ಕೊಡಚಾದ್ರಿ ಬೆಟ್ಟಕ್ಕೆ ಹೋದಾಗ ಹೃದಯಘಾತ – ನಿರ್ಮಾಪಕ ಬಾ ಮಾ ಹರೀಶ್ ಮಗ ಉಲ್ಲಾಸ್ ನಿಧನ

ಕೊಡಚಾದ್ರಿ ಬೆಟ್ಟಕ್ಕೆ ಹೋದಾಗ ಹೃದಯಘಾತ – ನಿರ್ಮಾಪಕ ಬಾ ಮಾ ಹರೀಶ್ ಮಗ ಉಲ್ಲಾಸ್ ನಿಧನ

ನಿರ್ಮಾಪಕ ಬಾ ಮಾ ಹರೀಶ್  ಮಗ ಉಲ್ಲಾಸ್ ನಿಧನರಾಗಿದ್ದಾರೆ. ಇವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಿವಮೊಗ್ಗದ ಕೊಡಚಾದ್ರಿಗೆ ಟ್ರೆಕ್ಕಿಂಗ್‌ ಹೋಗಿದ್ದರು. ಈ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ನಿನ್ನೆ ಚಾರಣಕ್ಕೆಂದು ಶಿವಮೊಗ್ಗದ ಕೊಡಚಾದ್ರಿ ಬೆಟ್ಟಕ್ಕೆ ಹೋಗಿದ್ದರು. ಇಂದು ಬೆಳಗ್ಗೆ ಬೆಟ್ಟ ಹತ್ತುವಾಗ ಹೃದಯಾಘಾತವಾಗಿ ನಿಧನರಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಶನಿವಾರ ಏಕರೂಪದ ಶಾಲಾ ಅವಧಿ ಜಾರಿ – ಕರ್ನಾಟಕ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ಅಂದಹಾಗೆ ಉಲ್ಲಾಸ್‌ ಗೌಡ ಅವರಿಗೆ ಕೆಲ ತಿಂಗಳುಗಳ ಹಿಂದೆ ನಿಶ್ಚಿತಾರ್ಥ ಆಗಿದ್ದು, ಮುಂದಿನ ಡಿಸೆಂಬರ್‌ನಲ್ಲಿ ಮದುವೆ ಆಗಬೇಕಿತ್ತು. ಈ ಅದ್ದೂರಿ ನಿಶ್ಚಿತಾರ್ಥಕ್ಕೆ ಚಿತ್ರರಂಗದ ಗಣ್ಯರು ಆಗಮಿಸಿದ್ದರು. ಅಂದಹಾಗೆ ಎರಡು ವರ್ಷಗಳ ಹಿಂದೆ ಹರೀಶ್‌ ಅವರು ಮಗಳ ಮದುವೆ ಮಾಡಿದ್ದರು.  ಈ ಉಲ್ಲಾಸ್ ಗೌಡರ ಸಾವಿನಿಂದ ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಪಿಎಸ್ಐ ಶಿವಾನಂದ ಕೋಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌‌. ಸಂಬಂಧಿಗಳು ಬೆಂಗಳೂರಿನಿಂದ ಆಗಮಿಸಲಿದ್ದು, ಕುಟುಂಬಸ್ಥರ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಪಿಎಸ್ಐ ಶಿವಾನಂದ ಕೋಳಿ ತಿಳಿಸಿದ್ದಾರೆ.

Kishor KV

Leave a Reply

Your email address will not be published. Required fields are marked *