ಮೆಟಾದ ಭಾರತದ ನೂತನ ಮುಖ್ಯಸ್ಥೆಯಾಗಿ ಸಂಧ್ಯಾ ದೇವನಾಥನ್

ಮೆಟಾದ ಭಾರತದ ನೂತನ ಮುಖ್ಯಸ್ಥೆಯಾಗಿ ಸಂಧ್ಯಾ ದೇವನಾಥನ್

ನವದೆಹಲಿ: ಫೇಸ್ ಬುಕ್ ನ ಮಾತೃ ಸಂಸ್ಥೆ ಮೆಟಾದ ಭಾರತದ ಮುಖ್ಯಸ್ಥೆಯಾಗಿ, ಸಂಧ್ಯಾ ದೇವನಾಥನ್ ಅವರು ನೇಮಕಗೊಂಡಿದ್ದು, 2023ರ ಜನವರಿ 1 ಅಧಿಕಾರ ಸ್ವೀಕರಿಸಲಿದ್ದಾರೆ.

ಇದನ್ನೂಓದಿ: ಗುಜರಾತ್ ಚುನಾವಣೆ- ನಾಪತ್ತೆಯಾಗಿದ್ದ ಆಪ್ ಆಭ್ಯರ್ಥಿ ಪತ್ತೆ, ನಾಮಪತ್ರ ವಾಪಸ್

2000 ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದು, ಜಾಗತಿಕ ಉದ್ಯಮದಲ್ಲಿ 22 ವರ್ಷಗಳ ಅನುಭವ ಹೊಂದಿದ್ದಾರೆ. ಅಲ್ಲದೇ ಬ್ಯಾಂಕಿಂಗ್, ಪಾವತಿ ಹಾಗೂ ತಂತ್ರಜ್ಞಾನದಲ್ಲಿ ಅಗಾಧ ಜ್ಞಾನ ಹೊಂದಿದ್ದಾರೆ.

2016ರಲ್ಲಿ ಫೇಸ್ ಬುಕ್ ಸೇರಿದ್ದ ಸಂಧ್ಯಾ, ಸಿಂಗಾಪುರ ಹಾಗೂ ವಿಯೇಟ್ನಾಂನಲ್ಲಿ ಫೇಸ್ ಬುಕ್ ನ ಉದ್ಯಮ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ 2020 ರಲ್ಲಿ ಏಷ್ಯಾ ಪೆಸಿಫಿಕ್ ವಲಯದಲ್ಲಿ ಉದ್ಯಮ ವಿಸ್ತರಣೆ ಮಾಡುವ ಮೆಟಾದ ಯೋಜನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಪೆಪ್ಪರ್ ಫಿನಾನ್ಷಿಯಲ್ ಸರ್ವೀಸಸ್ ನ ಜಾಗತಿಕ ಬೋರ್ಡ್ ಸದಸ್ಯೆಯಾಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ. ಮಹಿಳಾ ಮುಂದಾಳತ್ವದ ಬಗ್ಗೆ ಅಪಾರ ಒಲವಿರುವ ಈಕೆ, ಕಚೇರಿಯಲ್ಲಿ ವೈವಿಧ್ಯತೆಗೆ ಒತ್ತು ನೀಡುತ್ತೇನೆ ಎಂದು ತಮ್ಮ ಲಿಂಕ್ಡ್ ಇನ್ ನಲ್ಲಿ ಬರೆದುಕೊಂಡಿದ್ದಾರೆ.

suddiyaana