ಬಾಲಿಯಲ್ಲಿ ಕಾಲಕಳೆಯುತ್ತಿರುವ ನಟಿ – ಕೂದಲಿಗೆ ಕತ್ತರಿ ಹಾಕಿದ ಸಮಂತಾ
ಸೌತ್ ಸಿನಿ ದುನಿಯಾದ ಮೋಸ್ಟ್ ಬ್ಯೂಟಿಫುಲ್ ನಟಿ ಸಮಂತಾ ರುತ್ ಪ್ರಭು ಸದ್ಯ ಭಾರಿ ಸುದ್ದಿಯಲ್ಲಿದ್ದಾರೆ. ಅನಾರೋಗ್ಯದ ಕಾರಣ ಸಮಂತಾ ಚಿತ್ರರಂಗದಿಂದ ಅಲ್ಪ ವಿರಾಮ ತೆಗೆದುಕೊಂಡಿದ್ದಾರೆ. ಹೀಗಾಗಿಯೇ ಆಕೆ ನಿಂತರೂ ಕುಳಿತರೂ ಸುದ್ದಿಯಾಗುತ್ತಿದೆ. ಸಮಂತಾ ಅಭಿಮಾನಿಗಳು ಕೂಡ ಸಮಂತಾ ಆರೋಗ್ಯ ಹೇಗಿದೆ? ಮುಂದೇನು ಮಾಡುತ್ತಾರೆ ಅಂತಾ ತಿಳಿಯಲು ಕುತೂಹಲದಿಂದ ಕಾಯುತ್ತಿದ್ದಾರೆ. ಸದ್ಯ ಸಮಂತಾ ಬಾಬ್ ಕಟ್ ಮಾಡಿಕೊಂಡು ಬಾಲಿಗೆ ಹಾರಿದ್ದಾರೆ.
ಇದನ್ನೂಓದಿ: ರೀಲ್ಸ್ ಮಾಡಲು ಹೋಗಿ ದುರಂತ..! -ಜಲಪಾತದಲ್ಲಿ ಜಾರಿ ಬಿದ್ದ ಯುವಕ..! – ನೀರಿನಲ್ಲಿ ಇಂಥಾ ಹುಚ್ಚಾಟ ಬೇಡವೇ ಬೇಡ..!
ನಟಿ ಸಮಂತಾ, ಅಮೆರಿಕಗೆ ಹೋಗಿ ಚಿಕಿತ್ಸೆ ಪಡೆಯಲಿದ್ದಾರೆ ಎಂಬ ಸುದ್ದಿಯಿದೆ. ಅದಕ್ಕೂ ಮುನ್ನ ನಟಿ ಟೆಂಪಲ್ ರನ್ ಮಾಡಿದ್ದರು. ಸ್ವಲ್ಪ ದಿನಗಳ ಕಾಲ ಸದ್ಗುರು ಆಶ್ರಮದಲ್ಲೂ ಕಾಣಿಸಿಕೊಂಡಿದ್ದರು. ಇದೀಗ ಬಾಬ್ ಕಟ್ ಮಾಡಿಕೊಂಡು ಬಾಲಿಗೆ ಹಾರಿದ್ದಾರೆ. ಬಾಲಿಯಲ್ಲಿ ಒಂದಷ್ಟು ದಿನಗಳನ್ನು ಕಳೆದು ಅವರು ಅಮೆರಿಕಾಗೆ ಹಾರಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ಕೆಲದಿನಗಳ ಹಿಂದೆ ಸಮಂತಾ ಅವರು ಇಶಾ ಫೌಂಡೇಶನ್ ಆದಿಯೋಗಿಗೆ ಭೇಟಿ ನೀಡಿದ್ದರು. ಅಲ್ಲಿ ಇತರ ಭಕ್ತಾಧಿಗಳ ಜೊತೆಗೆ ನೆಲಹಾಸಿನ ಮೇಲೆ ಕುಳಿತು ಧ್ಯಾನ ಮಾಡುತ್ತಿರುವ ತಮ್ಮ ಚಿತ್ರವನ್ನು ಸಮಂತಾ ಹಂಚಿಕೊಂಡಿದ್ದಾರೆ. ಕೆಲವು ಹೊತ್ತಿಗೆ ಮುಂಚೆ ಏನಾದರೂ ತಿರುವುತ್ತಾ, ಮುರಿಯುತ್ತಾ, ಮೈಯಿ ಕೆರೆಯುತ್ತಾ, ಯೋಚನೆಗಳ ಪ್ರವಾಹಗಳಲ್ಲಿ ಇರುತ್ತಿದ್ದೆ. ಇವುಗಳನ್ನು ಮಾಡದೆ ಸುಮ್ಮನೆ ಕೂರುವುದು ಅಸಾಧ್ಯ ಎಂಬ ಪರಿಸ್ಥಿತಿಯಲ್ಲಿದ್ದೆ. ಆದರೆ ಇಂದು ಸತತವಾಗಿ ಧ್ಯಾನಮಗ್ನಳಾಗಿದ್ದೆ. ಧ್ಯಾನ ನನ್ನ ಶಕ್ತಿ ಎಂದು ಅರಿತುಕೊಂಡೆ. ಧ್ಯಾನ ನನ್ನ ಸಂವಹನ, ನನಗೆ ಸ್ಪಷ್ಟನೆಯನ್ನು ನೀಡುತ್ತದೆ ಎಂದು ಅರಿತುಕೊಂಡೆ. ಇಷ್ಟು ಸರಳವಾದ ಕಾರ್ಯವೊಂದರಲ್ಲಿ ಇಷ್ಟು ಶಕ್ತಿ ಅಡಗಿರುತ್ತದೆ ಎಂದು ತಿಳಿದಿರಲಿಲ್ಲ ಎಂದು ಸಮಂತಾ ಬರೆದುಕೊಂಡಿದ್ದರು.