AUS ಆಟಗಾರರಲ್ಲ.. ಮೋಸಗಾರರು – ಕಮ್ಮಿನ್ಸ್ ಕಳ್ಳಾಟಕ್ಕೆ ಮಂಡಳಿ ಕುಮ್ಮಕ್ಕು?
ಸತ್ಯ ಹೇಳಿದ ವಾರ್ನರ್, ಖ್ವಾಜಾ ತಲೆದಂಡ

AUS ಆಟಗಾರರಲ್ಲ.. ಮೋಸಗಾರರು – ಕಮ್ಮಿನ್ಸ್ ಕಳ್ಳಾಟಕ್ಕೆ ಮಂಡಳಿ ಕುಮ್ಮಕ್ಕು?ಸತ್ಯ ಹೇಳಿದ ವಾರ್ನರ್, ಖ್ವಾಜಾ ತಲೆದಂಡ

ವಿಶ್ವ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಅಂದ್ರೆ ಬರೀ ಜಸ್ಟ್ ಒಂದು ಟೀಂ ಅಲ್ಲ. ಗೆಲ್ಲಲೇಬೇಕೆನ್ನೋ ಹಠ, ಅಗ್ರೆಸ್ಸಿವ್ ಅಪ್ರೋಚ್, ಎದುರಾಳಿಗಳಲ್ಲಿ ನಡುಕ ಹುಟ್ಟಿಸುವ ಕ್ರಿಕೆಟ್ ಸಾಮ್ರಾಟರು. ಐದು ಬಾರಿ ಏಕದಿನ ವಿಶ್ವಕಪ್ ಚಾಂಪಿಯನ್, ಟೆಸ್ಟ್ ಕ್ರಿಕೆಟ್‌ನಲ್ಲಿ ದಶಕಗಳ ಡಾಮಿನೆನ್ಸ್, ಟಿ20 ವಿಶ್ವಕಪ್‌ನಲ್ಲೂ ಚಾಂಪಿಯನ್ ಪಟ್ಟ. ಆದ್ರೆ ಈ ಗೆಲುವಿನ ಸಾಮ್ರಾಜ್ಯದ ಇತಿಹಾಸದಲ್ಲಿ ಕರಾಳ ಅಧ್ಯಾಯಗಳೂ ಇವೆ. 2018ರ ಕೇಪ್‌ಟೌನ್ ಟೆಸ್ಟ್‌ನಲ್ಲಿ ನಡೆದ ಸ್ಯಾಂಡ್ ಪೇಪರ್ ಹಗರಣ ಈಗ ಆಸ್ಟ್ರೇಲಿಯಾ ಕ್ರಿಕೆಟ್‌ನ ನೈಜತೆಯನ್ನೇ ಪ್ರಶ್ನಿಸುವಂತಿದೆ. ಇವ್ರೇನು ಆಟಗಾರರೋ ಇಲ್ಲ ಮೋಸಗಾರರೋ ಅನ್ನೋ ಚರ್ಚೆ ಶುರುವಾಗಿದೆ. ಇವ್ರ ಅಷ್ಟೂ ಯಶಸ್ಸಿಗೆ ಕಪ್ಪುಚುಕ್ಕೆ ಇಟ್ಟಿದೆ.

ಇದನ್ನೂ ಓದಿ : RCB ರಿಲ್ಯಾಕ್ಸ್.. CSKಗೆ ಟೆನ್ಷನ್ – MI, KKR, LSGಗೆ ಕ್ಯಾಪ್ಟನ್ಸಿ ಕಗ್ಗಂಟು  

8 ವರ್ಷ.. ಬರೋಬ್ಬರಿ 8 ವರ್ಷಗಳ ಬಳಿಕ ಸ್ಯಾಂಡ್ ಪೇಪರ್ ಹಗರಣ ಆಸ್ಟ್ರೇಲಿಯಾ ಕ್ರಿಕೆಟ್​​ ಮಂಡಳಿಯ ನೈತಿಕತೆಯನ್ನೇ ಪ್ರಶ್ನೆ ಮಾಡ್ತಿದೆ. ಉಸ್ಮಾನ್ ಖವಾಜಾ ಅವರ ಆತ್ಮಚರಿತ್ರೆ, ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರ ಓಪನ್ ಸ್ಟೇಟ್​ಮೆಂಟ್ಸ್, ಡೇವಿಡ್ ವಾರ್ನಿಂಗ್ ಸಪೋರ್ಟ್, ಪ್ಯಾಟ್ ಕಮಿನ್ಸ್ ಅವರ ಸ್ಪಷ್ಟನೆ ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಕೋಲಾಹಲ ಎಬ್ಬಿಸಿದೆ. ವಿಶ್ವ ಕ್ರಿಕೆಟ್‌ನಲ್ಲಿ ಶಿಸ್ತಿಗೆ ಹೆಸರಾಗಿದ್ದ ಆಸೀಸ್ ತಂಡದ ಡ್ರೆಸ್ಸಿಂಗ್ ರೂಮ್​ನಲ್ಲೇ ಕಳ್ಳಾಟಗಳ ಪ್ಲ್ಯಾನ್ ರೆಡಿಯಾಗ್ತಿತ್ತು ಅನ್ನೋ ಸ್ಫೋಟಕ ಸುದ್ದಿ ವಿಶ್ವಕ್ರಿಕೆಟ್​ನಲ್ಲಿ ಕಿಚ್ಚು ಹಚ್ಚಿದೆ.

2018ರ ಮಾರ್ಚ್ 18.. ಕೇಪ್ ಟೌಟ್, ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾದ ಕೇಪ್​ಟೌನ್​ನಲ್ಲಿ 2018ರ ಮಾರ್ಚ್ 18ರಂದು ಆಸೀಸ್ ಮತ್ತು ಸೌತ್ ಆಫ್ರಿಕಾ ನಡುವೆ ಟೆಸ್ಟ್ ಸರಣಿ ನಡೀತಿತ್ತು. ಪಂದ್ಯದ ವೇಳೆ ಆಸ್ಟ್ರೇಲಿಯಾ ಆಟಗಾರ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಹಳದಿ ಬಣ್ಣದ ಸ್ಯಾಂಡ್ ಪೇಪರ್‌ನಂತಹ ವಸ್ತುವನ್ನು ಬಳಸಿ ಚೆಂಡನ್ನು ವಿರೂಪಗೊಳಿಸೋಕೆ ಪ್ರಯತ್ನಿಸಿದ್ದು  ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ವಿಶ್ವಕ್ರಿಕೆಟ್​ನಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿ ಕೊನೆಗೆ ಕ್ರಿಕೆಟ್ ಆಸ್ಟ್ರೇಲಿಯಾ ನಡೆಸಿದ ತನಿಖೆಯ ನಂತರ ಮೂವರು ಆಟಗಾರರಿಗೆ ಶಿಕ್ಷೆ ವಿಧಿಸಲಾಯಿತು. ಅಂದಿನ ಆಸೀಸ್ ಕ್ಯಾಪ್ಟನ್ ಸ್ಟೀವ್ ಸ್ಮಿತ್, ವೈಸ್ ಕ್ಯಾಪ್ಟನ್ ಡೇವಿಡ್ ವಾರ್ನರ್ ಒಂದು ವರ್ಷ ಹಾಗೇ ಬಾಲ್ ಟ್ಯಾಂಪರಿಂಗ್ ಮಾಡಿದ್ದ ಬ್ಯಾಂಕ್ರಾಫ್ಟ್ 9 ತಿಂಗಳು ಬ್ಯಾನ್ ಆಗಿದ್ರು. ಸೋ ಅಲ್ಲಿಗೆ ಈ ಕೇಸ್ ಮುಚ್ಚಿಹೋಗಿತ್ತು. ಈ ಸ್ಕ್ಯಾಮ್ ಆಗಿ 8 ವರ್ಷಗಳ ಬಳಿಕ ಮೊದಲ ಬಾರಿಗೆ ಆಸೀಸ್ ತಂಡ ಸೌತ್ ಆಫ್ರಿಕಾದಲ್ಲಿ ಇತ್ತೀಚೆಗಷ್ಟೇ ಟೆಸ್ಟ್ ಸರಣಿ ಆಡಿತ್ತು. ಆಗ್ಲೂ ಅಷ್ಟೇನು ಈ ಘಟನೆ ಸೌಂಡ್ ಮಾಡಿರಲಿಲ್ಲ. ಆದ್ರೆ 2018ರಲ್ಲಿ ಆಸೀಸ್ ತಂಡದಲ್ಲಿದ್ದ ಆಟಗಾರ ಉಸ್ಮಾನ್ ಖವಾಜಾ ತಮ್ಮ Sabr ಆತ್ಮಚರಿತ್ರೆಯಲ್ಲಿ 2018ರ ಹಗರಣದ ಬಗ್ಗೆ ಇಡೀ ತಂಡಕ್ಕೆ ಮಾಹಿತಿ ಇತ್ತು ಎನ್ನುವಂಥ ಸ್ಫೋಟಕ ವಿಚಾರವನ್ನ ಹೇಳಿದ್ದಾರೆ. ಅಷ್ಟೇ ಅಲ್ಲ ಕೇಪ್‌ಟೌನ್‌ಗಿಂತ ಹಿಂದಿನ ಪೋರ್ಟ್ ಎಲಿಜಬೆತ್ ಟೆಸ್ಟ್‌ನಲ್ಲೂ ಸ್ಯಾಂಡ್ ಪೇಪರ್ ಬಳಕೆಯಾಗಿತ್ತು ಎಂದು ಆರೋಪಿಸಿದ್ದಾರೆ. ಇನ್ನು ಸೌತ್ ಆಫ್ರಿಕಾ ದಿಗ್ಗಜ ಎಬಿ ಡಿವಿಲಿಯರ್ಸ್ ನವೆಂಬರ್ 23ರಂದು ಈ ಬಗ್ಗೆ ಮಾತನಾಡಿದ್ದು ಆಸ್ಟ್ರೇಲಿಯಾ ತಂಡದ ಎಲ್ಲರಿಗೂ ಈ ವಿಚಾರ ತಿಳಿದಿತ್ತು. ಮೊದಲ ಟೆಸ್ಟ್‌ನಿಂದಲೇ ಚೆಂಡಿನ ವಿರೂಪ ಪ್ರಕ್ರಿಯೆ ನಡೆದಿತ್ತು ಎಂದು ಆರೋಪಿಸಿದ್ದಾರೆ. ಹೀಗೆ ಸ್ಯಾಂಡ್ ಪೇಪರ್ ಸ್ಕ್ಯಾಂಡಲ್​ನಲ್ಲಿ ದಿನಕ್ಕೊಂದು ವಿಚಾರಗಳು ಬೆಳಕಿಗೆ ಬರ್ತಿದ್ದು ಪ್ಯಾಟ್ ಕಮ್ಮಿನ್ಸ್ ಕ್ಯಾಪ್ಟನ್ಸಿ ಬಗ್ಗೆಯೂ ಚರ್ಚೆಗಳನ್ನ ಹುಟ್ಟುಹಾಕಿದೆ.

ಪ್ಯಾಟ್ ಕಮ್ಮಿನ್ಸ್ ಟೆಸ್ಟ್ ಕ್ಯಾಪ್ಟನ್ಸಿ ಗೇಟ್ ಪಾಸ್ ಗೆ ಒತ್ತಡ!

ಅಷ್ಟಕ್ಕೂ ಇಲ್ಲಿ 2018ರ ಸ್ಕ್ಯಾಮ್​ಗೂ 2026ರಲ್ಲಿ ಪ್ಯಾಟ್ ಕಮ್ಮಿನ್ಸ್ ತಲೆದಂಡಕ್ಕೂ ಏನು ಲಿಂಗ್ ಅನ್ನಿಸ್ಬೋದು. 2018ರಲ್ಲಿ ಕಮಿನ್ಸ್ ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗದ ಬೌಲರ್ ಆಗಿದ್ದರು. ಈಗ ಅವರು ಆಸ್ಟ್ರೇಲಿಯಾದ ಟೆಸ್ಟ್ ನಾಯಕ. ಹಾಗೇ ಖವಾಜಾ ಮತ್ತು ಬ್ಯಾಂಕ್ರಾಫ್ಟ್ ಆರೋಪಗಳನ್ನು ಕಮಿನ್ಸ್ ತಳ್ಳಿಹಾಕಿದ್ದಾರೆ. ತಮಗೆ ಚೆಂಡು ವಿರೂಪಗೊಳಿಸುವ ಬಗ್ಗೆ ಗೊತ್ತೇ ಇರಲಿಲ್ಲ ಎಂದಿದ್ದಾರೆ. ಹೀಗಿದ್ರೂ ಕಮ್ಮಿನ್ಸ್ ಕ್ಯಾಪ್ಟನ್ ಆಗಿ ಉಳೀಬೇಕೋ ಬೇಡ್ವೋ ಅನ್ನೋ ಚರ್ಚೆ ನಡುವೆ ಕ್ರಿಕೆಟ್ ಆಸ್ಟ್ರೇಲಿಯಾ ನವೆಂಬರ್ 21ರಂದು ಕಮಿನ್ಸ್ ನಾಯಕತ್ವಕ್ಕೆ ಸರ್ವಾನುಮತದ ಬೆಂಬಲ ನೀಡಿದೆ. ಹಾಗೇ 2018ರ ಪ್ರಕರಣದ ತನಿಖೆಯನ್ನು ಮತ್ತೆ ತೆರೆಯುವುದಿಲ್ಲ. ಹಳೆಯ ಆಟಗಾರರು ಮತ್ತು ಸಿಬ್ಬಂದಿಗೆ ತಮ್ಮ ಅನುಭವ ಹಂಚಿಕೊಳ್ಳಲು ಸ್ವತಂತ್ರ ವೇದಿಕೆ ಕಲ್ಪಿಸಲಾಗುತ್ತದೆ. ಹೊಸ ಆರೋಪಗಳನ್ನು ಪರಿಶೀಲಿಸಲಾಗುತ್ತದೆ. ಌಂಡ್ ಕಮ್ಮಿನ್ಸ್ ಕ್ಯಾಪ್ಟನ್ಸಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ. ನ್ಯೂಜಿಲೆಂಡ್‌ನ ಮಾಜಿ ಆಟಗಾರ ಸೈಮನ್ ಡೌಲ್ ಕೂಡ ಕಮಿನ್ಸ್ ನಾಯಕತ್ವದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಈ ನಾಯಕತ್ವ ಬದಲಾವಣೆ ಚರ್ಚೆ ನಡುವೆ ತಂಡದ ಮತ್ತೊಬ್ಬ ವೇಗದ ಬೌಲರ್ ಜೋಶ್ ಹೇಜಲ್​ವುಡ್ ರಿಯಾಕ್ಟ್ ಮಾಡಿದ್ದಾರೆ. ಕಮ್ಮಿನ್ಸ್ ಮುಂದುವರಿದ್ರೆ ಮಾತ್ರ ಟೆಸ್ಟ್​ನಲ್ಲಿ ಆಡ್ತೀನಿ ಇಲ್ಲದಿದ್ರೆ ಟೆಸ್ಟ್ ನಿವೃತ್ತಿ ಘೋಷಣೆ ಮಾಡೋ ಎಚ್ಚರಿಕೆ ನೀಡಿದ್ದಾರೆ. ಌಕ್ಚುಲಿ ಸೀಸ್ ಕ್ರಿಕೆಟ್ ಮಂಡಳಿ ತಪ್ಪಿತಸ್ಥರಿಗೆಲ್ಲಾ ಶಿಕ್ಷೆಯಾಗಿದೆ.. ಇದನ್ನ ಮತ್ತೆ ಕೆದಕೋದಿಲ್ಲ ಅಂತಾ ಮೇಲ್ನೋಟಕ್ಕೆ ಹೇಳ್ತಾ ಇದ್ರೂ ಕೂಡ ಸತ್ಯ ಬಾಯಿ ಬಿಟ್ಟ ಇಬ್ಬರ ತಲೆದಂಡ ಮಾಡಿದೆ.

ಉಸ್ಮಾನ್ ಖವಾಜಾ ಮತ್ತು ಡೇವಿಡ್ ವಾರ್ನರ್ ಗೆ ಗೇಟ್ ಪಾಸ್!

ಇನ್ನು ವಿವಾದ ಭುಗಿಲೇಳ್ತಿದ್ದಂತೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ಉಸ್ಮಾನ್ ಖವಾಜಾ ಮತ್ತು ಡೇವಿಡ್ ವಾರ್ನರ್ ಅವರಿಗೆ ಫಾಕ್ಸ್ ಕ್ರಿಕೆಟ್‌ನ ಕಾಮೆಂಟರಿ ತಂಡದಿಂದ ಗೇಟ್​ಪಾಸ್ ಕೊಟ್ಟಿದ್ದಾರೆ. ಅಂದ್ರೆ ರೆಸ್ಟ್ ನೆಪ ಹೇಳಿ ಕೈಬಿಟ್ಟಿದ್ದಾರೆ.  ಇತ್ತೀಚೆಗೆ ಉಸ್ಮಾನ್ ಖವಾಜಾ ಅವರು ತಮ್ಮ ಪುಸ್ತಕ ಮತ್ತು ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ 2018ರ ಬಾಲ್ ಟ್ಯಾಂಪರಿಂಗ್ ಕೇಸ್​ನಲ್ಲಿ ಕೇವಲ ವಾರ್ನರ್, ಸ್ಮಿತ್ ಮತ್ತು ಬ್ಯಾನ್‌ಕ್ರಾಫ್ಟ್ ಮಾತ್ರವಲ್ಲದೆ, ಇನ್ನೂ ಆಳವಾದ ಸಂಗತಿಗಳಿವೆ ಎಂದಿದ್ರು. ಖವಾಜಾ ಅವರ ಹೇಳಿಕೆಗಳು ಶೇ. 100ರಷ್ಟು ಸತ್ಯ ಎಂದು ಡೇವಿಡ್ ವಾರ್ನರ್ ಸಂಪೂರ್ಣ ಬೆಂಬಲ ನೀಡಿದ್ದಲ್ಲದೆ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಅವರು ಖವಾಜಾರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ ಎಂದು ವಾರ್ನರ್ ಟೀಕಿಸಿದ್ರು. ಹೀಗೆ ತಂಡದ ವಿರುದ್ಧ ಮಾತನಾಡಿದ್ದಕ್ಕೆ ಈ ಇಬ್ಬರಿಗೆ ಕಾಮೆಂಟ್ರಿಯಿಂದಲೇ ಗೇಟ್​ಪಾಸ್ ಕೊಡಲಾಗಿದೆ. ಹೀಗೆ 2018ರ ಸ್ಯಾಂಡ್ ಪೇಪರ್ ಸ್ಕ್ಯಾಂಡಲ್ ಆಸೀಸ್ ಕ್ರಿಕೆಟ್​ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಹಾಲಿ, ಮಾಜಿ ನಾಯಕರ ನಡುವೆಯೇ ಕಿಚ್ಚು ಹಚ್ಚಿದೆ. ಌಂಡ್ ಇದೇ ವೇಳೆ ವಿರಾಟ್ ಕೊಹ್ಲಿಯವ್ರ ಅದೊಂದು ನಡೆಯೂ ಚರ್ಚೆಯಲ್ಲಿದೆ.

ಸ್ಮಿತ್ ಗೆ ಛೀಮಾರಿ ಹಾಕ್ತಿದ್ದ ಅಭಿಮಾನಿಗಳನ್ನು ಸುಮ್ಮನಿರಿಸಿದ್ದ ಕೊಹ್ಲಿ!

2018ರಲ್ಲಿ ಕಳ್ಳಾಟವಾಡಿ ಸಿಕ್ಕಿಬಿದ್ದ ಮೇಲೆ ಆಸೀಸ್ ಆಟಗಾರರ ವಿರುದ್ಧ ಕ್ರಿಕೆಟ್ ಅಭಿಮಾನಿಗಳೆಲ್ಲಾ ರೊಚ್ಚಿಗೆದ್ದಿದ್ರು. ಲಂಡನ್‌ನ ಓವಲ್ ಮೈದಾನದಲ್ಲಿ 2019ರ ಜೂನ್ 9 ರಂದು ನಡೆದಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಸ್ಮಿತ್ ಟಾರ್ಗೆಟ್ ಮಾಡಿ ಘೋಷಣೆಗಳನ್ನ ಕೂಗಿದ್ರು. 2018ರ ‘ಸ್ಯಾಂಡ್‌ಪೇಪರ್’ ಬಾಲ್ ಟ್ಯಾಂಪರಿಂಗ್ ಪ್ರಕರಣದ ನಿಷೇಧ ಮುಗಿಸಿ ಮರಳಿದ್ದ ಸ್ಮಿತ್ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದಾಗ, ಪ್ರೇಕ್ಷಕರು ಚೀಟರ್ ಚೀಟರ್ ಅಂತಾ ಘೋಷಣೆಗಳನ್ನ ಕೂಗಿದ್ರು. ಆಗ ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಪ್ರೇಕ್ಷಕರ ವರ್ತನೆಯನ್ನು ಗಮನಿಸಿ, ತಕ್ಷಣವೇ ಸ್ಟ್ಯಾಂಡ್ಸ್ ಕಡೆಗೆ ತಿರುಗಿ ಸ್ಮಿತ್ ಅವರನ್ನು ಅಣಕಿಸುವುದನ್ನು ನಿಲ್ಲಿಸುವಂತೆ ಕೈಸನ್ನೆ ಮಾಡಿದರು. ಬದಲಾಗಿ, ಸ್ಮಿತ್ ಅವರಿಗೆ ಚಪ್ಪಾಳೆ ತಟ್ಟಿ ಗೌರವ ಸೂಚಿಸುವಂತೆ ಅಭಿಮಾನಿಗಳಿಗೆ ಸೂಚಿಸಿದರು. ಪಂದ್ಯದ ನಂತರದ ಮಾತನಾಡಿದ ಕೊಹ್ಲಿ, ಪ್ರೇಕ್ಷಕರ ವರ್ತನೆಗೆ ಸ್ಟೀವ್ ಸ್ಮಿತ್ ಅವರಲ್ಲಿ ಕ್ಷಮೆಯಾಚಿಸಿದರು. ನಮ್ಮ ಅಭಿಮಾನಿಗಳು ಇಂತಹ ಕೆಟ್ಟ ಉದಾಹರಣೆಯನ್ನು ನೀಡುವುದನ್ನು ನಾನು ಬಯಸುವುದಿಲ್ಲ ಎಂದಿದ್ರು. ಕೊಹ್ಲಿಯ ಈ ಕ್ರೀಡಾಸ್ಫೂರ್ತಿಗೆ ಸ್ಟೀವ್ ಸ್ಮಿತ್ ಸೇರಿದಂತೆ ಇಡೀ ಕ್ರಿಕೆಟ್ ಜಗತ್ತು ಮೆಚ್ಚುಗೆ ವ್ಯಕ್ತಪಡಿಸಿತ್ತು. ಒಟ್ನಲ್ಲಿ ಆಸ್ಟ್ರೇಲಿಯಾ ತಂಡ ಕ್ರಿಕೆಟ್​ನಲ್ಲಿ ನಾವೆಷ್ಟೇ ಗ್ರೇಟ್ ಅಂತಾ ಹೇಳಿಕೊಂಡ್ರೂ ಇದೊಂದು ಹಗರಣವೇ ಇಡೀ ತಂಡದ ಯಶಸ್ಸಿಗೆ ಕಪ್ಪು ಚುಕ್ಕೆ ಇಟ್ಟಂತಿದೆ. ಅಲ್ಲದೆ ತಮ್ಮದೇ ತಂಡದ ಆಟಗಾರರೇ ಸತ್ಯ ಒಪ್ಪಿಕೊಳ್ತಿರೋ ಮಂಡಳಿಗೂ ನುಂಗಲಾರದ ತುಪ್ಪವಾಗಿದೆ.

Shantha Kumari

Leave a Reply

Your email address will not be published. Required fields are marked *