ಶಾಕುಂತಲೆಯಾದ ಸುಂದರಿ ಸಮಂತಾ  – ಟಾಲಿವುಡ್ ಬ್ಯೂಟಿ ಲುಕ್​ಗೆ ಫ್ಯಾನ್ಸ್ ಫಿದಾ..!

ಶಾಕುಂತಲೆಯಾದ ಸುಂದರಿ ಸಮಂತಾ  – ಟಾಲಿವುಡ್ ಬ್ಯೂಟಿ ಲುಕ್​ಗೆ ಫ್ಯಾನ್ಸ್ ಫಿದಾ..!

ನಗುಮೊಗದ ಸುಂದರಿ. ಕಣ್ಣೋಟದಲ್ಲೇ ಕೊಲ್ಲುವಂತಿರೋ ಕಿನ್ನರಿ.. ನಕ್ಕರೂ ಚಂದ, ನಡೆದರೂ ಅಂದ. ಟಾಲಿವುಡ್​ನ ಹಾಟ್ ಬ್ಯೂಟಿ ಸಮಂತಾ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇದೇ ಚಂದುಳ್ಳಿ ಚೆಲುವೆ ಈಗ ಶಾಕುಂತಲೆಯಾಗಿ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ.

ಮಹಿಳಾ ಪ್ರಧಾನ ಚಿತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ತಿರೋ ಬ್ಯೂಟಿ ಕ್ವೀನ್ ಸಮಂತಾ ಈಗ ಶಾಕುಂತಲೆಯಾಗಿದ್ದಾರೆ. ಟಾಲಿವುಡ್ ಹಾಟ್ ಬ್ಯೂಟಿಯ ಅವತಾರ ಕಂಡು ಅಭಿಮಾನಿಗಳು ಹುಬ್ಬೇರಿಸುತ್ತಿದ್ದಾರೆ. ಪುರಾಣದ ಹಿನ್ನೆಲೆ ಹೊಂದಿರುವ ‘ಶಾಕುಂತಲಂ’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಹು ನಿರೀಕ್ಷೆ ಮೂಡಿಸಿರುವ ಈ ಚಿತ್ರಕ್ಕೆ ಗುಣಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ.  ನೀಲಿಮಾ ಗುಣ ಮತ್ತು ದಿಲ್ ರಾಜು ಜಂಟಿಯಾಗಿ ನಿರ್ಮಿಸಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಈ ಸಿನಿಮಾ ಫೆಬ್ರವರಿ 17 ರಂದು ತೆರೆಗೆ ಅಪ್ಪಳಿಸಲಿದೆ.

ಇದನ್ನೂ ಓದಿ: 6 ತಿಂಗಳ ಹಿಂದೆ ಪ್ರೇಮಿಗಳ ಆತ್ಮಹತ್ಯೆ – ಪ್ರತಿಮೆ ನಿರ್ಮಿಸಿ ಮದುವೆ ಮಾಡಿಸಿದ ಕುಟುಂಬ

ಬಹುಭಾಷಾ ನಟಿಯಾಗಿ ಮಿಂಚುತ್ತಿರೋ ನಟಿ ಸಮಂತಾ ರುತ್ ಪ್ರಭು ‘ಯೇ ಮಾಯೆ ಚೇಸಾವೆ’ ಚಿತ್ರದ ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಟ್ಟಿದ್ರು. ಅದೇ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ನಾಗಚೈತನ್ಯ ಅವರನ್ನೇ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಪರಸ್ಪರ ವಿಚ್ಛೇದನಾ ಪಡೆದುಕೊಂಡು ಎಲ್ಲರಿಗೂ ಶಾಕ್ ನೀಡಿದ್ದರು. ನಾಗಚೈತನ್ಯ ಜೊತೆ ಬ್ರೇಕಪ್ ಆದ ಬಳಿಕ ಸಮಂತಾ ಫುಲ್ ಆಕ್ಟಿವ್ ಆಗಿದ್ದಾರೆ. ಕಳೆದ ವರ್ಷವಷ್ಟೇ ನವೆಂಬರ್​ನಲ್ಲಿ ಸಮಂತಾ ನಟನೆಯ ಮಹಿಳಾ ಪ್ರಧಾನ ಚಿತ್ರ ‘ಯಶೋದಾ’ ಬಿಡುಗಡೆಯಾಗಿತ್ತು. ಸಿನಿಮಾಗೆ ಅಂದುಕೊಂಡಷ್ಟು ಯಶಸ್ಸು ಸಿಗದಿದ್ದರೂ ಸಮಂತಾ ನಟನೆಗೆ ಫ್ಯಾನ್ಸ್ ಬಹುಪರಾಕ್ ಹಾಕಿದ್ದರು.

ಸದ್ಯ ಸಮಂತಾ ನಟನೆಯ ಮತ್ತೊಂದು ಚಿತ್ರ ಪುರಾಣದ ಕಥಾ ಹಂದರ ಹೊಂದಿರುವ ಶಾಕುಂತಲಂ. ಮುಂದಿನ ತಿಂಗಳು ರಿಲೀಸ್​ಗೆ ಸಿದ್ಧವಾಗಿರೋ ಈ ಸಿನಿಮಾದ ಟ್ರೇಲರ್ ಈಗಾಗ್ಲೇ ಬಿಡುಗಡೆಯಾಗಿದ್ದು, ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ. ಇತ್ತೀಚೆಗೆ ಚಿತ್ರದ ‘ಮಲ್ಲಿಕಾ… ಮಲ್ಲಿಕಾ…’ ಹಾಡು ರಿಲೀಸ್ ಆಗಿದ್ದು ಜನಮನ ಗೆಲ್ಲುತ್ತಿದೆ.  ಈ ಹಾಡು ತೆಲುಗು ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಸಮಂತಾ ನಟನೆಯ ಮೊದಲ ಪೌರಾಣಿಕ ಚಿತ್ರ ಇದಾಗಿದ್ದು, ದೇವ್ ಮೋಹನ್ ರಾಜು ದುಷ್ಯಂತನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ಮಣಿ ಶರ್ಮಾ ಸಂಗೀತ ನೀಡಿದ್ದಾರೆ. ಮೋಹನ್ ಬಾಬು, ಪ್ರಕಾಶ್ ರಾಜ್, ಗೌತಮಿ, ಅದಿತಿ ಬಾಲನ್ ಮತ್ತು ಅನನ್ಯ ನಾನ್ ಸೇರಿದಂತೆ ಹಲವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮತ್ತೊಂದೆಡೆ ಸಿನಿಮಾಗಳಲ್ಲಿ ಮಾತ್ರವಲ್ಲದೆ ವೆಬ್ ಸಿರೀಸ್​ಗಳಲ್ಲೂ ಸಮಂತಾ ನಟಿಸುತ್ತಿದ್ದಾರೆ. ಈಗಾಗಲೇ ಅಮೆಜಾನ್ ಪ್ರೈಮ್​ಗಾಗಿ ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸೀರಿಸ್​ನಲ್ಲಿ ಅಭಿನಯಿಸಿದ್ದಾರೆ. ಮತ್ತೊಂದು ವೆಬ್ ಸರಣಿಗೆ ಓಕೆ ಎಂದಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.

ಸಾಲು ಸಾಲು ಸಿನಿಮಾ, ವೆಬ್ ಸೀರಿಸ್​​ಗಳಲ್ಲಿ ಬ್ಯುಸಿಯಾಗಿರೋ ಸಮಂತಾ ಆರೋಗ್ಯದ ಬಗ್ಗೆ ಇತ್ತೀಚೆಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ನಟಿ ಸಮಂತಾ ಮಯೋಸಿಟಿಸ್ ನಿಂದ ಬಳಲುತ್ತಿರುವ ವಿಚಾರ ಎಲ್ಲರಿಗೂ ಗೊತ್ತಾಗಿದೆ. ಈ ವಿಷಯವನ್ನು ಸಮಂತಾರವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಈ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ನಾನಾ ರೀತಿಯ ಸುದ್ದಿಗಳು ಹರಿದಾಡಿತ್ತು. ಮಾತ್ರವಲ್ಲದೆ ಚಿಕಿತ್ಸೆಗಾಗಿ ದಕ್ಷಿಣ ಕೊರಿಯಾಕ್ಕೆ ತೆರಳುತ್ತಿದ್ದಾರೆ ಎಂಬ ವದಂತಿಗಳು ವೈರಲ್ ಆಗಿತ್ತು. ಬಳಿಕ ಇದು ಕೇವಲ ವದಂತಿ ಎಂದು ಸಮಂತಾ ಸ್ಪಷ್ಟನೆ ನೀಡಿದ್ದರು.

ಸಮಂತಾ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ವದಂತಿ ಹಬ್ಬಿಸಿದ್ದಕ್ಕೆ ಚಿತ್ರತಂಡ ಆಕ್ರೋಶ ವ್ಯಕ್ತಪಡಿಸಿತ್ತು. ಸದ್ಯ ಸಮಂತಾ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದು, ಮನೆಯಲ್ಲಿಯೇ ರೆಸ್ಟ್ ಮಾಡುತ್ತಿದ್ದಾರೆ.  ಹಾಗೂ ಕಾಯಿಲೆಗೆ ಚಿಕಿತ್ಸೆ ಪಡೆದು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

suddiyaana