ನಟ ವಿಕ್ಕಿ ಕೌಶಲ್ರನ್ನು ತಳ್ಳಿದ್ಯಾಕೆ ಸಲ್ಲು ಬಾಡಿಗಾರ್ಡ್ಸ್?- ಮಾತಾಡಿಸಿದರೆ ಲುಕ್ ಕೊಟ್ಟು ಹೋಗಿದ್ಯಾಕೆ ಬಾಲಿವುಡ್ ಬ್ಯಾಡ್ಬಾಯ್?

ಬಾಲಿವುಡ್ ಪ್ರಮುಖ ಸ್ಟಾರ್ಗಳಲ್ಲಿ ವಿಕ್ಕಿ ಕೌಶಲ್ ಕೂಡಾ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ನಟ. ವಿಕ್ಕಿ ಕೌಶಲ್ಗೂ ತನ್ನದೇ ಆದ ಅಭಿಮಾನಿ ಬಳಗ ಕೂಡಾ ಇದೆ. ಇದೀಗ ವಿಕ್ಕಿಕೌಶಲ್ಗೆ ನಟ ಸಲ್ಮಾನ್ ಖಾನ್ ಬಾಡಿಗಾರ್ಡ್ಸ್ ಅವಮಾನ ಮಾಡಿದ್ದಾರೆ ಎನ್ನಲಾಗ್ತಿದೆ. ವಿಕ್ಕಿ ಕೌಶಲ್ ದುಬೈಗೆ ಹೋಗಿದ್ದರು. ಅಲ್ಲಿ ನಡೆಯುತ್ತಿರುವ ಐಫಾ 2023ರ ಕಾರ್ಯಕ್ರಮದ ನಿರೂಪಣೆಯನ್ನು ಈ ಬಾರಿ ವಿಕ್ಕಿ ಮಾಡುತ್ತಿದ್ದಾರೆ. ಆದರೆ ಈ ಸಮಾರಂಭದ ರೆಡ್ ಕಾರ್ಪೆಟ್ನಲ್ಲಿ ವಿಕ್ಕಿಗೆ ಸಲ್ಮಾನ್ ಖಾನ್ ಬಾಡಿಗಾರ್ಡ್ಸ್ ಅವಮಾನ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ‘ಡ್ಯಾನ್ಸ್ ಅಲ್ಲ ಇದು ವರ್ಕೌಟ್’ – ಸಲ್ಮಾನ್ ಖಾನ್ ಸ್ಟೆಪ್ಸ್ ಫುಲ್ ಟ್ರೋಲ್
ಬಾಲಿವುಡ್ ನಟ ಸಲ್ಮಾನ್ ಖಾನ್ ದುಬೈಗೆ ಹೋಗಿದ್ದರು. ಅಲ್ಲಿ ನಡೆಯುತ್ತಿರುವ ಐಫಾ 2023 ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದಾರೆ. ಆದರೆ ಅಲ್ಲಿ ಎಡವಟ್ಟು ಸಂಭವಿಸಿದ್ದು, ಅದರಿಂದ ನೆಟ್ಟಿಗರು ಮತ್ತು ವಿಕ್ಕಿ ಕೌಶಲ್ ಅಭಿಮಾನಿಗಳು ಸಲ್ಮಾನ್ ಖಾನ್ ಮತ್ತು ಅವರ ಬಾಡಿಗಾರ್ಡ್ಸ್ ಮೇಲೆ ಗರಂ ಆಗಿದ್ದಾರೆ. ಐಫಾ 2023 ಕಾರ್ಯಕ್ರಮದ ರೆಡ್ ಕಾರ್ಪೆಟ್ ಮೇಲೆ ಅಭಿಮಾನಿಗಳ ಸೆಲ್ಫಿಗೆ ವಿಕ್ಕಿ ಕೌಶಲ್ ಪೋಸ್ ನೀಡುತ್ತಿದ್ದರು. ಆ ವೇಳೆ ಸಲ್ಮಾನ್ ಖಾನ್ ರೆಡ್ ಕಾರ್ಪೆಟ್ ಮೇಲೆ ಎಂಟ್ರಿ ಕೊಟ್ಟರು. ಅವರು ಬರುವಾಗ ಅಲ್ಲಿದ್ದವರನ್ನು ಸಲ್ಲು ಬಾಡಿಗಾರ್ಡ್ಸ್ ದೂರ ತಳ್ಳುತ್ತಿದ್ದರು. ವಿಕ್ಕಿ ಕೌಶಲ್ ಬಳಿ ಬಂದಾಗಲೂ ಅದೇ ರೀತಿಯ ವರ್ತನೆಯನ್ನು ಬಾಡಿಗಾರ್ಡ್ಸ್ ಮುಂದುವರಿಸಿದರು. ವಿಕ್ಕಿ ಕೌಶಲ್ರನ್ನು ಕೂಡ ಬದಿಗೆ ತಳ್ಳಿ ಸಲ್ಮಾನ್ ಖಾನ್ಗೆ ಜಾಗ ಮಾಡಿಕೊಡುತ್ತಾ ಮುಂದೆ ಸಾಗಿದರು. ಸಲ್ಮಾನ್ ಖಾನ್ ಅವರು ರೆಡ್ ಕಾರ್ಪೆಟ್ ಮೇಲೆ ಬರುತ್ತಿರುವುದನ್ನು ಗಮನಿಸಿದ ವಿಕ್ಕಿ ಕೌಶಲ್, ತಕ್ಷಣವೇ ಅವರನ್ನು ಮಾತನಾಡಿಸಲು ಪ್ರಯತ್ನಿಸಿದ್ದಾರೆ. ಆದರೆ, ಸಲ್ಮಾನ್ ಖಾನ್ ಮಾತ್ರ ನೋಡಿದರೂ ಯಾವುದೇ ರಿಯಾಕ್ಷನ್ ನೀಡದೇ ಸೀದಾ ಮುಂದಕ್ಕೆ ಹೋಗಿದ್ದಾರೆ. ಈ ಸನ್ನಿವೇಹೀಗಿರುವಾಗಲೇ ಸಲ್ಮಾನ್ ಬಾಡಿಗರ್ಡ್ಸ್ ವಿಕ್ಕಿ ಅವರನ್ನು ಪಕ್ಕಕ್ಕೆ ತಳ್ಳುತ್ತಾರೆ. ವಿಕ್ಕಿ ಕೌಶಲ್ರನ್ನು ಸಲ್ಮಾನ್ ಖಾನ್ ಬಾಡಿಗಾರ್ಡ್ಸ್ ತಳ್ಳುತ್ತಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸಾಕಷ್ಟು ಮಂದಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವರು ಇವರಿಬ್ಬರ ಜಗಳದ ಮಧ್ಯೆ ನಟಿ ಕತ್ರಿಕಾ ಕೈಫ್ ವಿಚಾರವನ್ನು ಎಳೆದುತಂದಿದ್ದಾರೆ. ಮಾಜಿ ಪ್ರೇಯಸಿಯನ್ನು ವಿಕ್ಕಿ ಮದುವೆಯಾದರು ಎಂಬ ಕಾರಣಕ್ಕೆ ಸಲ್ಮಾನ್ ಖಾನ್ಗೆ ಕೋಪ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಅಚ್ಚರಿ ಎಂದರೆ, ಸಲ್ಮಾನ್ ಖಾನ್ ಪರವಾಗಿಯೂ ಕೆಲವರು ಕಾಮೆಂಟ್ ಮಾಡಿದ್ದಾರೆ. ನೀವು ಯಾರಾಗಿದ್ದರೇನು? ಟೈಗರ್ ಬರುತ್ತಿದೆ ಎಂದಾಗ, ದಾರಿಯನ್ನು ಕ್ಲಿಯರ್ ಮಾಡಬೇಕು’ ಎಂದಿದ್ದಾರೆ.

ನೋಡಿರಿ

