ಅಪ್ಪನಂತಲ್ಲ ದ್ರಾವಿಡ್ ಮಗ – ಸಿಕ್ಸರ್ ಸಮಿತ್ ಆಟ ಹೇಗಿದೆ?
ರಾಹುಲ್ ಪುತ್ರನ ಕ್ರಿಕೆಟ್ ಸೀಕ್ರೆಟ್
ಅಪ್ಪ ಭಾರತೀಯ ಕ್ರಿಕೆಟ್‌ನ ಒನ್ ಆಫ್ ದಿ ಗ್ರೇಟ್ ಬ್ಯಾಟರ್ . ಟೀಂ ಇಂಡಿಯಾಗೆ ವಿಶ್ವಕಪ್ ಗೆದ್ದು ಕೊಟ್ಟ ಗ್ರೇಟ್ ಕೋಚ್. ಅದರಲ್ಲೂ ಟೆಸ್ಟ್ ಕ್ರಿಕೆಟ್ ನ ಗ್ರೇಟ್ ಕ್ರಿಕೆಟರ್, ಟೀಮ್ ಇಂಡಿಯಾ ವಾಲ್ ಅಂತಾನೇ ಫೇಮಸ್ ಆಗಿರೋ ರಾಹುಲ್ ದ್ರಾವಿಡ್. ಈಗ ದ್ರಾವಿಡ್ ಮಗ ಸಮಿತ್ ಕೂಡ ತಂದೆಯಂತೆ ಗ್ರೇಟ್ ಕ್ರಿಕೆಟರ್ ಆಗೋ ಭರವಸೆ ಮೂಡಿಸುತ್ತಿದ್ದಾನೆ. ಆದ್ರೆ, ಸಮಿತ್ ದ್ರಾವಿಡ್ ಅಪ್ಪನಿಗೆ ತಕ್ಕ ಮಗ.. ತಂದೆಯ ಹಾದಿಯಲ್ಲಿ ಸಾಗುತ್ತಿದ್ದಾನೆ ಸಮಿತ್ ಅಂದವ್ರಿಗೆ ಒಂದು ಮಾತು ಹೇಳಬೇಕಿದೆ. ಯಾಕೆಂದ್ರೆ, ನೀವು ಸರಿಯಾಗಿ ಸಮಿತ್ ಆಟವನ್ನು ಗಮನಿಸಿ, ಜೊತೆಗೆ ಸಮಿತ್ ಬರೀ ಬ್ಯಾಟಿಂಗ್ ನಲ್ಲಿ ಮಾತ್ರ ಶೈನ್ ಆಗುತ್ತಿಲ್ಲ. ಸಮಿತ್ ಆಲ್ರೌಂಡರ್ ಆಟ ಹೆಚ್ಚಾಗಿ ಗಮನ ಸೆಳೀತಿದೆ. ಅಷ್ಟಕ್ಕೂ ಮಹಾರಾಜಾ ಟ್ರೋಫಿಯಲ್ಲಿ ಸಮಿತ್ ದೊಡ್ಡ ಇನ್ನಿಂಗ್ಸ್ ಕಟ್ಟಿಲ್ಲ. ಹಾಗಂತಾ ಸಮಿತ್ ಬ್ಯಾಟ್ ಸೌಂಡ್ ಮಾಡ್ತಿಲ್ಲ ಅಂತಾನೂ ಅಲ್ಲ. ಸಮಿತ್ ಬ್ಯಾಟಿಂಗ್ ನಿಂದ ಒಂದೇ ಒಂದು ಸಿಕ್ಸರ್ ಸಿಡಿಸಿದ್ರೂ ಕೂಡಾ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರಿಗೆ ಕಿಕ್ ಕೊಡ್ತಿದೆ. ಹಾಗಾದ್ರೆ ಸಮಿತ್ ಸಿಕ್ಸರ್ ಬಾರಿಸೋ ಹಿಂದಿನ ಸೀಕ್ರೆಟ್ ಏನು?, ಸಮಿತ್ ತಂದೆಗೆ ತಕ್ಕ ಮಗ ಹೌದು, ಆದರೆ, ಅಪ್ಪನ ಹಾಗೆಯೇ ಮಗ ಅನ್ನೋ ಮಾತು ಸರಿಯಲ್ಲ, ಇದ್ಯಾಕೆ?, ಸಮಿತ್ ಸದ್ಯದಲ್ಲೇ ಟೀಮ್ ಇಂಡಿಯಾ ಕ್ಕೂ ಎಂಟ್ರಿ ಕೊಡ್ತಾನಾ? ಈ ಎಲ್ಲಾ ಇಂಟ್ರಸ್ಟಿಂಗ್ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಧೋನಿ ಇದ್ದಿದ್ರೆ RCBಗೆ 3 ಕಪ್! – ಪಾಕ್ ಮಾಜಿ ಆಟಗಾರ ಹೀಗಂದಿದ್ಯಾಕೆ?
ಇದುವರೆಗೆ ನೋಡಿದ ಸಮಿತ್ ಬೇರೆ. ಈಗ ನೋಡುತ್ತಿರೋ ಸಮಿತ್ ಬೇರೆ. ಹೀಗೆ ಸಮಿತ್ ಸಿಡಿಸಿದ ಸಿಕ್ಸರ್‌ಗೆ ಕಾಮೆಂಟ್ರಿ ಬರ್ತಿದ್ರೆ, ಹೌದು.. ಸಮಿತ್ ಆಟದ ಖದರ್ ಬದಲಾಗಿದೆ ಅಂತಾ ನಿಮ್ಗೂ ಅನಿಸದೇ ಇರಲ್ಲ. ಮಹಾರಾಜ ಟ್ರೋಫಿ T20 ಟೂರ್ನಿಯಲ್ಲಿ ಸಮಿತ್ ದ್ರಾವಿಡ್ ಅವರ ಅಗ್ರೆಸ್ಸಿವ್ ಆಟವೇ ಹೈಲೆಟ್ಸ್. ಕ್ರೀಸ್ ಗೆ ಸಮಿತ್ ಎಂಟ್ರಿಯಾಗ್ತಿದ್ದಂತೆ ಶುರುವಾಗೋದೇ ಹೊಡಿಬಡಿ ಬ್ಯಾಟಿಂಗ್. ಮೈಸೂರು ವಾರಿಯರ್ಸ್ ತಂಡದಿಂದ ಕಣಕ್ಕಿಳಿದಿರೋ ಸಮಿತ್ ದ್ರಾವಿಡ್, ಮೊದಲ ಪಂದ್ಯದಲ್ಲಿ ಕೇವಲ 7 ರನ್ ಗಳಿಸಿ ಔಟಾಗಿದ್ರು. ಎರಡನೇ ಪಂದ್ಯದಲ್ಲೂ ಒಂದಂಕಿಗೆ ಔಟಾಗಿದ್ರು. ಆದ್ರೆ, ಮೂರನೇ ಪಂದ್ಯದಲ್ಲಿ 24 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 33 ರನ್ಗಳಿಸಿ ಮಿಂಚಿದರು. ನಾಲ್ಕನೇ ಪಂದ್ಯದಲ್ಲೂ ಸಮಿತ್ 12 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 16 ರನ್ ಸಿಡಿಸಿದರು. ಗಳಿಸಿರೋ ರನ್ ಕಡಿಮೆಯಾದ್ರೂ ಕೂಡಾ ಸಮಿತ್ ಸಿಡಿಸಿರೋ ಸಿಕ್ಸರ್ ಸೌಂಡ್ ಮಾತ್ರ ಎಕ್ಸ್ಟ್ರಾ ಆರ್ಡನರಿ. ಯೆಸ್.. ಸಮಿತ್ ಫೈನ್ ಲೆಗ್ ಮೇಲೆ ಭರ್ಜರಿ ಸಿಕ್ಸರ್ ಸಿಡಿಸಿದ ಶಾಟ್ ಗೆ ಪ್ರೇಕ್ಷಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಸಮಿತ್ ಬಾರಿಸಿದ ಗಗನಚುಂಬಿ ಸಿಕ್ಸರ್ ಗೆ ಕಾಮೆಂಟ್ರಿ ಬಾಕ್ಸ್ ನಲ್ಲಿ ಕುಳಿತ ಮಾಜಿ ಕ್ರಿಕೆಟರ್ಸ್ ಕೂಡಾ ವಾಟ್ ಎ ಶಾಟ್ ಸಮಿತ್ ಅಂತಾ ಹೇಳಿರೋ ಮಾತಲ್ಲೇ ಸಮಿತ್ ಸಾಮರ್ಥ್ಯ ಗೊತ್ತಾಗ್ತಿದೆ.
ಮಹಾರಾಜ ಟ್ರೋಫಿಯಲ್ಲಿ ಸಮಿತ್ ಆಟ ನೋಡಿ ಅನೇಕರು ಬೇರೆ ಬೇರೆ ರೀತಿಯಲ್ಲಿ ಕಾಮೆಂಟ್ಸ್ ಮಾಡ್ತಿದ್ದಾರೆ. ಇದ್ರಲ್ಲಿ ಅನೇಕರು ತಂದೆಗೆ ತಕ್ಕ ಮಗ. ಅಪ್ಪನ ಹಾದಿಯಲ್ಲಿ ಸಾಗಿ ಬರುತ್ತಿರುವ ಸಮಿತ್, ಅಪ್ಪನಂತೆ ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿರುವ ಪ್ರತಿಭೆ ಅಂತೆಲ್ಲಾ ಹೇಳಲಾಗ್ತಿದೆ. ಅಪ್ಪನಿಗೆ ತಕ್ಕ ಮಗ ಅನ್ನೋದಂತೂ ಸತ್ಯ. ಆದರೆ.. ಅಪ್ಪನಂತೆ ಮಗ ಅಲ್ಲವೇ ಅಲ್ಲ. ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಗ್ರೇಟ್ ವಾಲ್ ಅಂತಾನೇ ಕರೆಸಿಕೊಂಡವರು. ಅದೆಷ್ಟೋ ಪಂದ್ಯಗಳನ್ನ ಗೋಡೆಯಂತೆ ನಿಂತು ಗೆಲ್ಲಿಸಿಕೊಂಡು ಬಂದವರು. ಆದರೆ, ಸಮಿತ್ ಆಟವನ್ನೇ ನೋಡಿ. ಸಮಿತ್ ಹೇಳಿ ಕೇಳಿ ಆಲ್ರೌಂಡರ್. ಬಲಗೈ ಮಧ್ಯಮ ವೇಗದ ಬೌಲರ್. ಮತ್ತು ಬಲಗೈ ಬ್ಯಾಟರ್. ಈಗಿನ ಕಾಲದಲ್ಲಿ ಹೈಯರ್ ಲೆವೆಲ್ ಕ್ರಿಕೆಟ್ ಆಡಬೇಕಂದ್ರೆ, ಮಲ್ಟಿ ಟ್ಯಾಲೆಂಟೆಡ್ ಆಗಿರಲೇಬೇಕು. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಎಕ್ಸ್ ಫರ್ಟ್ ಆದ್ರೆ ಮಾತ್ರ ನೆಕ್ಷ್ಟ್ ಲೆವೆಲ್ ಕ್ರಿಕೆಟ್ ತಂಡಕ್ಕೆ ಸೆಲೆಕ್ಟ್ ಆಗೋ ಸಾಧ್ಯತೆ ಹೆಚ್ಚಾಗಿರುತ್ತೆ. ಬಹುಶಃ ಈಗಿನ ಕಾಲಕ್ಕೆ ಸರಿಯಾಗಿಯೇ ಮಗನಿಗೆ ಕ್ರಿಕೆಟ್ ಕೌಶಲ್ಯ ಕಲಿಸಿಕೊಟ್ಟಿರಬೇಕು ರಾಹುಲ್ ದ್ರಾವಿಡ್.
ಸಮಿತ್ ದ್ರಾವಿಡ್ ಪವರ್ ಹಿಟ್ಟಿಂಗ್ ನಲ್ಲಿ ಎಕ್ಸಪರ್ಟ್. ಜೊತೆಗೆ ಬೌಲಿಂಗ್ ನಲ್ಲೂ ವಿಕೆಟ್ ಕೀಳೋದ್ರಲ್ಲಿ ಎತ್ತಿದ ಕೈ. ಅಪ್ಪ ಎಷ್ಟು ಕೂಲ್ ಆಗಿ ಬ್ಯಾಟಿಂಗ್ ಮಾಡ್ತಾರೋ ಮಗ ಅಷ್ಟೇ ಹೊಡಿಬಡಿ ಆಟದಲ್ಲಿ ಎತ್ತಿದ ಕೈ. ಎಲ್ರಿಗೂ ನೆನಪಿರಬಹುದು. ರಾಹುಲ್ ದ್ರಾವಿಡ್ ಟಿ20 ಕ್ರಿಕೆಟ್ ಫಾರ್ಮ್ಯಾಟ್ ಬಗ್ಗೆ ಹಿಂದೊಮ್ಮೆ ಒಂದು ಮಾತು ಹೇಳಿದ್ರು. ನಾವು ಕ್ರಿಕೆಟ್ ಕೆರಿಯರ್ ನ ಉತ್ತುಂಗದಲ್ಲಿರುವಾಗ ಈ ಥರ ಕ್ರಿಕೆಟ್ ಆಟ ಇದ್ದಿದ್ರೆ ನನ್ನ ಆಟದ ಲೆವೆಲ್ ಬೇರೇಯೇ ಆಗಿರ್ತಿತ್ತು ಅಂತಾ. ಬಹುಶಃ ಮಗ ಹೊಡೆಯೋ ಬಿಗ್ ಹಿಟ್ ಸಿಕ್ಸ್ ಸ್ಟೈಲ್ ನೋಡಿದ್ರೇನೇ ಗೊತ್ತಾಗುತ್ತೆ. ಮಗ ಒನ್ ಡೇ, ಟೆಸ್ಟ್ ಬಿಟ್ಟು ಟಿ20 ಫಾರ್ಮಾಟ್ ವಿಚಾರದಲ್ಲೂ ಎಕ್ಸಪರ್ಟ್ ಆಗಲಿ ಅಂತಾನೇ ದ್ರಾವಿಡ್ ಬಯಸಿದ್ರು ಅನ್ನೋದು. ತಾನು ಮಾಡದಿರುವುದು ತನ್ನ ಮಗನ ಕೈಲಿ ಮಾಡಿಸೋದು ಅಷ್ಟೊಂದು ಈಸಿಯಲ್ಲ. ಈಗ ಸಮಿತ್ ಇಂಥದ್ದೇ ಬ್ಯಾಟಿಂಗ್ ಖದರ್ ಮೂಲಕ ತಂದೆಗೆ ತಕ್ಕ ಮಗ ಅಂತಾ ತೋರಿಸಿಕೊಳ್ತಿರೋದು ಕನ್ನಡಿಗರಿಗೂ ಹೆಮ್ಮೆಯ ವಿಚಾರವೇ.
ರಾಹುಲ್ ದ್ರಾವಿಡ್ ಓಪನಿಂಗ್, ಒನ್ ಡೌನ್, ಟು ಡೌನ್, ಮಿಡಲ್ ಆರ್ಡರ್.. ಹೀಗೆ ಎಲ್ಲಾ ಕ್ರಮಾಂಕದಲ್ಲೂ ಬ್ಯಾಟ್ ಬೀಸಿದವರು. ಜೊತೆಗೆ ಕೀಪಿಂಗ್‌ನಲ್ಲೂ ಎತ್ತಿದ ಕೈ. ಕ್ರಿಕೆಟ್ ನ್ನ ರಾಹುಲ್ ದ್ರಾವಿಡ್ ಎಷ್ಟು ಪ್ರೀತಿಸುತ್ತಿದ್ರು ಅಂದ್ರೆ, ಆಗುವುದಿಲ್ಲ ಎಂಬ ಪದ ದ್ರಾವಿಡ್ ಶಬ್ದಕೋಶದಲ್ಲೇ ಇರಲಿಲ್ಲ. ತನ್ನ ಅವಶ್ಯಕತೆ ಇದ್ದಾಗಲೆಲ್ಲಾ ತಂಡಕ್ಕೆ ಗೋಡೆಯಾಗಿ ನಿಂತವರು. ಇದೀಗ ದ್ರಾವಿಡ್ ಆಡುತ್ತಿಲ್ಲ ನಿಜ. ಆದ್ರೆ, ಸಮಿತ್ ದ್ರಾವಿಡ್ ಮೂಲಕ ಮತ್ತೆ ದ್ರಾವಿಡ್ ಸರ್‌ನೇಮ್ ಮೆರೆದಾಡುತ್ತಿದೆ. ದ್ರಾವಿಡ್ ಅವರ ಕಿರಿಯ ಮಗ ಅನ್ವಯ್ ದ್ರಾವಿಡ್ ಕೂಡಾ ಅಪ್ಪನ ಪಡಿಯಚ್ಚು. ಅನ್ವಯ್ ದ್ರಾವಿಡ್ ಕೂಡಾ ವಿಕೆಟ್ ಕೀಪರ್ ಕಮ್ ಬ್ಯಾಟ್ಸಮನ್. ಕರ್ನಾಟಕ ಅಂಡರ್14 ತಂಡದ ನಾಯಕ. ಎಲ್ಲಾ ಕ್ರಿಕೆಟರ್ಸ್ ಮಕ್ಕಳಿಗೂ ಕ್ರಿಕೆಟ್ ನಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲ್ಲ. ಆದ್ರೆ, ಸಮಿತ್ ಮತ್ತು ಅನ್ವಯ್ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಷರಾ ಬರೆಯಲು ಶತಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕಾಗಿ ಪರಿಶ್ರಮ ಪಡ್ತಿದ್ದಾರೆ. ಸಮಿತ್ ಕೂಡಾ ಮಹಾರಾಜ ಟ್ರೋಫಿ ಸರಣಿಗೆ ಸುಮ್ನೆ ಆಯ್ಕೆಯಾಗಲಿಲ್ಲ. ಇದಕ್ಕೂ ಮೊದಲು ಸಮಿತ್ ದ್ರಾವಿಡ್ ಕರ್ನಾಟಕ ಅಂಡರ್-19 ತಂಡದ ಪರ ಅದ್ಭುತ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ರು. ಜೊತೆಗೆ ಇದೇ ವರ್ಷ ನಡೆದ ಕೂಚ್ ಬೆಹರ್ ಟೂರ್ನಿಯಲ್ಲೂ ಬ್ಯಾಟಿಂಗ್ ಆ್ಯಂಡ್ ಬೌಲಿಂಗ್ ಎರಡರಲ್ಲೂ ಮಿಂಚಿದ್ರು. ಇದೇ ಕಾರಣಕ್ಕೆ, ಮಹಾರಾಜ ಟೂರ್ನಿ ಮೆಗಾ ಆಕ್ಷನ್ನಲ್ಲಿ ಮೈಸೂರು ವಾರಿಯರ್ಸ್ 50 ಸಾವಿರಕ್ಕೆ ಸಮಿತ್ರನ್ನ ಖರೀದಿಸಿತ್ತು.
ಸಮಿತ್ ದ್ರಾವಿಡ್ ಇದೇ ರೀತಿ ತನ್ನ ಪರ್ಫಾಮೆನ್ಸ್ ಮುಂದುವರೆಸಿದ್ರೆ ಮುಂದೆ ಐಪಿಎಲ್ ಅಂಗಳಕ್ಕೂ ಕಾಲಿಡಬಹುದು. ಜೊತೆಗೆ ಟೀಮ್ ಇಂಡಿಯಾ ಎಂಬ ಕ್ರಿಕೆಟ್ ಮಹಾ ಜಗತ್ತಿಗೂ ಎಂಟ್ರಿಕೊಡಬಹುದು. ಎಂಟ್ರಿ ಕೊಡಬೇಕು.. ಇದೇ ನಮ್ಮ ಕನ್ನಡಿಗರ ಆಶಯ ಕೂಡಾ.