ಭವಿಷ್ಯದ ಕ್ರಿಕೆಟರ್ ಆಗಿ ಹೊರ ಹೊಮ್ಮಿದ ಸಮಿತ್ ದ್ರಾವಿಡ್ – ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕ್ಲಿಕ್ ಆಗ್ತಿದ್ದಾರೆ ರಾಹುಲ್ ಪುತ್ರ

ಭವಿಷ್ಯದ ಕ್ರಿಕೆಟರ್ ಆಗಿ ಹೊರ ಹೊಮ್ಮಿದ ಸಮಿತ್ ದ್ರಾವಿಡ್ – ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕ್ಲಿಕ್ ಆಗ್ತಿದ್ದಾರೆ ರಾಹುಲ್ ಪುತ್ರ

ಒಂದು ಕಾಲದಲ್ಲಿ ಟೀಂ ಇಂಡಿಯಾದಲ್ಲಿ ಕನ್ನಡಿಗರ ದೊಡ್ಡ ದಂಡೇ ಇತ್ತು. 11 ಮಂದಿಯಲ್ಲಿ ಮೂರು ನಾಲ್ಕು ಮಂದಿ ಕನ್ನಡಿಗರೇ ಇರ್ತಿದ್ರು. ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ರಾಹುಲ್ ದ್ರಾವಿಡ್ ಹೀಗೆ ತಂಡದಲ್ಲಿ ಕನ್ನಡಿಗರ ಹವಾ ಜೋರಾಗಿತ್ತು. ಆದ್ರೆ ಟೀಂ ಇಂಡಿಯಾದಲ್ಲಿ ಕನ್ನಡಿಗರ ಡಾಮಿನೇಷನ್ ನೋಡಿ ಈಗ ದಶಕಗಳೇ ಕಳೆದಿದೆ. ಸದ್ಯ ಕೆಎಲ್ ರಾಹುಲ್​​ರನ್ನ ಬಿಟ್ರೆ ಮತ್ತಿನ್ಯಾರೂ ತಂಡದಲ್ಲಿ ಪರ್ಮನೆಂಟ್ ಸ್ಥಾನ ಕೂಡ ಪಡೆದಿಲ್ಲ. ಇದೀಗ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಕೂಡ ಭವಿಷ್ಯದ ಆಟಗಾರನಾಗಿ ಹೊರ ಹೊಮ್ಮುತ್ತಿದ್ದಾರೆ.

ಇದನ್ನೂ ಓದಿ:ಕೂಚ್ ಬೆಹರ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಮಿಂಚಿದ ಕನ್ನಡಿಗ – 18 ವರ್ಷದ ಪ್ರಖರ್ ಚತುರ್ವೇದಿಯ ಅಮೋಘ ಬ್ಯಾಟಿಂಗ್

ಸಮಿತ್ ದ್ರಾವಿಡ್ ಕೂಚ್ ಬೆಹಾರ್ ಟೂರ್ನಿಯಲ್ಲಿ ಕರ್ನಾಟಕದ ಪರ ಆಡಿದ್ರು. ಸಮಿತ್​ ಆಲ್ರೌಂಡರ್​ ಆಗಿದ್ದು, ಮುಂಬೈ ವಿರುದ್ಧದ ಮ್ಯಾಚ್​ನಲ್ಲಿ 2 ವಿಕೆಟ್ ಕೂಡ ಪಡೆದಿದ್ರು. ರಾಹುಲ್ ದ್ರಾವಿಡ್​ ಬ್ಯಾಟಿಂಗ್​ನಲ್ಲಿ ಮಿಂಚಿದ್ರೆ ಇತ್ತ ಪುತ್ರ ಫಾಸ್ಟ್​ ಬೌಲರ್​ ಆಗಿ ಶೈನ್ ಆಗ್ತಾ ಇದ್ದಾರೆ. ಸಮಿತ್ ದ್ರಾವಿಡ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕ್ಲಿಕ್ ಆಗ್ತಾ ಇದ್ದು, ಫ್ಯೂಚರ್​​ನಲ್ಲಿ ಟೀಂ ಇಂಡಿಯಾಗೆ ಒಬ್ಬ ಒಳ್ಳೆಯ ಆಲ್ರೌಂಡರ್ ಸಿಗೋ ಎಲ್ಲಾ ಚಾನ್ಸಸ್ ಕೂಡ ಇದೆ. ಆದ್ರೆ ರಾಹುಲ್ ದ್ರಾವಿಡ್ ಮಾತ್ರ ತಮ್ಮ ಮಗನಿಗೆ ಯಾವುದೇ ಕೋಚಿಂಗ್ ನೀಡ್ತಾ ಇಲ್ವಂತೆ. ಇದು ಖುದ್ದು ರಾಹುಲ್ ದ್ರಾವಿಡ್ ಅವರೇ ಹೇಳಿರೋ ಮಾತು. ತಂದೆ ಮತ್ತು ಕೋಚ್ ಈ ಪೈಕಿ ಯಾವುದಾದ್ರು ಒಂದು ರೋಲ್​ನ್ನಷ್ಟೇ ನಿಭಾಯಿಸಬಹುದು. ಸದ್ಯಕ್ಕೆ ನಾನು ತಂದೆಯ ರೋಲ್​​ನ್ನ ನಿಭಾಯಿಸ್ತಾ ಇದ್ದೀನಿ ಎಂದಿದ್ದಾರೆ.

ರಾಹುಲ್ ದ್ರಾವಿಡ್ ಅವರು ಕೂಡ ತಮ್ಮ ಮಗನಿಗೆ ಸಾಕಷ್ಟು ಸಪೋರ್ಟ್​ ಅಂತೂ ಮಾಡ್ತಾ ಇದ್ದಾರೆ. ಟೀಂ ಇಂಡಿಯಾದಿಂದ ಬ್ರೇಕ್​ ಸಿಕ್ಕಾಗ ಸಮಿತ್ ಕ್ರಿಕೆಟ್ ಆಡೋದನ್ನ ಗಮನಿಸ್ತಾ ಇರ್ತಾರೆ. ಈ ಹಿಂದೆ ಮೈಸೂರಿನಲ್ಲಿರುವ ಗ್ರೌಂಡ್​​ನಲ್ಲಿ ದ್ರಾವಿಡ್ ಕಾಣಿಸಿಕೊಂಡಿದ್ರು. ಈ ಬಾರಿಯ ಕೂಚ್ ಬೆಹಾರ್ ಟ್ರೋಫಿಯನ್ನ ಕರ್ನಾಟಕ ತಂಡ ಗೆದ್ದಿದೆ. ಅದ್ರಲ್ಲೂ ಯಂಗ್ ಕ್ರಿಕೆಟರ್, ಪ್ರಖರ್ ಚತುರ್ವೇದಿಯ 404 ರನ್​​ ನಿಜಕ್ಕೂ ದೊಡ್ಡ ಅಚೀವ್​ಮೆಂಟ್. ಮತ್ತೊಂದೆಡೆ ದ್ರಾವಿಡ್ ಪುತ್ರ ಕೂಡ ಕ್ಲಿಕ್ ಆಗ್ತಾ ಇದ್ದಾರೆ. ಭವಿಷ್ಯದಲ್ಲಿ ಹಳೆಯ ದಿನಗಳು ಮತ್ತೆ ಮರುಕಳಿಸಲಿ. ಟೀಂ ಇಂಡಿಯಾದಲ್ಲಿ ಕನ್ನಡಿಗರ ಪಾರುಪತ್ಯ ಮುಂದುವರಿಯಲಿ ಅನ್ನೋದೆ ಕರ್ನಾಟಕದ ಕ್ರಿಕೆಟ್ ಫ್ಯಾನ್ಸ್​ಗಳ ಆಶಯ.

Sulekha