ಸಮಂತಾಗೆ ಮದುವೆ ಪ್ರಪೋಸಲ್! – ಒಪ್ಪಿಗೆ ಕೊಟ್ಟೇ ಬಿಟ್ರಾ ಸ್ಯಾಮ್?
ಸಮಂತಾಗೆ ಡಿವೋರ್ಸ್ ನೀಡಿದ ಬೆನ್ನಲ್ಲೇ ಟಾಲಿವುಡ್ ನಟ ನಾಗ ಚೈತನ್ಯ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಶೋಭಿತಾ ಧೂಲಿಪಾಲ ಜೊತೆ ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ಸಮಂತಾಗೆ ಮದುವೆ ಪ್ರಪೋಸಲ್ ಬಂದಿದೆ.
ಇದನ್ನೂ ಓದಿ: ಎದೆಯ ಮೇಲೆ ಡಿಜಿಟಲ್ ಬೋರ್ಡ್! – ಉರ್ಫಿ ಮಾನ ಮುಚ್ಚಲು ಎಲ್ಇಡಿ ಡಿಸ್‌ಪ್ಲೇ ಬೇಕಾಯ್ತಾ?
ಶೋಭಿತಾ ಧೂಲಿಪಾಲ ಹಾಗೂ ನಾಗ ಚೈತನ್ಯ ನಿಶ್ಚಿತಾರ್ಥದ ಬಳಿಕ ಸಮಂತಾ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲ ಅನೇಕರಲ್ಲಿತ್ತು. ಈ ಬೆನ್ನಲ್ಲೇ ಸಮಂತಾಗೆ ಅಭಿಮಾನಿಯೊಬ್ಬ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾನೆ. ವಿಶೇಷವಾಗಿ ಪ್ರೇಮ ನಿವೇದನೆ ಮಾಡಿದಕ್ಕೆ, ಸಮಂತಾ ಕೂಡ ಫುಲ್ ಖುಷಿಯಾಗಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಮುಕೇಶ್ ಚಿಂತಾ ಹೆಸರಿನ ಇನ್ಸ್ಟಾಗ್ರಾಂ ಬಳಕೆದಾರನೊಬ್ಬ ಸಮಂತಾರಿಗೆ ಪ್ರಪೋಸ್ ಮಾಡುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾನೆ. ಸಮಂತಾ ನೀವು ತುಂಬಾ ಬೇಸರ ಮಾಡಿಕೊಳ್ಳಬೇಕಿಲ್ಲ. ನಾನು ನಿಮಗಾಗಿ ಇದ್ದೇನೆ. ನಾನು ಮತ್ತು ನೀವು ಒಳ್ಳೆಯ ಜೋಡಿಯಾಗಬಹುದು. ನೀವು ಓಕೆ ಅಂದರೆ ನಾನು ನಿಮ್ಮನ್ನು ಮದುವೆಯಾಗಲು ಸಿದ್ಧ. ನೀವು ನನಗೆ ಸ್ವಲ್ಪ ವರ್ಷ ಸಮಯ ಕೊಡಿ, ನಾನು ಚೆನ್ನಾಗಿ ಹಣ ಸಂಪಾದನೆ ಮಾಡಿ ನಿಮ್ಮ ಬಳಿಗೆ ಬರುತ್ತೇನೆ. ನನ್ನ ಹೃದಯವನ್ನು ಸದ್ಯಕ್ಕೆ ಟೋಕನ್ ಆಗಿ ಇಟ್ಟುಕೊಳ್ಳಿ. ದಯವಿಟ್ಟು ನನ್ನನ್ನು ಮದುವೆಯಾಗಿ ಸ್ಯಾಮ್. ಪ್ಲೀಸ್ ಸಮಂತಾ ಎಂದು ಅಭಿಮಾನಿ ಕೇಳಿಕೊಂಡಿದ್ದಾನೆ.
ವೈರಲ್ ಆಗಿರುವ ಈ ವಿಡಿಯೋ ಸಮಂತಾ ಗಮನಕ್ಕೂ ಬಂದಿದೆ. ಅದಷ್ಟೇ ಅಲ್ಲ, ಅಭಿಮಾನಿಯ ಮದುವೆ ಪ್ರಪೋಸಲ್ ವಿಡಿಯೋಗೆ ನಟಿ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಈ ವಿಡಿಯೋಗೆ ಸಮಂತಾ ಹಾರ್ಟದ ಸಿಂಬಲ್ ರಿಯಾಕ್ಷನ್ ನೀಡಿದ್ದಾರೆ. ಇದೀಗ ಸಮಂತಾ ಮಾಡಿದ ಕಾಮೆಂಟ್ ಕೂಡ ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ನಟಿಯ ರಿಯಾಕ್ಷನ್‌ಗೆ ಅಭಿಮಾನಿ ಕೂಡ ಖುಷಿಪಟ್ಟಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.