ಸ್ಯಾಂಡಲ್ ವುಡ್ ಸ್ಟಾರ್ಸ್ & ಅಂತಾರಾಷ್ಟ್ರೀಯ ಕ್ರಿಕೆಟರ್ಸ್ ಫೈಟ್ – ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2ನೇ ದಿನ ‘ಕೆಸಿಸಿ’ ವಾರ್!

ಸ್ಯಾಂಡಲ್ ವುಡ್ ಸ್ಟಾರ್ಸ್ & ಅಂತಾರಾಷ್ಟ್ರೀಯ ಕ್ರಿಕೆಟರ್ಸ್ ಫೈಟ್ – ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2ನೇ ದಿನ ‘ಕೆಸಿಸಿ’ ವಾರ್!

ಈಗಂತೂ ಸ್ಪೋರ್ಟ್ಸ್ ಅಂದ್ರೆ ಕ್ರಿಕೆಟ್ ಅನ್ನುವಂತಾಗಿದೆ. ಗಲ್ಲಿಯಿಂದ ಹಿಡಿದು ದಿಲ್ಲಿಯವರೆಗೂ ಎಲ್ಲಾ ವಯೋಮಾನದವರೂ ಕ್ರಿಕೆಟ್ ಆಡ್ತಾರೆ. ಸದ್ಯ ಬೆಂಗಳೂರಲ್ಲಿ ‘ಕನ್ನಡ ಚಲನಚಿತ್ರ ಕಪ್’ ಪಂದ್ಯಾವಳಿಗಳು ನಡೆಯುತ್ತಿದೆ. ಕೆಸಿಸಿ ಮೂರನೇ ಆವೃತ್ತಿಯು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಚಂದನವನದ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ.

ಕಿಚ್ಚ ಸುದೀಪ್​, ಡಾಲಿ ಧನಂಜಯ್​, ಗಣೇಶ್​, ಶಿವರಾಜ್​ಕುಮಾರ್​, ಧ್ರುವ ಸರ್ಜಾ ಮುಂತಾದ ಸ್ಟಾರ್ಸ್ ಕನ್ನಡ ಚಲನಚಿತ್ರ ಕಪ್​ನಲ್ಲಿ (Kannada Chalanachitra Cup) ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ನಿನ್ನೆಯಿಂದ (ಫೆಬ್ರವರಿ 24) ಅದ್ಧೂರಿಯಾಗಿ ಕೆಸಿಸಿ ಪಂದ್ಯಗಳು ಆರಂಭ ಆಗಿವೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಆರು ತಂಡಗಳ ನಡುವೆ ಕೆಸಿಸಿ ಫೈಟ್​ ನಲ್ಲಿ ಕನ್ನಡದ ಸೆಲೆಬ್ರಿಟಿಗಳ ಜೊತೆ ಅಂತಾರಾಷ್ಟ್ರೀಯ ಆಟಗಾರರು ಕೂಡ ಫೀಲ್ಡ್​ಗೆ ಇಳಿದಿದ್ದಾರೆ. ಫೆಬ್ರವರಿ 24 ಮತ್ತು 25ರಂದು ಎರಡು ದಿನಗಳ ಕಾಲ ‘ಕನ್ನಡ ಚಲನಚಿತ್ರ ಕಪ್’ (KCC) ಪಂದ್ಯಗಳು ನಡೆಯುತ್ತಿದ್ದು, ಕ್ರೀಡಾಭಿಮಾನಿಗಳು ಮತ್ತು ಕ್ರಿಕೆಟ್​ ಪ್ರಿಯರನ್ನು ಆಕರ್ಷಿಸಿದೆ.

ಇದನ್ನೂ ಓದಿ : ಸೆಲೆಬ್ರಿಟಿಗಳ ಜೊತೆ ಅಂತಾರಾಷ್ಟ್ರೀಯ ಕ್ರಿಕೆಟರ್ಸ್ ಕಮಾಲ್ – ಹೇಗಿದೆ ಗೊತ್ತಾ ‘ಕೆಸಿಸಿ’ ಕದನ..?

ಕೆಸಿಸಿ ಪಂದ್ಯದಲ್ಲಿ ಎರಡು ಗ್ರೂಪ್​ನ ಆರು ತಂಡಗಳ ನಡುವೆ ಹಣಾಹಣಿ ನಡೆಯುತ್ತಿದೆ. ಎ ಗ್ರೂಪ್​ನಲ್ಲಿ ಕದಂಬ ಲಯನ್ಸ್​, ರಾಷ್ಟ್ರಕೂಟ ಪ್ಯಾಂಥರ್ಸ್​, ವಿಜಯನಗರ ಪ್ಯಾಟ್ರಿಯಾಟ್ಸ್​ ತಂಡಗಳಿವೆ. ಬಿ ಗ್ರೂಪ್​ನಲ್ಲಿ ಗಂಗಾ ವಾರಿಯರ್ಸ್​, ಹೊಯ್ಸಳ ಈಗಲ್ಸ್​, ಒಡೆಯರ್​ ಚಾರ್ಜಸ್​ ಟೀಮ್​ಗಳಿವೆ. ಫೆಬ್ರವರಿ 24ರಂದು ಹೊಯ್ಸಳ ಈಗಲ್ಸ್ vs ಒಡೆಯರ್ ಚಾರ್ಜರ್ಸ್, ಗಂಗಾ ವಾರಿಯರ್ಸ್ vs ಹೊಯ್ಸಳ ಈಗಲ್ಸ್, ಹೊಯ್ಸಳ ಈಗಲ್ಸ್ vs ಒಡೆಯರ್ ಚಾರ್ಜರ್ಸ್, ಕದಂಬ ಲಯನ್ಸ್ vs ರಾಷ್ಟ್ರಕೂಟ ಪ್ಯಾಂಥರ್ಸ್ ನಡುವೆ ಫೈಟ್ ನಡೆದಿದೆ.

ಫೆಬ್ರವರಿ 25ರಂದು ಅಂದ್ರೆ ಇವತ್ತು ವಿಜಯನಗರ ಪೇಟ್ರಿಯಾಟ್ಸ್ vs ಕದಂಬ ಲಯನ್ಸ್, ಗಂಗಾ ವಾರಿಯರ್ಸ್ vs ಒಡೆಯರ್ ಚಾರ್ಜರ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್ vs ವಿಜಯನಗರ ಪೇಟ್ರಿಯಾಟ್ಸ್ ತಂಡಗಳ ನಡುವೆ ಪಂದ್ಯ ನಡೆಯಲಿದೆ. 30 ದೇಶಗಳಲ್ಲಿ ಕ್ರಿಕೆಟ್ ಪ್ರಸಾರ ಆಗಲಿದೆ.

 

suddiyaana