದೇ ವೇಳೆ ಹಾಡಿನ ಸಾಹಿತ್ಯ ರಚನೆಯಲ್ಲಿ ನನ್ನ ಪಾತ್ರವಿಲ್ಲ. ಅನುವಾದ, ಸಂಯೋಜನೆ ಬಗ್ಗೆ ನನಗೆ ಯಾವುದೇ ಪೂರ್ವ ಜ್ಞಾನವಿರಲಿಲ್ಲ ಎಂದು ತಿಳಿಸಿದ್ದಾರೆ.

Shwetha M