ಶೂಟಿಂಗ್ ವೇಳೆ ನಟಿ ಸಮಂತಾ ಕೈಗೆ ತೀವ್ರ ಗಾಯ – ಫೋಟೋಗಳೇ ಹೇಳ್ತಿವೆ ಅನಾಹುತದ ಭೀಕರತೆ!
ದಕ್ಷಿಣ ಭಾರತದ ಸಿನಿ ದುನಿಯಾದ ಮೋಸ್ಟ್ ಬ್ಯೂಟಿಫುಲ್ ನಟಿ ಸಮಂತಾ ಸದ್ಯ ಸಾಲು ಸಾಲು ಶೂಟಿಂಗ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಅಪರೂಪದ ಕಾಯಿಲೆಯಿಂದ ಚೇತರಿಸಿಕೊಂಡಿರುವ ನಟಿ ಚಿತ್ರೀಕರಣದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.
ಅಪರೂಪದ ಕಾಯಿಲೆ Myositisನಿಂದ ಬಳಲುತ್ತಿದ್ದ ಸಮಂತಾ ಸದ್ಯ ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. ಮುಂಬೈನಲ್ಲಿರುವ ಸಮಂತಾ ಇಂಗ್ಲಿಷ್ನ ‘ಸಿಟಾಡೆಲ್’ ಭಾರತೀಯ ವರ್ಷನ್ನ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ಆದ್ರೆ ಶೂಟಿಂಗ್ ವೇಳೆ ಸಮಂತಾ ಕೈಗೆ ಗಾಯಗಳಾಗಿವೆ. ಈ ಫೋಟೋಗಳನ್ನು ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಮಂತಾ ಹಾಗೂ ವರುಣ್ ಧವನ್ ಒಟ್ಟಾಗಿ ವೆಬ್ ಸೀರಿಸ್ನಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್ನ ಜನಪ್ರಿಯ ಸೀರಿಸ್ ‘ಸಿಟಾಡೆಲ್’ನ ಸ್ಫೂರ್ತಿಯಾಗಿಟ್ಟುಕೊಂಡು, ಭಾರತಕ್ಕೆ ಹೊಂದುವಂತೆ ಕಥೆ ಮಾಡಿಕೊಳ್ಳಲಾಗಿದೆ. ‘ದಿ ಫ್ಯಾಮಿಲಿ ಮ್ಯಾನ್’ ಖ್ಯಾತಿಯ ರಾಜ್ ಹಾಗೂ ಡಿಕೆ ಈ ಸೀರಿಸ್ಗೆ ನಿರ್ದೇಶನ ಮಾಡುತ್ತಿದ್ದಾರೆ. ಇದರ ಶೂಟಿಂಗ್ ಈಗ ಆರಂಭ ಆಗಿದೆ. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಈ ಸೀರಿಸ್ ರಿಲೀಸ್ ಆಗಲಿದೆ. ಈ ಸರಣಿಯ ಶೂಟಿಂಗ್ ವೇಳೆ ಸಮಂತಾ ಕೈಗೆ ಗಾಯಗಳಾಗಿವೆ. ಸ್ವತಃ ಸಮಂತಾ ಅವರೇ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಚಂದನವನಕ್ಕೆ ಕಾಲಿಡಲಿದ್ದಾರೆ ಚೆಂದನೆಯ ರಾಧೆ – ವಿನಯ್ ರಾಜ್‌ಕುಮಾರ್ ಜೊತೆ ಸ್ಯಾಂಡಲ್‌ವುಡ್‌ಗೆ ಮಲ್ಲಿಕಾ ಸಿಂಗ್
ಸಮಂತಾ ಅವರು ‘ದಿ ಫ್ಯಾಮಿಲಿ ಮ್ಯಾನ್ 2’ನಲ್ಲಿ ಆ್ಯಕ್ಷನ್ ಕ್ವೀನ್ ಆಗಿ ಕಾಣಿಸಿಕೊಂಡಿದ್ರು. ಅವರ ನಟನೆಯ ‘ಯಶೋಧಾ’ ಚಿತ್ರದಲ್ಲೂ ಆ್ಯಕ್ಷನ್ ಇತ್ತು. ‘ಸಿಟಾಡೆಲ್’ ರಿಮೇಕ್ನಲ್ಲಿ ಭರಪೂರ ಆ್ಯಕ್ಷನ್ ಇರಲಿದೆ. ಸಮಂತಾ ಶೇರ್ ಮಾಡಿಕೊಂಡಿರುವ ಫೋಟೋಗಳು ಇದಕ್ಕೆ ಸಾಕ್ಷ್ಯ ನೀಡುತ್ತವೆ. ಸಮಂತಾ ಹೆಬ್ಬೆರಳು, ಕೈ ಭಾಗಕ್ಕೆ ಗಾಯಗಳಾಗಿವೆ. ಶೂಟಿಂಗ್ ವೇಳೆ ಆದ ಗಾಯಗಳು ಇವು ಎನ್ನಲಾಗುತ್ತಿದೆ.
ಸಮಂತಾ ಅವರಿಗೆ ಆ್ಯಕ್ಷನ್ ಎಂದರೆ ಇಷ್ಟ. ಇತ್ತೀಚೆಗೆ ಈ ರೀತಿಯ ಪಾತ್ರಗಳನ್ನು ಅವರು ಹೆಚ್ಚು ಒಪ್ಪಿಕೊಳ್ಳುತ್ತಿದ್ದಾರೆ. Myositis ಸಮಸ್ಯೆಯಿಂದ ಅವರಿಗೆ ವರ್ಕೌಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈಗ ಈ ಸಮಸ್ಯೆ ಕಡಿಮೆ ಆಗುತ್ತಿರುವುದರಿಂದ ಅವರು ಮತ್ತೆ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಆ್ಯಕ್ಷನ್ ಸಿನಿಮಾಗಳನ್ನೂ ಒಪ್ಪಿಕೊಂಡು ನಟಿಸುತ್ತಿದ್ದಾರೆ.