ಸಮಂತಾ ತೂಕದ ಬಗ್ಗೆ ಟ್ರೋಲ್‌ – ಸಣ್ಣಗಾದ್ರಿ ಎಂದವರಿಗೆ ಖಡಕ್‌ ಎಚ್ಚರಿಕೆ ಕೊಟ್ಟ ಸ್ಯಾಮ್!‌

ಸಮಂತಾ ತೂಕದ ಬಗ್ಗೆ ಟ್ರೋಲ್‌ – ಸಣ್ಣಗಾದ್ರಿ ಎಂದವರಿಗೆ ಖಡಕ್‌ ಎಚ್ಚರಿಕೆ ಕೊಟ್ಟ ಸ್ಯಾಮ್!‌

ಟಾಲಿವುಡ್‌ನ ಜನಪ್ರಿಯ ನಟಿ ಸಮಂತಾ ರುತ್‌ ಪ್ರಭು ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರ್ತಾರೆ. 2022ರಲ್ಲಿ ಮಯೋಸೈಟಿಸ್ ಖಾಯಿಲೆಯಿಂದ ಬಳಲುತ್ತಿದ್ದ ಸ್ಯಾಮ್‌ ಆರೋಗ್ಯ ಚೇತರಿಸಿಕೊಂಡಿದೆ. ಇದೀಗ ಸಮಂತಾ ಫಿಟ್‌ ಆಗಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ತನ್ನ ಸುಂದರ ಫೋಟೋಸ್‌ ಆಗಾಗ ಶೇರ್‌ ಮಾಡ್ತಿರ್ತಾರೆ. ಆದ್ರೆ ಸ್ಯಾಮ್‌ಗೆ ಟ್ರೋಲರ್ಸ್‌ ಕಾಟ ತಪ್ತಿಲ್ಲ.. ನಟಿ ಆರೋಗ್ಯ ಹಾಗೂ ದೇಹದ ಬಗ್ಗೆ ಕೆಟ್ಟದಾಗಿ ಕಾಮೆಂಟ್‌ ಮಾಡ್ತಾ ಇರ್ತಾರೆ. ಇದೀಗ ಸ್ಯಾಮ್‌ ಟ್ರೋಲರ್ಸ್‌ಗೆ ಖಡಕ್‌ ವಾರ್ನ್‌ ಮಾಡಿದ್ದಾರೆ.

ಇದನ್ನೂ ಓದಿ: ಕಥೆ ಅಪೂರ್ಣ, ದಿಢೀರ್ ಸೀರಿಯಲ್ ಮುಕ್ತಾಯ – ಹಲವು ಪ್ರಶ್ನೆಗಳಿಗೆ ಉತ್ತರ ಸಿಗುವ ಮೊದಲೇ ಫೇಮಸ್ ಧಾರಾವಾಹಿ ಎಂಡ್!

ಸಮಂತಾ ಆರೋಗ್ಯ ಸಮಸ್ಯೆಗೆ ತುತ್ತಾಗಿನಿಂದ ನಟಿ ಬಗ್ಗೆ ಅನೇಕರು ಕಾಮೆಂಟ್ಸ್‌ ಮಾಡ್ತಾನೆ ಇದ್ದಾರೆ. ಸ್ಯಾಮ್ ತುಂಬಾ ಸಣ್ಣಗೆ ಆಗಿದ್ದಾರೆ.. ಅನಾರೋಗ್ಯದಿಂದ ಇದ್ದಾರೆ ಅಂತ ಕೆಲವರು ಟ್ರೋಲ್ ಮಾಡಿದ್ರು. ಇದೀಗ  ಸಮಂತಾ ತಮ್ಮ ಆರೋಗ್ಯ ಮತ್ತು ದೇಹದ ಬಗ್ಗೆ ಬಂದ ಟೀಕೆಗಳಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.

ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪುಶ್‌ಅಪ್ಸ್ ಮಾಡ್ತಿರೋ ವಿಡಿಯೋ ಹಾಕಿ, “ಮೊದಲು ನೀವು ಮೂರು ಪುಶ್‌ಅಪ್ಸ್ ಮಾಡಿ, ಆಮೇಲೆ ನಾನು ಸಣ್ಣಗೆ ಇದ್ದೀನಿ, ಅನಾರೋಗ್ಯದಿಂದ ಇದ್ದೀನಿ ಅಂತ ಕಾಮೆಂಟ್ ಮಾಡಿ. ಇಲ್ಲಾಂದ್ರೆ ಮಾಡ್ಬೇಡಿ” ಅಂತ ಡಬಲ್ ಮೀನಿಂಗ್‌ನಲ್ಲಿ ಉತ್ತರ ಕೊಟ್ಟಿದ್ದಾರೆ. ಹೀಗೆ ದೇಹದ ಬಗ್ಗೆ ಬಂದ ಟೀಕೆಗೆ ಚೆನ್ನಾಗಿ ಉತ್ತರ ಕೊಟ್ಟಿದ್ದಾರೆ ಸ್ಯಾಮ್. ಆದ್ರೆ ಸಮಂತಾ ತೂಕದ ಬಗ್ಗೆ ಕೆಲವರು ಪಾಸಿಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ. ಸ್ವಲ್ಪ ತೂಕ ಹೆಚ್ಚಿಸಿಕೊಂಡ್ರೆ ಒಳ್ಳೇದು, ದಕ್ಷಿಣ ಭಾರತದ ನಟಿಯರು ಒಂದು ಮಿನಿಮಮ್ ತೂಕ ಇಟ್ಕೊಳ್ಳಬೇಕು ಅಂತ ಹೇಳ್ತಿದ್ದಾರೆ. ಉತ್ತರ ಭಾರತದ ನಟಿಯರಿಗೆ ಈ ಲುಕ್ ಸರಿ ಹೋಗುತ್ತೆ ಅಂತ ಹೇಳ್ತಿದ್ದಾರೆ.

Shwetha M