ಅಂಗೈಅಗಲದ ಉಡುಗೆಯಲ್ಲಿ ಕಿರಿಕ್‌ ಸುಂದರಿ ಸ್ಕೂಬಾ ಡೈವಿಂಗ್

ಅಂಗೈಅಗಲದ ಉಡುಗೆಯಲ್ಲಿ ಕಿರಿಕ್‌ ಸುಂದರಿ ಸ್ಕೂಬಾ ಡೈವಿಂಗ್

ಸ್ಯಾಂಡಲ್‌ ವುಡ್‌ ನ ಕಿರಿಕ್‌ ಸುಂದರಿ ಸಂಯುಕ್ತ ಹೆಗ್ಡೆ ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಾಗುತ್ತಿರುತ್ತಾರೆ. ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಮಾದಕ ಫೋಟೋ, ವಿಡಿಯೋಗಳನ್ನು ಶೇರ್‌ ಮಾಡುತ್ತಿರುತ್ತಾರೆ. ತಮ್ಮ ಹಾಟ್ ಫೋಟೋಗಳ ಮೂಲಕವಾಗಿ ಅದೆಷ್ಟೋ ಬಾರಿ ಪಡ್ಡೆ ಹುಡುಗರ ನಿದ್ದೆಗೆ ಕನ್ನ ಹಾಕಿದ್ದಾರೆ. ಥಾಯ್ಲೆಂಡ್ ನಲ್ಲಿ ಕಾಲಕಳೆದು ಎಂಜಾಯ್‌ ಮಾಡುತ್ತಿರುವ ಕಿರಿಕ್‌ ಸುಂದರಿ ತಮ್ಮ ಹುಟ್ಟುಹಬ್ಬವನ್ನು ಅದೇ ದೇಶದಲ್ಲಿ ಆಚರಿಸಿಕೊಂಡಿದ್ದಾರೆ. ತಮ್ಮ ಹಾಟ್‌ ಅವತಾರಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಇದೀಗ ಕಿರಿಕ್‌ ಸುಂದರಿ ಸ್ಕೂಬಾ ಡೈವಿಂಗ್ ಮಾಡಿ, ಅದರ ಅನುಭವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ನಟಿ ರೇಖಾ ಲೇಡಿ ಸೆಕ್ರಟರಿ ಜೊತೆ ಸಂಬಂಧ ಹೊಂದಿದ್ದರು! – ಬಯೋಗ್ರಫಿಯಲ್ಲಿದೆ ಇನ್ನೂ ಕೆಲ ರೋಚಕ ರಹಸ್ಯ..!

ಸದ್ಯ ಥಾಯ್ಲೆಂಡ್ ನಲ್ಲಿ ಕಾಲಕಳೆಯುತ್ತಿರುವ ಸಂಯುಕ್ತ ಅಲ್ಲೇ ತಮ್ಮ ಬರ್ತ್‌ಡೇ ಆಚರಿಸಿಕೊಂಡಿದ್ದರು. ಪಾರ್ಟಿ ಮೂಡ್ ನಲ್ಲೇ ಫೋಟೋಶೂಟ್  ಶೇರ್‌ ಮಾಡಿದ್ದರು. ಒಂದು ರೀತಿಯಲ್ಲಿ ಕಥಾ ಸರಣಿಯಂತಿದ್ದವು ಫೋಟೋ ಶೂಟ್. ತುಂಡುಡುಗೆಯಲ್ಲಿ ಕಾಣಿಸಿಕೊಂಡಿದ್ದ ಕಿರಿಕ್‌ ಸುಂದರಿಯ ಮೈಮಾಟಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದರು. ಇದೀಗ ಹಾಟ್‌ ಅವತಾರದಲ್ಲಿ ಸಂಯಕ್ತ ಮತ್ತೆ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ಅಂಗೈ ಅಗಲದ ಉಡುಗೆ ತೊಟ್ಟು ಈ ಬಾರಿ ಕಿರಿಕ್‌ ಸುಂದರಿ ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ಕಿರಿಕ್‌ ಸುಂದರಿ ಬಿಳಿ ಬಣ್ಣದ ತುಂಡುಡುಗೆ ಧರಿಸಿ ಬೀಚ್‌ ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಈ ಅವತಾರದಲ್ಲಿ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಕಿರಿಕ್‌ ಸುಂದರಿ ಯಾವುದೇ ಅಂಜಿಕೆಯಿಲ್ಲದೆ, ತನ್ನ ಉಡುಗೆ ತನ್ನಿಷ್ಟ ಅಂತಾ ಹಿಂದೆಯೂ ಹೇಳಿದ್ದರು. ಯಾವುದೇ ನೆಗೆಟಿವ್‌ ಕಮೆಂಟ್‌ ಬಂದರೂ ಐ ಡೋಂಟ್‌ ಕೇರ್‌ ಅಂತಾ ಹೇಳುತ್ತಾ, ತಮಗಿಷ್ಟ ಬಂದಂತೆ ತಮ್ಮ ಲೈಫ್‌ ಲೀಡ್‌ ಮಾಡುತ್ತಾ ಬಂದಿದ್ದಾರೆ. ಬರ್ತ್‌ ಡೇ ದಿನ ಕೂಡ ಯಾವುದನ್ನೂ ಮುಚ್ಚುಮರೆ ಮಾಡದೇ ಕೇಕು, ವೋಡ್ಕ, ವೈನು, ನಾಯಿ ಹೀಗೆ ಕಾನ್ಸೆಪ್ಟ್ ರೀತಿಯಲ್ಲಿ ತಮ್ಮೊಂದಿಗೆ ಇಟ್ಟುಕೊಂಡು ಫೋಟೋಗೆ ಫೋಸ್ ನೀಡಿದ್ದಾರೆ ಸಂಯುಕ್ತ. ಇದೆಲ್ಲ ಏನು ಎಂದು ಹಲವರು ನಟಿಗೆ ಪ್ರಶ್ನೆ ಮಾಡಿದ್ದಾರೆ.

ಈ ಹಿಂದೆಯೂ ಸಂಯುಕ್ತ ಟಾಪ್‌ಲೆಸ್ ವೀಡಿಯೋವೊಂದನ್ನ ಹಂಚಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ನಿಮ್ಮ ದೇಹ, ನಿಮ್ಮ ಆಸ್ತಿ ಎಂದು ನಟಿ ವೀಡಿಯೋದಲ್ಲಿ ಪಾಠ ಮಾಡಿದ್ದರು.

suddiyaana