ಸಂಗೀತಾ ಮತ್ತು ಸ್ನೇಹಿತ್ ಮದುವೆ ಫಿಕ್ಸ್ ?- ಕಣ್ಣೀರಲ್ಲಿ ಕಾರ್ತಿಕ್, ವಿನಯ್ ಗೌಡ ಮನಸಾರೆ ನಕ್ಕಿದ್ದೇಕೆ?
ಬಿಗ್ಬಾಸ್ ಕನ್ನಡ ಸೀಸನ್ 10ರಲ್ಲಿ ಕಾರ್ತಿಕ್ ಹಾಗೂ ಸಂಗೀತಾ ಪರಸ್ಪರ ಆತ್ಮೀಯರಾಗಿದ್ದಾರೆ. ಕಾರ್ತಿಕ್‌ಗೆ ಸಂಗೀತಾ ಮೇಲೆ ಏನೇನೋ ಫೀಲಿಂಗ್ಸ್ ಶುರುವಾಗಿದೆ. ಕಾರ್ತಿಕ್ ಕಣ್ಣಲ್ಲಿ ಸಂಗೀತಾ ಮೇಲೆ ಪ್ರೀತಿಯ ಮಿಂಚು ಕಾಣಿಸುತ್ತಿದೆ. ಆದರೆ, ಸಂಗೀತಾ ಮಾತ್ರ ನಾನು ನೀನು ಜಸ್ಟ್ ಫ್ರೆಂಡ್ಸ್ ಅಷ್ಟೇ ಅಂತಿದ್ದಾರೆ. ಹೀಗಿರುವಾಗಲೇ ಕಾರ್ತಿಕ್‌ಗೆ ಮತ್ತೊಂದು ಶಾಕ್ ಎದುರಾಗಿದೆ.
ಇದನ್ನೂ ಓದಿ: ಸಂಗೀತಾ ಮತ್ತು ಕಾರ್ತಿಕ್ ಜೋಡಿಯಾಗುವ ಸಮಯ – ನೈಸ್ ಆಗಿ ಮಸಾಜ್ ಮಾಡ್ತಾ ಮತ್ತಷ್ಟು ಹತ್ತಿರವಾದ ಸ್ನೇಹಿತರು..!
ಸಂಗೀತಾ ನಕ್ಕರೂ ಖುಷಿ. ಸಂಗೀತಾ ಜೊತೆಯಲ್ಲೇ ಇದ್ದರೇ ಇನ್ನೂ ಹ್ಯಾಪಿ. ಸಂಗೀತಾ ಅಂದರೆ ಕಾರ್ತಿಕ್ ಮನಸಲ್ಲಿ ಪ್ರೀತಿಯ ಸರಿಗಮ.. ಸಂಗೀತಾ ಎಂದರೆ ಸ್ನೇಹವೂ ಹೌದು. ಸಂಗೀತಾ ಎಂದರೆ ಪ್ರೀತಿಯೂ ಹೌದು. ಕ್ಯಾಮರಾ ಮುಂದೆ ಕೂಡಾ ಕಾರ್ತಿಕ್ ಒಮ್ಮೊಮ್ಮೆ ಹೇಳುತ್ತಲೇ ಇರುತ್ತಾರೆ. ಬಿಗ್‌ಬಾಸ್ ಹೇಗಿದೆ ನಮ್ ಜೋಡಿ ಅಂತಾ. ಇನ್ನು ಗಂಡ ಹೆಂಡ್ತಿ ಟಾಸ್ಕ್ ಬಂದರೆ ಅದರಲ್ಲಿ ಕಾರ್ತಿಕ್ ಗಂಡನಾಗಿ ಸಂಗೀತಾ ಹೆಂಡ್ತಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಈ ಬಾರಿ ಕಾರ್ತಿಕ್ ಸಂಗೀತಾ ಜೋಡಿ ನಡುವೆ ಲವ್ ಪಕ್ಕಾ ಎಂದು ವೀಕ್ಷಕರು ಕೂಡಾ ಹೇಳುತ್ತಿದ್ದಾರೆ. ಹೀಗಿರುವಾಗಲೇ ಕಾರ್ತಿಕ್ ಹಾರ್ಟ್ ಬ್ರೇಕ್ ಆಗುವ ಹಾಗೆ ಸಂಗೀತಾ ಒಂದು ವಿಚಾರವನ್ನು ಗುಟ್ಟಾಗಿ ವಿನಯ್ ಬಳಿ ಹೇಳಿಕೊಂಡಿದ್ದಾರೆ.
ಹಿಂದೆ ಹೋದರೂ, ಮುಂದೆ ಬಂದರೂ ಎಲ್ಲಿ ನೋಡಿದರೂ ಸಂಗೀತಾ ಸುತ್ತ ತಿರುಗುವುದು ಕಾರ್ತಿಕ್. ಆದರೆ, ಸಂಗೀತಾ ಕನಸಲ್ಲಿ ಕಾಡುವುದು ಸ್ನೇಹಿತ್. ಅಷ್ಟೇ ಯಾಕೆ, ಸ್ನೇಹಿತ್ ಜೊತೆ ಮದುವೆ ಕೂಡಾ ಫಿಕ್ಸ್ ಆಗಿದ್ಯಂತೆ. ಹೀಗಂತಾ ಸ್ವತಃ ಸಂಗೀತಾ ವಿನಯ್ ಬಳಿ ಹೇಳಿಕೊಂಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಇರುವ ಮತ್ತೊಬ್ಬ ಸ್ಪರ್ಧಿಯೇ ಹ್ಯಾಂಡ್ಸಮ್ ಯುವಕ ಸ್ನೇಹಿತ್. ಸಂಗೀತಾರ ಮನೆಯವರು ಸ್ನೇಹಿತ್ ಜೊತೆಗೆ ಸಂಗೀತಾರ ಮದುವೆ ಮಾಡಿಸುತ್ತಿದ್ದರಂತೆ. ಸಂಗೀತಾ, ಬೇಡ, ಸ್ನೇಹಿತ್ ಸರಿಯಿಲ್ಲ ಬೇಡ ಎಂದರೆ, ಸಂಗೀತಾ ಮನೆಯವರು ‘ಇಲ್ಲ ಅವನು ಬಹಳ ಶ್ರೀಮಂತ ಮದುವೆ ಮಾಡಿಕೋ’ ಎನ್ನುತ್ತಿದ್ದರಂತೆ. ಹೀಗಂತಾ ಸಂಗೀತಾ ತನ್ನ ಕನಸಲ್ಲಿ ಬಂದ ವಿಚಾರವನ್ನು ವಿನಯ್ ಜೊತೆ ಹೇಳಿದ್ದಾರೆ. ಸಂಗೀತಾರ ಕನಸಿನ ವಿಚಾರ ಕೇಳಿ ವಿನಯ್ ಸಿಕ್ಕಾಪಟ್ಟೆ ನಗುತ್ತಿದ್ದರು. ಕನಸಿನ ಕತೆ ಮುಂದುವರೆಸಿದ ಸಂಗೀತಾ, ‘ನಾನು ಸ್ನೇಹಿತ್ ಜೊತೆ ಮದುವೆಯಾಗಲ್ಲ, ಅವನಿಗಿಂತಲೂ ಕಾರ್ತಿಕ್ ಬೆಟರ್ ಎಂದು ತನ್ನ ಮನೆಯವರನ್ನು ಒಪ್ಪಿಸಲು ಯತ್ನಿಸಿದರಂತೆ. ಸಂಗೀತಾ ಸ್ನೇಹಿತ್ ಬಳಿಯೂ ಹೋಗಿ, ನೀನಾದರೂ ನಿಮ್ಮ ಮನೆಯವರಿಗೆ ಹೇಳುವುದಲ್ಲವಾ, ಸಂಗೀತಾ ಬೇಡ, ಆಕೆ ಆರೊಗೆಂಟ್ ಎಂದು ಸಹ ಹೇಳಿದರಂತೆ. ಆದರೆ ಸ್ನೇಹಿತ್‌ಗೆ ಬೇಡ ಅನ್ನಲ್ಲ, ಯಾರಾದರೂ ಆಗಲಿ ನನಗೆ ಮದುವೆ ಆದರೆ ಸಾಕು ಅಂದರಂತೆ. ತಮ್ಮ ಈ ಕನಸನ್ನು ‘ಕೆಟ್ಟ ಕನಸು’ ಎಂದು ಸಂಗೀತಾ ಬಣ್ಣಿಸಿದರು. ಆದರೆ ವಿನಯ್, ಯಾರಿಗೆ ಗೊತ್ತು ಇದು ಒಳ್ಳೆಯ ಕನಸೂ ಆಗಿರಬಹುದು, ಕನಸು ನಿಜವೂ ಆಗಬಹುದು ಎಂದರು. ಅದಾದ ಬಳಿಕ ಸಂಗೀತಾ ಹಾಗೂ ಕಾರ್ತಿಕ್ ಚೆನ್ನಾಗಿಯೇ ಮಾತನಾಡಿಕೊಂಡಿದ್ದರು.
ಇನ್ನು ಸಂಗೀತಾ ಮತ್ತು ಕಾರ್ತಿಕ್ ಈ ವಾರ ಸಿಕ್ಕಾಪಟ್ಟೆ ಜಗಳ ಮಾಡಿಕೊಂಡಿದ್ದಾರೆ. ಆದರೂ ಕೂಡಾ ಸಂಗೀತಾ ಎಲ್ಲಿ ಹೋದರೂ ಕಾರ್ತಿಕ್ ಹುಡುಕಿಕೊಂಡು ಬರುತ್ತಾರೆ. ಸಂಗೀತಾ ಮೇಲೆ ಕಾರ್ತಿಕ್ ವಿಪರೀತ ಕಾಳಜಿ ತೋರುತ್ತಿದ್ದಾರೆ. ಸಂಗೀತಾ ಕೂಡಾ ಅಷ್ಟೇ ನೋವಾದರೂ ಖುಷಿಯಾದರೂ ಕಾರ್ತಿಕ್ ಜೊತೆಯೇ ಹಂಚಿಕೊಳ್ಳೋದು. ಆದರೆ, ಸ್ನೇಹಿತ್ ಕನಸಲ್ಲಿ ಬಂದ ಮೇಲೆ ಸಂಗೀತಾ ವಿನಯ್ ಜೊತೆ ಮಾತಾಡಿದ್ದಾರೆ. ತನ್ನ ಕನಸಿನ ವಿಚಾರವನ್ನು ವಿನಯ್ ಜೊತೆ ಮಾತ್ರ ಹಂಚಿಕೊಂಡಿದ್ದಾರೆ.
ಸಂಗೀತಾ ಕನಸಲ್ಲಿ ಸ್ನೇಹಿತ್ ಬಂದಿರುವ ಪ್ರಭಾವವೋ ಏನೋ.. ಕಾರ್ತಿಕ್ ಜೊತೆ ಮತ್ತೆ ಜಗಳ ಮಾಡಿದ್ದಾರೆ. ಇನ್ನೊಂದು ವಿಚಾರ ಇಲ್ಲಿ ಗಮನಿಸಬೇಕು. ಕನಸಲ್ಲೂ ಕೂಡಾ ಸಂಗೀತಾ, ಸ್ನೇಹಿತ್ ಗಿಂತ ಕಾರ್ತಿಕ್ ನನಗೆ ಬೆಟರ್ ಜೋಡಿ ಅಂದುಕೊಂಡಿದ್ದಾರೆ. ಹಾಗಾದರೆ ಸಂಗೀತಾ ಒಲವು ಯಾರ ಕಡೆಗೆ. ಸ್ನೇಹಿತ್ ಜೊತೆ ಮಾತೇ ಆಡದ ಸಂಗೀತಾಗೆ ಯಾರು ಬೆಟರ್..