ಅಬ್ಬಬ್ಬಾ ಕನ್ನಡದ ನಟರು ಇಷ್ಟೊಂದು ಸಂಭಾವನೆ ಪಡೆಯುತ್ತಾರಾ? – ಟಾಪ್ ನಟರು & ಎಷ್ಟು ಕೋಟಿ  ಎಂಬ ಮಾಹಿತಿ ಇಲ್ಲಿದೆ

ಅಬ್ಬಬ್ಬಾ ಕನ್ನಡದ ನಟರು ಇಷ್ಟೊಂದು ಸಂಭಾವನೆ ಪಡೆಯುತ್ತಾರಾ? – ಟಾಪ್ ನಟರು & ಎಷ್ಟು ಕೋಟಿ  ಎಂಬ ಮಾಹಿತಿ ಇಲ್ಲಿದೆ

ಈಗಂತೂ ಬಿಗ್ ಬಜೆಟ್ ಸಿನಿಮಾಗಳಿಗೇನು ಕಡಿಮೆ ಇಲ್ಲ ಬಿಡಿ. ಕೋಟಿಗಳು ಇಲ್ಲದೆ ಒಂದು ಕಮರ್ಷಿಯಲ್ ಸಿನಿಮಾ ಮಾಡೋದು ಸಾಧ್ಯನೇ ಇಲ್ಲ. 300, 400, 500 ಹೀಗೆ ಶತಕೋಟಿಗಳ ಲೆಕ್ಕದಲ್ಲೇ ಸಿನಿಮಾಗಳು ತಯಾರಾಗುತ್ತವೆ. ಆದರೆ ಸಿನಿಮಾಗಳಲ್ಲಿ ನಟಿಸುವ ನಟರು ಎಷ್ಟು ಸಂಭಾವನೆ ಪಡೆಯುತ್ತಾರೆ ಅನ್ನೋ ಕುತೂಹಲಗಳು ಇದ್ದೇ ಇರುತ್ತವೆ. ಹಾಗಾದರೆ ನಮ್ಮ ಕನ್ನಡದ ನಟರು ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ?

ಸ್ಯಾಂಡಲ್‌ವುಡ್‌ ಸೂಪರ್ ಸ್ಟಾರ್‌ಗಳ ಪ್ರತಿ ವಿಷಯದ ಬಗ್ಗೆ ಜನರಲ್ಲಿ ಕುತೂಹಲ ಇದ್ದೇ ಇರುತ್ತದೆ. ಹಾಗಾದರೆ ಕನ್ನಡದ ಸೂಪರ್ ಸ್ಟಾರ್‌ಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹೀರೋ ಯಾರು ಅನ್ನೋ ಪ್ರಶ್ನೆಗೆ ಅಂದಾಜು ಲೆಕ್ಕದ ಉತ್ತರ ಇಲ್ಲಿದೆ. ಅದರಲ್ಲಿ ಈಗ ಟಾಪ್ 1 ನಲ್ಲಿ ಇರೋದು ರಾಕಿಭಾಯ್ ಯಶ್. ಕೆಜಿಎಫ್ 1, ಕೆಜಿಎಫ್ 2 ಸಕ್ಸಸ್ ನಲ್ಲಿರೋ ಯಶ್ ಒಂದು ಚಿತ್ರಕ್ಕೆ 60 ರಿಂದ 70 ಕೋಟಿ ಸಂಭಾವನೆ ಅನ್ನೋದು ಸದ್ಯದ ಅಂದಾಜು ಮಾಹಿತಿ.

ಇದನ್ನೂ ಓದಿ : ರಿಯಾಲಿಟಿ ಶೋ ಸ್ಟಾರ್ ವಂಶಿಕಾ ಹೆಸರಲ್ಲಿ ವಂಚನೆ – 40 ಲಕ್ಷ ವಂಚಿಸಿದ ನಿಶಾ ವಿರುದ್ಧ ದಾಖಲಾಯ್ತು ಕಂಪ್ಲೇಂಟ್..!

ಟಾಪ್-2ನಲ್ಲಿ ಕನ್ನಡದ ಅಭಿನಯ ಚಕ್ರವರ್ತಿ ಸುದೀಪ್ ಅವರ ಸಂಭಾವನೆ ಕೂಡ ಜಾಸ್ತಿ ಇದೆ. ಆದರೆ ಇಲ್ಲಿ ಎರಡು ರೀತಿಯ ಅಂದಾಜು ಮಾತು ಕೇಳಿ ಬರುತ್ತದೆ. ಒಂದು ಕಡೆಯಿಂದ 20 ಕೋಟಿ ಅನ್ನುವ ಅಂದಾಜು ಮಾಹಿತಿ ಬರುತ್ತದೆ. ಇನ್ನೂ ಒಂದು ಕಡೆಯಿಂದ ಹಾಗೇನೂ ಇಲ್ಲ. 7 ಕೋಟಿ ಇದೆ ಅನ್ನುವ ಸಿಂಪಲ್ ರಿಯಾಕ್ಷನ್ ಬರುತ್ತದೆ.

ಟಾಪ್-3 ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಟಾಪ್ ಲಿಸ್ಟ್ ನಲ್ಲಿದ್ದಾರೆ. ಯಾಕೆಂದರೆ ಬೆರಳೆಣಿಕೆಯಷ್ಟು ಸಿನಿಮಾ ಮಾಡಿದ್ದರೂ ಕೂಡ ಭರ್ಜರಿ ಹಿಟ್ ಕಂಡಿವೆ. ಹೀಗಾಗಿ ಇವರ ಸಂಭಾವನೆ ಕೂಡ ಕೋಟಿ ದಾಟಿದೆ. ಆ ಲೆಕ್ಕದಲ್ಲಿ ಧ್ರುವ ಸರ್ಜಾ ಅವರ ಸಂಭಾವನೆಯ 8 ರಿಂದ 12 ಕೋಟಿ ಅನ್ನೋದು ಬಲ್ಲ ಮೂಲಗಳ ಅಂದಾಜು ಲೆಕ್ಕ.

ಟಾಪ್-4 ದಿವೈನ್ ಸ್ಟಾರ್ ರಿಷಬ್ ಶೆಟ್ಟಿಯವರ ಕಾಂತಾರ ಹಿಟ್ ಆಗಿದ್ದೇ ತಡ, ಶೆಟ್ರು ಏನ್ ಮಾಡಿದ್ರು ಸುದ್ದಿ ಆಗುತ್ತದೆ. ಇದರ ಬೆನ್ನಲ್ಲಿಯೇ ಇದೀಗ ಇವರ ರೆಮ್ಯೂನಿರೇಷನ್ ಎಷ್ಟು ಅನ್ನುವ ಕುತೂಹಲ ಕೂಡ ಇರುತ್ತದೆ. ಆ ಲೆಕ್ಕದಲ್ಲಿ ಅಂದಾಜು ಲೆಕ್ಕ 10 ಕೋಟಿ ಅನ್ನೋ ಮಾತು ಕೂಡ ಇದೆ.

ಟಾಪ್-5 ಡಾಲಿ ಧನಂಜಯ್ ಚಿತ್ರರಂಗದ ಪಾಲಿಗೆ ವಿಭಿನ್ನ ಹಾಗೂ ವಿಶೇಷ ನಟ. ನಟರೂ ಹೌದು, ಒಳ್ಳೆ ಸಾಹಿತಿನೂ ಹೌದು. ಆದರೆ ದುಡ್ಡಿನ ವಿಷಯದಲ್ಲಿ ಇವರೂ ಕೋಟಿ ದಾಟಿ ಆಗಿದೆ. ಈಗಿನ ಅಂದಾಜು ಲೆಕ್ಕ 3 ಕೋಟಿ ಫಿಕ್ಸ್ ಅನ್ನುವ ಮಾತಿದೆ. ಇದಕ್ಕೂ ಜಾಸ್ತಿ ಇರಬಹುದು.

ಟಾಪ್-6 ಕನ್ನಡದ ಕರಿಚಿರತೆ ದುನಿಯಾ ವಿಜಯ್ ಅವರ ಬೇಡಿಕೆ ಏನು ಕಡಿಮೆ ಆಗಿಲ್ಲ. ಇವರ ಸಂಭಾವನೆ ನಿರೀಕ್ಷೆ ಕೋಟಿ ಕೋಟಿ ಇದೆ. ಮೂರರಿಂದ ನಾಲ್ಕು ಕೋಟಿ ಸಂಭಾವನೆ ಪಡೆಯುತ್ತಾರೆ ಅನ್ನುವ ಅಂದಾಜು ಲೆಕ್ಕವೂ ಚಾಲ್ತಿಯಲ್ಲಿದೆ. ಇದರ ಹೊರತಾಗಿ ವಿಜಯ್ ಇದೀಗ ಡೈರೆಕ್ಷನ್ ಕೂಡ ಮಾಡ್ತಿದ್ದಾರೆ. ಅಲ್ಲಿಗೆ ಭೀಮ ಸಿನಿಮಾ ಬಂದ್ಮೇಲೆ ಅದು ಇನ್ನಷ್ಟು ಜಾಸ್ತಿ ಆಗಬಹುದೇನೋ.

ಟಾಪ್-7 ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಸಂಭಾವನೆ ಕೋಟಿ ಕೋಟಿ ಇದೆ. ಇದರ ಲೆಕ್ಕವನ್ನ ಹೇಳೋದಾದ್ರೆ, 3 ರಿಂದ 4 ಕೋಟಿ ಸಂಭಾವನೆ ಶಿವಣ್ಣ ಪಡೆಯುತ್ತಾರೆ ಅನ್ನುವ ಅಂದಾಜು ಮಾಹಿತಿ ಕೂಡ ಇಂಡಸ್ಟ್ರಿಯಲ್ಲಿದೆ.

ಟಾಪ್-8 ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಂಭಾವನೆ ಕೋಟಿ ಕೋಟಿ ಇದೆ ನೋಡಿ. ನಾಲ್ಕು ಕೋಟಿ ಸಂಭಾವನೆ ಪಡೆದ ಮೊದಲ ಹೀರೋ ಅನ್ನೋ ಖ್ಯಾತಿನೂ ಇವರಿಗೆ ಸಲ್ಲಬೇಕು. ಇವರ ಆ ಕೋಟಿ ಲೆಕ್ಕ ಕೂಡ ಜಾಸ್ತಿ ಇದೆ. ಆದರೆ ಈಗ ಅಂದಾಜು ಲೆಕ್ಕ 3 ರಿಂದ 4 ಕೋಟಿ ಇದೆ ಅಂತಲೇ ಹೇಳಬಹುದು.

ಟಾಪ್-9 ಡಾರ್ಲಿಂಗ್ ಕೃಷ್ಣ ಕೂಡ ಬೇಡಿಕೆಯಲ್ಲಿದ್ದಾರೆ. ಇವರ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿವೆ. ಅವರ ಸಂಭಾವನೆ ಲೆಕ್ಕ ಡಾರ್ಲಿಂಗ್ ಕೃಷ್ಣ-75 ಲಕ್ಷದಿಂದ ಒಂದೂವರೆ ಕೋಟಿ ಇದೆ ಅನ್ನೋ ಅಂದಾಜು ಲೆಕ್ಕ ಇದೆ.

ಟಾಪ್-10 ಸಿಂಪಲ್ ಸ್ಟಾರ್ ರಕ್ಷಿತ್ ಕೂಡ ಕೋಟಿ ಲೆಕ್ಕದಲ್ಲಿಯೇ ಇದೆ. ಇವರ ನಿರೀಕ್ಷೆಯ ಸುದ್ದಿ 7 ಕೋಟಿ ಅನ್ನುವ ಮಾಹಿತಿ. ರಿಯಲ್ ಸ್ಟಾರ್ ಉಪೇಂದ್ರ ಕೂಡ ಕೋಟಿ ಲೆಕ್ಕದಲ್ಲಿಯೇ ಇದ್ದಾರೆ. ಬ್ಯಾಡ್ ಮ್ಯಾನರ್ಸ್ ಅಭಿ ಕೂಡ ಒಂದೂವರೆ ಕೋಟಿ ಸಂಭಾವನೆ ಪಡೆಯುತ್ತಾರೆ ಅನ್ನುವ ನ್ಯೂಸ್ ಕೂಡ ಇದೆ. ಆದರೆ ಇದೆಲ್ಲವೂ ಅಂದಾಜು ಲೆಕ್ಕವೇ ಆಗಿದೆ. ಅಧಿಕೃತವಾಗಿ ಇಲ್ಲಿವರೆಗೂ ಯಾರೂ ಹೇಳಿಕೊಂಡಿಲ್ಲ ಅಂತಲೇ ಹೇಳಬಹುದು.

suddiyaana