‘ಡ್ಯಾನ್ಸ್ ಅಲ್ಲ ಇದು ವರ್ಕೌಟ್’ – ಸಲ್ಮಾನ್ ಖಾನ್ ಸ್ಟೆಪ್ಸ್ ಫುಲ್ ಟ್ರೋಲ್

‘ಡ್ಯಾನ್ಸ್ ಅಲ್ಲ ಇದು ವರ್ಕೌಟ್’ – ಸಲ್ಮಾನ್ ಖಾನ್ ಸ್ಟೆಪ್ಸ್ ಫುಲ್ ಟ್ರೋಲ್

ಬಾಲಿವುಡ್ ಬ್ಯಾಡ್ ಬಾಯ್ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಈಗಾಗಲೇ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ ಸಿನಿಮಾದ ಹಾಡು ರಿಲೀಸ್ ಆಗಿದೆ. ಹಾಡಿನಲ್ಲಿ ಸಲ್ಮಾನ್ ಖಾನ್ ಡಾನ್ಸ್ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಗಮನ ಸೆಳೆಯುವ ಜೊತೆಗೆ ಸಲ್ಮಾನ್ ಖಾನ್ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದಾರೆ.

ಇದನ್ನೂ ಓದಿ:  ‘ಜೈಲರ್’ ಶೂಟಿಂಗ್‌ನಲ್ಲಿ ರಜನಿಗೆ ಶಿವಣ್ಣ ಸಾಥ್- ಸಿನಿ ದಿಗ್ಗಜರನ್ನು ಒಟ್ಟಿಗೆ ನೋಡಿ ಖುಷಿಯಾದ ಫ್ಯಾನ್ಸ್

ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ ಸಿನಿಮಾದ ಪ್ರಮೋಷನ್ ಪ್ರಾರಂಭವಾಗಿದ್ದು ಮೊದಲ ಹಾಡನ್ನು ರಿಲೀಸ್ ಮಾಡಲಾಗಿದೆ.  ಆದರೀಗ ಸಲ್ಮಾನ್ ಖಾನ್ ಡಾನ್ಸ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.. ಇದು ವರ್ಕೌಟ್ ಮಾಡುತ್ತಿರೋದಾ, ಇದು ಜಿಮ್ ಅಲ್ಲ.. ಹೀಗೆ ನಾನಾ ರೀತಿಯ ಕಮೆಂಟ್ ಮಾಡುವುದರ ಮೂಲಕ ಟ್ರೋಲಿಗರು ಸಲ್ಮಾನ್ ಖಾನ್ ಕಾಲೆಳೆಯುತ್ತಿದ್ದಾರೆ. ಅಭಿಮಾನಿಯೊಬ್ಬ ಕಾಮೆಂಟ್ ಮಾಡಿ, ಡಾನ್ಸ್ ಸ್ಟೆಪ್ ಎಲ್ಲಾ ಖಾಲಿಯಾದಾಗ ಸಲ್ಮಾನ್ ಖಾನ್ ಹೊಸ ಸ್ಟೆಪ್ ಸೃಷ್ಟಿಸುತ್ತಾರೆ’ ಎಂದು ಹೇಳಿದ್ದಾರೆ.

ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ಫರ್ಹಾದ್ ಸಾಮ್ಜಿ ನಿರ್ದೇಶನದಲ್ಲಿ ಮೂಡಿಬಂದ ಸಿನಿಮವಾಗಿದೆ. ಭಾರಿ ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ಏಪ್ರಿಲ್ 21ಕ್ಕೆ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಶೆಹನಾಜ್ ಗಿಲ್, ಪಾಲಕ್ ತಿವಾರಿ, ಅಭಿಮನ್ಯು ಸಿಂಗ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್, ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಭೂಮಿಕಾ ಚಾವ್ಲಾ ಮತ್ತು ವಿಜೇಂದರ್ ಸಿಂಗ್ ನಟಿಸಿದ್ದಾರೆ.

 

suddiyaana