ಅನಾರೋಗ್ಯದ ಬಳಿಕ ಮಾಸ್ ಲುಕ್ ನಲ್ಲಿ ಸಮಂತಾ ಎಂಟ್ರಿ – ಹೇಗಿದೆ ಗೊತ್ತಾ ಸೌತ್ ಸ್ಟಾರ್ ಲುಕ್..!?

ಅನಾರೋಗ್ಯದ ಬಳಿಕ ಮಾಸ್ ಲುಕ್ ನಲ್ಲಿ ಸಮಂತಾ ಎಂಟ್ರಿ – ಹೇಗಿದೆ ಗೊತ್ತಾ ಸೌತ್ ಸ್ಟಾರ್ ಲುಕ್..!?

ಸಮಂತಾ. ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಬ್ಯೂಟಿಯಿಂದಲೇ ಪಡ್ಡೆಹುಡುಗರ ಮನ ಗೆದ್ದಿರೋ ಈ ಸುಂದರಿ ನಟನೆಯಿಂದ ಸಿನಿರಸಿಕರನ್ನ ಸೆಳೆದುಕೊಂಡಿದ್ದಾರೆ. ಆದ್ರೆ ಬಣ್ಣದಲೋಕದ ಈ ಚೆಲುವೆ ಸಿನಿಮಾಗಳ ಜೊತೆ ವೈಯಕ್ತಿಕ ಜೀವನ ವಿಚಾರವಾಗಿರೋ ಸಖತ್ ಸದ್ದು ಮಾಡಿದ್ರು. ಇತ್ತೀಚೆಗಂತೂ ಸಮಂತಾ ಆರೋಗ್ಯದ ವಿಚಾರವಾಗಿ ಸಾಕಷ್ಟು ವದಂತಿಗಳು ಹರಡಿತ್ತು. ಆದ್ರೆ ಇದೆಲ್ಲವಕ್ಕೂ ಬ್ರೇಕ್ ಹಾಕುವಂತೆ ಸಮಂತಾ ಮಾಸ್ ಲುಕ್​ನಲ್ಲಿ ಎಂಟ್ರಿ ಕೊಡ್ತಿದ್ದಾರೆ.

ಇದನ್ನೂ ಓದಿ : ‘ಪಠಾಣ್ ಸೋತಿದ್ದರೆ ಹೋಟೆಲ್​ನಲ್ಲಿ ಅಡುಗೆ ಮಾಡ್ತಿದ್ದೆ’ – ಶಾರುಖ್ ಖಾನ್ ಮಾಡಿದ್ದ ನಿರ್ಧಾರ ಏನು..?

ದಕ್ಷಿಣ ಭಾರತ ಸಿನಿರಂಗದ ಸ್ಟಾರ್ ನಟಿ ಸಮಂತಾ ರುತ್ ಪ್ರಭು. ಅನಾರೋಗ್ಯದಿಂದಲೇ ಸುದ್ದಿಯಾಗಿದ್ದ ಸಮಂತಾ ಈಗ ಮತ್ತೆ ಸಿನಿಮಾಗಳಲ್ಲೇ ಆಕ್ಟೀವ್ ಆಗಿದ್ದಾರೆ. ಇತ್ತೀಚಿಗಷ್ಟೇ ಸಮಂತಾ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಶಾಕುಂತಲಂ’ ಸಿನಿಮಾದ ಟ್ರೈಲರ್ ಔಟ್ ಆಗಿತ್ತು. ಜೊತೆಗೆ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲೂ ಸಮಂತಾ ಹಾಜರಿದ್ದರು. ಅನಾರೋಗ್ಯದ ಬಳಿಕ ಸಮಂತಾ ಕಾಣಿಸಿಕೊಂಡ ಮೊದಲ ಕಾರ್ಯಕ್ರಮ ಅದಾಗಿತ್ತು. ಅನೇಕ ತಿಂಗಳುಗಳ ಬಳಿಕ ಸಮಂತಾ ಅವರನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು.

ಸದ್ಯ ಸಮಂತಾ ತಿಂಗಳುಗಳ ಬಳಿಕ ಮತ್ತೆ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ನೆಚ್ಚಿನ ನಟಿಯನ್ನ ತೆರೆ ಮೇಲೆ ನೋಡೋಕೆ ಅಭಿಮಾನಿಗಳು ಕೂಡ ಕಾತರರಾಗಿದ್ದಾರೆ. ‘ಫ್ಯಾಮಿಲಿ ಮ್ಯಾನ್’ ಬಳಿಕ ಸಮಂತಾ ಹಿಂದಿಯ ಸಿಟಾಡೆಲ್ ಸೀರಿಸ್‌ನ ಶೂಟಿಂಗ್‌ನಲ್ಲಿದ್ದಾರೆ. ಇತ್ತೀಚಿಗಷ್ಟೆ ಶೂಟಿಂಗ್‌ಗೆ ಹಾಜರಾಗಿದ್ದ ಸಮಂತಾ ಇದೀಗ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ಪ್ರೈಮ್ ವಿಡಿಯೋ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಬಗ್ಗೆ ಫಸ್ಟ್ ಲುಕ್ ಹಂಚಿಕೊಂಡಿದ್ದು ಮಿಷನ್ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ. ಸಮಂತಾ ಫಸ್ಟ್ ಲುಕ್ ಶೇರ್ ಮಾಡಿ, ‘ಮಿಷನ್ ಪ್ರಾರಂಭವಾಗಿದೆ. ನಾವು ಸಿಟಾಡೆಲ್‌ನ ಭಾರತೀಯ ವರ್ಷನ್ ಪ್ರಾರಂಭಿಸಿದ್ದೇವೆ’ ಎಂದು ಹೇಳಿದ್ದಾರೆ.

ಅಂದಹಾಗೆ ಈ ಸೀರಿಸ್​ನಲ್ಲಿ ಸಮಂತಾ ಬಾಲಿವುಡ್ ನಟ ವರುಣ್ ಧವನ್ ಜೊತೆ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಸಮಂತಾ ವರುಣ್ ಜೊತೆ ತೆರೆಹಂಚಿಕೊಳ್ಳುತ್ತಿದ್ದು ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಈ ಸೀರಿಸ್‌ಗೆ ಫ್ಯಾಮಿಲ್ ಮ್ಯಾನ್ ಖ್ಯಾತಿಯ ರಾಜ್ ಮತ್ತು ಡಿಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಸಮಂತಾ ರುತ್ ಪ್ರಭು ಕಳೆದ ವರ್ಷ ಮಯೋಸಿಟಿಸ್‌ನಿಂದ ಬಳಲುತ್ತಿರುವ ಬಗ್ಗೆ ಬಹಿರಂಗ ಪಡಿಸಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಸಮಂತಾ ಸಿನಿಮಾದಿಂದ ಬ್ರೇಕ್ ಪಡೆದಿದ್ದರು. ಸದ್ಯ ಸಂಪೂರ್ಣ ಚೇತರಿಸಿಕೊಂಡಿರುವ ಸಮಂತಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವರ್ಕೌಟ್, ಶೂಟಿಂಗ್ ಅಂತ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಸಮಂತಾ ಕೊನೆಯದಾಗಿ ಯಶೋಧಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ‘ಶಾಕುಂತಲಂ’ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ಫೆಬ್ರವರಿ 17ರಂದು ರಿಲೀಸ್ ಆಗುತ್ತಿದೆ.

suddiyaana