ಬಿಗ್‌ಬಾಸ್ ಮನೆಯಲ್ಲಿ ಕಾರ್ತಿಕ್ ಮೇಲೆ ಸಂಗೀತಾ ಪ್ರಭಾವ – ಟಾಸ್ಕ್‌ನಲ್ಲಿ ಕಾರ್ತಿಕ್‌ಗೆ ಸ್ನೇಹವೇ ಉರುಳು?

ಬಿಗ್‌ಬಾಸ್ ಮನೆಯಲ್ಲಿ ಕಾರ್ತಿಕ್ ಮೇಲೆ ಸಂಗೀತಾ ಪ್ರಭಾವ – ಟಾಸ್ಕ್‌ನಲ್ಲಿ ಕಾರ್ತಿಕ್‌ಗೆ ಸ್ನೇಹವೇ ಉರುಳು?

ಬಿಗ್‌ಬಾಸ್ ಮನೆಯಲ್ಲಿ ಕಾರ್ತಿಕ್ ಮತ್ತು ಸಂಗೀತಾ ಶೃಂಗೇರಿ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ಇದೆ ಎಂಬ ಗುಸು ಗುಸು ಶುರುವಾಗಿದೆ. ಇದೀಗ ಟಾಸ್ಕ್ ವಿಚಾರ ಬಂದಾಗಲು ಕಾರ್ತಿಕ್ ಪದೇ ಪದೇ ಸಂಗೀತಾ ಮಾತು ಕೇಳಿಕೊಂಡೇ ಆಟವಾಡುತ್ತಿರುವುದು ಸ್ವತಃ ಕಾರ್ತಿಕ್​ಗೆ ಹಿನ್ನಡೆ ಆಗುತ್ತಿದೆ ಎಂಬ ಮಾತು ಕೇಳಿಬಂದಿದೆ.

ಇದನ್ನೂ ಓದಿ:ಟೈಟಲ್ ವಿವಾದದ ನಡುವೆಯೂ ಲಿಯೋ ಸಿನಿಮಾ ರಿಲೀಸ್ – ದಳಪತಿ ವಿಜಯ್ ಸಿನಿಮಾಗೆ ಡಬಲ್ ರೆಸ್ಪಾನ್ಸ್

ಬಿಗ್​ಬಾಸ್ ಆರಂಭವಾದಾಗಿನಿಂದಲೂ ಸಂಗೀತಾ ಹಾಗೂ ಕಾರ್ತಿಕ್ ಪರಸ್ಪರ ಹತ್ತಿರವಾಗುತ್ತಿದ್ದಾರೆ. ವಿನಯ್ ನನ್ನನ್ನು ಬೇಕೆಂದೇ ಟಾರ್ಗೆಟ್ ಮಾಡುತ್ತಿದ್ದಾನೆಂದು ಸಂಗೀತಾ ಪದೇ ಪದೇ ಕಾರ್ತಿಕ್ ಬಳಿ ದೂರು ಹೇಳಿದ್ದಾರೆ. ಕಾರ್ತಿಕ್ ಸಹ ಈ ವಿಷಯವಾಗಿ ವಿನಯ್ ಬಳಿ ಮಾತನಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಬಹುತೇಕ ವಿಫಲವಾಗಿದ್ದಾರೆ. ಇವುಗಳ ನಡುವೆ ವಿನಯ್, ಸೂಚ್ಯವಾಗಿ ಕಾರ್ತಿಕ್​ಗೆ ಬುದ್ಧಿವಾದ ಹೇಳಿದ್ದು, ಇಲ್ಲಿ ಆಟ ಆಡಲು ಬಂದಿದ್ದೀಯ? ಬೇರೆ ಏನೋ ಆಗಲು ಅಥವಾ ಮಾಡಲು ಅಲ್ಲ. ನೀನು ಹೀಗಿರಲಿಲ್ಲ ಎಂಬಿತ್ಯಾದಿಯಾಗಿ ಹೇಳಿದ್ದು, ಸೂಚ್ಯವಾಗಿ ನೀನು ಸಂಗೀತಾ ಪ್ರಭಾವದಲ್ಲಿದ್ದೀಯ, ಸಂಗೀತಾರನ್ನು ಮೆಚ್ಚಿಸಲು ಹೆಚ್ಚು ಗಮನ ವಹಿಸುತ್ತಿದ್ದೀಯ ಎಂದಿದ್ದಾರೆ. ಇನ್ನು ತುಕಾಲಿ ಸಂತೋಶ್ ಅಂತೂ ಹಳ್ಳಿಕಾರ್ ಸಂತೋಶ್ ಬಳಿ ನಿಮ್ಮ ತಂಡದ ಹೆಸರು ಅವಳ ನೆರಳು ಎಂದಾಗಬೇಕು. ಸಂಗೀತಾ ಹೇಳಿದಂತೆ ನಿಮ್ಮ ಕ್ಯಾಪ್ಟನ್ ಕಾರ್ತಿಕ್ ಕೇಳುತ್ತಾನೆ ಎಂದಿದ್ದಾರೆ. ಅಲ್ಲದೆ, ಕಾರ್ತಿಕ್ ಸಹ ಬಹುತೇಕ ನಿರ್ಣಯವನ್ನು ಸಂಗೀತಾರನ್ನು ಕೇಳಿಯೇ, ಸಂಗೀತಾರ ಮಾತಿನಂತೆಯೇ ತೆಗೆದುಕೊಂಡಿದ್ದಾರೆ. ಕಾರ್ತಿಕ್ ಹೀಗೆ ಪದೇ ಪದೇ ಸಂಗೀತಾ ಅವರ ನೆರಳಲ್ಲೇ ಇದ್ದರೆ ಇದು ರಣಶಕ್ತಿ ತಂಡಕ್ಕೂ ನೆಗೆಟಿವ್ ಆಗಬಹುದು ಎಂಬುದು ಉಳಿದ ಸದಸ್ಯರ ಆತಂಕ.

 

Sulekha