ಸಲ್ಮಾನ್ ಖಾನ್ ಮದುವೆ ಆಗುವವರೆಗೂ ತಾನು ಚಪ್ಪಲಿ ಹಾಕಲ್ಲ ಎಂದು ಶಪಥ ಮಾಡಿದ ರಾಖಿ ಸಾವಂತ್
ರಾಖಿ ಸಾವಂತ್ ಸದಾ ಒಂದಲ್ಲೊಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇದ್ದಾರೆ. ಈ ಬಾರಿ ಬಾಲಿವುಡ್ ನಟ ಸಲ್ಮಾನ್ ಖಾನ್ ಮದುವೆ ಕುರಿತಾಗಿ ರಾಖಿ ಮಾತನಾಡಿ ಸುದ್ದಿಯಲ್ಲಿದ್ದಾರೆ. ಸಲ್ಮಾನ್ ಖಾನ್ ಮದುವೆ ಆಗುವವರೆಗೂ ತಾನು ಚಪ್ಪಲಿ ಹಾಕಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕನಸಿನ ಬೆನ್ನತ್ತಿದ ರಕ್ಷಿತ್ ಶೆಟ್ಟಿ – ಮುಂದಿನ ಎರಡು ಸಿನಿಮಾಗೆ ಕೊಡಲಿಯೇ ಸ್ಫೂರ್ತಿ!
ಸಲ್ಮಾನ್ ಖಾನ್ ಮೇಲೆ ನಟಿ ರಾಖಿ ಸಾವಂತ್ ಗೆ ಎಲ್ಲಿಲ್ಲದ ಅಭಿಮಾನ ಮತ್ತು ಪ್ರೀತಿ. ರಾಖಿಯ ಕಷ್ಟದ ದಿನಗಳಲ್ಲಿ ಸಲ್ಮಾನ್ ಕೈ ಹಿಡಿದಿದ್ದರು ಎನ್ನುವ ಕಾರಣಕ್ಕಾಗಿ ಸಲ್ಮಾನ್ ಪರವಾಗಿಯೇ ಇರುತ್ತಾರೆ. ಇದೀಗ ರಾಖಿ ಸವಂತ್, ಸಲ್ಮಾನ್ ಖಾನ್ ಮದುವೆ ಆಗುವವರೆಗೂ ತಾನು ಚಪ್ಪಲಿ ಹಾಕಲ್ಲ ಎಂದು ಹೇಳಿದ್ದಾರೆ.
ರಾಖಿ ಸಾವಂತ್ ವಿಮಾನ ನಿಲ್ದಾಣಕ್ಕೆ ಬರಿಗಾಲಿನಲ್ಲಿ ಆಗಮಿಸಿದ್ದಾರೆ. ಏಕೆ ಹೀಗೆಬರಿಗಾಲಿನಲ್ಲಿ ಓಡಾಡುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಉತ್ತರಿಸಿರುವ ರಾಖಿ, ‘ನಾನು ಸಲ್ಮಾನ್ ಖಾನ್ ಮದುವೆ ಆಗೋವರೆಗೂ ಚಪ್ಪಲಿ ಹಾಕಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ. ಅವರ ಮದುವೆ ಆಗುವವರೆಗೂ ಚಪ್ಪಲಿ ಹಾಕಲ್ಲ ಅಂತಾ ಶಪಥ ಮಾಡಿರುವೆʼ ಎಂದು ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ರಾಖಿ ಸಾವಂತ್ ಈ ಮಾತನ್ನು ಎಷ್ಟು ದಿನ ಉಳಿಸಿಕೊಳ್ಳುತ್ತಾರೋ ಸಲ್ಮಾನ್ ಖಾನ್ ನೇ ಬಲ್ಲ.