ಐಸ್ ಥೆರಪಿಗೆ ಒಳಗಾದ ನಟಿ ಸಮಂತಾ – ಯಾಕೆ ಗೊತ್ತಾ? 

ಐಸ್ ಥೆರಪಿಗೆ ಒಳಗಾದ ನಟಿ ಸಮಂತಾ – ಯಾಕೆ ಗೊತ್ತಾ? 

ಸೌತ್ ಸಿನಿ ದುನಿಯಾದ ಮೋಸ್ಟ್ ಬ್ಯೂಟಿಫುಲ್ ನಟಿ ಸಮಂತಾ ಮಯೋಸೈಟೀಸ್ ಕಾಯಿಲೆ ಒಳಗಾಗಿದ್ದು, ಇದರಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕ ಥೆರಪಿಗಳನ್ನು ಪಡೆಯುತ್ತಿದ್ದಾರೆ. ಇದೀಗ ಸಮಂತಾ ಮತ್ತೊಂದು ಥೆರಪಿಗೆ ಒಳಗಾಗಿದ್ದು, ಇದರ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೋರ್ಟ್ ಮೆಟ್ಟಿಲೇರಿದ ‘ದಿ ಕೇರಳ ಸ್ಟೋರಿ’ – ಚಿತ್ರದ 10 ದೃಶ್ಯಗಳಿಗೆ ಕತ್ತರಿ ಹಾಕಿದ ಸೆನ್ಸಾರ್‌ ಬೋರ್ಡ್

ಸಮಂತಾ ಕೆಲ ವರ್ಷಗಳಿಂದ ಅವರು ಮಯೋಸೈಟೀಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದು, ಅದರ ಭಾಗವಾಗಿ ಈಗ ಐಸ್ ಥೆರಪಿ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಸಮಂತಾ ತನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಐಸ್ ಬಾತ್ ಥೆರಪಿಯು ಚಿತ್ರಹಿಂಸೆಯಿಂದ ಕೂಡಿರುವಂಥದ್ದು. ಆದರೂ, ಈ ಥೆರಪಿಗೆ ಒಳಗಾಗುವುದು ಅನಿವಾರ್ಯವಾಗಿದೆ. ಹಿಂಸೆ ಅನಿಸಿದರೂ ದೇಹಕ್ಕೆ ಚೈತನ್ಯವನ್ನು ನೀಡುವಂಥದ್ದು ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ  ತಾನು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಕುರಿತು ತಿಳಿಸಿದ್ದಾರೆ.

ದೇಹಕ್ಕೆ ಚೈತನ್ಯ ಬರುವುದಕ್ಕಾಗಿ ಕನಿಷ್ಠ 15 ನಿಮಿಷಗಳ ಕಾಲ ಐಸ್ ಬಾತ್ ಥೆರಪಿಗೆ ಒಳಗಾಗಬೇಕಂತೆ. ಇದರಿಂದಾಗಿ ಸಾಕಷ್ಟು ಪ್ರಯೋಜನೆಗಳು ಇವೆ ವೈದ್ಯರು ಹೇಳಿದ್ದಾರೆ. ಸದ್ಯ ಸಮಂತಾ ಸಿಟಾಡೆಲ್ ಹಿಂದಿ ವೆಬ್ ಸರಣಿಯಲ್ಲಿ ನಟಿಸುತ್ತಿದ್ದು, ಅದೊಂದು ಸಾಹಸಮ ಸರಣಿಯಾಗಿದೆ. ಹೀಗಾಗಿ ಸಮಂತಾ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅವರಿಗೆ ಫಿಟ್ನೆಸ್ ತುಂಬಾ ಮುಖ್ಯವಾಗಿದೆ. ಇತ್ತೀಚೆಗೆ ಸಮಂತಾ ಸಾಕಷ್ಟು ವರ್ಕೌಟ್ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅನಾರೋಗ್ಯದ ನಡುವೆಯೂ ಸಿನಿಮಾ, ವರ್ಕೌಟ್ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಸಮಂತಾ ಅವರಿಗೆ ಐಸ್ ಬಾತ್‌ ಥೆರಪಿ ಸಿಕ್ಕಾಪಟ್ಟೆ ಸಹಾಯಕವಾಗಲಿದೆ.

suddiyaana