ಪ್ರೀತಿಯ ಹುಡುಕಾಟದಲ್ಲಿ ಮೂಗುತಿ ಸುಂದರಿ – ಸಾನಿಯಾ ಮಿರ್ಜಾ ಮತ್ತೆ LOVE ಲೈಫ್  

ಪ್ರೀತಿಯ ಹುಡುಕಾಟದಲ್ಲಿ ಮೂಗುತಿ ಸುಂದರಿ – ಸಾನಿಯಾ ಮಿರ್ಜಾ ಮತ್ತೆ LOVE ಲೈಫ್  

ಮೂಗುತಿ ಸುಂದರಿ, ಟೆನಿಸ್ ಅಂಗಳದಲ್ಲಿ ಜಾದು ಮಾಡಿದ ಮೋಡಿಗಾರ್ತಿ, ಕೋಟಿ ಕೋಟಿ ಭಾರತೀಯರ ಹೃದಯಗೆದ್ದ ತಾರೆಯೇ ಸಾನಿಯಾ ಮಿರ್ಜಾ. ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಈಗ ನನಗೂ ಒಬ್ಬ ಹುಡುಗ ಬೇಕು. ನಾನೂ ಕೂಡಾ ಪ್ರೀತಿಯಲ್ಲಿ ಬೀಳಬೇಕು ಅಂತಿದ್ದಾರೆ. ಈ ಅಚ್ಚರಿಯ ಹೇಳಿಕೆ ನೀಡಲು ಕಾರಣವೇನು?, ಸಾನಿಯಾ ಮಿರ್ಜಾ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮಂತ್ರಿ ಸ್ಥಾನ ಬೇಕೆಂದು ಒತ್ತಡ ಹಾಕಲ್ಲ! – ಹೀಗೆ ಯಾಕೆ ಹೇಳಿದ್ರು ಹೆಚ್‌ಡಿ ಕುಮಾರಸ್ವಾಮಿ

ಇಷ್ಟು ದಿನಗಳವರೆಗೆ ಸಾನಿಯಾ ಮಿರ್ಜಾ ಸಂಗಾತಿಯಿಲ್ಲದೇ ಒಂಟಿಯಾಗಿದ್ರು. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನಾ ಪಡೆದ ಮೇಲೆ ಮಗನ ಜೊತೆ ಜೀವನ ಕಳೆಯುತ್ತಿದ್ರು. ತನ್ನ ಜೀವನದಲ್ಲಾದ ಕಹಿ ಘಟನೆ ಬಗ್ಗೆ ಮತ್ತು ಮುಂದೆ ಭವಿಷ್ಯದಲ್ಲಿ ಹುಡುಕಬೇಕಾದ ಪ್ರೀತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ ಸಾನಿಯಾ ಮಿರ್ಜಾ. ಈ ವರ್ಷದ ಜನವರಿಯಲ್ಲಿ ಅಚ್ಚರಿಯ ರೀತಿಯಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದೂರ ದೂರ ಆಗಿದ್ದರು. ತಾನು ಮೆಚ್ಚಿ ಮದುವೆಯಾಗಿದ್ದ ಕ್ರಿಕೆಟರ್ ಶೋಯೆಬ್ ಮಲಿಕ್ ತನ್ನ ಪ್ರೀತಿಗೆ ಯೋಗ್ಯನಲ್ಲ ಎಂಬ ಬಗ್ಗೆ ಒಮ್ಮೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದ್ರು ಮೂಗುತಿ ಸುಂದರಿ. ಆದ್ರೆ, ಫ್ಯಾನ್ಸ್ ಅಂದುಕೊಂಡಿದ್ದು ಗಂಡ ಹೆಂಡತಿ ಮಧ್ಯೆ ಏನೋ ಜಗಳ ಬಂದಿರುತ್ತೆ. ನಾಲ್ಕು ದಿನ ಸರಿ ಹೋಗುತ್ತೆ ಅಂತಾ. ಆದ್ರೆ, ಒಮ್ಮೆಲೆ ಶೋಯಿಬ್ ಮಲಿಕ್ ಮೂಗುತಿ ಸುಂದರಿಗೆ ತಲಾಖ್ ಹೇಳಿದಾಗಲೇ ಫ್ಯಾನ್ಸ್‌ಗೂ ಶಾಕ್ ಆಗಿದ್ದು.

ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ 2010ರಲ್ಲಿ ಹೈದರಾಬಾದ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈ ಜೋಡಿ 8 ವರ್ಷಗಳ ಬಳಿಕ 2018ರಲ್ಲಿ ಇಜಾನ್ ಮಿರ್ಜಾ ಮಲಿಕ್ ಎನ್ನುವ ಗಂಡು ಮಗುವನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಇಬ್ಬರ ನಡುವೆ ಏನೇನೂ ಸರಿಯಿಲ್ಲ ಎಂಬ ಬಗ್ಗೆ ಗುಸು ಗುಸು ಕೇಳಿಬರುತ್ತಿತ್ತು. ಕೊನೆಗೂ ಈ ವರ್ಷ ಆ ವಿಚಾರ ಸತ್ಯವಾಗಿತ್ತು. ಸಾನಿಯಾ ಮಿರ್ಜಾ ಜೊತೆ ದಾಂಪತ್ಯ ಮುರಿದುಕೊಂಡ ಬೆನ್ನಲ್ಲೇ ಶೋಯೆಬ್ ಮಲಿಕ್, ಪಾಕಿಸ್ತಾನ ಮೂಲದ ಮಾಡೆಲ್ ಸನಾ ಜಾವೆದ್ ಅವರನ್ನು ಮದುವೆಯಾಗಿದ್ದರು. ಮದುವೆಯಾದ್ರೂ ಮಾಡ್ಕೋ ಪ್ರೀತಿಯಾದ್ರೂ ಮಾಡ್ಕೋ ಅಂತಾ ಸಾನಿಯಾ ಫ್ಯಾನ್ಸ್ ಬೈದುಕೊಂಡಿರುವಾಗ್ಲೇ ಶೋಯೆಬ್ ಮಲಿಕ್ ತನ್ನ ಹನಿಮೂನ್ ಫೋಟೋ ಹಾಕಿ ಭಾರತೀಯ ಫ್ಯಾನ್ಸ್ ಹೊಟ್ಟೆಯುರಿಸಿದ್ದ. ಆಗ್ಲೇ ಫ್ಯಾನ್ಸ್ ಸಾನಿಯಾ ಮಿರ್ಜಾಗೆ ನೀವು ಯಾವುದಾದರೂ ಸೆಲೆಬ್ರಿಟಿ ಜೊತೆ ಎಂಗೇಜ್ ಆಗ್ಬೇಕು ಅಂತಾ ಕೇಳಿಕೊಳ್ತಿದ್ರು. ಒಂಟಿಯಾಗಿ ಮಗನ ಜೊತೆ ಸಾನಿಯಾ ಮಿರ್ಜಾ ಇದ್ದಾಗಲೆಲ್ಲಾ ಫ್ಯಾನ್ಸ್ ಬೇಜಾರು ಮಾಡಿಕೊಳ್ತಿದ್ರು.

ಟೆನಿಸ್ ಲೋಕದಲ್ಲಿ ಸಾಧನೆ ಮಾಡಿದ ಭಾರತೀಯ ತಾರೆಯನ್ನು ತೊರೆದ ಶೋಯೆಬ್ ಮಲ್ಲಿಕ್ ಗೆ ಹಿಡಿಶಾಪ ಹಾಕ್ತಿದ್ರು. ಕೊನೆಗೂ ಫ್ಯಾನ್ಸ್ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. “ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ”ದಲ್ಲಿ ಸಾನಿಯಾ ಮಿರ್ಜಾ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಕಾರ್ಯಕ್ರಮದ ಹೋಸ್ಟ್ ಕಪಿಲ್ ಶರ್ಮಾ, ಶಾರುಖ್ ಖಾನ್ ನಿಮ್ಮ ಜೀವನಾಧಾರಿತ ಸಿನಿಮಾದಲ್ಲಿ ಹೀರೋ ಆಗಲು ರೆಡಿ ಇದ್ದಾರೆ ಎಂದು ನೆನಪಿಸಿದ್ದಾರೆ. ಆಗ ಸಾನಿಯಾ ಮಿರ್ಜಾ, “ನಾನು ಇನ್ನಷ್ಟೇ ಪ್ರೀತಿ ಹುಡುಕಬೇಕು’ ಎಂದು ಹೇಳಿದ್ದಾರೆ. ಈ ಮಾತು ಕೇಳಿದ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಸಾನಿಯಾ ಮಿರ್ಜಾ ಹೃದಯದಲ್ಲಿ ಪ್ರೀತಿಯ ಪಾರಿವಾಳ ಹಾರಾಡಲು ಶುರುಮಾಡಿದೆ ಅಂತಿದ್ದಾರೆ. ಮೂಗುತಿ ಸುಂದರಿ ಮತ್ತೊಂದು ಮದುವೆಯಾಗುವುದು ಗ್ಯಾರಂಟಿ ಎಂಬ ಮಾತು ಕೇಳಿಬರ್ತಿದೆ.

ಇನ್ನು 2016ರಲ್ಲಿ ಬಾಲಿವುಡ್ ನಟ ಶಾರುಖ್ ಖಾನ್, ಸಾನಿಯಾ ಮಿರ್ಜಾ ಬಯೋಪಿಕ್ ‘ಏಸ್ ಅಗೇನ್ಸ್ಟ್ ಆಡ್ಸ್’ ಟೈಟಲ್ ಬಿಡುಗಡೆ ಮಾಡಿದ್ದರು. ಆ ಬಳಿಕ ಮಾತನಾಡಿದ್ದ ಶಾರುಖ್ ಖಾನ್, “ಯಾವಾಗ ಸಾನಿಯಾ ಮಿರ್ಜಾ ಅವರ ಕುರಿತಾದ ಸಿನಿಮಾ ಆಗಲಿದೆಯೋ, ನನ್ನ ಪ್ರಕಾರ ನಾನಂತೂ ಅವರಿಂದ ಸ್ಪೂರ್ತಿಗೊಂಡಿದ್ದೇನೆ. ಅವರ ಈ ಜರ್ನಿ ಅದ್ಭುತವಾದದ್ದು. ನನಗೆ ಗೊತ್ತಿಲ್ಲ, ಒಂದು ವೇಳೆ ಒಪ್ಪಿದರೆ, ಅವರ ಲವ್ ಸ್ಟೋರಿಯಲ್ಲಿ ನಟಿಸಬೇಕು ಎನ್ನುವ ಆಸಕ್ತಿಯಿಂದೆ. ಆದರೆ ಖಂಡಿತವಾಗಿಯೂ ಅವರ ಸಿನಿಮಾಗೆ ನಾನು ಪ್ರೊಡ್ಯೂಸ್ ಮಾಡುತ್ತೇನೆ” ಎಂದು ಹೇಳಿದ್ದರು. ಅದೇನೇ ಇರಲಿ, ಸಾನಿಯಾ ಮಿರ್ಜಾ ಪ್ರೀತಿಯ ಹುಡುಕಾಟದಲ್ಲಿದ್ದಾರೆ. ಅವರ ಹೃದಯ ಪ್ರೀತಿಗಾಗಿ ಹಪಹಪಿಸುತ್ತಿದೆ.

Shwetha M