ಇದು ಭಾರತ, ಅಸಭ್ಯ ದೃಶ್ಯಗಳಿಗೆ ಜಾಗ ಇರಬಾರದು – ಒಟಿಟಿ ಬಗ್ಗೆ ಗರಂ ಆದ ಸಲ್ಮಾನ್ ಖಾನ್

ಇದು ಭಾರತ, ಅಸಭ್ಯ ದೃಶ್ಯಗಳಿಗೆ ಜಾಗ ಇರಬಾರದು – ಒಟಿಟಿ ಬಗ್ಗೆ ಗರಂ ಆದ ಸಲ್ಮಾನ್ ಖಾನ್

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಒಟಿಟಿ ಬಗ್ಗೆ ಗರಂ ಆಗಿದ್ದಾರೆ. ಒಟಿಟಿಯಲ್ಲಿ ಪ್ರಸಾರವಾಗುವ ಸಿನಿಮಾ, ಸಾಕ್ಷ್ಯಚಿತ್ರ, ವೆಬ್ ಸಿರೀಸ್ ಗಳಿಗೆ ಸೆನ್ಸಾರ್ ಮಾಡಿಸಬೇಕು. ಅದರಲ್ಲೂ ಅಡಲ್ಟ್ ಕಂಟೆಂಟ್ ನಿಂದ ತುಂಬಿರುವ ಓಟಿಟಿಗಳನ್ನು ಕೂಡಲೇ ಭಾರತದಲ್ಲಿ ನಿಲ್ಲಿಸಬೇಕು  ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಹನುಮ ಜಯಂತಿ ಆಚರಣೆಯ ಸಂಭ್ರಮದಲ್ಲಿ ‘ಆದಿಪುರುಷ್’ ಸಿನಿಮಾ ಪೋಸ್ಟರ್ ರಿಲೀಸ್

ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ ಮಾತನಾಡಿದ ಸಲ್ಮಾನ್ ಖಾನ್, ಒಟಿಟಿ ವೇದಿಕೆಗೂ ಸೆನ್ಸಾರ್ ಬೇಕು. ಇಲ್ಲಿ ಪ್ರಸಾರವಾಗುವ ಯಾವುದೇ ಕಂಟೆಂಟ್‌ಗಳಲ್ಲಿ ಲಿಪ್ ಲಾಕ್, ಬಿಕಿನಿ, ನಗ್ನತೆ, ಕೆಟ್ಟ ಪದಗಳ ಬಳಕೆ ಮಾಡಬಾರದು ಅಂತಾ ಹೇಳಿದ್ದಾರೆ.

ನಿಮ್ಮ ಮಗಳು, ಶಿಕ್ಷಣಕ್ಕೆ ಸಂಬಂಧಿಸಿದ್ದನ್ನು ನೋಡಲು ನಿಮ್ಮ ಬಳಿ ಮೊಬೈಲ್ ತೆಗೆದುಕೊಂಡು ಈ ರೀತಿಯದ್ದನ್ನು ನೋಡಿದರೆ ಅದನ್ನು ನೀವು ಇಷ್ಟಪಡುತ್ತೀರಾ? ಹುಡುಗಿಯೊಬ್ಬಳು ರೊಮ್ಯಾನ್ಸ್ ದೃಶ್ಯದಲ್ಲಿ ನಟಿಸಿ, ದೇಹವನ್ನು ಎಕ್ಸ್‌ಪೋಸ್ ಮಾಡಿರುತ್ತಾಳೆ. ಅವರ ಮನೆಯ ವಾಚ್‌ಮನ್ ಕೂಡ ಆ ದೃಶ್ಯ ನೋಡಿರುತ್ತಾನೆ. ಇದು ಭದ್ರತೆ ದೃಷ್ಠಿಯಿಂದ ಒಳ್ಳೆಯದಲ್ಲ. ನಾವು ಇರುವುದು ಭಾರತದಲ್ಲಿ ಎಂಬುದನ್ನು ನೆನಪಿಡಬೇಕು. ಇಲ್ಲಿ ಅಸಭ್ಯ ದೃಶ್ಯಗಳಿಗೆ ಜಾಗ ಇರಬಾರದು. ಒಟಿಟಿಗೂ ಸೆನ್ಸಾರ್ ಬೇಕು ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

suddiyaana