ಬಿಗ್‌ಬಾಸ್ ಫಿನಾಲೆ ಟಿಕೆಟ್ ಪಡೆದ ಸಂಗೀತಾ – ಮುಂದಿನ ವಾರವೂ ಕ್ಯಾಪ್ಟನ್ ಆಗಿ ಆಯ್ಕೆಯಾದ ರೆಬೆಲ್ ರಾಣಿ

ಬಿಗ್‌ಬಾಸ್ ಫಿನಾಲೆ ಟಿಕೆಟ್ ಪಡೆದ ಸಂಗೀತಾ – ಮುಂದಿನ ವಾರವೂ ಕ್ಯಾಪ್ಟನ್ ಆಗಿ ಆಯ್ಕೆಯಾದ ರೆಬೆಲ್ ರಾಣಿ

ಬಿಗ್​ಬಾಸ್ ಫಿನಾಲೆಗೆ ಎರಡೇ ವಾರ ಬಾಕಿ ಉಳಿದಿದ್ದು ಇದೀಗ ಫಿನಾಲೆ ಟಿಕೆಟ್ ಸಂಗೀತಾ ಶೃಂಗೇರಿ ಪಾಲಾಗಿದೆ.  ಈ ವಾರ ‘ಟಿಕೆಟ್ ಟು ಫಿನಾಲೆ’ ಟಾಸ್ಕ್ ಆಡಿಸಲಾಗಿತ್ತು. ಫಿನಾಲೆ ಟಿಕೆಟ್ ಡ್ರೋನ್ ಪ್ರತಾಪ್ ಗೆ ಅನ್ನೋ ರೀತಿ ಪಾಯಿಂಟ್ಸ್ ಇತ್ತು. ಈ ಆಟಕ್ಕೆ ಬಿಗ್ ಬಾಸ್ ಟ್ವಿಸ್ಟ್ ನೀಡಿದ್ದು, ಸಂಗೀತಾ ಫಿನಾಲೆ ಟಿಕೆಟ್ ಪಡೆದು ಟಾಪ್ 5ನಲ್ಲಿ ಇರುವ ಮೊದಲ ಸ್ಪರ್ಧಿಯಾಗಿದ್ದಾರೆ.

ಇದನ್ನೂ ಓದಿ: ಕಾರ್ತಿಕ್ ಮತ್ತು ನಮ್ರತಾ ಅತಿ ಆಪ್ತತೆಗೆ ಸಿಕ್ತು ಜೋಕರ್ ಪಟ್ಟ – ಹೌದು.. ನಾನು ಫ್ಲರ್ಟ್ ಮಾಡೋದು ಎಂದು ಸತ್ಯ ಒಪ್ಪಿಕೊಂಡ ಕಾರ್ತಿಕ್

ಬಿಗ್​ಬಾಸ್ ಫೈನಲ್‌ಗೆ ಎಂಟ್ರಿಯಾಗುವುದರ ಜೊತೆಗೆ ರೆಬೆಲ್ ರಾಣಿ ಸಂಗೀತಾ ಶೃಂಗೇರಿ ದೊಡ್ಮನೆಯಲ್ಲಿ ದಾಖಲೆ ಬರೆದಿದ್ದಾರೆ. ಈ ವಾರ ಕ್ಯಾಪ್ಟನ್ ಆಗಿರುವ ಸಂಗೀತಾ ಮುಂದಿನ ವಾರ ಕೂಡಾ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಸ್ಟ್ರಾಂಗ್ ಸ್ಪರ್ಧಿ ನಾನೇ ಎಂದು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ.

8 ರೌಂಡ್ಸ್ ಬಳಿಕ ಟಾಪ್ ಮೂರರಲ್ಲಿ ಇರುವ ವ್ಯಕ್ತಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಇದು ಕ್ಯಾಪ್ಟನ್ಸಿ ಟಾಸ್ಕ್ ಹಾಗೂ ಟಿಕೆಟ್​ ಟು ಫಿನಾಲೆ ಎರಡೂ ಆಗಿತ್ತು. ಇದನ್ನು ಸಂಗೀತಾ ಗೆದ್ದು ಕ್ಯಾಪ್ಟನ್ ಪಟ್ಟ ತನ್ನದಾಗಿಸಿಕೊಂಡಿದ್ದಾರೆ.

ಇನ್ನು ಟಾಸ್ಕ್ ವಿಚಾರದಲ್ಲಿ ಡ್ರೋನ್ ಪ್ರತಾಪ್ ನಿಲುವು ನೋಡಿ ದೀದಿ ಸಂಗೀತಾ ಮನಸಿಗೆ ತುಂಬಾ ಬೇಜಾರು ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಫಿನಾಲೆ ಟಿಕೆಟ್ ಗಾಗಿ ಆಡುತ್ತಿರುವ ಟಾಸ್ಕ್‌ನಲ್ಲಿ ಪ್ರತಾಪ್​ ಅವರದ್ದು 280 ಅಂಕ ಹಾಗೂ ಸಂಗೀತಾ ಅವರಿಗೆ 260 ಅಂಕ ಇತ್ತು. ಈ ಸಂದರ್ಭದಲ್ಲಿ ಅವರು ಸಂಗೀತಾನ ಆಟದಿಂದ ಹೊರಗೆ ಇಟ್ಟಿದ್ದಾರೆ. ಇದು ಕೊನೆಯ ಟಾಸ್ಕ್​. ಇದರಲ್ಲಿ ಪ್ರತಾಪ್ ಗೆದ್ದಿದ್ದಾರೆ ಎನ್ನಲಾಗಿದೆ. ಸಂಗೀತಾನ ಹೊರಗಿಟ್ಟ ನಿರ್ಧಾರದಿಂದ ಪ್ರತಾಪ್ ಹಾಗೂ ಸಂಗೀತಾ ಮಧ್ಯೆ ಇರುವ ಗೆಳೆತನ ಕೊನೆಯಾಗುವ ಸೂಚನೆ ಸಿಕ್ಕಿದೆ. ಅಷ್ಟೇ ಅಲ್ಲ, ಸಂಗೀತಾ ಕೂಡಾ ಇಲ್ಲಿಗೆ ಎಲ್ಲಾ ಮುಗಿಯಿತು ಎಂಬಂತೆ ಮಾತಾಡಿದ್ದಾರೆ. ಪ್ರತಾಪ್ ತನ್ನನ್ನು ಗೇಮ್‌ನಿಂದ ಹೊರಗಿಡುವ ಮೊದಲು ಸಂಗೀತಾ, ನಮ್ರತಾ ಬಳಿ ಪ್ರತಾಪ್ ನನ್ನನ್ನು ಯಾವುದೇ ಕಾರಣಕ್ಕೆ ಹೊರಗಿಡಲ್ಲ ಎಂದಿದ್ದರು. ಆದರೆ, ಸಂಗೀತಾ ನಂಬಿಕೆ ಸುಳ್ಳಾಗಿದೆ. ತನ್ನನ್ನು ಸದಾ ಕಾಲ ಬೆಂಬಲಿಸುವ ದೀದಿಯನ್ನೇ ಪ್ರತಾಪ್ ಹೊರಗಿಟ್ಟಿದ್ದಾರೆ.

 

Sulekha