ಬಿಗ್‌ ಬಾಸ್‌ ವೀಕೆಂಡ್‌ ಸಂಚಿಕೆಗೆ ಪ್ರೇಕ್ಷಕರಿಗೆ ನೋ ಎಂಟ್ರಿ! – ನಟನಿಗೆ ರಕ್ಷಣೆ ನೀಡಲು ದೊಡ್ಡ ನಿರ್ಧಾರ!

ಬಿಗ್‌ ಬಾಸ್‌ ವೀಕೆಂಡ್‌ ಸಂಚಿಕೆಗೆ ಪ್ರೇಕ್ಷಕರಿಗೆ ನೋ ಎಂಟ್ರಿ! – ನಟನಿಗೆ ರಕ್ಷಣೆ ನೀಡಲು ದೊಡ್ಡ ನಿರ್ಧಾರ!

ಕಿರುತೆರೆಯ ವಿವಾದಾತ್ಮಕ ಮತ್ತು ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್.‌ ಈಗಾಗಲೇ ಕೆಲ ಭಾಷೆಗಳಲ್ಲಿ ಬಿಗ್‌ ಬಾಸ್‌ ಶೋ ಪ್ರಸಾರವಾಗ್ತಿದೆ. ಇದೀಗ ಹಿಂದಿಯಲ್ಲೂ ಬಿಗ್‌ ಬಾಸ್‌ ಆರಂಭವಾಗಿದೆ.  ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಸೀಸನ್‌ 19 ಹೋಸ್ಟ್‌ ಮಾಡ್ತಿದ್ದಾರೆ. ಆದ್ರೀಗ ಸಲ್ಮಾನ್‌ ನಡೆಸಿಕೊಡುವ ಸಂಚಿಕೆಗೆ ಪ್ರೇಕ್ಷಕರೇ ಇಲ್ಲ!

ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕೆಗೆ ವಜ್ರದ ಕಿರೀಟ ಕೊಟ್ಟ ಇಳಯರಾಜ! – ಕಿರೀಟದ ಮೌಲ್ಯವೆಷ್ಟು ಗೊತ್ತಾ?

ಹೌದು, ಹಿಂದಿ ಬಿಗ್‌ ಬಾಸ್‌ ಸೀಸನ್‌ 19 ಆರಂಭವಾಗಿ ಎರಡ್ಮೂರು ವಾರ ಆಗ್ತಾ ಬಂದಿದೆ. ನಟ ಸಲ್ಮಾನ್‌ ಖಾನ್‌ ನ ತೆರೆಯ ಮೇಲೆ ನೋಡಿ ವೀಕ್ಷಕರು ಫುಲ್‌ ಖುಷಿಯಾಗಿದ್ದಾರೆ. ಆದ್ರೀಗ ಸಲ್ಮಾನ್‌ ಖಾನ್‌ ನಡೆಸಿಕೊಡು ವೀಕೆಂಡ್‌ ಸಂಚಿಕೆ ನೋಡಲು ಪ್ರೇಕ್ಷಕರಿಗೆ ಅವಕಾಶ ಇಲ್ಲ.  ಸಲ್ಮಾನ್ ಖಾನ್ ಗೆ ಭದ್ರತೆ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎಂಡೆಮೋಲ್ ಶೈನ್ ಇಂಡಿಯಾ ಸಿಇಒ ರಿಷಿ ನೇಗಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಿಷಿ ನೇಗಿ, ಸಲ್ಮಾನ್ ಖಾನ್ ಅವರ ಭದ್ರತೆಯ ಬಗ್ಗೆ ಮಾತನಾಡಿದ್ದಾರೆ.  ಕಳೆದ ಕೆಲವು ವರ್ಷಗಳಿಂದ, ಸಲ್ಮಾನ್ ಖಾನ್ ಅವರಿಗೆ ನಿರಂತರವಾಗಿ ಕೊಲೆ ಬೆದರಿಕೆಗಳು ಬರುತ್ತಿವೆ. ಈ ಕಾರಣದಿಂದಾಗಿ, ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಲ್ಮಾನ್ ಖಾನ್ ಕಾರ್ಯಕ್ರಮದಲ್ಲಿದ್ದಾಗ, ನೇರ ಪ್ರೇಕ್ಷಕರು ಇರುವುದಿಲ್ಲ. ಇದಲ್ಲದೆ, ಪ್ರದರ್ಶನದಲ್ಲಿರುವ ಪ್ರತಿಯೊಬ್ಬರೂ ನಿಯಮಗಳನ್ನು ಪಾಲಿಸಬೇಕು. ಕೆಲಸಕ್ಕೆ ನೇಮಕಗೊಂಡ ಪ್ರತಿಯೊಬ್ಬರ ಹಿನ್ನೆಲೆಯನ್ನು ಕಡ್ಡಾಯವಾಗಿ ಪರಿಶೀಲಿಸಲಾಗುತ್ತದೆ. ನಮ್ಮ ಕೆಲಸದ ಸ್ಥಳದಲ್ಲಿ ಸುಮಾರು 600 ಜನರಿದ್ದಾರೆ. ನಾವು 3 ಪಾಳಿಗಳಲ್ಲಿ 24X7 ಕೆಲಸ ಮಾಡುತ್ತೇವೆ. ಕಚೇರಿ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇದ್ದಾರೆ.  ಭದ್ರತೆ ಮತ್ತು ಆನ್-ಗ್ರೌಂಡ್ ಲಾಜಿಸ್ಟಿಕ್ಸ್ ವಿಷಯಕ್ಕೆ ಬಂದಾಗ, ಎಲ್ಲವೂ ಸರಿಯಾಗಿ ನಡೆಯುತ್ತಿದೆಯೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ’ ಎಂದಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಸಲ್ಮಾನ್ ಖಾನ್ ಅವರಿಗೆ ಹಲವಾರು ಕೊಲೆ ಬೆದರಿಕೆಗಳು ಬಂದಿವೆ. ಅಷ್ಟೇ ಅಲ್ಲ, ಏಪ್ರಿಲ್‌ನಲ್ಲಿ, ನಟನ ಬಾಂದ್ರಾ ನಿವಾಸದ ಹೊರಗೆ ಗುಂಡು ಹಾರಿಸಲಾಯಿತು.. ಈ ಹಿನ್ನೆಲೆಯಲ್ಲಿ ನಟ ಸಲ್ಮಾನ್ ಖಾನ್ ಭದ್ರತೆಯನ್ನು ಒದಗಿಸಲಾಗಿದೆ.

Shwetha M