ಸಮಂತಾಗೆ ಮತ್ತೆ ಕೈ ಕೊಟ್ಟ ಆರೋಗ್ಯ.. 6 ತಿಂಗಳು ಅಮೆರಿಕದಲ್ಲಿ ಚಿಕಿತ್ಸೆ?
ಸೌತ್ ಸಿನಿ ದುನಿಯಾದ ಮೋಸ್ಟ್ ಬ್ಯೂಟಿಫುಲ್ ನಟಿ ಸಮಂತಾ ರುತ್ ಪ್ರಭು ಅವರು ಅನಾರೋಗ್ಯದ ಕಾರಣಕ್ಕೆ ಪದೇ ಪದೇ ಸುದ್ದಿಯಾಗುತ್ತಿದ್ದಾರೆ. ಸಮಂತ ಮಯೋಸೈಟೀಸ್ ಕಾಯಿಲೆಯಿಂದ ಬಳಲುತ್ತಿದ್ದು, ಈ ಹಿಂದೆ ಹಲವು ತಿಂಗಳುಗಳ ಕಾಲ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದರು. ಸಮಂತಾ ಬದುಕಿನಲ್ಲಿ ಎಲ್ಲವೂ ಸರಿಯಾಯಿತು ಎಂದು ಅಭಿಮಾನಿಗಳು ಖುಷಿಪಡುತ್ತಿರುವಾಗಲೇ ಮತ್ತೆ ಬ್ಯಾಡ್ ನ್ಯೂಸ್ ಕೇಳಿಬಂದಿದೆ. ಸಮಂತಾಗೆ ಮತ್ತೆ ಈ ಕಾಯಿಲೆ ಮರುಕಳಿಸಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮುಂಜಾನೆ ರಿಲೀಸ್ ಆದ ‘ಸಲಾರ್’ ಸಿನಿಮಾ ಟೀಸರ್ – ‘ಕೆಜಿಎಫ್ 2’ ಚಿತ್ರಕ್ಕೆ ಇದೆಯಂತೆ ಲಿಂಕ್..!
ಸಮಂತ ಅವರು ಒಂದು ವರ್ಷ ಚಿತ್ರರಂಗದಲ್ಲಿ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಅಂತಾ ಸುದ್ದಿಯಾಗಿತ್ತು. ಇದಕ್ಕೆ ಕಾರಣ ಮಯೋಸೈಟೀಸ್ ಕಾಯಿಲೆ ಎಂದು ಹೇಳಲಾಗುತ್ತಿತ್ತು. ಇದೀಗ ಸಮಂತ ಈ ಕಾಯಿಲೆಗೆ ವಿದೇಶದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಚಿಕಿತ್ಸೆ ಪಡೆಯುವ ಸಲುವಾಗಿಯೇ ಸಮಂತಾ ಅವರು ಬ್ರೇಕ್ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಸಮಂತ ವಿಜಯ್ ದೇವರಕೊಂಡ ಜೊತೆ ‘ಖುಷಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವರುಣ್ ಧವನ್ ಜೊತೆ ಸಿಟಾಡೆಲ್ ವೆಬ್ ಸರಣಿಯ ಇಂಡಿಯನ್ ವರ್ಷನ್ನಲ್ಲಿ ಅಭಿನಯಿಸುತ್ತಿದ್ದಾರೆ. ಇದಲ್ಲದೇ ಒಂದು ಇಂಗ್ಲಿಷ್ ಸಿನಿಮಾದಲ್ಲೂ ಅವರು ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಸಮಂತಾ ಅವರು ಆ್ಯಕ್ಷನ್ ದೃಶ್ಯಗಳಲ್ಲಿ ನಟಿಸಲು ಸಖತ್ ಆಸಕ್ತಿ ತೋರಿಸುತ್ತಾರೆ. ಅದೇ ಅವರಿಗೆ ಮುಳುವಾಗಬಹುದು ಎಂದು ಕೆಲವರು ಊಹಿಸಿದ್ದರು. ಅನಾರೋಗ್ಯದಿಂದ ಕೊಂಚ ಚೇತರಿಸಿಕೊಂಡ ಬಂದ ಬಳಿಕ ಅವರು ಕಿಂಚಿತ್ತೂ ವಿಶ್ರಾಂತಿ ಇಲ್ಲದೇ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು. ಅದೂ ಸಾಲದೆಂಬಂತೆ ಹಲವು ದೇಶಗಳನ್ನು ಸುತ್ತಿದರು. ಇದರಿಂದ ಅವರಿಗೆ ಮತ್ತೆ ಆರೋಗ್ಯ ಕೈ ಕೊಟ್ಟಿರಬಹುದು ಎನ್ನಲಾಗುತ್ತಿದೆ
ನಾಗ ಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಸಮಂತಾ ರುತ್ ಪ್ರಭು ಅವರು ಸಿನಿಮಾಗಳಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ಅವರ ನಿಲುವು ಬದಲಾಯಿತು. ಎಷ್ಟೇ ಬೋಲ್ಡ್ ಆದಂತಹ ಪಾತ್ರ ಮಾಡಲೂ ಅವರು ಹಿಂದೇಟು ಹಾಕುತ್ತಿಲ್ಲ. ‘ಖುಷಿ’ ಸಿನಿಮಾ ಮತ್ತು ‘ಸಿಟಾಡೆಲ್’ ವೆಬ್ ಸರಣಿ ಬಗ್ಗೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ.